Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಜನವರಿ 2020ರಲ್ಲಿ ವಾಹನ ಖರೀದಿಗೆ ಶುಭ ದಿನಗಳು ಹಾಗೂ ಮುಹೂರ್ತಗಳು
ಹೊಸ ವಾಹನ ಖರೀದಿ ಎಲ್ಲರ ಜೀವನದಲ್ಲೂ ಬಹಳ ಖುಷಿ ತರುವ ವಿಚಾರ. ಅದರಲ್ಲೂ ನೂತನ ವರ್ಷದ ಮೊದಲ ಮಾಸದಲ್ಲೇ ನೀವು ನೂತನ ವಾಹನಗಳನ್ನು ಖರೀದಿಸುವುದು ಇನ್ನಷ್ಟು ಸಂತೋಷವನ್ನು ಹೆಚ್ಚಿಸುತ್ತದೆ. ಬಹುತೇಕರಿಗೆ ವಾಹನ ಖರೀದಿ ತಮ್ಮ ಜೀವನದ ಮುಖ್ಯ ಗುರಿಗಳಲ್ಲಿ ಒಂದಾಗಿರುತ್ತದೆ. ನಮ್ಮ ಇಚ್ಚೆಯ, ಅನೂಕೂಲಕ್ಕೆ ಅಗತ್ಯವಾದ, ಮುಖ್ಯವಾಗಿ ಬಜೆಟ್ ಗೆ ನಿಲುಕುವ ವಾಹನವನ್ನು ಖರೀದಿಸುವಾಗ ಶುಭ ದಿನ, ಘಳಿಗೆ, ಮುಹೂರ್ತವನ್ನು ನೋಡುವುದು ಉತ್ತಮ ಹಾಗೂ ಹಿಂದಿನಿಂದಲೂ ಪಾಲಿಸಿಕೊಂಡು ಬಂದ ಸಂಪ್ರದಾಯ. ಸಣ್ಣಪುಟ್ಟ ವಿಚಾರಗಳಿಗೆಲ್ಲಾ ಶುಭಗಳಿಗೆ ನೋಡುವ ನಾವು ಹೊಸ ವಾಹನ ಖರೀದಿ ವಿಚಾರಕ್ಕೆ ಬಂದಾಗ ನೋಡಲಾಗದೇ ಇದ್ದೀತೆ?.

ಇಲ್ಲಿವೆ ಜನವರಿ 2020ರಲ್ಲಿ ವಾಹನ ಖರೀದಿಗೆ ಶುಭ ದಿನಗಳು ಹಾಗೂ ಮುಹೂರ್ತಗಳು

2020ಯಲ್ಲಿ ಶುಭದಿನ ಹಾಗೂ ಮುಹೂರ್ತ
3 ಜನವರಿ- ಶುಕ್ರವಾರ
2020 ಹೊಸ ವರ್ಷದಲ್ಲಿ ನೀವು ವಾಹನವನ್ನು ಖರೀದಿಸಬಹುದಾದ ಮೊದಲ ಶುಭ ದಿನ ಜನವರಿ 3.
ಶುಭ ಮುಹೂರ್ತ- ಬೆಳಿಗ್ಗೆ 05:00 ರಿಂದ ಸಂಜೆ 07:56 ರವರೆಗೆ
ನಕ್ಷತ್ರ- ರೇವತಿ
ತಿಥಿ- ಅಷ್ಟಮಿ

8 ಜನವರಿ- ಬುಧವಾರ
ಜನವರಿ 8 ವಾಹನಗಳ ಖರೀದಿಗೆ ಶುಭ ದಿನಾಂಕ.
ಶುಭ ಮುಹೂರ್ತ- ಬೆಳಿಗ್ಗೆ 05:03 ರಿಂದ ಮರುದಿನ ಜನವರಿ 9ರ ಮಧ್ಯರಾತ್ರಿ 12:13 ರವರೆಗೆ
ನಕ್ಷತ್ರ- ರೋಹಿಣಿ ಮತ್ತು ಮೃಗಶೀರ್ಷ
ತಿಥಿ- ತ್ರಯೋದಶಿ

10 ಜನವರಿ- ಶುಕ್ರವಾರ
ವಾರಾಂತ್ಯದಲ್ಲಿ ವಾಹನವನ್ನು ಖರೀದಿಸಲು ನೀವು ಯೋಚಿಸುತ್ತಿದ್ದರೆ ಜನವರಿ 10 ಶುಭ ದಿನ.
ಶುಭ ಮುಹೂರ್ತ- ಬೆಳಿಗ್ಗೆ 11:19 ರಿಂದ ಮರುದಿನ ಜನವರಿ 11 ಬೆಳಿಗ್ಗೆ 05:06 ರವರೆಗೆ
ನಕ್ಷತ್ರ- ಪುನರ್ವಸು
ತಿಥಿ- ಪೂರ್ಣಿಮಾ ಮತ್ತು ಪ್ರತಿಪದ

