For Quick Alerts
ALLOW NOTIFICATIONS  
For Daily Alerts

ಐದೇ ನಿಮಿಷದಲ್ಲಿ ಬೇಸರದ ಮನಸ್ಸನ್ನು ಉಲ್ಲಾಸಗೊಳಿಸಲು 7 ಮಾರ್ಗಗಳು

|

ಮನಸ್ಸು ಅತ್ಯಂತ ಸೂಕ್ಷ್ಮ ಹಾಗೂ ಭಾವನಾತ್ಮಕವಾಗಿರುತ್ತದೆ. ಹಾಗಾಗಿ ಪುಟ್ಟ ನೋವಾದರೂ ಬಹುಬೇಗ ಬೇಸರಕ್ಕೆ ಒಳಗಾಗುವುದು. ಹಾಗೆಯೇ ಸಣ್ಣ ಸಂತೋಷದ ಸಂಗತಿಗೂ ಮನಸ್ಸು ಬಹುಬೇಗ ಖುಷಿಯನ್ನು ಅನುಭವಿಸುವುದು. ಹಾಗೆಯೇ ಕೆಲಸದಲ್ಲಿ ಒತ್ತಡ ಉಂಟಾದರೆ ಮನಸ್ಸು ಕಿರಿಕಿರಿಗೆ ಒಳಗಾಗುವುದು. ದೈಹಿಕವಾಗಿ ನೋವಾದರೆ ಅದನ್ನು ಬಹುಬೇಗ ಮರೆಯುತ್ತೇವೆ. ಅದೇ ಮನಸ್ಸಿಗೆ ನೋವಾದರೆ ಅಥವಾ ಕಿರಿಕಿರಿಯಾದರೆ ಅಷ್ಟು ಸುಲಭವಾಗಿ ಮರೆಯುವುದಿಲ್ಲ. ಬದಲಿಗೆ ಪದೇ ಪದೇ ಬೇಡದ ಸಂಗತಿಯ ಬಗ್ಗೆಯೇ ಹೆಚ್ಚು ಚಿಂತಿಸುತ್ತಾ ಇನ್ನಷ್ಟು ಮನಸ್ಸನ್ನು ಗೊಂದಲಕ್ಕೆ ತಿರುಗುವಂತೆ ಆಗುವುದು.

ಮನಸ್ಸು ಎಷ್ಟು ಸೂಕ್ಷ್ಮವೋ ಅಷ್ಟೇ ಜಠಿಲ ಎಂದು ಹೇಳಬಹುದು. ಮಾನಸಿಕವಾಗಿ ಒತ್ತಡ ಅಥವಾ ಬೇಸರಕ್ಕೆ ಒಳಗಾದರೆ ಅಷ್ಟು ಸುಲಭವಾಗಿ ಹೊರ ಬರಲು ಸಾಧ್ಯವಾಗುವುದಿಲ್ಲ. ಕ್ರಮೇಣ ಖಿನ್ನತೆ, ಗೀಳು, ಒತ್ತಡದಂತಹ ಸಮಸ್ಯೆಗಳು ಕಾಡಲು ಪ್ರಾರಂಭಿಸುತ್ತವೆ. ಹಾಗಂತ ನಾವು ಮನಸ್ಸಿನ ಮೇಲೆ ಉಂಟಾಗುವ ಎಲ್ಲಾ ಅನಿರೀಕ್ಷಿತ ಸನ್ನಿವೇಶಗಳನ್ನು ತಡೆಯಲು ಸಾಧ್ಯವಿಲ್ಲ. ನಿತ್ಯವೂ ಬದಲಾದ ಸನ್ನಿವೇಶ ಹಾಗೂ ಪರಿಸ್ಥಿತಿಗಳು ಮನಸ್ಸಿನ ಮೇಲೆ ಸಾಕಷ್ಟು ಪ್ರಭಾವ ಬೀರುತ್ತವೆ.

