Latest Updates
-
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್ನಂತೆ ಕುಡಿಯಬಹುದು! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಗ್ಯಾಸ್ ಹಚ್ಚೋದೆ ಬೇಡ; ಸುಲಭವಾಗಿ ಮಾಡಿ ಈ ಅದ್ಭುತ ರುಚಿಯ ಸ್ವೀಟ್! -
ಕೆಲಸ ಮಾಡಲು ದೇಹಕ್ಕೆ ಬಲಬೇಕಾದರೆ ಈ ಹೆಸರುಕಾಳಿನ ಸೂಪರ್ಫುಡ್ ತಿನ್ನಿ! ವಾರಕ್ಕೊಂದು ಉಂಡೆ ಸಾಕು! -
ಅರ್ಧದಷ್ಟು ಭಾರತೀಯರಲ್ಲಿ 6 ಗಂಟೆಗೂ ಕಡಿಮೆ ನಿದ್ರೆ: ಸಮೀಕ್ಷೆಯಲ್ಲಿದೆ ಆತಂಕಕಾರಿ ವಿಚಾರ! -
ವಿವಾಹ ಯೋಗ ಕೂಡುವ ಸಾಧ್ಯತೆ ಇದೆ! ಸಂಗಾತಿಗೆ ಗಿಫ್ಸ್ ನೀಡಬಹುದು -
ಮಹಿಳೆಯರು ಕಾಲುಂಗುರ ಏಕೆ ಧರಿಸಬೇಕು? ಎಷ್ಟು ಸುತ್ತು ನಿಮ್ಗೆ ಯಶಸ್ಸು ತರುತ್ತೆ? ರಹಸ್ಯ ತಿಳಿಯಿರಿ -
March 14 Horoscope: ಪ್ರಯಾಣಗಳ ಮಾಡುವ ದಿನವಾಗಲಿದೆ! -
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್
22-2-2019- ಶುಕ್ರವಾರದ ದಿನ ಭವಿಷ್ಯ
ಬದುಕು ಎನ್ನುವುದು ಒಂದು ನದಿ ಇದ್ದ ಹಾಗೆ. ಕೊನೆ ಇಲ್ಲದ ಪಯಣ. ಈ ಪಯಣದ ಮಧ್ಯೆ ಏನೆಲ್ಲಾ ಸಿಗುತ್ತದೆಯೋ ಅದೆಲ್ಲವನ್ನೂ ಜೊತೆಯಲ್ಲಿಯೇ ಕರೆದೊಯ್ಯುತ್ತದೆ. ಹಾಗಂತ ಯಾವುದೂ ಕೊನೆಯವರೆಗೆ ಉಳಿಯುವುದಿಲ್ಲ. ನಿಜ, ಜೀವನದ ಪಯಣದುದ್ದಕ್ಕೂ ಸಿಕಿ ಕಹಿ ಘಟನೆಗಳು ಹಾಗೂ ವ್ಯಕ್ತಿಗಳು ಸಿಗುತ್ತಾರೆ. ಅವು ಯಾವುದೂ ಶಾಶ್ವತವಾಗಿ ನಮ್ಮೊಂದಿಗೆ ಉಳಿಯುವುದಿಲ್ಲ.
ನಮ್ಮೊಂದಿಗೆ ಬಂದ ವ್ಯಕ್ತಿಗಳು ಹಾಗೂ ಅನುಭವಿಸಿದ ಸನ್ನಿವೇಶಗಳ ಅನುಭವ ಹಾಗೂ ನೆನಪುಗಳು ಮಾತ್ರವೇ ನಮ್ಮೊಂದಿಗೆ ಉಳಿದುಕೊಳ್ಳುತ್ತವೆ. ಆ ಅನುಭವಗಳೇ ಜೀವನ ಎಂದರೇನು? ಎನ್ನುವ ಪಾಠವನ್ನು ಹೇಳಿಕೊಡುತ್ತವೆ. ಶುಕ್ರವಾರವಾದ ಈ ಶುಭ ದಿನ ಆ ಮಹಾ ಲಕ್ಷ್ಮಿಯು ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಯಾವೆಲ್ಲಾ ಬದಲಾವಣೆಯನ್ನು ತರುತ್ತಾಳೆ? ನಿಮ್ಮ ಜೀವನದ ಪಯಣದಲ್ಲಿ ನಾಳೆ ಯಾವೆಲ್ಲಾ ಘಟನೆಗಳು ನಡೆಯಬಹುದು? ಅವುಗಳಿಂದ ನೀವೇನು ಜೀವನದ ತಾತ್ಪರ್ಯ ಪಡೆದುಕೊಳ್ಳುವಿರಿ ಎನ್ನುವ ವಿವರಣೆಯನ್ನು ಬೋಲ್ಡ್ ಸ್ಕೈ ನೀಡುತ್ತಿದೆ...

