Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Ashwini Nakshatra Prediction 2023: ಅಶ್ವಿನಿ ನಕ್ಷತ್ರದವರಿಗೆ 2023 ಹೇಗಿರಲಿದೆ?
ವ್ಯಕ್ತಿಯು ಜನಿಸಿದ ದಿನಾಂಕ, ಸಮಯದ ಅನುಸಾರ ಅವರ ನಕ್ಷತ್ರ ಬರುತ್ತದೆ.
2023 ಅಶ್ವಿನಿ ನಕ್ಷತ್ರದವರಿಗೆ ಹೇಗೆ ಇರಲಿದೆ ಎಂದು ತಿಳಿಯಲು ಈ ನಕ್ಷತ್ರ ಭವಿಷ್ಯ ಓದಿ...
ನಕ್ಷತ್ರಗಳಲ್ಲಿ ಮೊದಲು ಬರುವುದು ಆಶ್ವಿನಿ ನಕ್ಷತ್ರ.
ಚಿಹ್ನೆ: ಕುದುರೆ ಸವಾರ
ಅಧಿಪತಿ: ಕೇತು
ರಾಶಿಚಕ್ರ: ಮೇಷ ರಾಶಿ
ಆಹಾರ: ಗಣೇಶ ಅಥವಾ ಅಶ್ವಿನಿ ಕುಮಾರರು, ಸ್ವರ್ಗೀಯ ದೇವತೆಗಳ ವೈದ್ಯರು
ಪ್ರಕೃತಿ: ಬೆಳಕು
ಗಣ: ದೇವ
ಮೋಡ್: ಸಕ್ರಿಯ
ನಕ್ಷತ್ರಪುಂಜ: 3
ದೇಹ ವರಾಹಮಿಹಿರ: ಮೊಣಕಾಲುಗಳು
ದೇಹ ಪರಾಶರ: ತಲೆ
ಸಂಖ್ಯೆ 1
ಪತ್ರ: ಚು, ಚೇ, ಚೋ,
ಅದೃಷ್ಟ ಅಕ್ಷರಗಳು: ಸ ಮತ್ತು ಲ
ಅದೃಷ್ಟದ ಕಲ್ಲು: ಬೆಕ್ಕಿನ ಕಣ್ಣು
ಅದೃಷ್ಟ ಬಣ್ಣ: ಕಪ್ಪು
ಅದೃಷ್ಟ ಸಂಖ್ಯೆಗಳು: 7, 9
ಅಂಶ: ಭೂಮಿ
ದೋಷ: ವಾತ
ಪಕ್ಷಿಯ ಹೆಸರು: ಕಾಡು ಹದ್ದು
ಯೋನಿ/ಪ್ರಾಣಿ ಚಿಹ್ನೆ: ಒಂದು ಗಂಡು ಕುದುರೆ (ಅಶ್ವ)
ಮರ: ಮುಷ್ಟಿ
ಅಶ್ವಿನಿ ನಕ್ಷತ್ರದವರ ಗುಣಗಳು
ಇವರು ಸಾಹಸಗಾರರು, ಕ್ರಿಯಾಶೀಲರು, ಸಾಹಸ ಪ್ರಿಯರು, ನೇರ ಸ್ವಭಾವದವರು, ನೇರ ನುಡಿಯವರು ಹಾಗೂ ಶ್ರಮ ಜೀವಿಗಳು.
ಇವರು ತೀಕ್ಷ್ಣ ಬುದ್ಧಿಯವರು ಹಾಗೂ ಆತುರದ ನಿರ್ಧಾರ ತೆಗೆದುಕೊಳ್ಳುವವರು ಅಲ್ಲದೆ ಬೇರೆಯವರ ಕಷ್ಟಗಳಿಗೆ ಬೇಗನೆ ಸ್ಪಂದಿಸುತ್ತಾರೆ.
ಅಶ್ವಿನಿ ನಕ್ಷತ್ರದವರಿಗೆ ಈ ಬಗೆಯ ವೃತ್ತಿ ಸರಿಹೊಂದುವುದು
ಮೇಲ್ವಿಚಾರಕರು, ವೈದ್ಯ ವೃತ್ತಿ, ಶಿಕ್ಷಕ ವೃತ್ತಿ, ಸಾರಿಗೆ, ಕಲೆ, ತೋಟಗಾರಿಕೆ, ನಾಟಿ ವೈದ್ಯ, ಔಷಧ ವಿತರಿಸುವುದು, ಸಾಹಸ ಕ್ರೀಡೆ, ವ್ಯಾಪಾರ.
ಇವರಿಗೆ ಸಂಗೀತದಲ್ಲಿ ಆಸಕ್ತಿ ಹೆಚ್ಚು. ವಾಹನ, ಫೋನ್, ಆಭರಣ, ಬಟ್ಟೆ ಖರೀದಿಸಲೂ ತುಂಬಾನೇ ಆಸಕ್ತಿ ತೋರಿಸುತ್ತಾರೆ.
ಅಶ್ವಿನಿ ನಕ್ಷತ್ರದವರಿಗೆ ಮೊದಲ 30 ವರ್ಷ ಸ್ವಲ್ಪ ಕಷ್ಟ
ಅಶ್ವಿನಿ ನಕ್ಷತ್ರದವರು ಮೊದಲ 30 ವರ್ಷ ಸ್ವಲ್ಪ ಕಷ್ಟಗಳನ್ನು ಎದುರಿಸುತ್ತಾರೆ, ನಂತರ ಜೀವನದಲ್ಲಿ ಪ್ರಗತಿ ಹೊಂದುತ್ತಾರೆ ಎಂದು ವೈದಿಕ ಶಾಸ್ತ್ರ ಹೇಳುತ್ತದೆ.
ಅಶ್ವಿನಿ ನಕ್ಷತ್ರದವರು ಯಾವ ನಕ್ಷತ್ರದವರ ಜೊತೆ ಹೊಂದಿಕೊಳ್ಳುತ್ತಾರೆ?
ವೈದಿಕ ಶಾಸ್ತ್ರದ ಪ್ರಕಾರ ಸಾಮಾನ್ಯವಾಗಿ ಪರಸ್ಪರ ದ್ವೇಷಿಸುವ ಪ್ರಾಣಿಗಳ ನಕ್ಷತ್ರದವರ ನಡುವೆ ಹೊಂದಾಣಿಕೆ ಇರಲ್ಲ, ಇವರು ಹಸ್ತಾ ಹಾಗೂ ಸ್ವಾತಿ ನಕ್ಷತ್ರದವರ ಜೊತೆ ಹೊಂದಿಕೊಳ್ಳುವುದು ಸ್ವಲ್ಪ ಕಷ್ಟ.ಶತಭಿಷ ನಕ್ಷತ್ರದ ಅಡಿಯಲ್ಲಿ ಜನಿಸಿದವರ ಜೊತೆ ಹೆಚ್ಚು ಹೊಂದಿಕೊಳ್ಳುತ್ತಾರೆ.
ಅಶ್ವಿನಿ ನಕ್ಷತ್ರದವರ 2023ರ ನಕ್ಷತ್ರ ಭವಿಷ್ಯ ನೋಡುವುದಾದರೆ ....

