Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
30 ವರ್ಷದ ಬಳಿಕ ಕುಂಭದಲ್ಲಿ ಬುಧ-ಶನಿ ಸಂಯೋಗ: ಈ ಅವಧಿ 3 ರಾಶಿಗಳಿಗೆ ಅದೃಷ್ಟಕರ, 3 ರಾಶಿಯವರು ಜಾಗ್ರತೆವಹಿಸಬೇಕು
ಫೆಬ್ರವರಿ 27 ಸೋಮವಾರದಂದು ಬುಧವು ಕುಂಭ ರಾಶಿಗೆ ಸಂಚರಿಸುವುದು. ಇದರಿಂದಾಗಿ 30 ವರ್ಷದ ಬಳಿಕ ಬುಧ ಶನಿ ಕುಂಭ ರಾಶಿಯಲ್ಲಿ ಸಂಯೋಗವಾಗಲಿದೆ. ಇದನ್ನು ಜ್ಯೋತಿಷ್ಯದಲ್ಲಿ ಬುಧ-ಶನಿ ಯುತಿಯೆಂದು ಕರೆಯಲಾಗುವುದು. ಬುಧ-ಶನಿಯ ಸಂಯೋಗದಿಂದ ಹಲವು ರಾಶಿಗಳಿಗೆ ತುಂಬಾನೇ ಒಳ್ಳೆಯದಾಗಲಿದೆ, ಇನ್ನು ಕೆಲವು ರಾಶಿಯವರು ಸ್ವಲ್ಪ ಜಾಗ್ರತೆವಹಿಸಬೇಕಾಗಿದೆ.

ಈ ಬುಧ-ಶನಿ ಸಂಯೋಗ 3 ರಾಶಿಗಳಿಗೆ ಆರ್ಥಿಕವಾಗಿ ತುಂಬಾನೇ ಒಳ್ಳೆಯದಿದೆ, 3 ರಾಶಿಯವರು ಜಾಗ್ರತೆಯಿಂದಿರಬೇಕಾಗಿದೆ, ಉಳಿದ ರಾಶಿಗಳಿಗೆ ಸಾಮಾನ್ಯವಾಗಿರಲಿದೆ ನೋಡಿ:
ಈ 3 ರಾಶಿಯವರಿಗೆ ಆರ್ಥಿಕವಾಗಿ ತುಂಬಾ ಒಳ್ಳೆಯದು:

ವೃಷಭ ರಾಶಿ
ವೃಷಭ ರಾಶಿಯಲ್ಲಿ ಶನಿಯು ಅದೃಷ್ಟ ಮತ್ತು ಕರ್ಮದ ಮನೆಗೆ ಅಧಿಪತಿಯಾಗಿದ್ದು, ಬುಧವು ಎರಡನೇ ಮತ್ತು ಐದನೇ ಮನೆಯ ಅಧಿಪತಿಯಾಗಿದೆ. ಕೆಲಸದ ಕಾರ್ಯಗಳಲ್ಲಿ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ. ನೀವು ವ್ಯವಹಾರದಲ್ಲಿ ಅಪಾರ ಲಾಭಗಳಿಸುವಿರಿ. ಉದ್ಯೋಗಿಗಳಿಗೆ ಈ ಅವಧಿಯಲ್ಲಿ ಸಂಬಳ ಹೆಚ್ಚಾಗುವ ಸಾಧ್ಯತೆ ಹೆಚ್ಚಾಗುವ ಸಾಧ್ಯತೆಗಳಿವೆ. ಸ್ಪರ್ಧಾತ್ಮಕ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯುವಿರಿ.

