Latest Updates
-
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ? -
ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್: ಭಾರತದ ಗೆಲುವಿನ ಸಂಭ್ರಮಕ್ಕೆ ಇಲ್ಲಿದೆ ವೈರಲ್ ಮೀಮ್ಸ್ ಮತ್ತು ಸೇಫ್ ಸೆಲೆಬ್ರೇಷನ್ ಗೈಡ್! -
ಕೋಲ್ಕತ್ತಾದಲ್ಲಿ ಕಳಪೆ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಸುರಕ್ಷಿತ ಸಮಯ ಮತ್ತು ಮಾರ್ಗಗಳನ್ನು ತಪ್ಪದೇ ತಿಳಿಯಿರಿ -
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು!
2023ರ ಕುರಿತು ಬಾಬಾ ವಂಗಾ ನುಡಿದಿರುವ 5 ಭಯಂಕರ ಭವಿಷ್ಯಗಳಿವು
ಬಾಬಾ ವಂಗಾ ಭವಿಷ್ಯದ ಬಗ್ಗೆ ಈಗಾಗಲೇ ನೀವು ಕೇಳಿರುತ್ತೀರಿ. ಬಾಬಾ ವಂಗಾ ಹೇಳಿರುವ ಹಲವು ಭವಿಷ್ಯಗಳು ಸತ್ಯವಾಗಿರುವುದರಿಂದ ಇವರ ಭವಿಷ್ಯವಾಣಿಯನ್ನು ಜನರು ನಂಬುತ್ತಾರೆ. 9/11 ಭಯೋತ್ಪಾದಕ ದಾಳಿಯಾಗುತ್ತೆ ಎಂದು ಹೇಳಿರುವ ಭವಿಷ್ಯ ನಿಜವಾಗಿದೆ.
2022ರಲ್ಲಿ ವೈರಸ್ ದಾಳಿ, ಭೂಕಂಪ, ಸುನಾಮಿ ಬರಲಿದೆ. ಜಗತ್ತು ಜಲಕ್ಷಾಮ ಎದುರಿಸಲಿದೆ ಎಂದು ಭವಿಷ್ಯ ನುಡಿದಿರುವುದು ನಿಜವಾಗಿದೆ. ಸುನಾಮಿ ಬಂದಿಲ್ಲ, ಆದರೆ ಉಳಿದೆಲ್ಲಾ ಭವಿಷ್ಯ ನಿಜವಾಗಿದೆ. ಪೋರ್ಚುಗಲ್, ಇಟಲಿ ದೇಶಗಳಲ್ಲಿ ಭೀಕರ ಬರಗಾಲ ಉಂಟಾಗಿತ್ತು.

ಭಾರತದಲ್ಲಿ ಮಿಡತೆಗಳ ದಾಳಿಯಾಗಲಿವೆ ಎಂದು ಹೇಳಿದ್ದರು ಆ ಭವಿಷ್ಯ ನಿಜವಾಗಿದೆ, ಅಲ್ಲದೆ ಭಾರತದಲ್ಲಿ ತೀವ್ರ ತಾಪಮಾನ ಎದುರಾಗಲಿದೆ ಎಂದು ನುಡಿದಿದ್ದರು, ಈ ವರ್ಷ ಈ ಹಿಂದೆ ಎಂದೂ ಕಂಡಿರದ ತಾಪಮಾನ ಕಂಡು ಬಂದಿತ್ತು.
ಇವರು 5079ರಲ್ಲಿ ಜಗತ್ತು ಅಂತ್ಯವಾಗಲಿದೆ ಎಂಬ ಭವಿಷ್ಯ ನುಡಿದಿದ್ದಾರೆ. ನಾವೀಗ 2022ರ ಕೊನೆಯಲ್ಲಿ ಇದ್ದೇವೆ, ನವೆಂಬರ್-ಡಿಸೆಂಬರ್ ಕಳೆದರೆ ಹೊಸ ವರ್ಷ ಅಂದರೆ 2023ರ ಪ್ರಾರಂಭ.
ಪ್ರತೀವರ್ಷ ನಾವೆಲ್ಲಾ ಆ ವರ್ಷ ಏನಾಗಲಿದೆ ಎಂದು ತಿಳಿದುಕೊಳ್ಳಲು ಕಾತರದಿಂದ ಕಾಯುತ್ತೇವೆ. 2023ರ ಕುರಿತು ಕೂಡ ಬಾಬಾ ವಂಗಾ ಭವಿಷ್ಯ ನುಡಿದಿದ್ದು ಅದೇನು ಎಂದು ತಿಳಿಯೋಣ ಬನ್ನಿ:

