Latest Updates
-
ಬಿಸಿಲಿನ ತಾಪಕ್ಕೆ ಸುಸ್ತಾದ್ರಾ? ಈ ಪಾನೀಯಗಳು ನಿಮ್ಮನ್ನು ಕಾಪಾಡುತ್ತವೆ -
ಬಿಸಿಗಾಳಿ ಕಾಟ: ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು! -
ಅನುಷ್ಕಾ ಶರ್ಮಾ ಫ್ಲೋರಲ್ ಲುಕ್: ಸ್ಟೇಡಿಯಂನಲ್ಲಿ ಮಿಂಚಲು ಹೀಗೆ ಮಾಡಿ -
ಬಿಸಿಲಿನಲ್ಲಿ ವ್ಯಾಯಾಮ: ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಹೈರಾಕ್ಸ್ ಬೆಂಗಳೂರು: ಗೆಲುವಿಗಾಗಿ ಬೆಳಗಿನ ತಯಾರಿ ಹೀಗಿರಲಿ -
ಡೇಟಿಂಗ್ ಆ್ಯಪ್ ಬಳಕೆದಾರರೇ ಎಚ್ಚರ: ಈ ಕೆಫೆಗಳೇ ನಿಮ್ಮ ಜೇಬಿಗೆ ಕತ್ತರಿ! -
ದೆಹಲಿ-ಎನ್ಸಿಆರ್ ಬಿರುಗಾಳಿ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಹೀಗೆ ಮಾಡಿ -
AJIO ಮಿಡ್ನೈಟ್ ಮೇನಿಯಾ: ಸ್ನೀಕರ್ಸ್ ಮೇಲೆ ಭರ್ಜರಿ ಆಫರ್ ಪಡೆಯೋದು ಹೇಗೆ? -
ಹವಾಮಾನ ಇಲಾಖೆ ಎಚ್ಚರಿಕೆ: ಬಿರುಗಾಳಿ ಮಳೆಯಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ಸಂಬಂಧಗಳ ಆತಂಕ ಕಾಡ್ತಿದೆಯಾ? ನೆಮ್ಮದಿ ನೀಡುವ ಉಚಿತ ಸಹಾಯವಾಣಿಗಳು
Ardra Nakshatra Predictions 2023: ಆರ್ದ್ರಾ ನಕ್ಷತ್ರದವರಿಗೆ 2023 ಹೇಗಿರಲಿದೆ?
ವ್ಯಕ್ತಿಯು ಜನಿಸಿದ ದಿನಾಂಕ, ಸಮಯದ ಅನುಸಾರ ಅವರ ನಕ್ಷತ್ರ ಬರುತ್ತದೆ.
2023 ಆರ್ದ್ರಾ ನಕ್ಷತ್ರದವರಿಗೆ ಹೇಗೆ ಇರಲಿದೆ ಎಂದು ತಿಳಿಯಲು ಈ ನಕ್ಷತ್ರ ಭವಿಷ್ಯ ಓದಿ...
ಆರ್ದ್ರಾ ನಕ್ಷತ್ರ- ಜ್ಯೋತಿಷ್ಯದ ಪ್ರಕಾರ 27 ನಕ್ಷತ್ರಗಳಲ್ಲಿ6ನೇ ನಕ್ಷತ್ರ
ಆರ್ದ್ರಾ ನಕ್ಷತ್ರದ ಕೆಲವು ಪ್ರಾಥಮಿಕ ಆಂಶಗಳು

