Latest Updates
-
ಪರಿಸರ ಸ್ನೇಹಿ ಡೇಟಿಂಗ್: ₹300 ರೊಳಗೆ ನಿಮ್ಮ ಪ್ರೀತಿಯನ್ನು ಹಸಿರಾಗಿಸುವ 12 ಅದ್ಭುತ ಐಡಿಯಾಗಳು! -
ಬೆಂಗಳೂರು ಮಳೆ: ಮನೆಯಲ್ಲಿ ನೀರು ನುಗ್ಗಿದೆಯೇ? ತೇವ ಮತ್ತು ದುರ್ವಾಸನೆ ಹೋಗಲಾಡಿಸಲು ಇಲ್ಲಿವೆ ಸರಳ ಟಿಪ್ಸ್! -
ಡೆಂಗ್ಯೂ ಆತಂಕ: ಮಧುಮೇಹಿಗಳು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ವಿಶೇಷ ಆಹಾರ ಪ್ಲಾನ್ -
iPhone 18 ಸೇಲ್: ನಿಮ್ಮ ಹೊಸ ಫೋನ್ ಪಡೆಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ದೆಹಲಿ-ಎನ್ಸಿಆರ್ ಮಳೆ ಎಚ್ಚರಿಕೆ: ಹೊರಗೆ ಹೋಗುವ ಬದಲು ಮನೆಯಲ್ಲೇ ಮಾಡಿ 12 ನಿಮಿಷದ ವರ್ಕೌಟ್! -
ಸೆಪ್ಟೆಂಬರ್ 15ರ ಲವ್ ರಾಶಿಫಲ: ನಿಮ್ಮ ಸಂಗಾತಿಯ ಮನ ಗೆಲ್ಲಲು ಈ 2 ನಿಮಿಷದ ಸೂತ್ರ ಬಳಸಿ! -
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್ -
ಅಡುಗೆಮನೆ ಬಜೆಟ್ ಏರಿಕೆ: ₹30 ಕ್ಕಿಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಪ್ರೋಟೀನ್ ಆಹಾರ ಪಡೆಯುವುದು ಹೇಗೆ? -
iOS 27 ಅಪ್ಡೇಟ್ ನಂತರ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಗಾಬರಿಯಾಗಬೇಡಿ, ಈ ಟಿಪ್ಸ್ ಫಾಲೋ ಮಾಡಿ! -
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ
ಕರ್ಕ ರಾಶಿಯಲ್ಲಿ ಸೃಷ್ಟಿಯಾಗಿದೆ ಬುಧ-ಆದಿತ್ಯ ಯೋಗ: ಈ 6 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದಿದೆ
ಕರ್ಕ ರಾಶಿಯಲ್ಲಿ ಜುಲೈ 16ಕ್ಕೆ ಸೂರ್ಯ ಸಂಕ್ರಮಣವಾಗಿದೆ, ಜುಲೈ 17ಕ್ಕೆ ಬುಧ ಸಂಕ್ರಮಣವಾಗಿದೆ. ಸೂರ್ಯ ಹಾಗೂ ಬುಧ ಒಂದೇ ರಾಶಿಯಲ್ಲಿದ್ದರೆ ಬುಧ-ಆದಿತ್ಯ ಯೋಗ ಏರ್ಪಡುತ್ತದೆ.

ಬುಧ ಗ್ರಹದ ಅನುಗ್ರಹ ಹಾಗೂ ಸೂರ್ಯನ ಅನುಗ್ರಹ ಎರಡೂ ಒಂದೇ ರಾಶಿಯ ಮೇಲಿದ್ದರೆ ಅಂದರೆ ಈ ಎರಡು ಗ್ರಹಗಳು ನಮ್ಮ ರಾಶಿಯಲ್ಲಿ ಅನುಕೂಲಕರ ಸ್ಥಾನದಲ್ಲಿದ್ದರೆ ಆ ಸಮಯ ನಮಗೆ ಅದೃಷ್ಟದ ಸಮಯವಾಗಿದೆ.
ಕರ್ಕ ರಾಶಿಯಲ್ಲಿ ಏರ್ಪಟ್ಟಿರುವ ಬುಧ-ಆದಿತ್ಯ ಯೋಗ ಯಾವೆಲ್ಲಾ ರಾಶಿಗಳಿಗೆ ಒಳ್ಳೆಯದಿದೆ ಎಂದು ನೋಡೋಣ:

