Latest Updates
-
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ
Career Horoscope 2023 : ದ್ವಾದಶ ರಾಶಿಗಳ ವೃತ್ತಿ ಹಾಗೂ ಉದ್ಯೋಗ ಭವಿಷ್ಯ ಹೇಗಿರಲಿದೆ?
2023ರಲ್ಲಿ ಒಂದೊಳ್ಳೆ ಮನೆ ಕಟ್ಟಬೇಕು, ಕಾರು ತಗೋಬೇಕು ಹೀಗೆಲ್ಲಾ ಪ್ಲ್ಯಾನ್ ಮಾಡಿರುತ್ತೇವೆ,ನಮ್ಮ ಜೀವನದ ಯಾವುದೇ ಪ್ಲ್ಯಾನ್ ಮಾಡುವುದಾದರೂ ವೃತ್ತಿ ಜೀವನ ತುಂಬಾನೇ ಮುಖ್ಯವಾಗುವುದು. ವೃತ್ತಿ ಜೀವನದಲ್ಲಿ ಯಶಸ್ವಿಯಾದರೆ ಹಣ, ಕೀರ್ತಿ ಎಲ್ಲಾ ಬರುವುದು.

ವೃತ್ತಿ ಜೀವನದ ದೃಷ್ಟಿಯಿಂದ 2023 ದ್ವಾದಶ ರಾಶಿಗಳಿಗೆ ಹೇಗೆ ಇರಲಿದೆ ನೋಡೋಣ ಬನ್ನಿ:

ಮೇಷ ರಾಶಿ
ವೃತ್ತಿ ಜೀವನದಲ್ಲಿ ನೀವು ಬಯಸಿದ ಬದಲಾವಣೆ ಮೊದಲ ತ್ರೈಮಾಸಿಕದಲ್ಲಿಯೇ ಈಡೇರುತ್ತವೆ. ನಿಮ್ಮ ಉದ್ಯೋಗದಲ್ಲಿ ಇದ್ದ ಸಮಸ್ಯೆಗಳು ದೂರವಾಗುತ್ತವೆ. ಬಡ್ತಿ ಪಡೆಯುತ್ತೀರಿ. ವ್ಯಾಪಾರಿಗಳು ಏಪ್ರಿಲ್ ತಿಂಗಳಿನಿಂದ ಬೆಳವಣಿಗೆ ಕಾಣುವಿರಿ. ವರ್ಷದ ಕೊನೆಯ ತ್ರೈಮಾಸಿಕದಲ್ಲಿ ನಿಮ್ಮ ವ್ಯಾಪಾರವು ಸಾಕಷ್ಟು ಪ್ರಗತಿಯನ್ನು ಪಡೆಯುತ್ತದೆ.

ವೃಷಭ ರಾಶಿ
ಜನವರಿ ತಿಂಗಳಲ್ಲಿ ನೀವು ಬಯಸಿದಂತೆ ವರ್ಗಾವಣೆಸಿಗಬಹುದು. ಈ ಅವಧಿಯಲ್ಲಿ ನೀವು ಹೊಸ ಉದ್ಯೋಗ ಹುಡುಕುತ್ತಿದ್ದರೆ ಒಳ್ಳೆಯ ಅವಕಾಶಗಳು ದೊರೆಯಲಿದೆ. ಆದರೆ ಜೂನ್ ಮತ್ತು ನವೆಂಬರ್ ತಿಂಗಳಿನಲ್ಲಿ ಉದ್ಯೋಗದಲ್ಲಿ ಏರಿಳಿತಗಳು ಉಂಟಾಗಬಹುದು.

ಮಿಥುನ ರಾಶಿ
ನೀವು ಜನವರಿ ನಂತರ ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ಉತ್ತಮ ಫಲಿತಾಂಶ ಪಡೆಯುವಿರಿ. ವರ್ಷದ ಆರಂಭದಲ್ಲಿ ವೃತ್ತಿಜೀವನವು ಉತ್ತಮವಾಗಿರುತ್ತದೆ. ಕೆಲಸಕ್ಕೆ ಸಂಬಂಧಿಸಿದಂತೆ ಸಾಕಷ್ಟು ಗೊಂದಲ ಉಂಟಾಗಬಹುದು. ನೀವು ಉದ್ಯೋಗ ಬದಲಾಯಿಸಲು ಪ್ರಯತ್ನಿಸುತ್ತಿದ್ದರೆ ಈ ಸಮಯದಲ್ಲಿ ಶನಿಯ ಪ್ರಭಾವದಿಂದಾಗಿ ಉತ್ತಮ ಫಲಿತಾಂಶ ಪಡೆಯಬಹುದು. ವರ್ಷದ ಮಧ್ಯ ಮತ್ತು ಕೊನೆಯ ತಿಂಗಳು ನಿಮ್ಮ ವೃತ್ತಿ ಜೀವನಕ್ಕೆ ತುಂಬಾ ಅನುಕೂಲಕರವಾಗಿದೆ.