Ways To Improve Your Mood in Less Than 5 Minutes

ಕೆಲಸದಲ್ಲಿ ಉಂಟಾಗುವ ತಪ್ಪುಗಳು, ಅಸಹಾಯಕತೆಯಿಂದ ಉಂಟಾಗುವ ಅವಮಾನಗಳು, ಸಂಬಂಧದಲ್ಲಿ ಕಾಣಿಸಿಕೊಳ್ಳುವ ವೈಮನಸ್ಸು, ಆರ್ಥಿಕ ನಷ್ಟ ಸೇರಿದಂತೆ ವಿವಿಧ ಬಗೆಯಲ್ಲಿ ಉಂಟಾಗುವ ನೋವು ನಲಿವುಗಳು ನಮ್ಮ ಮನಸ್ಸಿನ ಮೇಲೆ ಆಳವಾಗಿಯೇ ಪ್ರಭಾವ ಬೀರುತ್ತವೆ. ಅಂತಹ ಸಂದರ್ಭದಲ್ಲಿ ನಾವು ಎಷ್ಟರ ಮಟ್ಟಿಗೆ ಧನಾತ್ಮಕವಾದ ಚಿಂತನೆಯನ್ನು ಹೊಂದುತ್ತೇವೆ ಎನ್ನುವುದರ ಮೇಲೆ ಮನಸ್ಸಿನ ಆರೋಗ್ಯವು ನಿರ್ಧಾರವಾಗುವುದು.

ಮನಃಶಾಸ್ತ್ರಜ್ಞರು ಹೇಳುವ ಪ್ರಕಾರ ಕೆಲವು ಮಾರ್ಗಗಳನ್ನು ಅನುಸರಿಸುವುದರ ಮೂಲಕ ನಾವು ನಮ್ಮ ಮಾನಸಿಕ ಸ್ಥಿತಿಯನ್ನು ಬದಲಿಸಿಕೊಳ್ಳಬಹುದು. ಅದು ಸಹ ಕೇವಲ ಐದು ನಿಮಿಷಗಳಲ್ಲಿ ಎಂದು. ನಿಮಗೂ ನಿಮ್ಮ ಮಾನಸಿಕ ಸ್ಥಿತಿಯನ್ನು ಉತ್ತಮವಾಗಿರಿಸಿಕೊಳ್ಳಬೇಕು ಎಂದಾದರೆ ಈ ಬಗೆಯ ಮಾರ್ಗವನ್ನು ಅನುಸರಿಸಿ. ಅವು ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಉತ್ತಮವಾಗಿ ಇರುತ್ತವೆ. ಜೊತೆಗೆ ನೀವು ಸಹ ಎಂತಹ ಸಂದರ್ಭವನ್ನಾದರೂ ಎದುರಿಸುವ ಆತ್ಮವಿಶ್ವಾಸವನ್ನು ಪಡೆದುಕೊಳ್ಳುವಿರಿ.

1. ಲವಲವಿಕೆಯಿಂದ ಕೂಡಿರುವ ಸಂಗೀತವನ್ನು ಆಲಿಸಿ

1. ಲವಲವಿಕೆಯಿಂದ ಕೂಡಿರುವ ಸಂಗೀತವನ್ನು ಆಲಿಸಿ

ಲವಲವಿಕೆಯ ಸಂಗೀತವನ್ನು ಕೇಳುವುದರಿಂದ ನಮ್ಮ ಮನಃಸ್ಥಿತಿಯು ಬಹುಬೇಗ ಸುಧಾರಿಸುವುದು. ಮನಸ್ಸು ಒತ್ತಡದಿಂದ ಹಾಗೂ ಬೇಸರದಿಂದ ಕೂಡಿದ್ದಾಗ ಲವಲವಿಕೆಯ ಹಾಡನ್ನು ಕೇಳಿದರೆ ಮನಸ್ಸಿಗೆ ಬೇರೆ ಚಿಂತನೆಗಳ ಕಡೆಗೆ ಕೊಂಡೊಯ್ಯುವುದು. ಜೊತೆಗೆ ಸಂಗೀತದಂತಹ ಆಹ್ಲಾದವು ಮನಸ್ಸಿಗೆ ಹುಮ್ಮಸ್ಸನ್ನು ಹಾಗೂ ಸಮಾಧಾನವನ್ನು ನೀಡುವುದು.

