Bharani Nakshatra Prediction 2023: ಭರಣಿ ನಕ್ಷತ್ರದವರಿಗೆ 2023 ಹೇಗಿರಲಿದೆ?

ವ್ಯಕ್ತಿಯು ಜನಿಸಿದ ದಿನಾಂಕ, ಸಮಯದ ಅನುಸಾರ ಅವರ ನಕ್ಷತ್ರ ಬರುತ್ತದೆ.

2023 ಭರಣಿ ನಕ್ಷತ್ರದವರಿಗೆ ಹೇಗೆ ಇರಲಿದೆ ಎಂದು ತಿಳಿಯಲು ಈ ನಕ್ಷತ್ರ ಭವಿಷ್ಯ ಓದಿ...

ಭರಣಿ ನಕ್ಷತ್ರ - ಜ್ಯೋತಿಷ್ಯದ ಪ್ರಕಾರ 27 ನಕ್ಷತ್ರಗಳಲ್ಲಿ 2ನೇ ನಕ್ಷತ್ರ

ಭರಣಿ ನಕ್ಷತ್ರದ ರಾಶಿಚಕ್ರ - ಮೇಷ
ಆಡಳಿತ ಗ್ರಹ - ಶುಕ್ರ
ದೇವತೆ - ಯಮ (ಸಾವಿನ ದೇವರು)
ಧಾರಕನ ಚಿಹ್ನೆ
ಪ್ರಕೃತಿ - ಭೂಮಿ
ಗಣ - ಮನುಷ್ಯ
ಗುಣ- ರಜಸ್ವ
ದಿಕ್ಕು- ಪೂರ್ವ
ಬಣ್ಣ - ರಕ್ತ ಕೆಂಪು
ಪ್ರಾಣಿ - ಗಂಡು ಆನೆ
ಪಕ್ಷಿ - ಕಾಗೆ
ಮರ- ಟ್ರೀ ಇಂಡಿಯನ್ ಗೂಸ್ಬೆರ್ರಿ (ಬೆಟ್ಟದ ನೆಲ್ಲಿಕಾಯಿ ಮರ)
ದೇಹ - ವರಾಹಮಿಹಿರ ತಲೆ
ಶುಕ್ರ ಲಕ್ಷ್ಮಿಯ ಅಧಿದೇವತೆ
ಅದೃಷ್ಟದ ಸಂಖ್ಯೆ: 2, 9
ಅದೃಷ್ಟದ ಬಣ್ಣ - ರಕ್ತ ಕೆಂಪು
ಅದೃಷ್ಟದ ಸ್ಟೋನ್‌- ಡೈಮಂಡ್
ಚಿಹ್ನೆ: ಯೋನಿ, ಸ್ತ್ರೀ ಸಂತಾನೋತ್ಪತ್ತಿಯ ಅಂಗ.
ಹೆಸರುಗಳು ಪ್ರಾರಂಭಕ್ಷರ: ಲಿ, ಲು, ಲೆ, ಲೊ

ಭರಣಿ ನಕ್ಷತ್ರದವರ ಗುಣಗಳು

ಭರಣಿಯಲ್ಲಿ ಜನಿಸಿದವರು ಧರಣಿ ಆಳುತ್ತಾರೆ ಎಂಬ ಮಾತಿದೆ. ಇವರು ಬುದ್ಧಿವಂತರಾಗಿರುತ್ತಾರೆ, ತುಂಬಾ ಕರ್ತವ್ಯನಿಷ್ಠರಾಗಿರುತ್ತಾರೆ .

ಇವರ ದೌರ್ಬಲ್ಯಗಳು

ಈ ನಕ್ಷತ್ರದಲ್ಲಿ ಹುಟ್ಟಿದವರಿಗೆ ಒಳ್ಳೆಯ ಗುಣಗಳ ಜೊತೆಗೆ ದುಷ್ಟ ಗುಣಗಳೂ ಇರುತ್ತದೆ ಎಂದು ಹೇಳಲಾಗುವುದು. ಇವರು ಚಂಚಲ ಮನಸ್ಸಿನವರು, ತುಂಬಾ ಬೇಗನೆ ಕೋಪಗೊಳ್ಳುತ್ತಾರೆ ಹಾಗೂ ಹಠಮಾರಿ ಸ್ವಭಾವದವರು.

