Latest Updates
-
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಮುಂಜಾನೆಯೇ ವ್ಯಾಯಾಮ: ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ -
ಬೇಸಿಗೆ ಮದುವೆ ಸಂಭ್ರಮ: ಬಿಸಿಲ ಬೇಗೆಯಿಂದ ಅತಿಥಿಗಳನ್ನು ರಕ್ಷಿಸಲು ಇಲ್ಲಿದೆ ಮಾಸ್ಟರ್ ಪ್ಲಾನ್ -
ಮೇ 2-3ರ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಭಾರತದಲ್ಲಿ ಸುಡುವ ಬಿಸಿಲು: ಹೀಟ್ ವೇವ್ನಿಂದ ಪಾರಾಗಲು ಇಲ್ಲಿವೆ ಬೆಸ್ಟ್ ಡಯಟ್ ಮತ್ತು ಹೈಡ್ರೇಶನ್ ಟಿಪ್ಸ್! -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಕರಣ್ ಜೋಹರ್ ಅಬ್ಬರ, ಭಾರತೀಯ ಫ್ಯಾಷನ್ ಲೋಕದ ಹೊಸ ಸಂಚಲನ! -
ಮೇ ತಿಂಗಳ ಬಿಸಿಲ ಧಗೆ: ನಿಮ್ಮ ಬೆಳಗಿನ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳದಿದ್ದರೆ ಕಷ್ಟ! -
ಎವೆಲಿನ್ ಶರ್ಮಾ ವಿಚ್ಛೇದನ: ಮಕ್ಕಳ ಭವಿಷ್ಯಕ್ಕಾಗಿ ಈ ಜೋಡಿ ಆರಿಸಿದ ಹೊಸ ದಾರಿ ಯಾವುದು? -
ಬಿಸಿಲ ಧಗೆಗೆ ತಂಪಾದ ಗುಡ್ ನ್ಯೂಸ್: ಮೇ 8 ರಿಂದ ಶುರುವಾಗಲಿದೆ ಗ್ರೇಟ್ ಸಮ್ಮರ್ ಸೇಲ್!
Anuradha Nakshatra Prediction 2023: ಅನುರಾಧ ನಕ್ಷತ್ರದವರೇ ಆರೋಗ್ಯದ ಕಡೆ ಗಮನವಿರಲಿ
ಅನುರಾಧಾ ನಕ್ಷತ್ರದಲ್ಲಿ ಛತ್ರಿಯ ಆಕಾರವನ್ನು ತೋರಿಸುವ ಮೂರು ನಕ್ಷತ್ರಗಳಿವೆ. ಅನುರಾಧ ನಕ್ಷತ್ರ ಶನಿ ಮತ್ತು ಮಂಗಳನಿಂದ ಪ್ರಭಾವಿತವಾಗಿರುತ್ತದೆ. ಆದುದರಿಂದ ಇದು ತಮೋಗುಣಗಳನ್ನು ಸಹ ಹೊಂದಿದೆ. ಇದರಿಂದಾಗಿ ಅನುರಾಧ ನಕ್ಷತ್ರದ ವ್ಯಕ್ತಿಯು ಹೊಸತನ ಬಯಸುತ್ತಾರೆ, ವಿಭಿನ್ನವಾಗಿ ಇರಲು ಬಯಸುತ್ತಾರೆ.
ಅನುರಾಧಾ ನಕ್ಷತ್ರದವರು ಆಕರ್ಷಕ ವ್ಯಕ್ತಿತ್ವದವರಾಗಿದ್ದಾರೆ. ನಿಮ್ಮ ಕಣ್ಣುಗಳು ಆಕರ್ಷಕವಾಗಿರುತ್ತದೆ. ಇವರ ದೇಹದ ಆಕೃತಿ ಆಕರ್ಷಕವಾಗಿರುತ್ತದೆ. ಈ ರಾಶಿಯಲ್ಲಿ ಜನಿಸಿದ ಮಹಿಳೆಯರು ಉತ್ತಮ ದೈಹಿಕ ಲಕ್ಷಣಗಳನ್ನು ಹೊಂದಿರುತ್ತಾರೆ.
ಅನುರಾಧಾ ನಕ್ಷತ್ರದ ಅಧಿಪತಿ ಶನಿ. ಅನುರಾಧ ನಕ್ಷತ್ರದ 2023ರ ಭವಿಷ್ಯ ನೋಡುವುದಾದರೆ

ಅನುರಾಧ ನಕ್ಷತ್ರ 2023ರ ಭವಿಷ್ಯ ಪ್ರಕಾರ ಅನುರಾಧ ನಕ್ಷತ್ರ ಪದ 1ರಲ್ಲಿ ಜನಿಸಿದ ವೃಶ್ಚಿಕ ರಾಶಿಯವರ ವೃತ್ತಿ ಜೀವನದಲ್ಲಿನ ಸಮಸ್ಯೆ ದೂರಾಗಲಿದೆ. ಅನುರಾಧ ನಕ್ಷತ್ರದ ಪದ 2ರಲ್ಲಿ ಜನಿಸಿದ ವೃಶ್ಚಿಕ ರಾಶಿಯವರು ಈ ವರ್ಷ ಆರ್ಥಿಕ ವಿಷಯದಲ್ಲಿ ತುಂಬಾನೇ ಜಾಗ್ರತೆವಹಿಸಬೇಕು, ಇಲ್ಲದಿದ್ದರೆ ಆರ್ಥಿಕ ಸಮಸ್ಯೆ ಉಂಟಾಗಬಹುದು.