ನಕ್ಷತ್ರ ಆಡಳಿತ ಗ್ರಹ: ರಾಹು
ನಕ್ಷತ್ರ ಅಧಿಪತಿ: ದುರ್ಗಾ
ನಕ್ಷತ್ರ ಚಿಹ್ನೆ: ಕಣ್ಣೀರಿನ ಹನಿ
ನಕ್ಷತ್ರ ದೇವತೆ: ರುದ್ರ, ಬಿರುಗಾಳಿಗಳ ಅಧಿಪತಿ
ನಕ್ಷತ್ರ ಗಣ: ಮನುಷ್ಯ ಗಣ
ಶಕ್ತಿ: ಪ್ರಯತ್ನ
ನಕ್ಷತ್ರ ಜಾತಿ: ಶಂಕರ (ಅಂತರ ಜಾತಿ) ನಕ್ಷತ್ರದ
ಸ್ವಭಾವ: ಚೂಪಾದ ಅಥವಾ ಭಯಾನಕ ಅಥವಾ ಕಠಿಣ (ದರುಣ)
ನಕ್ಷತ್ರ ದೇಹ ವರಾಹಮಿಹಿರ: ಕೂದಲು, ನೆತ್ತಿ ನಕ್ಷತ್ರ ರಾಶಿಚಕ್ರ: ಮಿಥುನ ರಾಶಿ
ನಕ್ಷತ್ರ ವಿವಾಹ: ಶುಭ
ನಕ್ಷತ್ರ ಅನುವಾದ: ಆರ್ದ್ರಾ ತೇವಾಂಶ, ಹಸಿರು ಮತ್ತು ತಾಜಾತನ
ನಕ್ಷತ್ರ ಅದೃಷ್ಟ ಸಂಖ್ಯೆ: 6, 2, 4, 7 ಮತ್ತು 9
ನಕ್ಷತ್ರ ಲಿಂಗ: ಹೆಣ್ಣು
ನಕ್ಷತ್ರ ಹೆಸರುಗಳ ಅಕ್ಷರ: ಕು, ಖಂ, ಜ, ಛಾ
ನಕ್ಷತ್ರ ಅದೃಷ್ಟ ಅಕ್ಷರಗಳು: ಕೆ, ಜಿ, ಎನ್, ಸಿ
ನಕ್ಷತ್ರ ಅದೃಷ್ಟದ ಕಲ್ಲು: ಗೋಮೇಧ/ಮಾಣಿಕ್ಯ
ನಕ್ಷತ್ರ ಅದೃಷ್ಟದ ಬಣ್ಣ: ಹಸಿರು, ಕೆಂಪು ಮತ್ತು ನೇರಳೆ ನಕ್ಷತ್ರ ಗುಣ: ತಾಮಸಿಕ
ನಕ್ಷತ್ರ ದೋಷ: ವಾತ
ನಕ್ಷತ್ರ ಅಂಶ: ನೀರು ನಕ್ಷತ್ರ ಪಕ್ಷಿ: ಆಂಡ್ರಿಲ್
ನಕ್ಷತ್ರ ಪ್ರಾಣಿ ಚಿಹ್ನೆ: ಹೆಣ್ಣು ನಾಯಿ ನಕ್ಷತ್ರ ವೃಕ್ಷ: ರಕ್ತ ಕದಿರ ಅಥವಾ ಕೃಷ್ಣ ಕದಿರ
ಆರ್ದ್ರಾ ನಕ್ಷತ್ರದ ಮಕ್ಕಳ ಹೆಸರಿಗೆ ಮೊದಲಾಕ್ಷರ: ಕು, ಘ, ದ, ಚ, ನ, ಝ, ಜ, ಕಾಂ ಆರ್ದ್ರಾ
ನಕ್ಷತ್ರದ ಅದೃಷ್ಟದ ದಿನಗಳು: ಮಂಗಳವಾರ ಮತ್ತು ಗುರುವಾರ
ಆರ್ದ್ರಾ ನಕ್ಷತ್ರದವರ ಗುಣಗಳು
ಆರ್ದ್ರಾ ನಕ್ಷತ್ರದ ಪುರುಷರು ಬುದ್ಧಿವಂತರು, ಜಾಣರೂ ಆಗಿರುತ್ತಾರೆ, ಇವರಿಗೆ ಒಳ್ಳೆಯ ಜ್ಞಾಪಕ ಶಕ್ತಿ ಇರುತ್ತದೆ. ಅವನಿಗೆ ಅವನು ಏನು ಮಾಡುತ್ತಿದ್ದಾನೆ, ಏನು ಮಾಡಬೇಕು ಎಂಬುವುದು ಗೊತ್ತಿರುತ್ತದೆ, ತನ್ನ ಬುದ್ಧಿ ಶಕ್ತಿ ಉಪಯೋಗಿಸಿ ಸವಾಲುಗಳು, ಕಷ್ಟಗಳಿಂದ ಹೊರ ಬರುತ್ತಾನೆ. ಈ ನಕ್ಷತ್ರದ ಮಹಿಳೆಯರು ಎಂಥದ್ದೇ ಕಷ್ಟಕರವಾದ ಪರಿಸ್ಥಿತಿಯಲ್ಲಿ ತಾಳ್ಮೆ ಕಳೆದುಕೊಳ್ಳುವುದಿಲ್ಲ. ಆರ್ಥಿಕ ವಿಷಯದಲ್ಲಿ ಬುದ್ಧಿವಂತಿಕೆಯಿಂದ ಯೋಚಿಸುತ್ತಾಳೆ.
ಆರ್ದ್ರಾ ನಕ್ಷತ್ರದವರ 2023ರ ನಕ್ಷತ್ರ ಭವಿಷ್ಯ ನೋಡುವುದಾದರೆ ....

