Ashlesha Nakshatra Prediction 2023:ಅಶ್ಲೇಷ ನಕ್ಷತ್ರದವರಿಗೆ 2023 ಹೇಗಿರಲಿದೆ?

ವ್ಯಕ್ತಿಯು ಜನಿಸಿದ ದಿನಾಂಕ, ಸಮಯದ ಅನುಸಾರ ಅವರ ನಕ್ಷತ್ರ ಬರುತ್ತದೆ.

ಅಶ್ಲೇಷ ನಕ್ಷತ್ರ- ಜ್ಯೋತಿಷ್ಯದ ಪ್ರಕಾರ 27 ನಕ್ಷತ್ರಗಳಲ್ಲಿ9ನೇ ನಕ್ಷತ್ರ

Ashlesha Nakshatra

ಅಶ್ಲೇಷ ನಕ್ಷತ್ರದವರ ಗುಣಗಳು

ಅಶ್ಲೇಷ ನಕ್ಷತ್ರದವರಿಗೆ ಯಾವುದೇ ಕಟ್ಟುಪಾಡುಗಳಿಗೆ ಸಿಕ್ಕಿಕೊಳ್ಳುವುದು ಇಷ್ಟವಿಲ್ಲ. ಮನೆ ಅಥವಾ ಆಫೀಸ್‌ನ ಯಾವುದೇ ರೂಲ್ಸ್ ಪಾಲಿಸಲು ಸಿದ್ಧವಿರಲ್ಲ. ಇರುವ ನಿಯಮಗಳನ್ನು ಮುರಿಯುವುದೇ ಇವರ ಗುಣ. ವೃತ್ತಿ ಜೀವನದಲ್ಲಿ ಇವರು ಔಟ್‌ ಆಫ್‌ ದಿ ಬಾಕ್ಸ್ ಯೋಚಿಸುವ ಮೂಲಕ ಗಮನ ಸೆಳೆಯುತ್ತಾರೆ. ಬರವಣಿಗೆ, ಕೆಲ ಕ್ಷೇತ್ರದಲ್ಲಿದ್ದರೆ ತುಂಬಾನೇ ಹೆಸರು ಮಾಡುತ್ತಾರೆ. ತಮ್ಮ ಮಾತಿನ ಶೈಲಿಯಿಂದ ಗಮನ ಸೆಳೆಯುತ್ತಾರೆ. ಕೆಲವೊಂದು ಸಂದರ್ಭಗಳಲ್ಲಿ ತಟಸ್ಥವಾಗಿ ವರ್ತಿಸುವ ಮೂಲಕ ಗಮನ ಸೆಳೆಯುತ್ತಾರೆ.

ಅಶ್ಲೇಷ ನಕ್ಷತ್ರದವರ 2023ರ ಭವಿಷ್ಯ ನೋಡುವುದಾದರೆ:

ಅಶ್ಲೇಷ ನಕ್ಷತ್ರದವರ ವೃತ್ತಿ ಜೀವನ ಭವಿಷ್ಯ 2023

ಅಶ್ಲೇಷ ನಕ್ಷತ್ರದವರ ವೃತ್ತಿ ಜೀವನ ಭವಿಷ್ಯ 2023

2023ರ ವರ್ಷದ ಆರಂಭದಲ್ಲಿ ವೃತ್ತಿ ಜೀವನದಲ್ಲಿ ಕೆಲವು ಸಮಸ್ಯೆಗಳು ಎದುರಾಗಬಹುದು , ಆದರೆ ನಿರಾಸೆ ಪಡಬೇಡಿ, ಏಪ್ರಿಲ್‌ನಿಂದ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ. ವರ್ಷದ ಎರಡನೇ ಭಾಗದಲ್ಲಿ ವೃತ್ತಿ ಜೀವನದಲ್ಲಿ ತುಂಬಾನೇ ಪ್ರಗತಿ ಕಾಣುವಿರಿ.

ಅಶ್ಲೇಷ ನಕ್ಷತ್ರದವರು ಹೊಸ ಉದ್ಯೋಗ ಹುಡುಕುತ್ತಿದ್ದರೆ ಈ ಹೊಸ ನಿಮಗೆ ನೀವು ಬಯಸಿದ ಉದ್ಯೋಗ ದೊರೆಯಲಿದೆ. ಸ್ವಂತ ಉದ್ಯೋಗ ಮಾಡುತ್ತಿರುವವರು ಕೂಡ ಲಾಭ ಗಳಿಸಲು ಸಾಧ್ಯವಾಗುವುದು. ವಿದೇಶಕ್ಕೆ ಹೋಗ ಬಯಸುವವರಿಗೆ ಹೊಸ ವರ್ಷದಲ್ಲಿ ನಿಮ್ಮ ಕನಸು ನನಸಾಗಲಿದೆ. ಕೆಲವೊಮ್ಮೆ ನಿಮಗೆ ನಿಮ್ಮ ಪ್ರಯತ್ನಕ್ಕೆ ತಕ್ಕ ಫಲಿತಾಂಶ ಸಿಗುತ್ತಿಲ್ಲ ಎಂದನಿಸುವುದು, ಆದರೆ ವರ್ಷದ ಮಧ್ಯದಿಂದ ಒಳ್ಳೆಯ ಫಲ ಕಾಣುವಿರಿ. ವೈದ್ಯಕೀಯ ವೃತ್ತಿಯಲ್ಲಿರುವವರಿಗೆ ಈ ವರ್ಷ ಒಳ್ಳೆಯದಿದೆ.

