Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧದ ಗೌಪ್ಯತೆ ಕಾಪಾಡಿಕೊಳ್ಳಿ: ದಂಪತಿಗಳಿಗಾಗಿ 7 ಪ್ರಮುಖ ನಿಯಮಗಳು -
ಬೆಂಗಳೂರು ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ 20 ನಿಮಿಷದ ಕೆಲಸ ಮಾಡಿ -
ವಿಶ್ವ ಮೊಟ್ಟೆ ದಿನ: ಕೇವಲ ₹20ರಲ್ಲಿ ಪ್ರೋಟೀನ್ ಪಡೆಯುವ ಅದ್ಭುತ ಹ್ಯಾಕ್ಸ್! -
ಮೈಸೂರು ದಸರಾ 2026: ಅಂಬಾರಿ ಹೊರುವ ಆನೆ ಯಾರು? ಟಿಕೆಟ್, ರೂಟ್ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ -
ನವರಾತ್ರಿ ಗರ್ಬಾ: ಕಾಲು ನೋವು, ಸುಸ್ತು ಇಲ್ಲದೆ ಗಂಟೆಗಟ್ಟಲೆ ಡ್ಯಾನ್ಸ್ ಮಾಡಲು ಈ 12 ನಿಮಿಷದ ಟ್ರಿಕ್ ಫಾಲೋ ಮಾಡಿ! -
ದೆಹಲಿ ಮಾಲಿನ್ಯದ ಆತಂಕ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ದಂಪತಿಗಳಿಗೆ ಇಲ್ಲಿದೆ ಸರಳ ಟಿಪ್ಸ್ -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ
2019ರ ಡಿಸೆಂಬರ್‌ನಲ್ಲಿ ವಿವಾಹಕ್ಕೆ ಶುಭ ಮುಹೂರ್ತಗಳು ಹಾಗೂ ರಾಶಿಚಕ್ರದ ಪ್ರಕಾರ ಶುಭ ದಿನಗಳು
ಪವಿತ್ರವಾದ ಬಂಧವನ್ನು ಬೆಸೆಯುವ ವಿವಾಹ ಎಲ್ಲರ ಜೀವನದಲ್ಲೂ ಅತೀ ಅಮೂಲ್ಯವಾದ ಘಳಿಗೆ. ವಧು-ವರ ಇಬ್ಬರೂ ಪರಸ್ಪರ ಒಪ್ಪಿ ದಾಂಪತ್ಯ ಜೀವನಕ್ಕೆ ಕಾಲಿಡುವ ಘಳಿಗೆಗೆ ಇಡೀ ಕುಟುಂಬ, ಸ್ನೇಹಿತರು, ಬಂಧು-ಬಾಂಧವರು ಸಾಕ್ಷಿಯಾಗುತ್ತಾರೆ. ಇಂತಹ ಸುಮಧುರವಾದ ಜೀವನದ ಪವಿತ್ರ ಘಟ್ಟಕ್ಕೆ ಹಿರಿಯರು ಶುಭಘಳಿಗೆ ಅಥವಾ ಶುಭ ಮುಹೂರ್ತವನ್ನು ನಿಗದಿ ಮಾಡುತ್ತಾರೆ. ಈ ಅವಧಿಯಲ್ಲಿ ವಿವಾಹವಾದರೆ ಇಬ್ಬರ ವೈವಾಹಿಕ ಜೀವನ ಸುಖಮಯವಾಗಿರುತ್ತದೆ, ಸುದೀರ್ಘವಾದ ನೆಮ್ಮದಿಯ ಜೀವನ ಇವರದ್ದಾಗಿರುತ್ತದೆ ಎಂದು ಹಿಂದೂ ಸಂಪ್ರದಾಯದಲ್ಲಿ ಪುರಾತನ ಕಾಲದಿಂದಲೂ ನಂಬಿಕೊಂಡು ಬಂದಿರುವ ಪದ್ಧತಿ.

2019ರ ವರ್ಷಾಂತ್ಯದ ಮಾಸ ಡಿಸೆಂಬರ್‌ನಲ್ಲಿ ವಿವಾಹಕ್ಕೆ ಯಾವೆಲ್ಲಾ ದಿನ ಒಳ್ಳೆಯದು, ಯಾವ ಶುಭ ಮುಹೂರ್ತವಿದೆ ಎಂದು ಮುಂದಿನ ಲೇಖನದಲ್ಲಿ ತಿಳಿಯೋಣ. ಹಿಂದೂ ಪಂಚಾಗದ ಪ್ರಕಾರ ಡಿಸೆಂಬರ್ ವಿವಾಹಕ್ಕೆ ಅತೀ ಅಮೂಲ್ಯವಾದ ನಾಲ್ಕು ಶುಭ ಮುಹೂರ್ತಗಳಿಗೆ. ಅವುಗಳೆಂದರೆ:
ಡಿಸೆಂಬರ್‌ನಲ್ಲಿ ವಿವಾಹಕ್ಕೆ ಶುಭ ಮುಹೂರ್ತಗಳು

