Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಅಕ್ಷಯ ತೃತೀಯ 2022: ನಿಮ್ಮ ರಾಶಿಗೆ ಈ ಆಹಾರ ಖರೀದಿಸಿದರೆ ಅದೃಷ್ಟ ಖುಲಾಯಿಸುವುದು
ಅಕ್ಷಯ ತೃತೀಯವನ್ನು ಪವಿತ್ರವಾದ ದಿನವೆಂದು ಪರಿಗಣಿಸಲಾಗಿದೆ. ಹೊಸ ಮನೆಗೆ ಹೋಗಲು, ಚಿನ್ನ, ಗಾಡಿ ಖರೀದಿಸಲು ಈ ದಿನ ಶ್ರೇಷ್ಠವೆಂದು ಪರಿಗಣಿಸಲಾಗಿದೆ. ಅಲ್ಲದೆ ಈ ದಿನ ಮಾಡುವ ದಾನಕ್ಕೂ ತುಂಬಾನೇ ಮಹತ್ವವಿದೆ.
ಅಕ್ಷಯ ತೃತೀಯವನ್ನು ಹಿಂದೂ ಪಂಚಾಗದ ಪ್ರಕಾರ ವೈಶಾಖ ಮಾಸದ ಶುಕ್ಲ ಪಕ್ಷದಂದು ಆಚರಿಸಲಾಗುವುದು. 2022ರಲ್ಲಿ ಮೇ 3 ಮಂಗಳವಾರದಂದು ಆಚರಿಸಲಾಗುವುದು. ಈ ದಿನದಂದು ಖರೀದಿಸಿದ ಸಂಪತ್ತು ಮತ್ತು ಆಸ್ತಿ ಅಕ್ಷಯವಾಗುತ್ತದೆ ಎಂಬುವುದು ಧಾರ್ಮಿಕ ನಂಬಿಕೆಯಾಗಿದೆ.
ಈ ದಿನ ಹೆಚ್ಚಿನವರು ಚಿನ್ನ ಖರೀದಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರವು ನಿಮ್ಮ ರಾಶಿಗೆ ಅನುಗುಣವಾಗಿ ಈ ದಿನ ನೀವು ಕೆಲ ವಸ್ತುಗಳನ್ನು ಮನೆಗೆ ತಂದರೆ ಅದೃಷ್ಟ ಖುಲಾಯಿಸುವುದು ಎಂದು ಹೇಳಿದೆ. ನಿಮ್ಮ ರಾಶಿಗೆ ಯಾವ ವಸ್ತು ಖರೀದಿಸಬೇಕು ನೋಡಿ:

ಮೇಷ ರಾಶಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ರಾಶಿಯವರು ಅಕ್ಷಯ ತೃತೀಯ ಹಬ್ಬದಂದು ಕೆಂಪು ಸೊಪ್ಪನ್ನು ಖರೀದಿಸಬೇಕು. ಇದು ನಿಮಗೆ ತುಂಬಾ ಒಳ್ಳೆಯದು.

ವೃಷಭ ರಾಶಿ
ವೃಷಭ ರಾಶಿಯವರು ಅಕ್ಷಯ ತೃತೀಯ ದಿನದಂದು ರಾಗಿ ಅಥವಾ ಅಕ್ಕಿಯನ್ನು ಖರೀದಿಸಬೇಕು. ಇದು ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.

ಮಿಥುನ ರಾಶಿ
ಮಿಥುನ ರಾಶಿಯವರು ಅಕ್ಷಯ ತೃತೀಯ ದಿನದಂದು ಬಟ್ಟೆ, ಹೆಸರುಕಾಳು ಅಥವಾ ಕೊತ್ತಂಬರಿ ಸೊಪ್ಪನ್ನು ಖರೀದಿಸಬೇಕು. ಇದು ನಿಮ್ಮ ಜೀವನದಲ್ಲಿ ಸಂತೋಷವನ್ನು ತರುತ್ತದೆ.