ಕೆಲಸದ ಜಾಗದಲ್ಲಿ ತುಂಬಾ ಕಟುವಾಗಿ ಮಾತನಾಡಬೇಡಿ. ಕೆಲಸದ ಜಾಗದಲ್ಲಿ ಆದಷ್ಟು ತಾಳ್ಮೆಯಿಂದಿರಿ, ವೃತ್ತಿ ಜೀವನದಲ್ಲಿ ರಿಸ್ಕ್‌ ತೆಗೆಯಬೇಡಿ. ಉದ್ಯಮಿಗಳಿಗೆ ಈ ವರ್ಷ ಸರಾಸರಿಯಾಗಲಿದೆ.

ಆರ್ಥಿಕ ಸ್ಥಿತಿ

ಆರ್ಥಿಕ ಸ್ಥಿತಿ

2023ರ ಅರ್ಧ ವರ್ಷ ಆರ್ಥಿಕ ಸವಾಲುಗಳಿಂದ ತುಂಬಿರುತ್ತದೆ. ಈ ಅವಧಿಯಲ್ಲಿ ಯಾವುದೇ ಹೊಸ ಹೂಡಿಕೆ ಮಾಡಲು ಹೋಗಬೇಡಿ. ನಿಮ್ಮ ಆದಾಯ ಜೂನ್‌ನಿಂದ ಹೆಚ್ಚಾಗಬಹುದು, ನೀವು ಉದ್ಯಮ ಮಾಡುತ್ತಿದ್ದರೆ ಅದರತ್ತ ಹೆಚ್ಚಿನ ಗಮನಹರಿಸಿ.

ಈ ವರ್ಷ ಆರ್ಥಿಕ ವಿಷಯದಲ್ಲಿ ಯಾವುದೇ ದೊಡ್ಡ ಚಿಂತೆಯಿಲ್ಲ, ಸ್ಟಾಕ್‌ ಮಾರ್ಕೆಟ್‌ನಲ್ಲಿರುವವರಿಗೆ ತುಂಬಾನೇ ಲಾಭ ಉಂಟಾಗಲಿದೆ. ರಿಯಲ್ ಎಸ್ಟೇಟ್‌ ಬ್ಯುಸ್‌ನೆಸ್‌ ಮಾಡುವವರು ಲಾಭ ಗಳಿಸುವಿರಿ. ನಿಮ್ಮ ಆರ್ಥಿಕ ಸ್ಥಿತಿಯ ಬಗ್ಗೆ ಪ್ರದರ್ಶನ ಮಾಡಲು ಹೋಗಬೇಡಿ. ಕುಟುಂಬದವರ ಜೊತೆ ಹಣದ ವ್ಯವಹಾರ ಇಟ್ಟುಕೊಳ್ಳಬೇಡಿ.

ಕುಟುಂಬ ಜೀವನ

ಕುಟುಂಬ ಜೀವನ

ಕುಟುಂಬ ಜೀವನದಲ್ಲಿ ಕೆಲವು ಸಮಸ್ಯೆಗಳು ಬರಬಹುದು, ಮಕ್ಕಳಿಗೆ ಕೆಲ ತೊಂದರೆಗಳು ಉಂಟಾಗಬಹುದು. ಮರು ವಿವಾಹವಾಗಲು ಬಯಸುವವರಿಗೆ ಈ ವರ್ಷ ವಿವಾಹ ಯೋಗವಿದೆ, ಅನೈತಿಕ ಸಂಬಂಧದಿಂದ ನೆಮ್ಮದಿ ಹಾಳಾಗುವುದು, ಕುಟುಂಬದಲ್ಲಿ ದೊಡ್ಡ ಸಮಸ್ಯೆ ಉಂಟಾಗುವುದು. ಆದರೆ ವರ್ಷದಲ್ಲಿ ಮಧ್ಯದಲ್ಲಿ ಪರಿಸ್ಥಿತಿ ತಿಳಿಯಾಗಲಿದೆ. ಬೇಸರದಲ್ಲಿ ಯಾವುದೇ ತಪ್ಪು ನಿರ್ಧಾರ ತೆಗೆದುಕೊಳ್ಖಬೇಡಿ. ವರ್ಷದ ಕೊನೆಯ 3 ತಿಂಗಳು ನಿಮ್ಮ ಭಾವನೆಗಳ ಪರಿಣಾಮ ಬೀರುವ ಘಟನೆಗಳು ನಡೆಯಬಹುದು, ಕೆಟ್ಟ ಪರಿಸ್ಥಿತಿಯಲ್ಲಿ ತಾಳ್ಮೆಯಿಂದ ವರ್ತಿಸಿ.

ಆರೋಗ್ಯ

ಆರೋಗ್ಯ

ಕೆಲವರಿಗೆ ಆರೋಗ್ಯ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು. ಉಳಿದಂತೆ ಆರೋಗ್ಯ ಸ್ಥಿತಿ ಉತ್ತಮವಾಗಿರಲಿದೆ. ಆದರೆ ನೀವು ಆರೋಗ್ಯಕರ ಜೀವನಶೈಲಿ ಬೆಳೆಸಿಕೊಳ್ಳಬೇಕು. ಗ್ರಹಗಳ ಪ್ರಭಾವದಿಂದಾಗಿ ಆರೋಗ್ಯ ಚೆನ್ನಾಗಿರಲಿದೆ.

ಒಟ್ಟಿನಲ್ಲಿ ಹೇಳಬೇಕೆಂದರೆ ಈ ವರ್ಷ ನಿಮಗೆ ಮಿಶ್ರಫಲ.

English summary

Ashlesha Nakshatra Prediction 2023 In Kannada

Ashlesha Nakshatra Prediction 2023: Here are Ashlesha Nakshatra job, family, finace, relationship prediction of 2023 read on...
Story first published: Thursday, December 22, 2022, 13:50 [IST]
X
Desktop Bottom Promotion