1. 5 ಡಿಸೆಂಬರ್: ಗುರುವಾರ
2019ನೇ ಸಾಲಿನ ಡಿಸೆಂಬರ್ 5ನೇ ಗುರುವಾರದಂದು ಮದುವೆಗೆ ಶುಭ ಮುಹೂರ್ತವಿದೆ.
ಮುಹೂರ್ತ: ಸಂಜೆ 8.08ರಿಂದ ಮರುದಿನ ಡಿಸೆಂಬರ್ 6ರ ಬೆಳಿಗ್ಗೆ 7.00 ಗಂಟೆಯ ವರೆಗೆ.
ನಕ್ಷತ್ರ: ಉತ್ತರ ಭಾದ್ರಪದ
ತಿಥಿ: ನವಮಿ, ದಶಮಿ

2. 6 ಡಿಸೆಂಬರ್: ಶುಕ್ರವಾರ
2019ನೇ ಸಾಲಿನ ಡಿಸೆಂಬರ್ 6ನೇ ಶುಕ್ರವಾರದಂದು ವಿವಾಹಕ್ಕೆ ಶುಭ ಮುಹೂರ್ತವಿದೆ.
ಮುಹೂರ್ತ: ಬೆಳಿಗ್ಗೆ 7.00ರಿಂದ ಸಂಜೆ 4.32ರ ವರೆಗೆ.
ನಕ್ಷತ್ರ: ಉತ್ತರ ಭಾದ್ರಪದ
ತಿಥಿ: ದಶಮಿ

3. 11 ಡಿಸೆಂಬರ್: ಬುಧವಾರ
2019ನೇ ಸಾಲಿನ ಡಿಸೆಂಬರ್ 11ನೇ ಬುಧವಾರದಂದು ಮದುವೆಗೆ ಶುಭ ಮುಹೂರ್ತವಿದೆ.
ಮುಹೂರ್ತ: ಸಂಜೆ 10.54ರಿಂದ ಮರುದಿನ ಡಿಸೆಂಬರ್ 12ರ ಬೆಳಿಗ್ಗೆ 7.04ರ ವರೆಗೆ.
ನಕ್ಷತ್ರ: ರೋಹಿಣಿ
ತಿಥಿ: ಪೂರ್ಣಿಮಾ

4. 12 ಡಿಸೆಂಬರ್: ಗುರುವಾರ
2019ನೇ ಸಾಲಿನ ಡಿಸೆಂಬರ್ 12ನೇ ಗುರುವಾರದಂದು ಮದುವೆಗೆ ಶುಭ ಮುಹೂರ್ತವಿದೆ.
ಮುಹೂರ್ತ: ಬೆಳಿಗ್ಗೆ 7.04ರಿಂದ ಮರುದಿನ ಡಿಸೆಂಬರ್ 13ರ ಬೆಳಿಗ್ಗೆ 6.19ರ ವರೆಗೆ.
ನಕ್ಷತ್ರ: ಮೃಗಶೀರ್ಷ
ತಿಥಿ: ಪ್ರತಿಪಾದ

ರಾಶಿಚಕ್ರದ ಪ್ರಕಾರ ವಿವಾಹಕ್ಕೆ ಇರುವ ಶುಭ ದಿನಾಂಕಗಳು
ಮೇಷ ರಾಶಿ: ಮದುವೆಗೆ ಯಾವುದೇ ಶುಭ ದಿನ ಇಲ್ಲ.
ವೃಷಭ ರಾಶಿ: 1,2,3,6,7,8,11 ಮತ್ತು 12
ಮಿಥುನ ರಾಶಿ: 1,2,3,6,7,8, 11 ಮತ್ತು 12
ಕರ್ಕ ರಾಶಿ: 2,3,6,7,8,11 ಮತ್ತು 12
ಸಿಂಹ ರಾಶಿ:1,2,3,6,11 ಮತ್ತು 12
ಕನ್ಯಾ ರಾಶಿ:1,2,3,6,11 ಮತ್ತು 12
ತುಲಾ ರಾಶಿ: 2,3,6,7 ಮತ್ತು 8
ವೃಶ್ಚಿಕ ರಾಶಿ: 1,2,6,7,8,11 ಮತ್ತು 12
ಧನು ರಾಶಿ: ಯಾವುದೇ ಶುಭ ಮುಹೂರ್ತ ಇಲ್ಲ
ಮಕರ ರಾಶಿ: 1,2,6,7,8,11 ಮತ್ತು 12
ಕುಂಭ ರಾಶಿ:1,2,3,6,7 ಮತ್ತು 8
ಮೀನ ರಾಶಿ:1,2,3,6,7,8,11 ಮತ್ತು 12



Click it and Unblock the Notifications