ಮೇಷ ರಾಶಿ
ಮೇಷ ರಾಶಿಯವರಲ್ಲಿ ಸೂರ್ಯ ಹಾಗೂ ಬುಧ ನಾಲ್ಕನೇ ಮನೆಯಲ್ಲಿದೆ. ಈ ಎರಡೂ ಗ್ರಹಗಳು ನಿಮ್ಮ ರಾಶಿಯಲ್ಲಿ ತುಂಬಾ ಪ್ರಬಲ ಸ್ಥಾನದಲ್ಲಿ ಇರುವುದರಿಂದ ಈ ಅವಧಿ ನಿಮಗೆ ಅನುಕೂಲಕರವಾಗಿದೆ. ಉದ್ಯೋಗ ಬದಲಾವಣೆಗೆ ಪ್ರಯತ್ನಿಸಿದರೆ ಫಲ ಸಿಗಲಿದೆ. ಮನೆಯಲ್ಲಿ ಸಂತೋಷ, ನೆಮ್ಮದಿ ಇರುತ್ತದೆ, ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತೆ. ಈ ಅವಧಿ ವ್ಯಾಪಾರಸ್ಥರಿಗೂ ತುಂಬಾ ಅನುಕೂಲಕರವಾಗಿದೆ. ವಿದ್ಯಾರ್ಥಿಗಳಿಗೂ ಈ ಅವಧಿ ಅನುಕೂಲಕರವಾಗಿದೆ.

ವೃಷಭ ರಾಶಿ
ವೃಷಭ ರಾಶಿಯವರಲ್ಲಿ ನಿಮ್ಮ ಮೂರನೇ ಮನೆಯಲ್ಲಿ ಬುಧಾದಿತ್ಯ ಯೋಗ ಏರ್ಪಟ್ಟಿದೆ. ಇದರಿಂದಾಗಿ ವೃತ್ತಿಪರ ಜೀವನದಲ್ಲಿ ಒಳ್ಳೆಯ ಫಲಿತಾಂಶ ಪಡೆಯುತ್ತೀರಿ. ಹೆಚ್ಚಿನ ಅಧ್ಯಯನಕ್ಕಾಗಿ ಪ್ರಯತ್ನಿಸುತ್ತಿರುವ ವಿದ್ಯಾರ್ಥಿಗಳು ತಾವು ಬಯಸಿದ ಸಂಸ್ಥೆಯಲ್ಲಿ ಪ್ರವೇಶ ಪಡೆಯಬಹುದು. ಆರೋಗ್ಯ, ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ. ಈ ಅವಧಿಯಲ್ಲಿ ವೈಯಕ್ತಿಕ ಜೀವನ ಅನುಕೂಲಕರವಾಗಿದೆ.

ಮಿಥುನ ರಾಶಿ
ಮಿಥುನ ರಾಶಿಯವರಲ್ಲಿ ಎರಡನೇ ಮನೆಯಲ್ಲಿ ಬುಧ- ಆದಿತ್ಯ ಯೋಗ ಏರ್ಪಟ್ಟಿದೆ. ಈ ಅವಧಿಯು ಉದ್ಯಮಿಗಳಿಗೆ ಉತ್ತಮವಾಗಿರುತ್ತದೆ ಏಕೆಂದರೆ ಅವರು ಈ ಅವಧಿಯಲ್ಲಿ ಉತ್ತಮ ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ. ಈ ಅವಧಿ ಉದ್ಯೋಗಿಗಳಿಗೂ ಅನುಕೂಲಕರವಾಗಿದೆ. ಹೆಚ್ಚುವರಿ ಹಣವನ್ನು ಗಳಿಸುವ ಅವಕಾಶಗಳನ್ನು ಸಹ ನೀವು ಪಡೆಯಬಹುದು. ಒಟ್ಟಾರೆಯಾಗಿ, ಹಣಕಾಸಿನ ದೃಷ್ಟಿಯಿಂದ ಈ ಅವಧಿಯು ನಿಮಗೆ ಮಂಗಳಕರವಾಗಿರುತ್ತದೆ.