17 ಜನವರಿ- ಶುಕ್ರವಾರ
ಜನವರಿ 17 ಮತ್ತೊಂದು ವಾರಾಂತ್ಯದಲ್ಲಿ ಮತ್ತು ಮನೆಗೆ ಲಕ್ಷ್ಮಿಯನ್ನುಬರಮಾಡಿಕೊಳ್ಳಲು ಬಯಸುವವರಿಗೆ ಇದು ಶುಭ ದಿನವಾಗಿದೆ.
ಶುಭ ಮುಹೂರ್ತ- ಬೆಳಿಗ್ಗೆ 05:11ರಿಂದ ಪ್ರಾರಂಭವಾಗಿ ಮರುದಿನ ಜನವರಿ 18ರ ತಡರಾತ್ರಿ 02:03ರವರೆಗೆ
ನಕ್ಷತ್ರ- ಚಿತ್ತಾ ಮತ್ತು ಸ್ವಾತಿ
ತಿಥಿ- ಅಷ್ಟಮಿ

19 ಜನವರಿ- ಭಾನುವಾರ
ಜನವರಿ ತಿಂಗಳಲ್ಲಿ ಭಾನುವಾರದಂದು ವಾಹನ ಖರೀದಿಸಲು ನೀವು ಆಸಕ್ತಿ ಹೊಂದಿದ್ದರೆ ಜನವರಿ 19 ಶುಭ ದಿನಾಂಕ.
ಶುಭ ಮುಹೂರ್ತ- ರಾತ್ರಿ 08:11 ರಿಂದ ಪ್ರಾರಂಭ ಮರುದಿನ ಜನವರಿ 20ರ ಬೆಳಿಗ್ಗೆ 05:14 ರವರೆಗೆ
ನಕ್ಷತ್ರ- ಅನುರಾಧ
ತಿಥಿ- ದಶಮಿ ಮತ್ತು ಏಕಾದಶಿ

20 ಜನವರಿ- ಸೋಮವಾರ
ವಾಹನ ಖರೀದಿಗೆ ಶಿವನ ಭಕ್ತರಿಗೆ ಶುಭ ದಿನ ಜನವರಿ 20.
ಶುಭ ಮುಹೂರ್ತ- ಬೆಳಿಗ್ಗೆ 05:14 ರಿಂದ ರಾತ್ರಿ 08:00 ರವರೆಗೆ
ನಕ್ಷತ್ರ- ಅನುರಾಧಾ
ತಿಥಿ- ಏಕಾದಶಿ

27 ಜನವರಿ- ಸೋಮವಾರ
ಮತ್ತೊಂದು ಶುಭ ಸೋಮವಾರ 27 ಜನವರಿ ಆಗಿದ್ದು ನೀವು ವಾಹನವನ್ನು ಖರೀದಿಸಬಹುದು.
ಶುಭ ಮುಹೂರ್ತ- ಬೆಳಿಗ್ಗೆ 05:20 ರಿಂದ ಮರುದಿನ ಜನವರಿ 28ರ ಬೆಳಿಗ್ಗೆ 04:51ರವರೆಗೆ
ನಕ್ಷತ್ರ- ಶತಾಭಿಶಾ
ತಿಥಿ- ತೃತೀಯ

30 ಜನವರಿ- ಗುರುವಾರ
ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಭಕ್ತರಿಗೆ ಜನವರಿಯಲ್ಲಿ ವಾಹನ ಖರೀದಿಸಲು ಶುಭ ದಿನ ಜನವರಿ 30 ಪ್ರಶಸ್ತ್ ದಿನ.
ಶುಭ ಮುಹೂರ್ತ- ಬೆಳಿಗ್ಗೆ 11:43 ರಿಂದ ಮರುದಿನ ಜನವರಿ 31ರ ಬೆಳಿಗ್ಗೆ 05:23 ರವರೆಗೆ
ನಕ್ಷತ್ರ- ರೇವತಿ
ತಿಥಿ- ಶಸ್ತಿ

31 ಜನವರಿ- ಶುಕ್ರವಾರ
2020ರ ಜನವರಿ ತಿಂಗಳಲ್ಲಿ ವಾಹನವನ್ನು ಖರೀದಿಸಲು ಇರುವ ಕೊನೆಯ ಶುಭ ದಿನ ಜನವರಿ 31. ಒಬ್ಬರು ವಾಹನವನ್ನು ಖರೀದಿಸಬಹುದು.
ಶುಭ ಮುಹೂರ್ತ- 05:23 ರಿಂದ ಮಧ್ಯಾಹ್ನ 12:21 ರವರೆಗೆ
ನಕ್ಷತ್ರ- ರೇವತಿ
ತಿಥಿ- ಶಸ್ತಿ
ನೂತನ ವರ್ಚದ ಜನವರಿ ಮಾಸದಲ್ಲಿ ಹೊಸ ವಾಹನಗಳನ್ನು ಖರೀದಿಸಲು ಬಯಸುವವರು ಈ ಶುಭ ದಿನಗಳಂದು ಖರೀದಿಸಿದರೆ ನಿಮಗೆ ಅದೃಷ್ಟ ಒಲಿಯಲಿದ್ದು ಶುಭವಾಗಲಿದೆ ಎಂದು ಜ್ಯೋತಿಶಾಸ್ತ್ರ ಹೇಳುತ್ತದೆ.



Click it and Unblock the Notifications