2. ಉತ್ತಮ ನಗುವನ್ನು ಹೊಂದಲು ಪ್ರಯತ್ನಿಸಿ

2. ಉತ್ತಮ ನಗುವನ್ನು ಹೊಂದಲು ಪ್ರಯತ್ನಿಸಿ

ನಗು ನಮ್ಮ ಮೆದುಳಿನ ಡೊಪಮೈನ್ ಅನ್ನು ಹೆಚ್ಚಿಸುತ್ತದೆ. ಇದು ಮನಃಸ್ಥಿತಿಯನ್ನು ಉತ್ತಮ ಸ್ಥಿತಿಯಲ್ಲಿ ಇಡುವ ರಾಸಾಯನಿಕ. ನಗು ನಮ್ಮ ದೇಹದಲ್ಲಿ ಆಮ್ಲಜನಕವನ್ನು ಹೆಚ್ಚಿಸುತ್ತದೆ. ಮತ್ತು ನಮ್ಮ ಒತ್ತಡದ ಪ್ರತಿಕ್ರಿಯೆಯ ವ್ಯವಸ್ಥೆಯನ್ನು ತಿಳಿಗೊಳಿಸುವುದು. ಇದರಿಂದ ಮನಸ್ಸು ಬಹು ಬೇಗ ಸಕಾರಾತ್ಮಕ ಮತ್ತು ಶಾಂತ ಭಾವನೆಯನ್ನು ಪಡೆದುಕೊಳ್ಳುವುದು. ಹಾಗಾಗಿ ನೀವು ಬೇಸರ ಅಥವಾ ಒತ್ತಡಕ್ಕೆ ಒಳಗಾದಾಗ ಈ ಪ್ರಕ್ರಿಯೆಯನ್ನು ಅನುಸರಿಸಿ. ಮನಸ್ಸಿನ ಸ್ಥಿತಿಯನ್ನು ಐದು ನಿಮಿಷಗಳ ಒಳಗೆ ಬದಲಾಯಿಸಿಕೊಳ್ಳಿ.

3. ಬೆಳಕಿಗೆ ಹೆಚ್ಚು ತೆರೆದುಕೊಳ್ಳಿ

3. ಬೆಳಕಿಗೆ ಹೆಚ್ಚು ತೆರೆದುಕೊಳ್ಳಿ

ಕೆಲವು ಅಧ್ಯಯನಗಳು ಸಾಬೀತು ಪಡಿಸಿದ ಪ್ರಕಾರ ಹಗಲಿನ ಬೆಳಕಿಗೆ ಯಾರು ಹೆಚ್ಚು ತೆರೆದುಕೊಳ್ಳುತ್ತಾರೋ ಅವರಲ್ಲಿ ನಿದ್ರಾಹೀನತೆ ಹಾಗೂ ಖಿನ್ನತೆಯ ಸಮಸ್ಯೆ ಇರುವುದಿಲ್ಲ. ಬೆಳಕು ನಮ್ಮನ್ನು ಹೆಚ್ಚು ಉತ್ಪಾದಕ ಸ್ಥಿತಿಯಲ್ಲಿ ಇರಲು ಪ್ರೇರೇಪಣೆ ನೀಡುವುದು. ಹೆಚ್ಚು ಕ್ರಿಯಾಶೀಲತೆಯಿಂದ ಕೂಡಿದ್ದರೆ ಮನಸ್ಸು ಸಹ ಶಾಂತ ಹಾಗೂ ಚೈತನ್ಯದಿಂದ ಕೂಡಿರುತ್ತದೆ. ನೀವು ಬೇಸರ ಅಥವಾ ದುಃಖವನ್ನು ಅನುಭವಿಸುತ್ತಿದ್ದರೆ ನೀವು ನಿಮ್ಮನ್ನು ಬೆಳಕಿನೆಡೆಗೆ ಸಾಗುವಂತೆ ನೋಡಿಕೊಳ್ಳಿ. ಸ್ವಚ್ಛವಾದ ಬೆಳಕಿನೊಂದಿಗೆ ಮನಸ್ಸು ಸಹ ಹೊಸ ಬದಲಾವಣೆಯನ್ನು ಬಹುಬೇಗ ಪಡೆದುಕೊಳ್ಳುವುದು.

