Latest Updates
-
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಲ್ಲೂ ನಿಮ್ಮ ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಉಳಿಸಲು ಈ ಟಿಪ್ಸ್ ಸಾಕು! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮಗಳನ್ನು ಮರೆಯದೆ ಪಾಲಿಸಿ! -
ಮುಟ್ಟಿನ ನೈರ್ಮಲ್ಯ ದಿನ: ಕೇವಲ 200 ರೂಪಾಯಿಗೂ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ ಈ ಅಗತ್ಯ ಉತ್ಪನ್ನಗಳು, ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ 5 ಬದಲಾವಣೆಗಳನ್ನು ಮರೆಯಬೇಡಿ! -
ದೆಹಲಿ ಧೂಳಿನ ಬಿರುಗಾಳಿ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 500 ರೂಪಾಯಿಯ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಬದಲಾವಣೆ ನಿಮ್ಮನ್ನು ಹೀಟ್ಸ್ಟ್ರೋಕ್ನಿಂದ ರಕ್ಷಿಸುತ್ತದೆ! -
ರೆಡ್ ಕಾರ್ಪೆಟ್ನಿಂದ ನಿಮ್ಮ ವಾರ್ಡ್ರೋಬ್ಗೆ: ಕಾನ್ 2026ರ ಈ ಫ್ಯಾಷನ್ ಟ್ರೆಂಡ್ಸ್ ಈಗ ಸಿಕ್ಕಾಪಟ್ಟೆ ವೈರಲ್! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲ ಬೇಗೆಯಲ್ಲಿ ಮದುವೆ ಸಂಭ್ರಮ ಹಾಳಾಗದಿರಲಿ: ಅತಿಥಿಗಳ ಆರೋಗ್ಯ ಕಾಪಾಡಲು ಇಲ್ಲಿವೆ ಸೀಕ್ರೆಟ್ ಟಿಪ್ಸ್! -
ಬಿಸಿಗಾಳಿಯ ಆರ್ಭಟ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
Appraisal Predictions 2022 : ಸಂಖ್ಯಾಶಾಸ್ತ್ರ ಪ್ರಕಾರ 2022ರಲ್ಲಿ ಈ ಸಂಖ್ಯೆಯವರಿಗೆ ಸಿಗಲಿದೆ ಒಳ್ಳೆಯ ಸಂಬಳ ಬಡ್ತಿ
2022 ಹೊಸ ವರ್ಷ... ಇದರ ಬಗ್ಗೆ ಸಾಕಷ್ಟು ಹೊಸ ಕನಸು, ಹೊಸ ನಿರೀಕ್ಷೆಗಳು ನಮ್ಮಲ್ಲಿವೆ ಅಲ್ವಾ? ಈ 2022 ನಮ್ಮ ಪಾಲಿಗೆ ಒಳ್ಳೆಯ ವರ್ಷವಾಗಿರಲಿ ಎಂದು ನಾವೆಲ್ಲಾ ಆಶಿಸುತ್ತಿದ್ದೇವೆ.
ಏನಾದರೂ ಯಶಸ್ಸು ಸಿಗಬೇಕೆಂದರೆ ಪ್ರಯತ್ನದ ಜೊತೆಗೆ ಅದೃಷ್ಟವೂ ನಮ್ಮ ಜೊತೆಗಿರಬೇಕು ಎಂದು ಹೇಳುತ್ತಾರೆ. ಕಷ್ಟಪಟ್ಟು ಶ್ರಮಪಡುತ್ತೇವೆ, ಅದಕ್ಕೆ ತಕ್ಕ ಪ್ರತಿಫಲ ಸಿಗಲು ಅದೃಷ್ಟವೂ ಬೇಕಾಗುತ್ತದೆ, ಕೆಲವೊಮ್ಮೆನಾವು ಪ್ರಯತ್ನಪಟ್ಟಿರುತ್ತೇವೆ, ಆದರೆ ಫಲ ನಾವು ನಿರೀಕ್ಷಿಸಿದಂತೆ ಇರಲ್ಲ ಅಲ್ವೇ?
ನೀವು ಸಂಖ್ಯಾಶಾಸ್ತ್ರ ನಂಬುವುದಾದರೆ ಈ ವರ್ಷ ಸಂಬಳ ಬಡ್ತಿ ವಿಷಯದಲ್ಲಿ ಯಾವೆಲ್ಲಾ ನಂಬರ್ ಲಕ್ಕಿ ಎಂದು ನೋಡೋಣ ಬನ್ನಿ:

ಹೊಸ ವರ್ಷದ ನಂಬರ್ ಯಾವುದು?
ಸಂಖ್ಯಾಶಾಸ್ತ್ರದ ಪ್ರಕಾರ 2022 ನಂಬರ್ ಅಂದರೆ 6(2+0+2+2). ಈ ನಂಬರ್ ಅನ್ನು ಶುಕ್ರನು ಆಳುತ್ತಿದ್ದಾನೆ. ಈ ವರ್ಷವನ್ನು 0 ಬೆಂಬಲಿಸುತ್ತಿದೆ. 2022ರಲ್ಲಿ ನೀರಿನಂಶ ಇರುವ ರಾಶಿಯವರಿಗೆ ಈ ವರ್ಷ ಅದೃಷ್ಟದ ವರ್ಷವಾಗಿರಲಿದೆ. ನೀವು ಸಂಖ್ಯಾಸಾಸ್ತ್ರ ನಂಬುವುದಾದರೆ ಈ ವರ್ಷ ಸಂಬಳ ಬಡ್ತಿ ವಿಷಯದಲ್ಲಿ ಹೇಗಿರಲಿದೆ ಎಂದು ನೋಡೋಣ:

ನಿಮ್ಮ ಸಂಖ್ಯೆ ಯಾವುದೆಂದು ತಿಳಿಯುವುದು ಹೇಗೆ?
ನಿಮ್ಮ ಜನ್ಮ ದಿನಾಂಕವನ್ನು ಲೆಕ್ಕ ಹಾಕಿ. ಉದಾಹರಣೆಗೆ ಜನ್ಮ ದಿನಾಂಕ 14-09-1990 ಆದರೆ ನಿಮ್ಮ ಒಟ್ಟು ಮೊತ್ತ 33 ಅಂದರೆ ಸಂಖ್ಯೆ 6 (3+3). ಈ ನಂಬರ್ ಅನ್ನು ಶುಕ್ರ ಆಳುತ್ತಿದ್ದಾನೆ. ಬನ್ನಿ ನಿಮ್ಮ ನಂಬರ್ ಬಗ್ಗೆ ಸಂಖ್ಯಾಶಾಸ್ತ್ರ ಏನು ಹೇಳುತ್ತದೆ ಎಂದು ನೋಡೋಣ ಬನ್ನಿ:

2022 ಸಂಬಳ ಬಡ್ತಿ ಬಗ್ಗೆ ಸಂಖ್ಯಾಶಾಸ್ತ್ರ: ಸಂಖ್ಯೆ 1
ನಂಬರ್ 1ನವರಿಗೆ ಈ ವರ್ಷ ಅತ್ಯುತ್ತಮ ಸಂಬಳ ಬಡ್ತಿ ಸಿಗಲಿದೆ. ನಿಮಗೆ ಉದ್ಯೋಗದಲ್ಲಿ ಬಡ್ತಿ ಅಥವಾ ಉದ್ಯೋಗ ಬದಲಾವಣೆಯ ಸಾಧ್ಯತೆ ಇದೆ. ಏಪ್ರಿಲ್‌ನಿಂದ ವೃತ್ತಿ ಬದುಕಿನಲ್ಲಿ ಏಳಿಗೆ ಕಾಣುವಿರಿ.
ನಿಮ್ಮ ಅದೃಷ್ಟದ ಬಣ್ಣ: ಹಳದಿ ಹಾಗೂ ಪಿಂಕ್