ಆರ್ದ್ರಾ ನಕ್ಷತ್ರದವರ ವೃತ್ತಿ ಜೀವನ 2023
2023ರಲ್ಲಿ ಆರ್ದ್ರಾ ನಕ್ಷತ್ರದವರು ವರ್ಷದ ಆರಂಭದಲ್ಲಿ ವೃತ್ತಿ ಜೀವನದಲ್ಲಿ ಒಳ್ಳೆಯ ಬೆಳವಣಿಗೆ ಕಾಣುತ್ತಾರೆ. ಆದರೆ ಮೇ-ಆಗಸ್ಟ್ ತಿಂಗಳಿನಲ್ಲಿ ತುಂಬಾನೇ ಜಾಗ್ರತೆವಹಿಸಬೇಕಾಗಿದೆ. ಕೆಲವು ಸವಾಲುಗಳು ಎದುರಾಗಬಹುದು, ನಿಮ್ಮ ಕೆಲವೊಂದು ನಿರ್ಧಾರಗಳು ವೃತ್ತಿ ಬದುಕಿನ ಮೇಲೆ ಪರಿಣಾಮ ಬೀರಬಹುದು, ಆದ್ದರಿಂದ ಜಾಗ್ರತೆವಹಿಸಿ. ಉದ್ಯಮಿಗಳು ಹೊಸ ವ್ಯವಹಾರ ಅಥವಾ ಒಪ್ಪಂದಕ್ಕೆ ಕೈ ಹಾಕುವ ಮುನ್ನ ಎರಡು ಬಾರಿ ಯೋಚನೆ ಮಾಡುವುದು ಒಳ್ಳೆಯದು. ನವೆಂಬರ್‌ನಿಂದ ವೃತ್ತಿ ಬದುಕಿನಲ್ಲಿ ಮತ್ತೆ ಒಳ್ಳೆಯ ಬೆಳವಣಿಗೆ ಕಾಣಬಹುದು.

ಆರ್ದ್ರಾ ನಕ್ಷತ್ರದವರ ಆರ್ಥಿಕ ಸ್ಥಿತಿ
ನಿಮ್ಮೆಲ್ಲಾ ಆರ್ಥಿಕ ಸಮಸ್ಯೆಗಳು ಈ ವರ್ಷ ಬಗೆ ಹರೆಯುವ ಲಕ್ಷಣಗಳಿವೆ. ಅಲ್ಲದೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಉತ್ತಮ ಅವಕಾಶಗಳು ಕೂಡ ದೊರೆಯಲಿದೆ. ಆದರೆ ಆದಾಯ ಬರುವಾಗ ಉಳಿದಾಯದತ್ತ ಕೂಡ ಗಮನ ಹರಿಸಿ, ಏಕೆಂದರೆ ವರ್ಷ ಮಧ್ಯದಲ್ಲು ಆರ್ಥಿಕ ತೊಂದರೆ ಎದುರಾಗಬಹುದು, ಆಗ ಉಳಿತಾಯವಿದ್ದರೆ ಪ್ರಯೋಜನವಾಗಲಿದೆ. ಜೂನ್-ಜುಲೈ ತಿಂಗಳಿನಲ್ಲಿ ನಿಮ್ಮ ಬಜೆಟ್ ಪ್ಲ್ಯಾನ್‌ನಂತೆ ಖರ್ಚು ಮಾಡಿ. ಸೆಪ್ಟೆಂಬರ್ ಬಳಿಕ ಆರ್ಥಿಕ ಸ್ಥಿತಿಯಲ್ಲಿ ಮತ್ತೆ ಅಭಿವೃದ್ಧಿ ಕಾಣುವಿರಿ.

ಆರ್ದ್ರಾ ನಕ್ಷತ್ರದವರ ಸಂಬಂಧ ಭವಿಷ್ಯ
ಸಂಗಾತಿ ಹಾಗೂ ಕುಟುಂಬದವರೊಂದಿಗೆ ಉತ್ತಮ ಸಂಬಂಧ ಇರುತ್ತದೆ, ಜೂನ್ ತಿಂಗಳಿನಲ್ಲಿ ಕುಟುಂಬದ ಜೊತೆಗೆ ಟ್ರಿಪ್ ಕೂಡ ಹೋಗುವಿರಿ. ಆಗಸ್ಟ್-ಸೆಪ್ಟೆಂಬರ್ ಅವಧಿಯಲ್ಲಿ ಕೆಲವೊಂದು ಕೌಟುಂಬಿಕ ಸಮಸ್ಯೆಗಳು ಬರಬಹುದು, ನೀವು ತಾಳ್ಮೆಯಿಂದ ಪರಿಸ್ಥಿತಿ ಎದುರಿಸಬೇಕು. ಗ್ರಹಗತಿಗಳ ಪ್ರಭಾವದಿಂದಾಗಿ ಸಂಗಾತಿಯೊಂದಿಗೆ ನಿಮ್ಮ ಸಂಬಂಧ ಗಟ್ಟಿಯಾಗುವುದು.

ಆರ್ದ್ರಾ ನಕ್ಷತ್ರದವರ ಆರೋಗ್ಯ ಭವಿಷ್ಯ 2023
ನೀವು ಈ ವರ್ಷ ಆರೋಗ್ಯದ ಕಡೆಗೆ ಗಮನ ಹರಿಸಬೇಕಾಗಿದೆ. ನಿಮ್ಮ ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದ ನಡುವೆ ಸಮತೋಲನ ಕಾಪಾಡಬೇಕು. ನಿಮ್ಮ ಆರೋಗ್ಯ ಸ್ಥಿತಿ ಸಾಮಾನ್ಯವಾಗಿರುತ್ತದೆ. ನೀವು ಫಿಟ್ನೆಸ್ ಕಡೆ ತುಂಬಾ ಗಮನ ಹರಿಸುತ್ತೀರಿ.



Click it and Unblock the Notifications