ಭೂಮಿಯ ಕಕ್ಷೆ ಬದಲಾಗಲಿದೆ
2023ರ ಭವಿಷ್ಯದಲ್ಲಿ ಈ ವರ್ಷ ಭೂಮಿಯ ಕಕ್ಷೆ ಬದಲಾಗಲಿದೆ ಎಂದು ಹೇಳಿದ್ದಾರೆ. ಇದರಿಂದಾಗಿ ವಾತಾವರಣದಲ್ಲಿ ತುಂಬಾನೇ ಬದಲಾವಣೆ ಆಗಲಿದೆ. ಒಂದು ವೇಳೆ ಈ ಭವಿಷ್ಯ ನಿಜವಾದರೆ ತುಂಬಾನೇ ತೊಂದರೆ ಎದುರಾಗಬಹುದು.
ಒಂದುವೇಳೆ ಭೂಮಿ ಸೂರ್ಯನ ಸಮೀಪಕ್ಕೆ ಚಲಿಸಿದರೆ ವಿಕಿರಣಗಳಲ್ಲಿ ಬದಲಾವಣೆಯಾಗಲಿದೆ. ಇದರಿಂದ ತಾಪಮಾನ ಹೆಚ್ಚಾಗಲಿದೆ. ಅದಲ್ಲದೆ ಸೂರ್ಯನಿಂದ ಸ್ವಲ್ಪ ದೂರ ಸರಿದರೆ ಕತ್ತಲೆ ಹೆಚ್ಚಾಗಲಿದೆ, ಪರಿಸರ ಮಂಜುಗಡ್ಡೆಯಿಂದ ಆವೃತವಾಗುತ್ತೆ.

ಸೌರ ಸುನಾಮಿ
ಬಾಬಾ ವಂಗಾ ಭವಿಷ್ಯದ ಪ್ರಕಾರ 2023ರಲ್ಲಿ ಸೌರ ಸುನಾಮಿ ಉಂಟಾಗಲಿದೆ. ಸೂರ್ಯನಲ್ಲಿ ಭಾರೀ ಸ್ಫೋಟ ಸಂಭವಿಸಿದಾಗ ಸೌರ ಸುನಾಮಿ ಉಂಟಾಗುವುದು. ಈ ಮಹಾಸ್ಫೊ ಟದಿಂದ ಹೊರಟ ಸೌರ ಶಕ್ತಿಯು ಸೆಕೆಂಡಿಗೆ 93 ಮಿಲಿಯ ಮೈಲು ವೇಗದಲ್ಲಿ ಭೂಮಿಯತ್ತ ಧಾವಿಸುತ್ತಿದೆ. ಇದರಿಂದ ಭೂಮಿಗೆ ಹೆಚ್ಚಿನ ಹಾನಿ ಸಂಭವಿಸಬಹುದು. ಮುಖ್ಯವಾಗಿ ಭೂಮಿಯ ಸುತ್ತ ಇರುವ ಕೃತಕ ಉಪಗ್ರಹಗಳಿಗೆ ಇದು ಭಾರೀ ಹಾನಿಮಾಡಬಹುದು. ಭೂಮಿಯಲ್ಲಿನ ವಿದ್ಯುತ್, ನೆಟ್‌ವರ್ಕ್ ಸಂಪರ್ಕ ವ್ಯವಸ್ಥೆಯೆಲ್ಲವೂ ಹಾಳಾಗಬಹುದು.

ಜೈವಿಕ ದಾಳಿಯಾಗಬಹುದು
ಈಗಾಗಲೇ ಕೆಲವು ರಾಷ್ಟ್ರಗಳು ಜೈವಿಕ ದಾಳಿ ನಡೆಸಬಹುದೆಂಬ ಭಯ ಜಗತ್ತಿಗಿದೆ. ಜೈವಿಕ ದಾಳಿಯಲ್ಲಿ ಯಾವುದಾದರೂ ವೈರಸ್ ಸೃಷ್ಟಿಸಿ ದಾಳಿ ಮಾಡುವುದು.