4. ಭ್ರಮೆಯೆಂದು ಭಾವಿಸಿ

4. ಭ್ರಮೆಯೆಂದು ಭಾವಿಸಿ

ನಮ್ಮ ಮನಸ್ಸು ಎಲ್ಲಾ ಸಂಗತಿಗಳಿಗೂ ಬಹುಬೇಗ ಸ್ಪಂದಿಸುತ್ತದೆ. ಅಂತೆಯೇ ಬಹುಬೇಗ ಭಿನ್ನತೆಯನ್ನು ಪಡೆದುಕೊಳ್ಳುವುದು. ನಾವು ಅಂದುಕೊಂಡ ಅಥವಾ ಅನುಭವಿಸಿದ ಭಾವನೆಗಳನ್ನು ಭ್ರಮೆ ಎಂದು ತಿಳಿಯುವುದು ಸೂಕ್ತ. ಕೆಲವು ಅನಗತ್ಯ ವಿಷಯಗಳನ್ನು ನಾವು ಹೆಚ್ಚೆಚ್ಚು ಚಿಂತಿಸಿದ ಹಾಗೆ ಮಾನಸಿಕವಾಗಿ ಖಿನ್ನತೆ ಉಂಟಾಗುವುದು. ಹಾಗಾಗಿ ಅವುಗಳನ್ನು ಆದಷ್ಟು ತಿರಸ್ಕರಿಸುವುದು ಅಥವಾ ಭ್ರಮೆಯೆಂದು ಭಾವಿಸಿಕೊಂಡರೆ ಮನಸ್ಸು ಬಹುಬೇಗ ಆ ಸಂಗತಿಗಳನ್ನು ಮರೆಯುವುದು.

5. ಆತ್ಮೀಯರನ್ನು ತಬ್ಬಿಕೊಳ್ಳಿ

5. ಆತ್ಮೀಯರನ್ನು ತಬ್ಬಿಕೊಳ್ಳಿ

ಮನಸ್ಸಿಗೆ ಬೇಸರ ಅಥವಾ ಅನುಚಿತವಾದ ಸಂಗತಿಗಳು ಸಂಭವಿಸಿದರೆ ನಮ್ಮವರ ಬಳಿ ಅಥವಾ ಆತ್ಮೀಯರಲ್ಲಿ ಹೇಳಿಕೊಳ್ಳುವುದು ಅಥವಾ ಅವರನ್ನು ತಬ್ಬಿಕೊಂಡು ದುಃಖವನ್ನು ಹೇಳಿಕೊಳ್ಳುವುದು ಉತ್ತಮ. ಹೀಗೆ ಮಾಡುವುದರಿಂದ ಚರ್ಮವು ನಮ್ಮವರ ಆತ್ಮೀಯ ಸ್ಪರ್ಶ ಹಾಗೂ ಸಂತಾಪದಿಂದ ಉತ್ತಮ ಪ್ರಚೋದನೆಯನ್ನು ಪಡೆದುಕೊಳ್ಳುತ್ತದೆ. ಆಗ ಬಿಡುಗಡೆಯಾಗುವ ಹಾರ್ಮೋನ್‍ಗಳು ಮಾನಸಿಕ ಒತ್ತಡವನ್ನು ತಣಿಸುವುದು. ಕಾರ್ಟಿಸೋಲ್ ಹಾರ್ಮೋನ್ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದು.

