Latest Updates
-
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ!
ವಂಗಾ ಬಾಬಾ ಭವಿಷ್ಯ: 2046ರ ನಂತರ ಮನುಷ್ಯ100ಕ್ಕೂ ಅಧಿಕ ವರ್ಷ ಬದುಕುತ್ತಾನಂತೆ!
ವಂಗಾ ಬಾಬಾ ಭವಿಷ್ಯ ಆಗಾಗ ಸುದ್ದಿ ಮಾಡುತ್ತಿರುತ್ತದೆ, ಇದೀಗ ವಂಗಾ ಬಾಬಾ ಬಾರತದ ಕುರಿತು ಹೇಳಿರುವ ಭವಿಷ್ಯ ಮತ್ತೆ ಟ್ರೆಂಡ್ ಆಗುತ್ತಿದೆ. 12ನೇ ವಯಸ್ಸಿನಲ್ಲಿ ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡ ಮೇಲೆ ವಂಗಾ ಬಾಬಾ ಅವರು ಅನೇಕ ಭವಿಷ್ಯಗಳನ್ನು ನುಡಿದಿದ್ದಾರೆ, ಅಚ್ಚರಿಯೆಂದರೆ ಅವರು ಹೇಳಿರುವ ಬಹುತೇ ಕ ಭವಿಷ್ಯಗಳು ಸತ್ಯವಾಗಿವೆ.
ಇದೀಗ ವಂಗಾ ಬಾಬಾ 2022ರ ಕುರಿತು ಹೇಳಿರುವ ಹಾಗೂ ಭವಿಷ್ಯದ ಕುರಿತು ಹೇಳಿರುವ ಭವಿಷ್ಯ ಮತ್ತೆ ಸದ್ದು ಮಾಡುತ್ತಿದೆ, ಅವರು ಭವಿಷ್ಯದ ಬಗ್ಗೆ ಏನು ಹೇಳಿದ್ದಾರೆ ಎಂದು ನೋಡೋಣ ಬನ್ನಿ:

2022ರಲ್ಲಿ ಮಿಡತೆಗಳ ದಾಳಿಯಾಗುತ್ತೆ, ಬರಗಾಲವೂ ಎದುರಾಗುವುದು
2022ರಲ್ಲಿ ದೇಶದಲ್ಲಿ ಮಿಡತೆಗಳ ದಾಳಿಯಾಗುತ್ತೆ, ವೈರಸ್ ಬರಲಿದೆ, ಕೆಲವು ಕಡೆ ಪ್ರಳಯ ಇನ್ನು ಕೆಲವು ಕಡೆ ಬರಗಾಲ ಎದುರಾಗಲಿದೆ, ಮನುಕುಲ ತುಂಬಾ ಅಪಾಯ ಎದುರಿಸಲಿದೆ ಎಂದು ಭವಿಷ್ಯ ನುಡಿದಿದ್ದರು.
ಈಗಾಗಲೇ ಜಗತ್ತಿನ ಕೆಲವು ರಾಷ್ಟ್ರಗಳಲ್ಲಿ ಜಲಕ್ಷಾಮದಿಂದ ಅಪಾರ ನಷ್ಟವಾಗಿದೆ, ಪೋರ್ಚುಗಲ್, ಇಟಲಿ ದೇಶಗಳಲ್ಲಿ ಜಲಕ್ಷಾಮ ಎದುರಾಗಿದೆ. 2022ರಲ್ಲಿ ಹಿಂದೆಂದೂ ಕಂಡರಿಯದ ಹೀಟ್‌ವೇವ್ ಉಂಟಾಗಿತ್ತು, ಈ ಕುರಿತು ಮೊದಲೇ ಭವಿಷ್ಯ ನುಡಿದಿದ್ದರು.

