Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮಂಗಳಕರ ಕಾರ್ಯಗಳಿಗೆ ಅಕ್ಟೋಬರ್‌ನಲ್ಲಿರುವ ಒಳ್ಳೆಯ ದಿನಗಳು ಇವೇ ನೋಡಿ
ಯಾವುದೇ ಶುಭಕಾರ್ಯಗಳನ್ನು ಮಾಡುವ ಮುನ್ನ ಉತ್ತಮ ದಿನ ಹಾಗೂ ಘಳಿಗೆಯನ್ನು ನೋಡುವುದು ವಾಡಿಕೆ. ಇದರಿಂದ ನಡೆಸಿದ ಕಾರ್ಯವೆಲ್ಲವೂ ಉತ್ತಮ ಫಲಿತಾಂಶ ನೀಡುತ್ತವೆ ಎಂಬುದು ನಂಬಿಕೆ. ಇದೇ ಕಾರಣಕ್ಕಾಗಿ ಗೃಹಪ್ರವೇಶ, ಹೊಸ ಮೆನ ಖರೀದಿ, ಆಸ್ತಿ ಖರೀದಿ, ವಾಹನ ಖರೀದಿ, ಚಿನ್ನ ಖರೀದಿ ಸೇರಿದಂತೆ ಇತ್ಯಾದಿ ಒಳ್ಳೆಯ ಕಾರ್ಯಗಳನ್ನು ಮಾಡುವಾಗ ಜ್ಯೋತಿಷ್ಯರ ಸಲಹೆ ತೆಗೆದುಕೊಳ್ಳುವುದು.

ಅದೇ ರೀತಿ 2022ರ ಅಕ್ಟೋಬರ್‌ನಲ್ಲಿ ನೀವೇನಾದರೂ ಅಕ್ಟೋಬರ್‌ನಲ್ಲಿ ಶುಭಕಾರ್ಯಗಳನ್ನು ಮಾಡಲು ಒಳ್ಳೆಯ ದಿನಗಳನ್ನು ಹುಡುಕುತ್ತಿದ್ದೀರಾ? ಇಲ್ಲಿದೆ ನಿಮಗಾಗಿ ಮಂಗಳಕರ ದಿನಗಳ ಪಟ್ಟಿ ಇಲ್ಲಿದೆ. ಇನ್ಯಾಕೆ ತಡ, ಈಗಲೇ ನಿಮ್ಮ ದಿನಗಳನ್ನು ಆಯ್ಕೆ ಮಾಡಿಕೊಳ್ಳಿ.
2022ರ ಅಕ್ಟೋಬರ್ ಶುಭಕಾರ್ಯಗಳಿಗೆ ಇರುವ ಮಂಗಳಕರ ದಿನಾಂಕಗಳು ಹಾಗೂ ಸಮಯವನ್ನು ಈ ಕೆಳಗೆ ನೀಡಲಾಗಿದೆ:

2022ರ ಅಕ್ಟೋಬರ್‌ನಲ್ಲಿರುವ ಶುಭದಿನಗಳು ಹಾಗೂ ಸಮಯ:
ಅಕ್ಟೋಬರ್ 4, ಮಂಗಳವಾರ - ಇಡೀ ದಿನ
ಅಕ್ಟೋಬರ್ 5 ಬುಧವಾರ - ಇಡೀ ದಿನ
ಅಕ್ಟೋಬರ್ 6 ಗುರುವಾರ - ಬೆಳಗ್ಗೆ 9:40ರ ನಂತರ
ಅಕ್ಟೋಬರ್ 9 ಭಾನುವಾರ - ಮಧ್ಯಾಹ್ನ 2:49ರ ನಂತರ
ಅಕ್ಟೋಬರ್ 10 ಸೋಮವಾರ - ಇಡೀ ದಿನ
ಅಕ್ಟೋಬರ್ 11 ಮಂಗಳವಾರ - ಇಡೀ ದಿನ
ಅಕ್ಟೋಬರ್ 14 ಶುಕ್ರವಾರ - ಮಧ್ಯಾಹ್ನ 1:55ರ ನಂತರ

ಅಕ್ಟೋಬರ್ 17-31
ಅಕ್ಟೋಬರ್ 17 ಸೋಮವಾರ - ಇಡೀ ದಿನ
ಅಕ್ಟೋಬರ್ 18 ಮಂಗಳವಾರ - ಇಡೀ ದಿನ
ಅಕ್ಟೋಬರ್ 19 ಬುಧವಾರ - ಇಡೀ ದಿನ
ಅಕ್ಟೋಬರ್ 27 ಗುರುವಾರ - ಮಧ್ಯಾಹ್ನ 12:10ರ ನಂತರ
ಅಕ್ಟೋಬರ್ 28 ಶುಕ್ರವಾರ - ಬೆಳಗ್ಗೆ 10:42ವರೆಗೆ
ಅಕ್ಟೋಬರ್ 31 ಸೋಮವಾರ - ಬೆಳಗ್ಗೆ 10:42ರ ನಂತರ

ಅಕ್ಟೋಬರ್‌ನಲ್ಲಿರುವ ಅಶುಭ ದಿನಗಳು:
ಜ್ಯೋತಿಷ್ಯದ ಪ್ರಕಾರ, ಅಕ್ಟೋಬರ್ 1, 13, 15, 16, 23 ಮತ್ತು ಅಕ್ಟೋಬರ್ 25 ದಿನಾಂಕಗಳು ಶುಭಕಾರ್ಯಗಳನ್ನು ಮಾಡಲು ಒಳ್ಳೆಯ ದಿನಗಳಲ್ಲ. ಆದ್ದರಿಂದ ಈ ದಿನಾಂಕಗಳಂದು ಮಂಗಳಕರ ಕಾರ್ಯಗಳನ್ನು ಮಾಡದೇ ಇರುವುದು ಉತ್ತಮವಾಗಿದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಜ್ಯೋತಿಷ್ಯ ಸಲಹೆಗಾರರನ್ನು ಸಂಪರ್ಕಿಸಿ.



Click it and Unblock the Notifications
