Latest Updates
-
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ
ತಮ್ಮ ಸಿಹಿ ಮಾತಿನಿಂದಲೇ ಎದುರಿನವರ ಹೃದಯ ಗೆಲ್ಲುವಂತಹ ರಾಶಿ ಚಕ್ರದವರು
ನಮ್ಮ ಪರಿಚಯಸ್ಥರು, ಸ್ನೇಹಿತರು ಅಥವಾ ಸಂಬಂಧಿಕರೇ ಆಗಿರಬಹುದು. ಕೆಲವು ಜನರೊಂದಿಗೆ ಮಾತನಾಡುವಾಗ ಅವರೊಂದಿಗೆ ಮಾತನಾಡುತ್ತಲೇ ಇರಬೇಕು ಎಂದು ನಮಗೆ ಅನಿಸುತ್ತದೆ. ಯಾಕೆಂದರೆ ಅವರು ಅಷ್ಟು ಸಿಹಿ ಮಾತುಗಳನ್ನಾಡುತ್ತಿರುತ್ತಾರೆ. ಆದರೆ ಇನ್ನು ಕೆಲವರೊಂದಿಗೆ ನಾವು ಮಾತನಾಡುವಾಗ, ಇವರು ಯಾವಾಗ ಇಲ್ಲಿಂದ ಒಮ್ಮೆ ಹೋಗುವುದಿಲ್ಲ ಎನ್ನುವಂತಹ ಭಾವನೆಯು ಮೂಡುವುದು.
ಸಿಹಿ ಮಾತುಗಳನ್ನು ಆಡುವಂತಹ ಜನರಿಗೆ ಇಲ್ಲ ಎಂದು ಹೇಳಲು ತುಂಬಾ ಕಷ್ಟವಾಗುವುದು. ಜನರು ಇಷ್ಟು ಸಿಹಿ ಮಾತುಗಳನ್ನು ಆಡಲು ಹೇಗೆ ಸಾಧ್ಯ? ನೀವು ಯಾವತ್ತಾದರೂ ಇಂತಹ ವ್ಯಕ್ತಿಯನ್ನು ಭೇಟಿ ಮಾಡಿದ್ದೀರಾ? ಜ್ಯೋತಿಷ್ಯದ ಪ್ರಕಾರ ಐದು ರಾಶಿಚಕ್ರದವರು ತುಂಬಾ ಸಿಹಿಯಾಗಿ ಮಾತನಾಡುವವರು. ತಮ್ಮ ಮಾತಿನಿಂದಲೇ ಹೃದಯ ಗೆಲ್ಲುವಂತಹ ರಾಶಿ ಚಕ್ರಗಳು ಯಾವುದು ಎಂದು ನಾವು ಲೇಖನದಲ್ಲಿ ತಿಳಿದುಕೊಳ್ಳುವ.

ತುಲಾ
ಈ ರಾಶಿಯವರು ಬೇರೆ ವ್ಯಕ್ತಿಗಳನ್ನು ಪ್ರಶಂಸೆ ಮಾಡುವುದರಿಂದ ಅವರೊಂದಿಗೆ ಮಾತನಾಡುತ್ತಲೇ ಇರಬೇಕು ಎಂದು ಅನಿಸುವುದು. ನೀವು ತುಂಬಾ ಮಹತ್ವದ ವ್ಯಕ್ತಿ ಎಂದು ಭಾವಿಸುವಂತೆ ತುಲಾ ರಾಶಿಯವರು ಮಾಡುವರು. ಇವರು ಸ್ವಾಭಾವಿಕವಾಗಿ ತುಂಬಾ ಆಕರ್ಷಣೀಯ ಮತ್ತು ಆನಂದ ಉಂಟು ಮಾಡುವ ಕಾರಣ ದಿಂದಾಗಿ ಜನರು ಇವರೊಂದಿಗೆ ಸಮಯ ಕಳೆಯಲು ಹೆಚ್ಚು ಇಷ್ಟಪಡುವರು. ಇವರು ಎಲ್ಲಾ ವಿಭಾಗದಲ್ಲೂ ಹೆಚ್ಚಿನ ಜ್ಞಾನ ಹೊಂದಿರುವ ಕಾರಣದಿಂದ ಇವರೊಂದಿಗೆ ಚರ್ಚೆ ಮಾಡಲು ಎಲ್ಲಾ ವಿಷಯಗಳು ಸಿಗುವುದು. ಇದರಲ್ಲಿ ಎಲ್ಲಾ ಸಮಯದಲ್ಲೂ ಒಂದು ಆಯ್ಕೆ ಎನ್ನುವುದು ಇರುವುದು. ಇವರು ಯಾವಾಗಲೂ ನಗುತ್ತಲೇ ತುಂಬಾ ಸಿಹಿಯಾಗಿ ಮಾತನಾಡುವರು.