ಅನುರಾಧ ನಕ್ಷತ್ರ ಪದ 3ರಲ್ಲಿ ಜನಿಸಿದ ವೃಶ್ಚಿಕ ರಾಶಿಯವರಿಗೆ ತಮ್ಮ ತಪ್ಪುಗಳನ್ನುಸರಿಪಡಿಸಲು ಅವಕಾಶ ದೊರೆಯಬಹುದು.
ಅನುರಾಧ ನಕ್ಷತ್ರದವರಿಗೆ ತಿಂಗಳು ಒಳ್ಳೆಯದು?
ಅನುರಾಧ ನಕ್ಷತ್ರದವರಿಗೆ ಜನವರಿ, ಫೆಬ್ರವರಿ, ಮಾರ್ಚ್, ಆಗಸ್ಟ್, ಅಕ್ಟೋಬರ್ ತಿಂಗಳು ಶುಭ ತಿಂಗಳಾಗಿವೆ. ಮೇ, ಜುಲೈ, ಸೆಪ್ಟೆಂಬರ್, ಡಿಸೆಂಬರ್ ತಿಂಗಳುಗಳಲ್ಲಿ ಜಾಗ್ರತೆವಹಿಸಬೇಕು. ಏಪ್ರಿಲ್, ಜೂನ್, ನವೆಂಬರ್ ತಿಂಗಳಿನಲ್ಲಿ ಸರಾಸರಿಯಾಗಿರುತ್ತದೆ.
ವೃತ್ತಿ ಜೀವನ
ನಿಮಗೆ ಹೊಸ ವರ್ಷವು ಉತ್ತಮ ರೀತಿಯಲ್ಲಿ ಪ್ರಾರಂಭವಾಗಬಹುದು, ನಿಮಗೆ ಕೆಲವು ಸನ್ನಿವೇಶಗಳು ನಿಮ್ಮ ರೀತಿಯಲ್ಲಿ ನಡೆಯುತ್ತಿಲ್ಲ ಎಂದನಿಸಬಹುದು. ಆದರೆ ನೀವೆಲ್ಲಾ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗುವುದು. ಕೆಲಸದ ಜಾಗದಲ್ಲಿ ಅನೇಕ ಸವಾಲುಗಳು ಎದುರಾಗಬಹುದು. ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಪರಿಣಿತರ ಬಳಿ ಸಲಹೆ ಪಡೆಯಿರಿ. ನೀವು ಬಯಸಿದ ಸ್ಯಾಲರಿ ಸಿಗದೇ ಹೋಗಬಹುದು, ಅಲ್ಲದೆ ಪ್ರಾಜೆಕ್ಟ್ ಡೆಡ್‌ಲೈನ್ ಒಳಗಡೆ ಕೊಡಲು ತುಂಬಾ ಶ್ರಮ ಪಡಬೇಕಾಗಿದೆ. ಶ್ರಮಪಟ್ಟು ದುಡಿದರೆ ಅನೇಕ ಸಮಸ್ಯೆಗಳು ಬಗೆಹರಿಯುವುದು. ಹೊಸ ಕೆಲಸಕ್ಕೆ ಹುಡುಕಾಟ ನಡೆಸುವವರಿಗೆ ಬಯಸಿದ ಕೆಲಸ ಸಿಗಲು ಕಷ್ಟವಾಗುವುದು. ನಕರಾತ್ಮಕ ಚಿಂತೆಗಳಿಂದ ದೂರವಿರಿ, ನಿರಂತರ ಪ್ರಯತ್ನದಿಂದ ನೀವಯ ಬಯಸಿದ ಗುರಿ ತಲುಪಲು ಸಾಧ್ಯವಾಗುವುದು.