ಕರ್ಕಾಟಕ ರಾಶಿ
ಕರ್ಕ ರಾಶಿಯವರು ಅಕ್ಷಯ ತೃತೀಯದಂದು ಅಕ್ಕಿ ಅಥವಾ ಹಾಲನ್ನು ಖರೀದಿಸಬೇಕು. ಇದು ನಿಮ್ಮ ಪ್ರಗತಿಗೆ ಒಳ್ಳೆಯದು.

ಸಿಂಹ- ರಾಶಿ
ಸಿಂಹ ರಾಶಿಯವರು ಅಕ್ಷಯ ತೃತೀಯದಂದು ತಾಮ್ರದ ಪಾತ್ರೆಗಳನ್ನು ಅಥವಾ ಕೆಂಪು ಬಟ್ಟೆಗಳನ್ನು ಖರೀದಿಸಬೇಕು. ಇದು ನಿಮ್ಮ ಪ್ರಗತಿಗೆ ಸಹಕಾರಿಯಾಗುತ್ತದೆ.

ಕನ್ಯಾ ರಾಶಿ
ಅಕ್ಷಯ ತೃತೀಯ ಸಂದರ್ಭದಲ್ಲಿ ಕನ್ಯಾ ರಾಶಿಯವರಿಗೆ ಬೆಂಡೆಕಾಯಿ ಕೊಳ್ಳುವುದು ಶುಭಕರವಾಗಿರುತ್ತದೆ. ಇದರಿಂದ ಅಕ್ಷಯ ಪುಣ್ಯ ಸಿಗುತ್ತದೆ.

ತುಲಾ ರಾಶಿ
ತುಲಾ ರಾಶಿಯ ಜನರು ಅಕ್ಷಯ ತೃತೀಯ ದಿನದಂದು ಅಕ್ಕಿ ಅಥವಾ ಸಕ್ಕರೆಯನ್ನು ಖರೀದಿಸಬೇಕು. ಇದು ನಿಮಗೆ ತುಂಬಾ ಒಳ್ಳೆಯದು.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಅಕ್ಷಯ ತೃತೀಯ ಸಂದರ್ಭದಲ್ಲಿ ಕನ್ಯಾ ರಾಶಿಯವರಿಗೆ ಬೆಂಡೆಕಾಯಿ ಕೊಳ್ಳುವುದು ಶುಭಕರವಾಗಿರುತ್ತದೆ.

ಧನು ರಾಶಿ -
ಧನು ರಾಶಿಯವರು ಬಾಳೆಹಣ್ಣು ಖರೀದಿಸಬೇಕು, ಹೀಗೆ ಮಾಡುವುದರಿಂದ ನಿಮ್ಮ ಪುಣ್ಯಗಳು ಹೆಚ್ಚುತ್ತವೆ.

ಮಕರ ರಾಶಿ
ಅಕ್ಷಯ ತೃತೀಯ ದಿನದಂದು ಮಕರ ರಾಶಿಯವರು ಉದ್ದಿನಬೇಳೆ ಖರೀದಿಸುವುದು ಶುಭಕರವಾಗಿರುತ್ತದೆ.

ಕುಂಭ ರಾಶಿ
ಅಕ್ಷಯ ತೃತೀಯ ಸಂದರ್ಭದಲ್ಲಿ ಕುಂಭ ರಾಶಿಯ ಜನರು ಕಪ್ಪು ಎಳ್ಳು ಅಥವಾ ಬಟ್ಟೆಯನ್ನು ಖರೀದಿಸಬೇಕು.

ಮೀನ ರಾಶಿ
ಮೀನ ರಾಶಿಯ ಜನರು ಬೇಳೆ ಅಥವಾ ಅರಿಶಿನವನ್ನು ಖರೀದಿಸಬೇಕು, ಇದು ನಿಮ್ಮ ಅದೃಷ್ಟವನ್ನು ಹೆಚ್ಚಿಸುತ್ತದೆ.



Click it and Unblock the Notifications