2022 ಸಂಬಳ ಬಡ್ತಿ ಬಗ್ಗೆ ಸಂಖ್ಯಾಶಾಸ್ತ್ರ: ಸಂಖ್ಯೆ 2
2 ನಂಬರ್‌ನವರಿಗೆ ಈ ವರ್ಷ ಬಡ್ತಿ ನಿರೀಕ್ಷೆಗಿಂತ ಕಡಿಮೆ ಸಿಗುವ ಸಾಧ್ಯತೆ ಇದೆ, ನಿಮ್ಮ ಕೆಲಸದತ್ತ ಗಮನ ನೀಡಿ ಹೊಸ ಅವಕಾಶಗಳು ಸಿಗುವ ಸಾಧ್ಯತೆ ಇದೆ.
ನಿಮ್ಮ ಅದೃಷ್ಟದ ಬಣ್ಣ: ಬೆಳ್ಳಿ ಮತ್ತು ಪಿಂಕ್ ಬಣ್ಣ

2022 ಸಂಬಳ ಬಡ್ತಿ ಬಗ್ಗೆ ಸಂಖ್ಯಾಶಾಸ್ತ್ರ: ಸಂಖ್ಯೆ 3
ಈ ವರ್ಷ ಸಂಬಳ ಬಡ್ತಿ ತುಂಬಾ ಒಳ್ಳೆಯದು ಎಂದು ಹೇಳಲು ಸಾಧ್ಯವಿಲ್ಲ ಹಾಗಂತ ಕೆಟ್ಟದಾಗಿಯೂ ಇರಲ್ಲ. ಅರ್ಧ ವರ್ಷದ ಬಳಿಕ ಹೊಸ ಕೆಲಸದ ಅವಕಾಶಗಳು ದೊರೆಯುವುದು.
ನಿಮ್ಮ ಅದೃಷ್ಟದ ಬಣ್ಣ: ಹಳದಿ ಮತ್ತು ಗೋಲ್ಡನ್ ಬಣ್ಣ

2022 ಸಂಬಳ ಬಡ್ತಿ ಬಗ್ಗೆ ಸಂಖ್ಯಾಶಾಸ್ತ್ರ: ಸಂಖ್ಯೆ 4
ಈ ವರ್ಷ ನಿಮ್ಮ ಸಂಬಳ ಬಡ್ತಿ ನಿರೀಕ್ಷೆಗಿಂತ ಕಡಿಮೆ ಇರುವ ಸಾಧ್ಯತೆ ಇದೆ, ಉನ್ನತ ಅಧಿಕಾರಿಗಳ ಜೊತೆ ಹೊಂದಾಣಿಕೆ ಆಗಿ ಬರುವುದಿಲ್ಲ. ಹೊಸ ಅವಕಾಶಗಳು ಸಿಕ್ಕರೆ ಬಳಸಿಕೊಳ್ಳಿ.
ನಿಮ್ಮ ಅದೃಷ್ಟದ ಬಣ್ಣ: ನೀಲಿ

2022 ಸಂಬಳ ಬಡ್ತಿ ಬಗ್ಗೆ ಸಂಖ್ಯಾಶಾಸ್ತ್ರ: ಸಂಖ್ಯೆ 5
5 ನಂಬರ್ ಇರುವವರಿಗೆ ಈ ವರ್ಷ ಪರ್ವಾಗಿಲ್ಲ, ನಿಮ್ಮ ನಿರೀಕ್ಷೆಗೆ ತಕ್ಕಂತೆ ಸಂಬಳ ಬಡ್ತಿ ಸಿಗುವ ಸಾಧ್ಯತೆ ಇದೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಹೊಸ ಉದ್ಯೋಗ ಅವಕಾಶಗಳು ಸಿಗುವ ಸಾಧ್ಯತೆ ಇದೆ.
ನಿಮ್ಮ ಅದೃಷ್ಟ ಸಂಖ್ಯೆ: ತೆಳು ಹಳದಿ ಬಣ್ಣ

2022 ಸಂಬಳ ಬಡ್ತಿ ಬಗ್ಗೆ ಸಂಖ್ಯಾಶಾಸ್ತ್ರ: ಸಂಖ್ಯೆ 6
ನಂಬರ್ 6 ಇರುವವರಿಗೆ ಈ ವರ್ಷ ಅದೃಷ್ಟಕರವಾಗಿದೆ, ನಿಮ್ಮ ನಿರೀಕ್ಷೆಗೂ ಮೀರಿ ಒಳ್ಳೆಯ ಬಡ್ತಿ ಸಿಗುವುದು, ಅಲ್ಲದೆ ವೃತ್ತಿಪರವಾಗಿ ಬೆಳೆಯಲು ತುಂಬಾ ಅವಕಾಶಗಳು ಸಿಗುವುದು.
ನಿಮ್ಮ ಅದೃಷ್ಟ ಸಂಖ್ಯೆ: ತೆಳು ನೀಲಿ ಬಣ್ಣ