2023ರ ನಕ್ಷತ್ರ ಭವಿಷ್ಯ ಪ್ರಕಾರ ಅಶ್ವಿನಿ ನಕ್ಷತ್ರದವರ ವೃತ್ತಿ ಜೀವನ
2023ರಲ್ಲಿ ಹಲವಾರು ಸವಾಲುಗಳು ಎದುರಾಗುವುದು ಆದರೆ ನಿಮ್ಮ ವೃತ್ತಿ ಬದುಕಿಗೆ ಅವುಗಳಿಂದ ಪ್ರಗತಿ ಉಂಟಾಗುವುದು. ನೀವು ಕಠಿಣ ಶ್ರಮಕ್ಕೆ ತಕ್ಕ ಫಲ ಪಡೆಯುವಿರಿ. ವರ್ಷದ ಮೊದಲ ಕೆಲವು ತಿಂಗಳುಗಳಲ್ಲಿ ಹಲವು ಸವಾಲುಗಳಿರುತ್ತದೆ, ಅನವಶ್ಯಕ ಸಾಹಸಗಳು ಅಥವಾ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಆಗ ನಿಮಗೆ ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗುವುದು. ವರ್ಷದ ಕೊನೆಯಲ್ಲಿ ವೃತ್ತಿ ಜೀವನದಲ್ಲಿ ನಿಮಗೆ ಪ್ರಗತಿಯಾಗಲಿದೆ.