ತುಲಾ ರಾಶಿ
ಶನಿ ಮತ್ತು ಬುಧದ ಸಂಯೋಜನೆಯು ಈ ರಾಶಿಯವರಿಗೆ ತುಂಬಾ ಅನುಕೂಲಕರವಾಗಿದೆ. ಪ್ರೇಮಿಗಳಿಗೆ ಹಾಗೂ ವಿವಾಹಿತರಿಗೆ ಅನುಕೂಲಕರವಾಗಿದೆ. ಮಗುವನ್ನು ಅಪೇಕ್ಷಿತ ದಂಪತಿ ಸಿಹಿ ಸುದ್ದಿ ಪಡೆಯುವಿರಿ. ಈ ಸಮಯವು ನಿಮ್ಮ ಮಕ್ಕಳಿಗೆ ತುಂಬಾ ಮಂಗಳಕರವಾಗಿದೆ . ಈ ಅವಧಿಯು ಕೆಲಸ ಮತ್ತು ವ್ಯವಹಾರದ ವಿಷಯದಲ್ಲಿ ಮಂಗಳಕರವಾಗಿದೆ. ಲಾಟರಿ, ಹೂಡಿಕೆ ಇತ್ಯಾದಿಗಳಿಂದ ನೀವು ದೊಡ್ಡ ಲಾಭವನ್ನು ಪಡೆಯಬಹುದು.

ಮಕರ ರಾಶಿ
ಬುಧ-ಶನಿ ಯುತಿಯ ಈ ಅವಧಿಯಲ್ಲಿ ಅಪಾರವಾದ ಆರ್ಥಿಕ ಲಾಭವನ್ನು ಪಡೆಯುತ್ತೀರಿ. ನಿಮ್ಮ ಮಾತು ಮತ್ತು ಬುದ್ಧಿವಂತಿಕೆಯ ಸಹಾಯದಿಂದ ನೀವು ಉತ್ತಮ ಲಾಭವನ್ನು ಗಳಿಸಬಹುದು. ಕುಟುಂಬದಲ್ಲಿ ಖುಷಿಯ ವಾತಾವರಣ ಇರುತ್ತದೆ. ಈ ಸಮಯದಲ್ಲಿ ನಿಮ್ಮ ಎಲ್ಲಾ ಯೋಜನೆಗಳು ಫಲಪ್ರದವಾಗುವುದನ್ನು ನೀವು ನೋಡುತ್ತೀರಿ.

ಯಾರು ಜಾಗ್ರತೆಯಿಂದಿರಬೇಕು
ಕರ್ಕ ರಾಶಿ
ಈ ರಾಶಿಯವರಿಗೆ, ಬುಧ ಮೂರನೇ ಮತ್ತು ಹನ್ನೆರಡನೆಯ ಮನೆಯ ಅಧಿಪತಿಯಾಗಿದ್ದು, ಈ ಸಮಯದಲ್ಲಿ ಅದು ನಿಮ್ಮ ಎಂಟನೇ ಮನೆಯಲ್ಲಿ ಸಂಯೋಗವಾಗಿದೆ. ಈ ಸಂಯೋಗವು ನಿಮಗೆ ಶುಭಕರವಲ್ಲ. ನಿಮ್ಮವರು ನಿಮ್ಮ ವಿರುದ್ಧ ಪಿತೂರಿ ಮಾಡಬಹುದು. ಈ ಸಮಯದಲ್ಲಿ ನೀವು ನಿಮ್ಮ ಸಹೋದರರೊಂದಿಗೆ ವೈಮನಸ್ಸನ್ನು ಹೊಂದಬಹುದು. ಅನೇಕ ಆರೋಗ್ಯ ಸಮಸ್ಯೆ ಕಾಡಬಹುದು. ಈ ಸಮಯದಲ್ಲಿ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಜನರು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಆಪ್ತ ಸ್ನೇಹಿತರನ್ನು ಕೂಡ ಈ ಅವಧಿಯಲ್ಲಿ ಕಣ್ಮುಚ್ಚಿ ನಂಬುವುದು ಒಳ್ಳೆಯದಲ್ಲ ಎಂಬ ಸಲಹೆ ನೀಡಲಾಗುವುದು.