ಭರಣಿ ನಕ್ಷತ್ರದವರಿಗೆ 20 ವರ್ಷದ ಬಳಿಕ ಶುಕ್ರದೆಸೆ

ಭರಣಿ ನಕ್ಷತ್ರದವರಿಗೆ 20 ವರ್ಷದ ಬಳಿಕ ಶುಕ್ರದೆಸೆ ಪ್ರಾರಂಭವಾಗುವುದರಿಂದ ತಮ್ಮ ವೃತ್ತಿಯಲ್ಲಿ ಪ್ರಗತಿ ಕಾಣುತ್ತಾರೆ. ಈ ನಕ್ಷತ್ರದವರು 60 ವರ್ಷ ದಾಟಿದರೆ 78 ವರ್ಷದವರೆಗೆ, ಆ ವಯಸ್ಸನ್ನೂ ದಾಟಿದರೆ 87 ವರ್ಷ ಪೂರ್ಣ ಆಯುಷ್ಯ ಹೊಂದಿರುತ್ತಾರೆ. ಭರಣಿ ನಕ್ಷತ್ರದವರು ಮೂರು ಮುಖದ ರುದ್ರಾಕ್ಷಿ ಧರಿಸಿದರೆ ಒಳ್ಳೆಯದು.

ಭರಣಿ ನಕ್ಷತ್ರದವರ 2023ರ ನಕ್ಷತ್ರ ಭವಿಷ್ಯ ನೋಡುವುದಾದರೆ ....

2023ರಲ್ಲಿ ಭರಣಿ ನಕ್ಷತ್ರದಲ್ಲಿ ಹುಟ್ಟಿದವರ ಗುಣ ಲಕ್ಷಣಗಳು

2023ರಲ್ಲಿ ಭರಣಿ ನಕ್ಷತ್ರದಲ್ಲಿ ಹುಟ್ಟಿದವರ ಗುಣ ಲಕ್ಷಣಗಳು

ಗಂಡು ಮಗು ಈ ನಕ್ಷತ್ರದಲ್ಲಿ ಹುಟ್ಟಿದ್ದರೆ ಮುಂದೆ ಅವನ ಗುಣ ಅಷ್ಟೊಂದು ಇಷ್ಟವಾಗಲ್ಲ, ಅವನು ಯಾರಿಗೂ ಕೆಟ್ಟದ್ದು ಮಾಡಲ್ಲ, ಆದರೆ ಯಾರಾದರೂ ಮಾಡಿದರೆ ಸಹಿಸಿಕೊಳ್ಳಲ್ಲ, ತನ್ನ ಕೋಪವನ್ನು ಕೂಡಲೇ ವ್ಯಕ್ತ ಪಡಿಸುತ್ತಾನೆ. ಹೆಣ್ಣು ಮಗು ಈ ನಕ್ಷತ್ರದಲ್ಲಿ ಜನಿಸಿದರೆ ತುಂಬಾ ಶುದ್ಧ ಮನಸ್ಸಿನವಳಾಗಿರುತ್ತಾಳೆ, ದೊಡ್ಡವರನ್ನು ಗೌರವಿಸುತ್ತಾಳೆ, ಮನೆಯವರನ್ನು ಪ್ರೀತಿಸುತ್ತಾಳೆ.

2023ರ ನಕ್ಷತ್ರ ಭವಿಷ್ಯ ಪ್ರಕಾರ ಭರಣಿ ನಕ್ಷತ್ರದವರ ವೃತ್ತಿ ಜೀವನ

2023ರಲ್ಲಿ ವೃತ್ತಿ ಜೀವನದಲ್ಲಿ ತುಂಬಾನೇ ಪ್ರಗತಿ ಕಾಣುವಿರಿ, ಗ್ರಹಗತಿಗಳು ಕೂಡ ನಿಮಗೆ ಅನುಕೂಲಕರವಾಗಿದೆ. ನೀವು ಉದ್ಯಮಿಯಾಗಿದ್ದರೆ ಮಾರ್ಚ್‌ ತಿಂಗಳಿನಲ್ಲಿ ತೆಗೆದುಕೊಳ್ಳುವ ನಿರ್ಧಾರಗಳನ್ನು ತುಂಬಾ ಆಲೋಚನೆ ಮಾಡಿ ತೆಗೆದುಕೊಳ್ಳಬೇಕು. ಮೇ 2023ರಿಂದ ಪರಿಸ್ಥಿತಿಗಳು ಉತ್ತಮವಾಗಲಿದೆ, ಅಲ್ಲದೆ ಈ ವರ್ಷ ಹೊಸದನ್ನು ಕಲಿಯಲು ಅವಕಾಶ ಸಿಗಲಿದೆ.

