Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜ್ಯೋತಿಷ್ಯ: ಈ ರಾಶಿಯವರ ಜತೆ ಎಂದಿಗೂ ಶತ್ರುತ್ವ ಮಾಡಿಕೊಳ್ಳಲೇಬೇಡಿ!
ಕೋಪ ಎಂಬುದು ಮನುಷ್ಯನ ಸಹಜ ಗುಣಗಳಲ್ಲಿ ಒಂದು, ಆದರೆ ಕೆಲವರ ಕೋಪ ಮಾತ್ರ ಜಮದಗ್ನಿಯಂತೆ ನಮ್ಮನ್ನೇ ಸುಟ್ಟುಬಿಡುತ್ತದೆ. ಹಾಗೆಂದ ಮಾತ್ರಕ್ಕೆ ಬದುಕಿನಲ್ಲಿ ಯಾರೂ ಸದಾ ಕಾಲ ಎಲ್ಲರೊಂದಿಗೆ ಒಳ್ಳೆಯವರಾಗಿ ನಟಿಸಲು ಸಹ ಸಾಧ್ಯವಿಲ್ಲ, ಒಂದಿಲ್ಲೊಂದು ಸಂದರ್ಭದಲ್ಲಿ ಇತರ ಕೋಪಕ್ಕೆ ಗುರಿಯಾಗಲೇ ಬೇಕು ಆದರೆ, ಇಂಥವರ ಕೋಪಕ್ಕೆ ಅಥವಾ ಶತ್ರುತ್ವಕ್ಕೆ ಮಾತ್ರ ಗುರಿಯಾಗಬೇಡಿ ಎನ್ನುತ್ತದೆ ಜ್ಯೋತಿಶಾಸ್ತ್ರ.

ಹೌದು, ಜ್ಯೋತಿಶಾಸ್ತ್ರದ ಪ್ರಕಾರ ಇವರ ಕೋಪಕ್ಕೆ ನೀವು ಗುರಿಯಾಗುವುದು ಅಥವಾ ಇವರ ಶತ್ರುಗಳಾಗುವುದರಿಂದ ಮುಂದೆ ಪಶ್ಚಾತಾಪ ಪಡುತ್ತೀರಿ, ಇವರು ಬಹಳ ಭಯಾನಕ ಮತ್ತು ವಿಷಕಾರಿ. ಈ ರಾಶಿಯವರ ಜೊತೆ ಏನಾದರೂ ವೈಷಮ್ಯ ಉಂಟಾದರೆ ಆದಷ್ಟು ಅವರಿಂದ ದೂರವಿರಿ, ನಯವಾಗಿ ಸಂದರ್ಭದಿಂದ ಹಿಂದೆ ಸರಿಯುವುದೇ ಒಳ್ಳೆಯದು.
ಯಾವ ರಾಶಿಯವರ ಶತ್ರುತ್ವ ಒಳ್ಳೆಯದಲ್ಲ ಮುಂದೆ ನೋಡೋಣ:

ವೃಷಭ ರಾಶಿ
ವೃಷಭ ರಾಶಿಚಕ್ರದವರು ವ್ಯಕ್ತಿಯಾಗಿ ತುಂಬಾ ಹಠಮಾರಿ ಆದರೆ ನೀವು ಎಂದಿಗೂ ಅವರ ಕೋಪವನ್ನು ಉತ್ತೇಜಿಸುವ ಪ್ರಯತ್ನ ಮಾಡಬೇಡಿ. ಇಂಥಾ ವಿಷಯವು ಕೋಪವನ್ನು ಉಂಟುಮಾಡುತ್ತದೆ ಎಂದು ನಿಮಗೆ ತಿಳಿದಾಗ ಅವರನ್ನು ಕೆದಕಬೇಡಿ. ಇವರಿಗೆ ಕೋಪ ಎಂಬುದು ಸದಾ ಮೂಗಿನ ತುದಿಯಲ್ಲೇ ಇರುತ್ತದೆ, ನೀವು ಅವರನ್ನು ರೇಗಿಸುವುದು, ಅವರ ಕೋಪ ಭುಗಿಲೇಳುವಂಥ ಪ್ರಯತ್ನ ಮಾಡಿದರೆ ಮುಂದೆ ನೀವೇ ವಿಷಾದಿಸುತ್ತೀರಿ. ಶತ್ರುವಾದರೂ ಸಹ ಅವರು ನಿಮ್ಮನ್ನು ಸ್ವಾಗತಿಸುತ್ತಾರೆ, ಆದರೆ ಕೋಪ ಹಾಗೂ ಬಿಗಿಯಾದ ತುಟಿಗಳ ನಗುವಿನೊಂದಿಗೆ. ನಿಮ್ಮಿಬ್ಬರ ನಡುವಿನ ಉದ್ವಿಗ್ನತೆಯನ್ನು ಅವರು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಇದು ನಿಮ್ಮ ಕೋಪಕ್ಕೆ ನೀವೇ ನಾಂದಿ ಹಾಡಿದಂತಾಗುತ್ತದೆ.