ಕನ್ಯಾ ರಾಶಿ
ಈ ರಾಶಿಯವರಿಗೆ ಬುಧ ಲಗ್ನ ಮತ್ತು ಹತ್ತನೇ ಮನೆಯ ಅಧಿಪತಿಯೂ ಹೌದು. ಈ ಸಮಯದಲ್ಲಿ, ಬುಧ ಸಂಕ್ರಮಣ ನಿಮ್ಮ ಆರನೇ ಮನೆಯಲ್ಲಿ ನಡೆಯಲಿದೆ. ಆದ್ದರಿಂದ ಈ ಮನೆ ಶುಭ ಫಲಿತಾಂಶ ನೀಡುವುದಿಲ್ಲ. ಈ ಸಮಯದಲ್ಲಿ ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ನಿಮ್ಮ ಕೆಲಸ ಕಾರ್ಯಗಳಿಗೆ ಅಡಚಣೆ ಉಂಟಾಗಬಹುದು. ಈ ಬುಧ ಸಂಕ್ರಮಣ ನಿಮ್ಮ ಖರ್ಚುಗಳನ್ನು ಹೆಚ್ಚಿಸಬಹುದು. ಈ ಸಮಯದಲ್ಲಿ ನಿಮ್ಮ ಹಣ ವ್ಯರ್ಥ ಪ್ರಯಾಣದಲ್ಲಿ ಖರ್ಚಾಗುವುದು.ಮನೆಯಲ್ಲಿ ಒತ್ತಡದ ವಾತಾವರಣ ಇರುತ್ತದೆ. ನಿಮಗೆ ಯಾವುದೇ ಚರ್ಮ ಸಂಬಂಧಿ ಕಾಯಿಲೆಗಳಿದ್ದರೆ, ನೀವು ಜಾಗರೂಕರಾಗಿರಬೇಕು. ಈ ಸಮಯದಲ್ಲಿ ನಿಮ್ಮ ಶತ್ರುಗಳು ನಿಮಗೆ ಬಹಳಷ್ಟು ಹಾನಿ ಮಾಡಲು ಪ್ರಯತ್ನಿಸುತ್ತಾರೆ. ಅವರ ಬಗ್ಗೆ ಎಚ್ಚರದಿಂದಿರಬೇಕು.

ವೃಶ್ಚಿಕ ರಾಶಿ
ಬುಧ ಮತ್ತು ಶನಿ ನಿಮ್ಮ ನಾಲ್ಕನೇ ಮನೆಯಲ್ಲ ಸಂಯೋಜನೆಯಾಗಿದೆ. ಈ ಅವಧಿಯಲ್ಲಿ ನಿಮ್ಮ ಮಾನಸಿಕ ಒತ್ತಡ ಅಧಿಕವಾಗಲಿದೆ. ಈ ಸಮಯದಲ್ಲಿ ನಿಮ್ಮ ಕೆಲಸದಲ್ಲಿ ಹೊಸ ಬಿಕ್ಕಟ್ಟು ಉಂಟಾಗಬಹುದು. ನಿಮ್ಮ ಮಾತಿನ ಕಾರಣದಿಂದ ನಿಮ್ಮ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಹೆಚ್ಚಾಗಬಹುದು. ಈ ಸಮಯದಲ್ಲಿ ನಿಮ್ಮ ಕೆಲಸದ ಬಗ್ಗೆ ಹೆಚ್ಚು ಗಮನ ಹರಿಸಲು ಸಲಹೆ ನೀಡಲಾಗಿದೆ. ಶನಿ ಮತ್ತು ಬುಧ ಗ್ರಹಗಳ ಸಂಯೋಗದಿಂದ ಸರ್ಕಾರಿ ಕೆಲಸಕ್ಕೆ ಸಂಬಂಧಿಸಿದ ಜನರಿಗೆ ತೊಂದರೆಯಾಗಬಹುದು. ವಿದ್ಯಾರ್ಥಿಗಳಿಗೆ ಸಮಯ ಸ್ವಲ್ಪ ಕಷ್ಟವಾಗಬಹುದು. ಈ ಸಮಯದಲ್ಲಿ ಅಧ್ಯಯನದಲ್ಲಿ ಅಡೆತಡೆಗಳು ಉಂಟಾಗಬಹುದು.



Click it and Unblock the Notifications