ಭರಣಿ ನಕ್ಷತ್ರದವರ ಆರ್ಥಿಕ ಸ್ಥಿತಿ

ಭರಣಿ ನಕ್ಷತ್ರದವರ ಆರ್ಥಿಕ ಸ್ಥಿತಿ

ಭರಣಿ ನಕ್ಷತ್ರದವರ ಆರ್ಥಿಕ ಸ್ಥಿತಿ ನೋಡುವುದಾದರೆ ಈ ವರ್ಷ ತುಂಬಾನೇ ಉತ್ತಮವಾಗಿದೆ. ಆದರೆ ಬೇಗನೆ ಯಶಸ್ಸಯ ಗಳಿಸಲು ತಪ್ಪಾದ ನಿರ್ಧಾರ ತೆಗೆದುಕೊಳ್ಳದಂತೆ ಎಚ್ಚರವಹಿಸಿ. ವರ್ಷದ ಮಧ್ಯದಲ್ಲಿ ಕೆಲ ಸಮಸ್ಯೆಗಳು ಬರಬಹುದು. ಆ ಸಮಯದಲ್ಲಿ ಎಚ್ಚರಿಕೆಯಿಂದ ಬಜೆಟ್‌ ಪ್ಲ್ಯಾನ್ ಮಾಡಿ,ಅದಾದ ಬಳಿಕ ನೀವು ಆರ್ಥಿಕವಾಗಿ ಪ್ರಗತಿಯನ್ನು ಕಾಣುವಿರಿ.

ಭರಣಿ ನಕ್ಷತ್ರದವರ ಸಂಬಂಧ ಭವಿಷ್ಯ

2023ರಲ್ಲಿ ತುಂಬಾ ಸಮಯ ನಿಮ್ಮ ವೈಯಕ್ತಿಕ ವಿಷಯಗಳಿಗಾಗಿ ಕಳೆಯಬೇಕಾಗುತ್ತದೆ. ನಿಮ್ಮ ಪ್ರೀತಿಪಾತ್ರರಿಂದ ಕೆಲ ಕಿರಿಕಿರಿ ಉಂಟಾಗಬಹುದು, ಆದರೆ ಪರಿಸ್ಥಿತಿಗಳನ್ನು ಪಕ್ವತೆಯಿಂದ ನಿಭಾಯಿಸಲು ಪ್ರಯತ್ನಿಸುವುದು ಒಳ್ಳೆಯದು. ಮಾರ್ಚ್ ನಂತರ ಪರಿಸ್ಥಿತಿಗಳು ಸುಧಾರಿಸಲಿದೆ.

ಭರಣಿ ನಕ್ಷತ್ರದವರ ಆರೋಗ್ಯ ಭವಿಷ್ಯ 2023

ಭರಣಿ ನಕ್ಷತ್ರದವರ ಆರೋಗ್ಯ ಭವಿಷ್ಯ 2023

ಭರಣಿ ನಕ್ಷತ್ರದವರಿಗೆ ಆರೋಗ್ಯ ಉತ್ತಮವಾಗಿರಲಿದೆ. ಇಡೀ ವರ್ಷ ಉತ್ತಮ ಆರೋಗ್ಯವನ್ನು ಅನುಭವಿಸಬಹುದು, ಏನಾದರೂ ಕಾಯಿಲೆ ಇದ್ದರೆ ಬೇಗನೆ ಚೇತರಿಸಿಕೊಳ್ಳುವಿರಿ. ಆದರೆ ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿ. ಆರೋಗ್ಯಕರ ಆಹಾರಶೈಲಿ, ಜೀವನಶೈಲಿ ಕಡೆ ಗಮನ ನೀಡಿ.

ಒಟ್ಟಾರೆಯಾಗಿ ನೋಡುವುದಾದರೆ

ಒಟ್ಟಾರೆಯಾಗಿ ನೋಡುವುದಾದರೆ

ಒಟ್ಟಾರೆಯಾಗಿ 2023 ನಿಮಗೆ ತುಂಬಾ ಒಳ್ಳೆಯದು, ಆರ್ಥಿಕವಾಗಿ ಅಭಿವೃದ್ಧಿ ಕಾಣುವಿರಿ, ವೃತ್ತಿ ಜೀವನದಲ್ಲಿ ಪ್ರಗತಿ ಉಂಟಾಗುವುದು, ಉದ್ಯಮಿಗಳು ಒಳ್ಳೆಯ ಲಾಭ ಗಳಿಸುವಿರಿ, ಆರೋಗ್ಯ ಉತ್ತಮವಾಗಿರುತ್ತದೆ.

English summary

Bharani Nakshatra Prediction 2023 In Kannada

Bharani Nakshatra Prediction 2023: Here are Bharani Nakshatra job, family, finace, relationship prediction of 2023 read on...
X
Desktop Bottom Promotion