ಅನುರಾಧಾ ನಕ್ಷತ್ರ ದ ಆರ್ಥಿಕ ಭವಿಷ್ಯ
ನಿಮ್ಮ ಆರ್ಥಿಕ ಭವಿಷ್ಯ ನೋಡುವುದಾದರೆ ಈ ವರ್ಷದಲ್ಲಿ ನಿಮ್ಮ ಆರ್ಥಿಕ ಸ್ಥಿತಿಯು ತುಂಬಾ ಉತ್ತಮವಾಗಿರುತ್ತದೆ. ಏಪ್ರಿಲ್ ಮತ್ತು ಜುಲೈ 2023 ರ ನಡುವೆ ನೀವು ಕೆಲವು ಆರ್ಥಿಕ ಒತ್ತಡವನ್ನು ಅನುಭವಿಸಬಹುದು. ಈ ವರ್ಷ ಯಾರಿಗೆ ಸಾಲ ಕೊಡಲು ಹೋಗಬೇಡಿ, ಒಂದು ವೇಳೆ ಕೊಟ್ಟರೆ ಆ ಹಣ ಮರಳಿ ಬರುವುದಿಲ್ಲ. ಅಲ್ಪಾವಧಿ ಹೂಡಿಕೆಯಿಂದ ಹಣ ಕಳೆದುಕೊಳ್ಳುವ ಅಪಾಯವಿದೆ. ಕೆಲವರು ಅನಗ್ಯತ ವಿಷಯಗಳಿಗೆ ಹಣ ಖರ್ಚು ಮಾಡಿ ಆರ್ಥಿಕ ತೊಂದರೆ ತಂದುಕೊಳ್ಳಬಹುದು, ಈ ಬಗ್ಗೆ ಎಚ್ಚರವಹಿಸಿ.
ಸಂಬಂಧ
ಅನುರಾಧಾ ನಕ್ಷತ್ರದ ಪ್ರಕಾರ ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ನಿಮ್ಮ ಸಂಬಂಧವನ್ನು ಬಲಪಡಿಸಲು ಈ ವರ್ಷ ಉತ್ತಮವಾಗಿದೆ. ನಿಮ್ಮ ನಡುವೆ ಇರುವ ಎಲ್ಲಾ ಸಮಸ್ಯೆ ಬಗೆಹರಿದು ಸಂಬಂಧ ಮತ್ತಷ್ಟು ಉತ್ತಮವಾಗುವುದು. ಮೇ ಮತ್ತು ಜೂನ್ ಅವಧಿಯಲ್ಲಿ ಕೆಲ ಮಾನಸಿಕ ಒತ್ತಡಗಳಿರುತ್ತದೆ, ನೀವು ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿದರೆ ಯಾವುದೇ ತೊಂದರೆಯಿಲ್ಲ.ಕೌಟುಂಬಿಕ ಜೀವನದ ಬಗ್ಗೆ ಹೇಳುವುದಾದರೆ ತಪ್ಪು ಕಲ್ಪನೆಯಿಂದ ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಹೆಚ್ಚಬಹುದು. ಈ ಸಮಯದಲ್ಲಿ ಅಹಂ ಮರೆತರೆ ಒಳ್ಳೆಯದು. ಮದುವೆಗೆ ಪ್ರಯತ್ನಿಸುತ್ತಿರುವವರಿಗೆ ಯಶಸ್ಸು ದೊರೆಯುವುದು.
ಅನುರಾಧಾ ನಕ್ಷತ್ರದ ಆರೋಗ್ಯ
ಈ ವರ್ಷದ ಆರಂಭವೂ ನಿಮಗೆ ಚೆನ್ನಾಗಿ ಕಾಣುತ್ತದೆ, ನಂತರ ಸ್ವಲ್ಪ ಆರೋಗ್ಯ ಸಮಸ್ಯೆಗಳು ಕಂಡು ಬರಬಹುದು. ಈ ಸಮಯದಲ್ಲಿ ನಿಮ್ಮ ದೈಹಿಕ ಶಕ್ತಿ ಕಡಿಮೆಯಾಗುವುದು. ನೀವು ಆರೋಗ್ಯದ ಬಗ್ಗೆ ಸರಿಯಾಗಿ ಗಮನ ಹರಿಸದೇ ಇರುವುದರಿಂದ ಆರೋಗ್ಯ ಸಮಸ್ಯೆ ಹೆಚ್ಚಾಗುವುದು. ನೀವು ನಿಮ್ಮ ಆಹಾರಕ್ರಮ ಹಾಗೂ ಫಿಟ್ನೆಸ್ ಕಡೆ ಗಮನ ಹರಿಸಿ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಿದರೆ ಗಂಭೀರ ಪರಿಣಾಮ ಎದುರಿಸಬಹುದು.
ಒಟ್ಟಿನಲ್ಲಿ ಈ ವರ್ಷ ನಿಮಗೆ ಮಿಶ್ರಫಲ. ನೀವು ಪರಿಸ್ಥಿತಿಯನ್ನು ಒಳ್ಳೆಯ ರೀತಿಯಲ್ಲಿ ತೆಗೆದುಕೊಂಡು ಹೋಗಲು ಪ್ರಯತ್ನಿಸಿದರೆ ಒಳ್ಳೆಯದಾಗುತ್ತದೆ.



Click it and Unblock the Notifications