ಮೇಷ( 21 ಫೆಬ್ರವರಿ 2019)
ವಾರದ ಆರಂಭದ ದಿನದಲ್ಲಿ ಯೋಚಿಸಿದ್ದ ಪ್ರವಾಸವನ್ನು ಇಂದು ನಿರಾತಂಕವಾಗಿ ಮಾಡಬಹುದು. ವಾರಾಂತ್ಯದ ರಜಾ ದಿನಗಳಲ್ಲಿ ನಿಮ್ಮ ಮನಸ್ಸಿಗೆ ಒಪ್ಪುವ ಕ್ಷೇತ್ರಗಳಿಗೆ ಭೇಟಿ ನೀಡಲು ಮುಂದಾಗುವಿರಿ. ಇದರಿಂದ ಮನಸ್ಸು ಪ್ರಫುಲ್ಲವಾಗುವುದು. 'ಅಂಜಿಕಿನ್ಯಾತಕಯ್ಯಾ, ಹನುಮನ ನೆನೆದರೆ ಹಾರಿ ಹೋಗುವುದು ಪಾಪ' ಎಂದು ದಾಸರು ಹಾಡಿದ್ದಾರೆ. ಅಂತೆಯೇ ಮಾರುತಿಯ ದರ್ಶನ, ಆತನ ಸ್ತೋತ್ರ ಪಠಿಸಿ, ಮನಸ್ಸಿನ ತುಮುಲಗಳನ್ನು ದೂರ ಮಾಡಿ.9845743807 ಅದೃಷ್ಟ ಸಂಖ್ಯೆ:2

ವೃಷಭ
ಬೆಳಕು ಮುಗಿದು ಸಂಜೆ ಆವರಿಸುವಷ್ಟರಲ್ಲಿ ಬದಲಾವಣೆ ಆಗದು. ಆದಾಗ್ಯೂ ಬೆಳಗ್ಗೆ ಇದ್ದ ಭಯ ಸಂಜೆಯ ವೇಳೆಯಲ್ಲಿ ಇರಲಾರದು. ನವಗ್ರಹ ದೇವತೆಗಳನ್ನು ಆರಾಧನೆ ಮಾಡಿ. ಆಶ್ವತ್ಥ ಮರ ಪ್ರದಕ್ಷಿಣೆ ಹಾಕಿ.ವಿವೇಕಿಗಳಾದ ಮಕ್ಕಳಿಗೆ ಯಶಸ್ಸು ದೊರೆಯಲಿದೆ. ಉಪಯುಕ್ತವಾದ ಸಲಹೆ ಸಹಕಾರಗಳು ಮಕ್ಕಳಿಗೆ ದೊರೆಯು ವುದರಿಂದ ಅವರು ಕೂಡಾ ಆನಂದಭರಿತ ದಿನವನ್ನು ಕಳೆಯುವರು. 9845743807 ಅದೃಷ್ಟ ಸಂಖ್ಯೆ:1

ಮಿಥುನ
ಮನಸ್ಸಿನ ದುಗುಡಗಳು ಗದ್ದಲದ ಸಂತೆಯಲ್ಲಿ ಇದ್ದದ್ದೆ. ಆದರೆ ಇಂದು ಅಂತಹುದೇ ರಗಳೆಯಿಂದ ಹೊರಬರುವಿರಿ. ಅತ್ಯಂತ ಆತ್ಮೀಯ ಸ್ನೇಹಿತರ ಸಹಕಾರ ದೊರೆಯುವುದು. ಇದರಿಂದ ಜೀವನದಲ್ಲಿ ಹೊಸ ಉತ್ಸಾಹ ಮೂಡುವುದು.ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದ ಎಂಬ ಮಾತಿನಂತೆ ನೀವು ದಿಢೀರನೆ ಶ್ರೀಮಂತರಾಗುವ ಎಲ್ಲಾ ಲಕ್ಷ ಣಗಳು ಕಂಡು ಬರುವವು. ಆದರೆ ನಿಮ್ಮ ವಿವೇಕವನ್ನು ಸರಿಯಾದ ದಿಕ್ಕಿನಲ್ಲಿ ಚಿಂತಿಸುವಂತೆ ಮಾಡಿ. ಒಳಿತಾಗುವುದು.9845743807
ಅದೃಷ್ಟ ಸಂಖ್ಯೆ:4