6. ಉತ್ತಮ ಸಂಗತಿಗಳ ಬಗ್ಗೆ ಚಿಂತಿಸಿ

6. ಉತ್ತಮ ಸಂಗತಿಗಳ ಬಗ್ಗೆ ಚಿಂತಿಸಿ

ಮನಸ್ಸಿಗೆ ಬೇಸರವಾದಾಗ ಅಥವಾ ಸುಮ್ಮನೆ ಇರುವಾಗ ನಾವು ಅನುಭವಿಸಿದ ಉತ್ತಮ ಸಂಗತಿಗಳ ಬಗ್ಗೆ ಹೆಚ್ಚಿನ ಚಿಂತನೆ ನಡೆಸಬೇಕು. ಆಗ ಮನಸ್ಸು ಬಹಳ ಉಲ್ಲಾಸ ಹಾಗೂ ಸಂತೋಷದಿಂದ ಕೂಡಿರುತ್ತದೆ. ಬೇಸರಗೊಂಡಾಗ ಅಥವಾ ಚಿಂತೆಗೆ ಒಳಗಾದಾಗ ದಿನದಲ್ಲಿ ನಾವು ಅನುಭವಿಸಿದ ಉತ್ತಮ ಸಂಗತಿಗಳ ಬಗ್ಗೆ ಅಥವಾ ಹಿಂದೆ ಅನುಭವಿಸಿದ ಉತ್ತಮ ವಿಷಯಗಳ ಬಗ್ಗೆ ಒಮ್ಮೆ ನೆನೆಯಿರಿ ಆಗ ಮನಸ್ಸು ತಿಳಿಗೊಳ್ಳುವುದು.

7. ನಿಮ್ಮನ್ನು ನೀವು ಕೆಲಸದಲ್ಲಿ ತೊಡಗಿಸಿಕೊಳ್ಳಿ

7. ನಿಮ್ಮನ್ನು ನೀವು ಕೆಲಸದಲ್ಲಿ ತೊಡಗಿಸಿಕೊಳ್ಳಿ

ಸಮಸ್ಯೆ ಎನ್ನುವುದು ಎಲ್ಲರಿಗೂ ಬರುತ್ತದೆ. ವೈಮನಸ್ಸು ಎನ್ನುವುದು ಒಂದಲ್ಲಾ ಒಂದು ಕಾರಣಕ್ಕೆ ಸಂಭವಿಸುತ್ತದೆ. ಅಂತಹ ಸಮಯ ಅಥವಾ ಸಂದರ್ಭ ಒದಗಿ ಬಂದರೆ ನೀವು ನಿಮ್ಮ ಇತರ ಕೆಲಸದಲ್ಲಿ ತೊಡಗಿಕೊಳ್ಳಿ. ಆಗ ನಿಮ್ಮ ಮನಸ್ಸು ಬೇರೆ ಸಂಗತಿಗಳ ಕಡೆಗೆ ಮುಳುಗುವುದು. ಜೊತೆಗೆ ಬಹುಬೇಗ ಮನಃಸ್ಥಿತಿಯನ್ನು ಬದಲಿಸಲು ಪ್ರೇರೇಪಣೆ ದೊರೆಯುವುದು.

ಸಮಸ್ಯೆ, ಬೇಸರ ಹಾಗೂ ಸಂತೋಷ ಎನ್ನುವುದು ಕೆಲವು ಪರಿಸ್ಥಿತಿಗಳಿಗೆ ಅನುಗುಣವಾಗಿ ಎದುರಾಗುತ್ತಲೇ ಇರುತ್ತವೆ. ಅವುಗಳನ್ನು ನಾವು ಎಷ್ಟರ ಮಟ್ಟಿಗೆ ಸ್ವೀಕರಿಸಬೇಕು, ಎಷ್ಟು ಬೇಗ ಅವುಗಳಿಂದ ದೂರ ಸರಿಯಬೇಕು ಎನ್ನುವುದನ್ನು ನಿರ್ಧರಿಸಬೇಕು. ಆಗ ನಮ್ಮ ಮನಃಸ್ಥಿತಿಯನ್ನು ಸಂತೋಷ ಹಾಗೂ ಸಮಾಧಾನದಲ್ಲಿ ಇಟ್ಟುಕೊಳ್ಳಬಹುದು.

Read more about: insync
English summary

7 Ways To Improve Your Mood in Less Than 5 Minutes

Some days staying positive and upbeat can feel like an uphill battle. Maybe it was a stressful day at work, a fight with a friend, or even just an off day — whatever it is, there are definitely things you can do to improve your mood. And it's no wonder bad moods can sneak up on us so often. According to psychologist Guy Winch, author of the book Emotional First Aid: Healing Rejection, Guilt, Failure, and Other Everyday Hurts, a bad mood can be caused by anything from guilt over forgetting someone's birthday, to outstanding tasks on our to do list, to not getting enough likes on a personal or important Facebook share. Basically, humans are sensitive creatures, and it's not abnormal or even uncommon for little things to get us in a funk.
X
Desktop Bottom Promotion