ನ್ಯೂಕ್ಲಿಯರ್ ಸ್ಪೋಟ
2023ರಲ್ಲಿ ನ್ಯೂಕ್ಲಿಯರ್ ಸ್ಪೋಟ ಉಂಟಾಗುವ ಸಾಧ್ಯತೆ ಇದೆ ಎಂದು ಬಾಬಾ ವಂಗಾ ಹೇಳಿದ್ದಾರೆ. ಈಗಾಗಲೇ ಉಕ್ರೇನ್-ರಷ್ಯಾ ಯುದ್ಧ ನಡೆಯುತ್ತಿದೆ, ಇದು ಮೂರನೇ ಮಹಾಯುದ್ಧಕ್ಕೆ ಕಾರಣವಾಗಬಹುದು ಎಂದೆಲ್ಲಾ ಹೇಳಲಾಗುತ್ತದೆ.

ನೈಸರ್ಗಿಕ ಜನನ ನಿಂತು ಹೋಗುವುದು
ಬಾಬಾ ವಂಗಾ ತಮ್ಮ ಭವಿಷ್ಯವಾಣಿಯಲ್ಲಿ ನೈಸರ್ಗಿಕವಾಗಿ ಜನನವಾಗುವುದು ನಿಂತು ಹೋಗುತ್ತೆ, ವೈದ್ಯಕೀಯ ಸಹಾಯದಿಂದ ಮಕ್ಕಳ ಜನನವಾಗುತ್ತೆ, ಮಕ್ಕಳನ್ನು ಲ್ಯಾಬ್‌ಗಳಲ್ಲಿ ಮಾಡಲಾಗುವುದು, ಅವರ ಬುದ್ಧಿಶಕ್ತಿ, ಬಣ್ಣ, ಕೂದಲಿನ ಬಣ್ಣ ಎಲ್ಲವನ್ನೂ ಮೊದಲೇ ನಿಶ್ಚಿಯಿಸಲಾಗುವುದು ಎಂದು ಹೇಳಿದ್ದಾರೆ.
ಆ ಕಾಲದಲ್ಲಿ ಟೆಸ್ಟ್ ಟ್ಯೂಬ್ ಮಗುವಿನ ಬಗ್ಗೆ ಭವಿಷ್ಯ ನುಡಿದಿದ್ದಾರೆ ಎಂದ ಮೇಲೆ ಈ ಭವಿಷ್ಯವೂ ನಿಜವಾಗಬಹುದು, ಏಕೆಂದರೆ ಈಗ ಟೆಸ್ಟ್ ಟ್ಯೂಬ್ ಬೇಬಿ ತಂತ್ರಜ್ಞಾನ ಬಂದಿದೆ.

ಬಾಬಾ ವಂಗಾ ಕುರಿತು
ಬಾಬಾ ವಂಗಾ ಬಲ್ಗೇರಿಯಾದ ನಿವಾಸಿ, 1911ರಲ್ಲಿ ಜನಿಸಿದ ಇವರು 12ನೇ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಳ್ಳುತ್ತಾರೆ, ಅಲ್ಲಿಂದ ದಿವ್ಯದೃಷ್ಟಿ ಬಂತು ಹೇಳಲಾಗುವುದು. ಇವರು ನುಡಿದ ಹಲವು ಭವಿಷ್ಯಗಳು ನಿಜವಾಗಿದೆ. ಅಮೆರಿಕದ ಎರಡು ಸ್ಟೀಲ್ ಬರ್ಡ್‌ಗಳು ನಾಶವಾಗಲಿದೆ (9/11 ದಾಳಿ) ಪ್ರಿನ್ಸೆಸ್ ಡಯಾನಾ ಸಾವು, ಬರಾಕ್ ಒಬಾಮಾ ಅಧ್ಯಕ್ಷರಾಗುವ ಬಗ್ಗೆ, ಥೈಲ್ಯಾಂಡ್ ಸುನಾಮಿ ಇವೆಲ್ಲದರ ಬಗ್ಗೆ ಅವರು ನುಡಿದಿರುವ ಭವಿಷ್ಯ ನಿಜವಾಗಿದೆ. ಇವರು 1996ರಲ್ಲಿ ಸ್ತನ ಕ್ಯಾನ್ಸರ್‌ನಿಂದಾಗಿ ಸಾವನ್ನಪ್ಪಿದರು.
2023ರ ಬಗ್ಗೆ ಆತಂಕ ಬೇಡ, ಒಳ್ಳೆಯದಾಗಲಿ ಎಂದು 2023ರನ್ನು ಸ್ವಾಗತಿಸೋಣ ಏನಂತೀರಿ?



Click it and Unblock the Notifications