ಈ ಕುರಿತು ಕೂಡ ಭವಿಷ್ಯ ಹೇಳಿದ್ದಾರೆ
ಜನರು ಗ್ಯಾಜೆಟ್ ವ್ಯಸನಿಗಳಾಗುತ್ತಾರೆ
ಸೈಬೇರಿಯಾದಲ್ಲಿ ಅಪಾಯಕಾರಿ ವೈರಸ್ ಪತ್ತೆಯಾಗಲಿದೆ
* ಏಲಿಯನ್‌ಗಳ ದಾಳಿಯಾಗಲಿವೆ
* ಭಾರೀ ಸುನಾಮಿ ಅಪ್ಪಳಿಸಲಿದೆ

ಮನುಷ್ಯರು 100 ವರ್ಷ ಬದುಕಲಿದ್ದಾರೆ
2046ರಷ್ಟಿಗೆ ಅಂಗಾಂಗ ಜೋಡಣೆಯಲ್ಲಿ ವಿಜ್ಞಾನ ತುಂಬಾ ಬೆಳೆದಿರುತ್ತದೆ, ಹೀಗಾಗಿ ಮನುಷ್ಯರು 100 ವರ್ಷಕ್ಕೂ ಅಧಿಕ ಕಾಲ ಬದುಕುತ್ತಾರೆ ಎಂದು ಹೇಳಿದ್ದಾರೆ. ಈಗ ತಂತ್ರಜ್ಞಾನ ತುಂಬಾ ಮುಂದುವರೆದಿದೆ. ಪ್ರಾಣಿಗಳ ಅಂಗಾಂಗ ಕೂಡ ಮನುಷ್ಯರಿಗೆ ಬಳಸಲು ಪ್ರಯೋಗ ನಡೆಯುತ್ತಿದೆ, ಇವುಗಳನ್ನು ನೋಡುವಾಗ ವಂಗಾಬಾಬಾ ಭವಿಷ್ಯ ನಿಜವಾಗಲೂಬಹುದು.

2100ರಲ್ಲಿ ರಾತ್ರಿನೇ ಇರಲ್ಲ
ಸೂರ್ಯ ಮುಳಗಿದ ಮೇಲೆ ಕೃತಕ ಬೆಳಕಿನಿಂದಾಗಿ ಭೂಮಿಯಲ್ಲಿ ಕತ್ತಲೇ ಇರುವುದಿಲ್ಲ ಎಂದು ವಂಗಾಬಾಬಾ ಭವೊಷ್ಯ ನುಡಿದಿದ್ದಾರೆ.
5079ರಲ್ಲಿ ವಿಶ್ವ ಕೊನೆಯಾಗಲಿದೆ
ಈ ಜಗತ್ತು ಯಾವಾಗ ಕೊನೆಯಾಗಲಿದೆ ಎಂಬುವುದರ ಬಗ್ಗೆಯೂ ವಂಗಾ ಬಾಬಾ ಭವಿಷ್ಯನುಡಿದಿದ್ದಾರೆ, ಈ ಜಗತ್ತು 5079 ವರ್ಷಗಳ ಇರಲಿದೆ ಎಂಬುವುದಾಗಿ ಹೇಳಿದ್ದಾರೆ.
1911ರಲ್ಲಿ ಜನಿಸಿದ ವಂಗಾಬಾಬಾ 12ನೇ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಂಡು 1996ರ ಇಸವಿಯವರೆಗೆ ಜೀವಿಸಿದ್ದರು. ಇವರು ಹೇಳಿರುವ ಭವಿಷ್ಯದ ಕುರಿತು ಯಾವುದೇ ಲಿಖಿತ ಆಧಾರಗಳಿಲ್ಲ, ಆದರೆ ಇವರ ಅನುಯಾಯಿಗಳು ವಂಗಾಬಾಬಾ ಹೀಗೆ ಹೇಳಿದ್ದರು ಎಂಬುವುದಾಗಿ ಹೇಳಿದ್ದು ಇವರ ನುಡಿಗಳಲ್ಲಿ ಬಹುತೇಕ ಅಂಶಗಳು ಸತ್ಯವಾಗಿವೆ.



Click it and Unblock the Notifications