ಕರ್ಕ ರಾಶಿ
ಮೇ ತಿಂಗಳಲ್ಲಿ ರಾಹು ಚಂಡಾಲ ದೋಷದ ಪರಿಣಾಮದಿಂದನಿಮಗೆ ಸ್ವಲ್ಪ ಅಸ್ವಸ್ಥತೆಯನ್ನು ಉಂಟುಮಾಡಬಹುದು. ಕೆಲಸದಲ್ಲಿ ಯಾವುದೇ ರೀತಿಯ ಘರ್ಷಣೆಯಲ್ಲಿ ತೊಡಗುವುದನ್ನು ತಪ್ಪಿಸಬೇಕು. ಅಕ್ಟೋಬರ್ 30ರ ನಂತರ ಕೆಲಸದ ರೀತಿ ಬದಲಾಗಬಹುದು. ನೀವು ವರ್ಗಾವಣೆಯಾಗಬಹುದು, ವರ್ಷದ ಕೊನೆಯ ತಿಂಗಳು ನಿಮಗೆ ಉದ್ಯೋಗದಲ್ಲಿ ಪ್ರಗತಿ ತರಲಿದೆ.

ಸಿಂಹ ರಾಶಿ
ಸಿಂಹ ರಾಶಿಯವರು ವೃತ್ತಿ ಜೀವನದಲ್ಲಿ ಒಳ್ಳೆಯ ಪ್ರಗತಿ ಪಡೆಯುತ್ತೀರಿ. ಈಗ ನೀವು ಮಾಡುವ ಕಠಿಣ ಪ್ರಯತ್ನದಿಂದ ಹೆಚ್ಚು ಪ್ರಯೋಜನ ಪಡೆಯುತ್ತೀರಿ. ಜನವರಿಯಲ್ಲಿ ನಿಮಗೆ ಅತ್ಯುತ್ತಮ ಉದ್ಯೋಗ ಪ್ರಗತಿ ಇದೆ. ಏಪ್ರಿಲ್ ನಲ್ಲಿ ಕೆಲವು ಉದ್ಯೋಗ ವರ್ಗಾವಣೆಯಾಗಬಹುದು. ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಅವಕಾಶಗಳೂ ದೊರೆಯಲಿದೆ. ವೃತ್ತಿ ಜೀವನದಲ್ಲಿ ಯಶಸ್ಸು ಕಾಣುವಿರಿ.

ಕನ್ಯಾ ರಾಶಿ
ಕನ್ಯಾ ರಾಶಿಯವರು ವೃತ್ತಿಜೀವನದಲ್ಲಿ ಮುಂದುವರಿಯಲು ಈ ವರ್ಷ ಸಾಕಷ್ಟು ಅವಕಾಶಗಳನ್ನು ಪಡೆಯುತ್ತಾರೆ. ನಿಮ್ಮ ಕೆಲಸದ ಕ್ಷೇತ್ರದಲ್ಲಿ ಹಠಾತ್ ಬದಲಾವಣೆಯೂ ಇರಬಹುದು ಅಥವಾ ನೀವು ವ್ಯಾಪಾರ ಮಾಡುತ್ತಿದ್ದರೆ ಏಪ್ರಿಲ್ ನಂತರ ವ್ಯಾಪಾರವನ್ನು ಬದಲಾಯಿಸುವ ಸಾಧ್ಯತೆ ಇದೆ. ಅದರಲ್ಲೂ ಮೇ ತಿಂಗಳಿನಲ್ಲಿ ದಿಢೀರ್ ಸಮಸ್ಯೆ ಎದುರಾಗಬಹುದು, ಆದ್ದರಿಂದ ಈ ಅವಧಿಯಲ್ಲಿ ಜಾಗರೂಕರಾಗಿರಬೇಕು. ಅಕ್ಟೋಬರ್ ನಿಂದ ಡಿಸೆಂಬರ್ ನಡುವೆ ಪರಿಸ್ಥಿತಿಗಳಲ್ಲಿ ಉತ್ತಮ ಬದಲಾವಣೆ ಕಂಡು ಬರುವುದು ನೀವು ಯಶಸ್ಸನ್ನು ಪಡೆಯುತ್ತೀರಿ