ಅಶ್ವಿನಿ ನಕ್ಷತ್ರದವರ ಆರ್ಥಿಕ ಸ್ಥಿತಿ
ಆರ್ಥಿಕವಾಗಿ ಅಭಿವೃದ್ಧಿಯಾಗಲು ಕೆಲವು ಅವಕಾಶಗಳು ದೊರೆಯಲಿದೆ. ಮೊದಲ ಕೆಲವು ತಿಂಗಳುಗಳಲ್ಲಿ ಹಣ ಗಳಿಸುವುದು ಕಷ್ಟ ಆದರೆ ಸುಲಭವಾಗಿ ಖರ್ಚಾಗುವುದು, ಆದರೆ ನಂತರ ಆರ್ಥಿಕ ಪರಿಸ್ಥಿತಿ ಚೆನ್ನಾಗಿರುತ್ತದೆ. ಒಟ್ಟಿನಲ್ಲಿ ಬಜೆಟ್ ಪ್ರಕಾರ ಹಣ ಖರ್ಚು ಮಾಡುವುದು ಒಳ್ಳೆಯದು.

ಅಶ್ವಿನಿ ನಕ್ಷತ್ರದವರ ಸಂಬಂಧ ಭವಿಷ್ಯ
ಸಂಬಂಧದ ದೃಷ್ಟಿಯಲ್ಲಿ ಈ ವರ್ಷ ಅನುಕೂಲಕರವಾಗಿದೆ, ಏನಾದರೂ ಸಮಸ್ಯೆಗಳಿದ್ದರೆ ಅದು ಸರಿ ಹೋಗಲಿದೆ, ವರ್ಷದ ಅರ್ಧ ಭಾಗದ ನಂತರ ನಿಮ್ಮ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ, ಕಳೆದು ಹೋದ ಖುಷಿ ಮರಳಿ ಪಡೆಯಲು ಸಾಧ್ಯವಾಗುವುದು. ವೈವಾಹಿಕ ಜೀವನದಲ್ಲಿ ಸಾಮರಸ್ಯ ಹೆಚ್ಚಾಗಲಿದೆ

ಅಶ್ವಿನಿ ನಕ್ಷತ್ರದವರ ಆರೋಗ್ಯ ಭವಿಷ್ಯ 2023
ನಿಮ್ಮ ಆರೋಗ್ಯ ಸಮಸ್ಯೆಗಳು ಈ ವರ್ಷ ಕಡಿಮೆಯಾಗಲಿದೆ. ಮೊದಲ ಕೆಲವು ತಿಂಗಳು ಕೆಲಸದ ಒತ್ತಡದಿಂದಾಗಿ ಆರೋಗ್ಯದ ಮೇಲೆ ಕೆಲ ಪರಿಣಾಮ ಬೀರಬಹುದು. ಈ ಸಮಯದಲ್ಲಿ ನೀವು ಮಾನಸಿಕ ಒತ್ತಡ ಹೊರಹಾಕಲು ಪ್ರಯತ್ನ ಮಾಡಬೇಕು. ಧ್ಯಾನ ನಿಮ್ಮ ಮಾನಸಿಕ ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಒಟ್ಟಾರೆಯಾಗಿ ನೋಡುವುದಾದರೆ
2023 ನಿಮಗೆ ತುಂಬಾ ಒಳ್ಳೆಯದು ಅಂತಲೂ ಇಲ್ಲ, ಕೆಟ್ಟದು ಅಂತಲೂ ಇಲ್ಲ, ಈ ವರ್ಷ ನಿಮಿಗೆ ಮಿಶ್ರಫಲ. ಆರೋಗ್ಯ, ವೃತ್ತಿ, ಯಸ್ಯಮ, ಸಂಬಂಧದ ವಿಷಯದಲ್ಲಿ ವರ್ಷದ ಆರಂಭದ ತಿಂಗಳಿಗಿಂತ ನಂತರದ ತಿಂಗಳು ಉತ್ತಮವಾಗಿದೆ.



Click it and Unblock the Notifications