ಕನ್ಯಾ ರಾಶಿ
ಕನ್ಯಾ ರಾಶಿಯವರಲ್ಲಿ 11ನೇ ಮನೆಯಲ್ಲಿ ಬುಧಾದಿತ್ಯ ಯೋಗ ಏರ್ಪಟ್ಟಿದೆ. ಈ ಅವಧಿ, ಉದ್ಯೋಗಿಗಳಿಗೆ , ಉದ್ಯಮಿಗಳಿಗೆ, ವ್ಯಾಪಾರಸ್ಥರಿಗೆ ಅನುಕೂಲಕರವಾಗಿದೆ. ವ್ಯಾಪಾರಸ್ಥರು ಒಳ್ಳೆಯ ಲಾಭವನ್ನು ಪಡೆಯಲಿದ್ದಾರೆ.

ತುಲಾ ರಾಶಿ
ತುಲಾ ರಾಶಿಯವರಲ್ಲಿ ಹತ್ತನೇ ಮನೆಯಲ್ಲಿ ಬುಧಾದಿತ್ಯ ಯೋಗ ಏರ್ಪಟ್ಟಿದೆ. ವೃತ್ತಿಪರ ಜೀವನದ ಬಗ್ಗೆ ನೋಡುವುದಾದರೆ ನೀವು ಮಾರ್ಕೆಟಿಂಗ್, ಮಾರಾಟ, ಪ್ರಯಾಣ ಮತ್ತು ಪತ್ರಿಕೋದ್ಯಮದೊಂದಿಗೆ ಸಂಬಂಧ ಹೊಂದಿದ್ದರೆ, ಈ ಅವಧಿಯಲ್ಲಿ ನೀವು ಅನೇಕ ಫಲಪ್ರದ ಫಲಿತಾಂಶಗಳನ್ನು ನೋಡುತ್ತೀರಿ. ವಿದೇಶಕ್ಕೆ ಹೋಗಲು ಬಯಸುವವರಿಗೂ ಈ ಅವಧಿ ಅನುಕೂಲಕರವಾಗಿರುತ್ತದೆ. ಅಲ್ಲದೆ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಈ ಸಮಯ ಅನುಕೂಲಕರವಾಗಿದೆ. ಅಲ್ಲದೆ ಈ ಅವಧಿಯಲ್ಲಿ ಆಸ್ತಿ ಅಥವಾ ವಾಹನ ಖರೀದಿಸುವ ಸಾಧ್ಯತೆ ಇದೆ.

ಮೀನ ರಾಶಿ
ಮೀನ ರಾಶಿಯವರಲ್ಲಿಐದನೇ ಮನೆಯಲ್ಲಿ ಬುಧಾದಿತ್ಯ ಯೋಗ ಏರ್ಪಟ್ಟಿದೆ. ನೀವು ಸ್ವಂತ ವ್ಯಾಪಾರ ಹೊಂದಿದ್ದರೆ ಈ ಅವಧಿಯಲ್ಲಿ ಅನೇಕ ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತಾರೆ. ನೀವು ಮಾಧ್ಯಮ, ಪತ್ರಿಕೋದ್ಯಮ ಅಥವಾ ಮಾರಾಟ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೆ, ಈ ಸಮಯದಲ್ಲಿ ನಿಮ್ಮ ಉತ್ಪನ್ನಗಳು ಮತ್ತು ಸೇವೆಗಳ ಬೇಡಿಕೆಯಲ್ಲಿ ಹೆಚ್ಚಳವನ್ನು ನೀವು ನೋಡುತ್ತೀರಿ. ಏನಾದರೂ ಹೊಸ ಉದ್ಯೋಗ ಅಥವಾ ಉದ್ಯಮ ಪ್ರಾರಂಭಿಸಲು ಅವಧಿ ಅನುಕೂಲಕರವಾಗಿದೆ. ಇನ್ನು ಮಗುವಿನ ಅಪೇಕ್ಷಿತ ದಂಪತಿ ಗರ್ಭಧಾರಣೆಯ ಸಿಹಿ ಸುದ್ದಿ ಪಡೆಯುವಿರಿ.



Click it and Unblock the Notifications