ಕರ್ಕ ರಾಶಿ
ಕರ್ಕ ರಾಶಿಯವರು ಕೋಪಗೊಂಡರೆ ಅಥವಾ ಅವರನ್ನು ಕೋಪಗೊಳ್ಳುವಂತೆ ಮಾಡಿದರೆ ನಿಮ್ಮ ಮೇಲೆ ಸಿಟ್ಟು, ರೋಷದಂಥ ಭಾವನೆಗಳ ಸುಂಟರಗಾಳಿಯನ್ನೇ ಹಾರಿಸಿಬಿಡುತ್ತಾರೆ. ಅನ್ಯಾಯವಾಗಿ ನೀವು ಅವರ ಶತ್ರುವಿನ ಪಟ್ಟಿಗೆ ಸೇರಬಹುದು. ಅವರು ಕೋಪವನ್ನೂ ಮಾತ್ರ ನಿಮ್ಮ ಮೇಲೆ ಎಸೆಯುವುದಿಲ್ಲ, ಜತೆಗೆ ಅವರು ನಿಮ್ಮ ಬಗ್ಗೆ ಗಾಸಿಪ್ ಅನ್ನು ಹರಡುತ್ತಾರೆ. ಅವರ ಮಾತುಗಳು ವಿಷಪೂರಿತವಾಗಿರುತ್ತವೆ ಮತ್ತು ಈ ಕರ್ಕ ರಾಶಿಯವರನ್ನು ನೀವು ನಿಮ್ಮ ಶತ್ರುವನ್ನಾಗಿ ಮಾಡಿಕೊಂಡರೆ ಮುಂದೆ ಖಂಡಿತ ವಿಷಾದಿಸುತ್ತೀರಿ.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿವರ ಕೋಪಕ್ಕೆ ಅರ್ಥ ಇರುತ್ತದೆ. ಆದರೆ ಇವರ ಕೋಪ ಏನು ಕಡಿಮೆ ಇರುವುದಿಲ್ಲ. ಸಿಟ್ಟು ಅಸ್ಥಿರವಾಗಿದ್ದರೂ ಮತ್ತು ಅವರ ಕೋಪಕ್ಕೆ ಕಾರಣವಿರುತ್ತದೆ. ಅವರು ನಟಿಸುವುದಿಲ್ಲ, ಜನರ ಮಧ್ಯದಲ್ಲಿ ನಿಮ್ಮನ್ನು ಶತ್ರುಗಳಂತೆ ನಡೆಸಿಕೊಳ್ಳುತ್ತಾರೆ, ಆದರೆ ಅದು ಅವರ ಮನಸ್ಸಿನಲ್ಲಿ ಇರುವುದಿಲ್ಲ. ಅವರು ನಿಮ್ಮನ್ನು ಅಷ್ಟು ಸುಲಭವಾಗಿ ಬಿಟ್ಟುಹೋಗಲು ಸಹ ಬಿಡುವುದಿಲ್ಲ. ಅವರ ಚಲನೆಯು ವೇಗವಾಗಿರುತ್ತದೆ ಮತ್ತು ಸಮಯಕ್ಕೆ ತಕ್ಕಂತೆ ಇರುತ್ತದೆ. ವೃಶ್ಚಿಕ ರಾಶಿಯವರೇನಾದರೂ ನಿಮ್ಮ ಶತ್ರುವಾದರೆ ಯಾವಾಗ ಪ್ರತಿದಾಳಿ ಮಾಡುತ್ತಾರೆ ಎಂಬುದು ನಿಮಗೆ ತಿಳಿಯುವುದೇ ಇಲ್ಲ, ಅದಕ್ಕೆ ನೀವು ಸಿದ್ಧರಾಗಲು ಸಹ ನಿಮಗೆ ಅವಕಾಶ ಇರುವುದಲ್ಲ, ತಿಳಿದಿರಲಿ.

ಧನು ರಾಶಿ
ಧನು ರಾಶಿಯವರು ತುಂಬಾ ಸೂಕ್ಷ್ಮವಾಗಿರುತ್ತದೆ ಮತ್ತು ಅವರನ್ನು ನೋಯಿಸುವುದು ಸಹ ತುಂಬಾ ಸುಲಭ. ಅವರು ದ್ವೇಷವನ್ನು ಹಿಡಿದಿಟ್ಟುಕೊಳ್ಳುತ್ತಾರೆ. ಆದರೆ ಅವರ ಕೋಪದ ತಾಪ ಅಥವಾ ವಿಷವು ನಿಮ್ಮನ್ನು ವಿಭಿನ್ನ ರೀತಿಯಲ್ಲಿ ಸ್ಪರ್ಶಿಸಲು ಪ್ರಾರಂಭಿಸುವವರೆಗೆ ಅವರ ಸಿಟ್ಟು ನಿಮಗೆ ಅರಿತುಕೊಳ್ಳಲು ಆಗುವುದೇ ಇಲ್ಲ. ಅವರ ಮೇಲೆ ಮಾಡಿದ ತಮಾಷೆ ಕೂಡ ಅವರಿಗೆ ಕಿರಿಕಿರಿ ಉಂಟುಮಾಡಬಹುದು ಎಚ್ಚರ.



Click it and Unblock the Notifications