ಕಟಕ
ಗುರು ಹಿರಿಯರ ಆಶೀರ್ವಾದ ಪಡೆಯಿರಿ. 16ರ ವಯಸ್ಸು ಅದು ಹುಚ್ಚು ಕೋಡಿಯ ಮನಸ್ಸು ಎನ್ನುವಂತೆ ಯೌವ್ವನದ ಹುರುಪಿನಲ್ಲಿ ಹಲವು ತಪ್ಪ್ಪುಗಳು ನುಸುಳುವ ಸಾಧ್ಯತೆ ಇದೆ. ಹಿರಿಯರ ವಚನದಂತೆ ನಡೆದುಕೊಂಡಲ್ಲಿ ಸಮಾಜದ ಗೌರವಕ್ಕೆ ಪಾತ್ರರಾಗುವಿರಿ.ಶನಿಕಾಟದ ತೀವ್ರತರವಾದ ಬಿರುಗಾಳಿ ಇದ್ದರೂ ಗುರುಬಲ ಇರುವುದರರಿಂದ ನಿಮ್ಮ ಕೆಲಸಗಳು ಸರಾಗವಾಗಿ ಆಗುವವು. ಈಶ್ವರ ದೇವಸ್ಥಾನ ಇಲ್ಲವೆ ಶನೇಶ್ಚರ ದೇವಾಲಯಕ್ಕೆ ಎಳ್ಳೆಣ್ಣೆ ದಾನ ಮಾಡಿ.9845743807 ಅದೃಷ್ಟ ಸಂಖ್ಯೆ:6

ಸಿಂಹ
ನೀವು ಮಾಡುವ ಕೆಲಸವನ್ನು ಪರರ ಕೆಲಸಕ್ಕೆ ಹೋಲಿಸಿಕೊಂಡು ಕೀಳರಿಮೆ ಬೆಳೆಸಿಕೊಳ್ಳುವುದು ಒಳ್ಳೆಯದಲ್ಲ. ಧೈರ್ಯಶಾಲಿಗೆ ಭಗವಂತ ಸಹಾಯ ಮಾಡುತ್ತಾನೆ. ಹಾಗಾಗಿ ನೀವು ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಿ.ವ್ಯಯಸ್ಥಾನದ ಶನಿ ಆರ್ಥಿಕ ಮುಗ್ಗಟ್ಟು ಮತ್ತು ಅನಾರೋಗ್ಯ ಬಾಧೆಯನ್ನು ನೀಡುವನು. ಆದಾಗ್ಯೂ ಗುರುವಿನ ಶುಭ ಸಂಚಾರದಿಂದಾಗಿ ಹತ್ತಿಯ ಬೆಟ್ಟಕ್ಕೆ ಬೆಂಕಿಯ ಕಿಡಿ ತಗುಲಿದಂತೆ ಎಲ್ಲಾ ಕಷ್ಟಗಳು ಪರಿಹಾರವಾಗುತ್ತವೆ. 9845743807 ಅದೃಷ್ಟ ಸಂಖ್ಯೆ:4

ಕನ್ಯಾ
ಬಹು ನಿರೀಕ್ಷೆ ಇಟ್ಟುಕೊಂಡಿರುವ ನಿಮಗೆ ಆಶಾದಾಯಕ ವಾರ್ತೆ ಕೇಳಿಬರುವುದು. ನಿಮ್ಮ ಶ್ರಮಕ್ಕೆ ಸೂಕ್ತ ಪ್ರತಿಫಲ ದೊರೆಯುವುದು. ಗುರುವಿನ ಮಂತ್ರ, ವಿಷ್ಣುಸಹಸ್ರನಾಮ ಪಾರಾಯಣ ಮಾಡಿ.ನಿಮ್ಮ ದೈನಂದಿನ ವ್ಯವಹಾರಗಳಲ್ಲಿ ಲೆಕ್ಕಪತ್ರಗಳನ್ನು ಸರಿಯಾಗಿ ಇಟ್ಟುಕೊಳ್ಳಿ. ಇದೀಗ ಜನ ಸಾಮಾನ್ಯರೂ ವ್ಯವಹಾರಗಳಲ್ಲಿ ಪಾರದರ್ಶಕತೆ ಇಟ್ಟುಕೊಳ್ಳಬೇಕಾದ ಸಮಯ. ಇದರಿಂದ ಯಾವುದೇ ಅನಿಶ್ಚಿತತೆ ಇರುವುದಿಲ್ಲ.9845743807 ಅದೃಷ್ಟ ಸಂಖ್ಯೆ:8