ಮಿಥುನ
ಮಿಥುನ ರಾಶಿಯವರು ತುಂಬಾ ಹಾಸ್ಯ ಮಾಡುವವರು. ಇವರು ಗಾಸಿಪ್ ತುಂಬಾ ಇಷ್ಟಪಡುವರು. ಇವರು ಅಭಿಪ್ರಾಯ ಮಂಡಿಸುವರು ಮತ್ತು ಚರ್ಚೆಗೆ ಒಂದು ವಿಚಾರ ತಿಳಿಸುವರು. ತಮ್ಮ ನಿರೀಕ್ಷೆಗೆ ಅನುಗುಣವಾಗಿ ಚರ್ಚೆಯನ್ನು ಯಾವ ರೀತಿಯಲ್ಲಿ ಕೊನೆಗೊಳಿಸಬೇಕು ಎಂದು ಇವರಿಗೆ ಸರಿಯಾಗಿ ತಿಳಿದಿದೆ. ಇವರು ತಮ್ಮೊಂದಿಗೆ ಚರ್ಚೆಗೆ ಪ್ರತಿಯೊಬ್ಬರನ್ನು ಆಹ್ವಾನಿಸುವುದಿಲ್ಲ ಮತ್ತು ಎಲ್ಲರೊಂದಿಗೆ ಇವರು ಸ್ನೇಹದೊಂದಿಗೆ ಇರಲ್ಲ. ಸಿಹಿ ಮಾತಿನಿಂದಾಗಿ ಇವರು ಕೆಲವು ಸ್ನೇಹಿತರನ್ನು ಸಂಪಾದಿಸಿರುವರು ಮತ್ತು ಅವರೊಂದಿಗೆ ಇರುವರು.

ವೃಶ್ಚಿಕ
ವೃಶ್ಚಿಕದ ಮಾತುಗಳಿಂದ ದೂರವಿರುವುದು ತುಂಬಾ ಸುಲಭವಾಗಿರುವುದು. ಇವರಲ್ಲಿ ಉನ್ನತ ಮಟ್ಟದ ಆತ್ಮಬಲ ಇರುವುದು ಮತ್ತು ಜನರು ತಮ್ಮನ್ನು ನಂಬುವಂತೆ ಇವರು ಮಾಡುವರು. ಇವರು ಯಾವುದೇ ಚರ್ಚೆಯನ್ನು ತಮ್ಮ ಪರವಾಗಿ ಬರುವಂತೆ ಮಾಡುವಲ್ಲಿ ತುಂಬಾ ನಿಪುಣರಾಗಿರುವರು. ಇವರು ಸುಳ್ಳು ಹೇಳಬೇಕಾಗ ಬಹುದಾದಂತಹ ಆಳವಾದ ಚರ್ಚೆಯನ್ನು ಇಷ್ಟಪಡುವುದಿಲ್ಲ ಮತ್ತು ಸುಳ್ಳು ಹೇಳುವುದು ಸುರಕ್ಷಿತವಲ್ಲವೆಂದು ಇವರು ನಂಬಿರುವರು. ಇವರಲ್ಲಿ ತುಂಬಾ ತಾಳ್ಮೆ ಇರುವುದು ಮತ್ತು ನಯವಾದ ವ್ಯಕ್ತಿಗಳಾಗಿರುವರು. ಸಹಾಯಹಸ್ತ ನೀಡುವ, ಶ್ರೇಷ್ಠ ಕೇಳುಗರಾಗಿರುವ ವೃಶ್ಚಿಕ ರಾಶಿಯವರು ಸಿಹಿಯಾಗಿ ಮಾತನಾಡುವರು.

ಕುಂಭ
ಕುಂಭ ರಾಶಿಯವರಲ್ಲಿ ಯಾವಾಗಲೂ ನೆರವಿನ ಗುಣವು ಇರುವುದು. ಇವರು ಬೇರೆಯವರ ಮಾತನ್ನು ಕೇಳುವರು ಮತ್ತು ತಮ್ಮ ಭಾವನೆಗಳ ಬಗ್ಗೆ ಅತೀ ಕಡಿಮೆ ಮಾತನಾಡುವರು. ಇವರ ಮುಖದಲ್ಲಿರುವ ಶಾಂತತೆಯು ಯಾವಾಗಲೂ ಇವರೊಂದಿಗೆ ಮಾತನಾಡುವ ವ್ಯಕ್ತಿಗೆ ತುಂಬಾ ಆರಾಮ ನೀಡುವುದು. ಕೆಲವು ಕುಂಭ ರಾಶಿಯವರು ಬೇರೆಯವರನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಾ ಇರುವರು. ಆದರೆ ಅವರ ಪ್ರಯತ್ನವು ವಿಫಲವಾಗುವುದು ಎಂದು ಅವರಿಗೆ ತಿಳಿದಿರುತ್ತದೆ.

ಧನು
ಈ ರಾಶಿಯವರು ತುಂಬಾ ಆತ್ಮವಿಶ್ವಾಸ ಹೊಂದಿರುವವರು. ಇವರಲ್ಲಿ ತಮಾಷೆಯ ಅಂಶವು ಕೂಡ ಹೆಚ್ಚಾಗಿ ಇರುವುದು. ಇವರು ಯಾವಾಗಲೂ ಹೊಸ ಹೊಸ ಜನರನ್ನು ಭೇಟಿಯಾಗಲು ಇಷ್ಟಪಡುವರು. ಅಪರಿಚಿತರು ಕೂಡ ಇವರನ್ನು ತುಂಬಾ ಆಸಕ್ತಿ ದಾಯಕ ಎಂದು ಭಾವಿಸುವರು. ತಮ್ಮ ಮಾತಿನ ಮೂಲಕ ಗಮನ ಸೆಳೆಯುವುದು ಹೇಗೆ ಎಂದು ಇವರಿಗೆ ಚೆನ್ನಾಗಿ ತಿಳಿದಿದೆ.ಅದಾಗ್ಯೂ, ಕೆಲವೊಂದು ಸಲ ನಾಲಗೆಯು ಜಾರಬಹುದು ಮತ್ತು ಅನಗತ್ಯ ಅಥವಾ ಸೂಕ್ತವಲ್ಲದ ಮಾತನಾಡಬಹುದು. ಇಲ್ಲಿಯ ತನಕ ಇವರು ತುಂಬಾ ಸಿಹಿ ಮಾತಿನವರು ಆಗಿರುವರು.



Click it and Unblock the Notifications