ತುಲಾ ರಾಶಿ
ತುಲಾ ರಾಶಿಯವರು ಈಗಿರುವ ಕೆಲಸ ಬಿಟ್ಟು ಹೊಸ ಕೆಲಸ ಹುಡುಕುತ್ತಿದ್ದರೆ ಈ ವರ್ಷ ಹೊಸ ಅವಕಾಶಗಳು ದೊರೆಯಲಿದೆ. ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಈ ವರ್ಷ ತುಂಬಾನೇ ಅನುಕೂಲಕರವಾಗಿದೆ. ನೀವು ಬಯಸಿದ ಕಡೆ ವರ್ಗಾವಣೆ ಸಿಗಬಹುದು, ವರ್ಷದ ಕೊನೆಯ ಮೂರು ತಿಂಗಳಿನಲ್ಲಿ ವೃತ್ತಿ ಜೀವನದಲ್ಲಿ ಸ್ವಲ್ಪ ಏರಳಿತಗಳಿರುತ್ತದೆ.

ಧನು ರಾಶಿ
ಶನಿಯು ಕುಂಭ ರಾಶಿಗೆ ಪ್ರವೇಶಿಸಿದಾಗ ನೀವು ತುಂಬಾನೇ ಜಾಗ್ರತೆವಹಿಸಬೇಕು. ಶನಿಯ ಪ್ರಭಾವದಿಂದ ಕೆಲಸವನ್ನು ಬದಲಾಯಿಸಲು ಯೋಚಿಸಬಹುದು. ಉದ್ಯೋಗದಲ್ಲಿನ ಬದಲಾವಣೆಯು ನಿಮಗೆ ಯಶಸ್ವಿಯಾಗುತ್ತದೆಯಾದರೂ, ಏಪ್ರಿಲ್‌ನಲ್ಲಿ ಗುರು ಮತ್ತು ರಾಹು ಐದನೇ ಮನೆಯಲ್ಲಿ ಸೂರ್ಯನೊಂದಿಗೆ ಒಟ್ಟಿಗೆ ಇರುವಾಗ ಮಾನನಷ್ಟ, ಅಪಖ್ಯಾತಿ ಈ ಬಗ್ಗೆ ಎಚ್ಚರವಹಿಸಬೇಕು. ಏಪ್ರಿಲ್ ನಿಂದ ಆಗಸ್ಟ್ ಅವಧಿಯಲ್ಲಿ ಯಾವುದೇ ರೀತಿಯ ಕೆಲಸವನ್ನು ಬದಲಾಯಿಸುವುದನ್ನು ತಪ್ಪಿಸಿ. ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗಿನ ಸಮಯವು ಕೆಲಸದ ಬದಲಾವಣೆಗೆ ಅನುಕೂಲಕರವಾಗಿರುತ್ತದೆ.

ವೃಶ್ಚಿಕ ರಾಶಿ
ಶನಿಯು ಈ ವರ್ಷ ನಿಮ್ಮ ನಾಲ್ಜನೇ ಮನೆಯಲ್ಲಿ ಇರುವುದರುಂದ , ಶನಿದೇವನ ಈ ದೃಷ್ಟಿ ನಿಮ್ಮ ಕೆಲಸಕ್ಕೆ ಬಹಳಷ್ಟು ಸಹಾಯ ಮಾಡುತ್ತದೆ, ನಿಮ್ಮ ಕೆಲಸದಲ್ಲಿ ನೀವು ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ಏಪ್ರಿಲ್ ಮತ್ತು ಆಗಸ್ಟ್ ತಿಂಗಳುಗಳವರೆಗೆ ವೃತ್ತಿ ಜೀವನ ತುಂಬಾ ಚೆನ್ನಾಗಿರುತ್ತದೆ ಆದರೆ ಜೂನ್ ತಿಂಗಳಿನಲ್ಲಿ ವೃತ್ತಿಜೀವನದಲ್ಲಿ ಹಠಾತ್ ಏರಿಳಿತಗಳು ಉಂಟಾಗಬಹುದು. ಅಕ್ಟೋಬರ್ ತಿಂಗಳಿನಲ್ಲಿ ಕೆಲಸಕ್ಕೆ ಸಂಬಂಧಿಸಿದಂತೆ ಹೊರಗೆ ಹೋಗುವ ಸಾಧ್ಯತೆಗಳೂ ಇವೆ. ನವೆಂಬರ್ ಮತ್ತು ಡಿಸೆಂಬರ್ ನಿಮ್ಮ ಕಠಿಣ ಪರಿಶ್ರಮದಿಂದ ನೀವು ಮತ್ತೆ ಯಶಸ್ಸು ಕಾಣಬಹುದು.