ತುಲಾ
ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷೆಗಿಂತ ಕಡಿಮೆ ಲಾಭ ಬರುವುದು. ಈ ಬಗ್ಗೆ ಹೆಚ್ಚು ಚಿಂತಿಸುವುದು ಬೇಡ. ಒಂದು ಬೊಗಸೆ ಅವರೆ ಕಾಳನ್ನು ದಾನ ಮಾಡಿ. ಗುರು ಮಂತ್ರ ಪಠಿಸಿ.ಸಾದಾ, ಸೀದಾ ವ್ಯಕ್ತಿಯಾಗಿರುವ ನಿಮ್ಮನ್ನು ಇತರರು ಮೋಸ ಮಾಡುವ ಇಲ್ಲವೆ ಯಾಮಾರಿಸುವ ಯೋಜನೆಯಲ್ಲಿರುವರು. ಹಾಗಾಗಿ ಎಲ್ಲರೆದುರು ನಿಮ್ಮತನ ಪ್ರದರ್ಶಿಸಬೇಡಿ. ಇದರಿಂದ ತೊಂದರೆಗಳಿಗೆ ಸಿಲುಕಿಕೊಳ್ಳುವಿರಿ.9845743807 ಅದೃಷ್ಟ ಸಂಖ್ಯೆ:8

ವೃಶ್ಚಿಕ
ನಿಮ್ಮ ಕುಟುಂಬದ ಹಳೆಯ ಸ್ನೇಹಿತರ ಹೊಸ ಯೋಜನೆಗಳು ಕಾರ್ಯರೂಪಕ್ಕೆ ಬರುವವು. ಆದರೆ ಹಣಕಾಸಿನ ವಿಚಾರವನ್ನು ತೂಗಿಸಲು ಅನ್ಯರ ಬಳಿ ಸಾಲ ಮಾಡಬೇಕಾಗುವುದು. ಮಾತಿನಲ್ಲಿ ನಯ ವಿನಯ ರೂಢಿಸಿಕೊಳ್ಳಿ.ಗುರುವಿನ ಶುಭ ದೃಷ್ಟಿಯಿದೆ. ಕೈಯಲ್ಲಿ ಯಥೇಚ್ಛವಾಗಿ ಹಣ ಹರಿದಾಡುತ್ತಿದೆ ಎಂದು ಮತ್ತೆ ಹಳೆಯ ದಾರಿ ಹಿಡಿಯಬೇಡಿ. ಉತ್ತಮ ಸ್ನೇಹಿತರ ಸಹವಾಸ ಮಾಡಿ. ಕೆಟ್ಟ ಸ್ನೇಹಿತರು ನಿಮ್ಮಲ್ಲಿರುವ ಹಣ ಖರ್ಚು ಮಾಡಲು ಚಿಂತಿಸುತ್ತಿರುವರು. 9845743807 ಅದೃಷ್ಟ ಸಂಖ್ಯೆ:9

ಧನುಸ್ಸು
ಸಕಲ ಗ್ರಹಬಲ ನೀನೇ ಸರಸಿಜಾಕ್ಷ ಎನ್ನುವಂತೆ ಭಗವಂತನ ಒಲುಮೆ ಆಗುವವರೆಗೂ ಸುಮ್ಮನಿರುವುದು ಒಳ್ಳೆಯದು. ನಿಮ್ಮ ಘನತೆ, ಗೌರವವನ್ನು ರಕ್ಷಿಸಿಕೊಳ್ಳುವುದು ಅನಿವಾರ್ಯವಾಗಿದ್ದು, ಮಾತಿನಲ್ಲಿ ಸಣ್ಣತನ ತೋರಿ ಸಣ್ಣವರಾಗಬೇಡಿ. ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಹೆಸರು ಮಾಡುವಿರಿ. ನಿಮ್ಮ ವಿರೋಧಿಗಳು ಸಹ ನಿಮ್ಮ ಸ್ನೇಹ ಸಂಪಾದಿಸಲು ಹಾತೊರೆ ಯುವರು. ಈ ಹಿಂದೆ ದೂರವಾಗಿದ್ದ ಬಂಧುಗಳು ನಿಮ್ಮ ಸಖ್ಯ ಬೆಳೆಸಲು ಮುಂದೆ ಬರುವರು.9845743807 ಅದೃಷ್ಟ ಸಂಖ್ಯೆ:6