2022 ಸಂಬಳ ಬಡ್ತಿ ಬಗ್ಗೆ ಸಂಖ್ಯಾಶಾಸ್ತ್ರ: ಸಂಖ್ಯೆ 7
7 ಸಂಖ್ಯೆಯವರಿಗೆ 2022 ವರ್ಷ ಅತ್ಯುತ್ತಮವಾಗಿರಲಿದೆ. ನಿಮ್ಮ ನಿರೀಕ್ಷೆಗೂ ಮೀರಿ ಬಡ್ತಿ ಸಿಗುವುದು, ವೃತ್ತಿಪರವಾಗಿ ಬೆಳೆಯುವಿರಿ.
ನಿಮ್ಮ ಅದೃಷ್ಟದ ಸಂಖ್ಯೆ: ತೆಳು ಹಸಿರು, ಬಿಳಿ ಬಣ್ಣ

2022 ಸಂಬಳ ಬಡ್ತಿ ಬಗ್ಗೆ ಸಂಖ್ಯಾಶಾಸ್ತ್ರ: ಸಂಖ್ಯೆ 8
8 ಸಮಖ್ಯೆಯವರಿಗೆ ಈ ವರ್ಷ ಸಂಬಳ ಬಡ್ತಿ ಅಷ್ಟು ತೃಪ್ತಿಕರವಾಗಿರುವುದಿಲ್ಲ, ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇದೆ.
ನಿಮ್ಮ ಅದೃಷ್ಟ ಬಣ್ಣ: ತೆಳು ನೇರಳೆ ಬಣ್ಣ

2022 ಸಂಬಳ ಬಡ್ತಿ ಬಗ್ಗೆ ಸಂಖ್ಯಾಶಾಸ್ತ್ರ: ಸಂಖ್ಯೆ9
9 ಸಂಖ್ಯೆಯವರಿಗೆ ಈ ವರ್ಷ ಸಂಬಳ ಬಡ್ತಿ ಅಷ್ಟಕಷ್ಟೆ, ಸಂಬಳ ಬಡ್ತಿ ತುಂಬಾ ಚೆನ್ನಾಗಿ ಇರುತ್ತೆ ಅಂತ ಹೇಳಕ್ಕೆ ಆಗಲ್ಲ, ಹಾಗಂತ ತುಂಬಾ ಕಡಿಮೆನೂ ಇರಲ್ಲ. ಮಧ್ಯ ವರ್ಷದ ಬಳಿಕ ಹೊಸ ಅವಕಾಶಗಳು ದೊರೆಯುವುದು.
ನಿಮ್ಮ ಅದೃಷ್ಟದ ಬಣ್ಣ: ತೆಳು ಕೆಂಪು ಬಣ್ಣ

ಪರಿಹಾರ:
ನಿಮ್ಮ ಅದೃಷ್ಟವನ್ನು ಬಲಪಡಿಸಲು ಕೆಲವೊಂದು ಪರ್ಯಾಗಳಿವೆ. ನೀಲಿ ಪೆನ್ನಿನಿಂದ ಇಲ್ಲಿ ನೀಡಿರುವ ಸಂಖ್ಯೆಯನ್ನು ಎಡಗೈಯಲ್ಲಿ ಬರೆಯಿರಿ.
* 1323 498 725
* 99 25 881
* ಈ ನಂಬರ್ ಅನ್ನು ಒಂದು ಬಾರಿ ಮಾತ್ರ ಬರೆಯಿರಿ
* ಇದನ್ನು ಯಾವಾಗ ಬೇಕಾದರೆ ಬರೆಯಿರಿ
* 24*7 ನಿಮ್ಮ ಕೈಯಲ್ಲಿ ಈ ನಂಬರ್ ಇರಲಿ.



Click it and Unblock the Notifications