ಮಕರ ರಾಶಿ
ರಾಹು ಮತ್ತು ಕೇತು ಕ್ರಮವಾಗಿ ನಿಮ್ಮ ನಾಲ್ಕನೇ ಮತ್ತು ಹತ್ತನೇ ಮನೆಯಲ್ಲಿ ಇರಲಿದೆ, ಈ ಕಾರಣದಿಂದಾಗಿ ನೀವು ನಿಮ್ಮ ಉದ್ಯೋಗದಲ್ಲಿ ಏರಿಳಿತಗಳನ್ನು ಎದುರಿಸಬೇಕಾಗುತ್ತದೆ ಮತ್ತು ಇದು ನಿಮ್ಮ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ, ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಬಜೆಟ್ ಪ್ಲ್ಯಾನಿಂಗ್ ತುಂಬಾ ಚೆನ್ನಾಗಿ ಮಾಡಿಕೊಳ್ಳದಿದ್ದರೆ ಕಷ್ಟವಾಗುವುದು.

ಕುಂಭ ರಾಶಿ
ಈ ವರ್ಷ ಕುಂಭ ರಾಶಿಯವರು ತಮ್ಮ ವೃತ್ತಿಜೀವನದಲ್ಲಿ ಬಹಳ ಜಾಗರೂಕರಾಗಿರಬೇಕು. ನಿಮ್ಮ ವಿರುದ್ಧ ಕೆಲ ಪಿತೂರಿಗಳು ಕೂಡ ನಡೆಯಬಹುದು. ಈ ವಿಷಯದ ಕಡೆ ತುಂಬಾ ಜಾಗ್ರತೆವಹಿಸಬೇಕು.ವರ್ಷದ ಆರಂಭವು ಅನುಕೂಲಕರವಾಗಿರುತ್ತದೆ. ಮಾರ್ಚ್ ಮತ್ತು ಏಪ್ರಿಲ್ ನಡುವೆ, ನೀವು ಕೆಲಸವನ್ನು ಬದಲಾಯಿಸಲು ಪ್ರಯತ್ನಿಸಬಹುದು. ಮೇ ನಿಂದ ಆಗಸ್ಟ್ ನಡುವೆ ನಿಮ್ಮ ವಿರೋಧಿಗಳು ಪ್ರಬಲರಾಗಿರುತ್ತಾರೆ ಮತ್ತು ಈ ಸಮಯದಲ್ಲಿ ನಿಮ್ಮ ಕೆಲಸದ ಪ್ರದೇಶದಲ್ಲಿ ನೀವು ಅಹಿತಕರ ಸಂದರ್ಬಗಳನ್ನು ಎದುರಿಸಬೇಕಾಗುತ್ತದೆ. ನಂತರ ಸೆಪ್ಟೆಂಬರ್‌ನಿಂದ ಪರಿಸ್ಥಿತಿಗಳು ಕ್ರಮೇಣ ಬದಲಾಗುತ್ತವೆ. ನವೆಂಬರ್ - ಡಿಸೆಂಬರ್ ತಿಂಗಳುಗಳು ನಿಮ್ಮ ವೃತ್ತಿಜೀವನದಲ್ಲಿ ಉತ್ತಮ ಯಶಸ್ಸನ್ನು ನೀಡುತ್ತದೆ.

ಮೀನ ರಾಶಿ
ಈ ವರ್ಷ ನಿಮ್ಮ ವೃತ್ತಿಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ವರ್ಷದ ಆರಂಭವು ತುಂಬಾ ಉತ್ತಮವಾಗಿರುತ್ತದೆ, ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಮೆಚ್ಚುಗೆಯನ್ನು ಪಡೆಯುತ್ತೀರಿ, ನಿಮ್ಮ ಕೆಲಸವನ್ನು ನೋಡುವಾಗ, ನಿಮಗೆ ಬಡ್ತಿಯೊಂದಿಗೆ ಪ್ರತಿಫಲವನ್ನು ಪಡೆಯಬಹುದು.
ದೇವ ಗುರು ಗುರುವು ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಸುಧಾರಿಸುತ್ತದೆ. ಈ ಸಮಯವು ನಿಮ್ಮ ಕೆಲಸಕ್ಕೆ ಅನುಕೂಲಕರವಾಗಿರುತ್ತದೆ, ಮೇ ಮತ್ತು ಜುಲೈ ನಡುವೆ ಉದ್ಯೋಗ ನಷ್ಟ ಅಥವಾ ಉದ್ಯೋಗ ಬದಲಾವಣೆಯ ಪರಿಸ್ಥಿತಿ ಇರಬಹುದು. ಈ ಕುರಿತು ಸ್ವಲ್ಪ ಎಚ್ಚರಿಕೆ ಅಗತ್ಯ.



Click it and Unblock the Notifications