ಮಕರ
ದಿಢೀರ್ ಶ್ರೀಮಂತರಾಗಬೇಕೆಂಬ ಯೋಜನೆಗಳನ್ನು ಕೈಬಿಡಿ. ಇದೇ ತೆರನಾದ ಯೋಜನೆಗಳಿಂದ ಈಗಾಗಲೇ ಸಾಕಷ್ಟು ಹಣ ಕಳೆದುಕೊಂಡಿರುವಿರಿ. ನಿಮ್ಮ ಇತಿಮಿತಿಗಳನ್ನು ಅರಿತು ನಡೆಯುವುದು ಒಳ್ಳೆಯದು. ಹಣವನ್ನು ನೀರಿನಂತೆ ಖರ್ಚು ಮಾಡದಿರಿ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಹಳೆಯ ಆದರ್ಶಗಳು ನಿಜಜೀವನಕ್ಕೆ ಉಪಯೋಗಕ್ಕೆ ಬರುವುದಿಲ್ಲ. ಕಾಲಕ್ಕೆ ತಕ್ಕಂತೆ ಕೊಡೆ ಹಿಡಿಯಬೇಕು ಎಂಬಂತೆ ವ್ಯಾಪಾರ ವ್ಯವಹಾರದಲ್ಲಿ ಕೆಲವೊಮ್ಮೆ ಮೋಸ ಮಾಡುವ ಪ್ರಸಂಗಗಳು ಎದುರಾಗುತ್ತವೆ. 9845743807 ಅದೃಷ್ಟ ಸಂಖ್ಯೆ:4

ಕುಂಭ
ಪಾಲುಗಾರಿಕೆ ವ್ಯವಹಾರದಲ್ಲಿ ಭಿನ್ನಾಭಿಪ್ರಾಯಗಳು ಎದುರಾಗುವವು. ಇದರಿಂದ ವ್ಯವಹಾರದಲ್ಲಿ ನಷ್ಟ ಉಂಟಾಗುವುದು. ನಿಮಗೆ ಒಪ್ಪಿಗೆ ಇಲ್ಲದಿದ್ದಲ್ಲಿ ಪಾಲುಗಾರಿಕೆ ವ್ಯವಹಾರದಿಂದ ಹೊರಬನ್ನಿ. ವಿವಿಧ ರೀತಿಯ ಕೆಲಸಗಳು ನಿಮ್ಮ ಯೋಜನಾ ಸ್ವರೂಪದಲ್ಲಿ ಸೂಕ್ತ ಎನಿಸುವವು. ಗುರು ಲಾಭ ಸ್ಥಾನದಲ್ಲಿ ಸಂಚರಿಸುವ ಮೂಲಕ ಹೇರಳ ಧನಾಗಮನವನ್ನೇ ನೀಡುವನು. ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ. 9845743807 ಅದೃಷ್ಟ ಸಂಖ್ಯೆ:2

ಮೀನ
ಮನೆಯಲ್ಲಿ ಶಾಂತಿ ನೆಲೆಸುವುದು. ಕಚೇರಿಯ ಕೆಲಸದಲ್ಲಿ ಮೇಲಧಿಕಾರಿಗಳು ನಿಮ್ಮ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವರು. ಹಣಕಾಸಿನ ನೆರವು ದೊರೆಯುವುದು. ಸಿನಿಮಾ ಹಂಚಿಕೆದಾರರು, ನಿರ್ಮಾಪಕರು, ಫೈನಾನ್ಸಿಯರ್‌ಗಳು ಸೂಕ್ತ ದಾಖಲಾತಿಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದು. ಯಾರೋ ಮಾಡಿದ ತಪ್ಪಿಗೆ ಮತ್ತ್ಯಾರೋ ಶಿಕ್ಷೆಯನ್ನು ಅನುಭವಿಸುವಂತೆ ಆಗುತ್ತದೆ. ವ್ಯವಹಾರ ಪಾರದರ್ಶಕವಾಗಿರಲಿ.9845743807 ಅದೃಷ್ಟ ಸಂಖ್ಯೆ:1

ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು 9845743807
ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸ ಬಹುದು. ಮದುವೆ,ಸಂತಾನಕೊರತೆ ,ಶತ್ರಕಾಟ, ಕುಜದೋಷ ಪರಿಣಾಮ, ಮಕ್ಕಳು ತೊಂದರೆ,ಸ್ತ್ರೀಪುರುಷ ಪ್ರೇಮವಿಚಾರ, ವಿದೇಶಿಯೋಗ,ಅನಾರೋಗ್ಯ, ಮನೆಕಟ್ಟುವಯೋಗ,ರಾಜಕೀಯದ ಭವಿಷ್ಯ, ಸ್ಥಾನಮಾನ ತೊಂದರೆ, ಕುಟುಂಬದಲ್ಲಿದ್ದ ಸಮಸ್ಯೆ,ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp



Click it and Unblock the Notifications











