Latest Updates
-
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್ನಂತೆ ಕುಡಿಯಬಹುದು! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಗ್ಯಾಸ್ ಹಚ್ಚೋದೆ ಬೇಡ; ಸುಲಭವಾಗಿ ಮಾಡಿ ಈ ಅದ್ಭುತ ರುಚಿಯ ಸ್ವೀಟ್! -
ಕೆಲಸ ಮಾಡಲು ದೇಹಕ್ಕೆ ಬಲಬೇಕಾದರೆ ಈ ಹೆಸರುಕಾಳಿನ ಸೂಪರ್ಫುಡ್ ತಿನ್ನಿ! ವಾರಕ್ಕೊಂದು ಉಂಡೆ ಸಾಕು! -
ಅರ್ಧದಷ್ಟು ಭಾರತೀಯರಲ್ಲಿ 6 ಗಂಟೆಗೂ ಕಡಿಮೆ ನಿದ್ರೆ: ಸಮೀಕ್ಷೆಯಲ್ಲಿದೆ ಆತಂಕಕಾರಿ ವಿಚಾರ! -
ವಿವಾಹ ಯೋಗ ಕೂಡುವ ಸಾಧ್ಯತೆ ಇದೆ! ಸಂಗಾತಿಗೆ ಗಿಫ್ಸ್ ನೀಡಬಹುದು -
ಮಹಿಳೆಯರು ಕಾಲುಂಗುರ ಏಕೆ ಧರಿಸಬೇಕು? ಎಷ್ಟು ಸುತ್ತು ನಿಮ್ಗೆ ಯಶಸ್ಸು ತರುತ್ತೆ? ರಹಸ್ಯ ತಿಳಿಯಿರಿ -
March 14 Horoscope: ಪ್ರಯಾಣಗಳ ಮಾಡುವ ದಿನವಾಗಲಿದೆ! -
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್
22-4-2019- ಸೋಮವಾರದ ದಿನ ಭವಿಷ್ಯ
ಸೋಮವಾರದ ದಿನ ಶಿವನಿಗೆ ಲಯಕಾರಕ ಎಂದೂ ಸಹ ಕರೆಯುತ್ತಾರೆ. ಅಂದರೆ ಸೃಷ್ಟಿಮಾಡುವುದು ಬ್ರಹ್ಮನ ಕೆಲಸವಾದರೆ, ಆ ಸೃಷ್ಟಿಯಾದ ಆಕರಗಳಿಗೆ (ಜೀವಿಗಳಿಗೆ) ಸ್ಥಿತಿ ಕೊಡುವುದು ವಿಷ್ಣುವಿನ ಕೆಲಸ. ಈ ರೀತಿ ಸೃಷ್ಟಿ, ಸ್ಥಿತಿ ಪಡೆದ ಆಕರಗಳಿಗೆ ಲಯ (ಕೊನೆ) ಕಾಣಿಸುವವನು ಶಿವ. ಆದ್ದರಿಂದ ಶಿವನಿಗೆ ಲಯಕಾರ ಎಂದೂ ಸಹ ಕರೆಯುತ್ತಾರೆ. ಸಂಹಾರಕ ಅಥವಾ ಲಯಕಾರಕ ದೇವತೆ : ಶಿವ ಅಥವಾ ರುದ್ರ.ಶಿವ, ಈಶ್ವರ, ಶಂಭು, ಶಂಕರ, ಪಶುಪತಿ, ಮುಕ್ಕಣ್ಣ, ಶಶಿಧರ, ಚಂದ್ರಶೇಖರ, ನೀಲಕಂಠ, ನಂಜುಂಡ, ಮಹದೇಶ್ವರ, ಮಹೇಶ್ವರ, ನಾಗರಾಜ, ನಾಗೇಶ, ಕೈಲಾಸ ಪತಿ ಎನ್ನುವ ವಿಶೇಷಣವನ್ನು ಬಳಸಲಾಗಿದೆ. ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ.ಪಂಡಿತ್ ಮಂಜುನಾಥ್ ದೈವಜ್ಞ ಜ್ಯೋತಿಷ್ಯರು 9845743807

ಮೇಷ(22 ಏಪ್ರಿಲ್ 2019)
ಮಕ್ಕಳ ತುಂಟತನ ವಿಪರೀತವಾಗುವುದು. ಮನೆಯಲ್ಲಿರುವುದು ಕಷ್ಟ ಎನಿಸಬಹುದು. ಸಂಜೆ ಪ್ರಶಾಂತ ವಾತಾವರಣದಲ್ಲಿ ಕೆಲಕಾಲ ಏಕಾಂತವಾಗಿ ಕಳೆಯಿರಿ. ಮನಸ್ಸು ಪ್ರಫುಲ್ಲವಾಗುವುದು. ಉದ್ಯೋಗವನ್ನು ಉಳಿಸಿಕೊಳ್ಳುವ ಸಲುವಾಗಿ ಅನೇಕ ರೀತಿಯ ಕಸರತ್ತುಗಳನ್ನು ನಡೆಸುವಿರಿ. ಇದರಿಂದ ಕೊಂಚಮಟ್ಟಿನ ಪ್ರಯೋಜನ ಕಂಡುಬರುವುದು. ಇನ್ನು ಸ್ವಲ್ಪ ಕಾಲ ಇದ್ದ ಸ್ಥಳದಲ್ಲಿಯೇ ಕೆಲಸವನ್ನು ಮುಂದುವರೆಸುವಿರಿ.9845743807 ಅದೃಷ್ಟ ಸಂಖ್ಯೆ:2

ವೃಷಭ
ನಿಮ್ಮದೇ ಆದ ಯೋಜನೆಗಳಿಗೆ ಅರ್ಥಪೂರ್ಣ ಸಿದ್ಧಿ ಇದೆಯಾದರೂ ಹಿರಿಯರ ಸಲಹೆಗಳನ್ನುಪಾಲಿಸಿದಲ್ಲಿ ಇನ್ನೂ ಹೆಚ್ಚಿನ ಪ್ರಯೋಜನ ಪಡೆಯುವಿರಿ. ಎಲ್ಲರಿಗೂ ಒಳ್ಳೆಯ ವರಾಗುವುದು ಅಷ್ಟು ಸುಲಭವಲ್ಲ.ನಿಮ್ಮ ಅನುಭವದ ಹಿನ್ನೆಲೆಯಲ್ಲಿ ಬಂದ ಜನರಿಗೆ ಸಾಂತ್ವನ ನೀಡುತ್ತಾ ಬಂದಿರುವ ನೀವು ನಿಮ್ಮನ್ನು ಪುನರ್ರೂಪಿಸಿಕೊಳ್ಳುತ್ತ ಬರುವಿರಿ. ಇದರಿಂದ ನಿಮ್ಮ ಗೌರವ ಘನತೆ ಸಮಾಜದಲ್ಲಿ ಹೆಚ್ಚಾಗುವುದು. 9845743807 ಅದೃಷ್ಟ ಸಂಖ್ಯೆ:1

ಮಿಥುನ
ವ್ಯಕ್ತಿಯ ಪೂರ್ವಾಪರ ವಿಚಾರ ತಿಳಿದುಕೊಳ್ಳದೆ ಹಣಕಾಸಿನ ಸಹಾಯ ಮಾಡದಿರಿ. ಕೊಟ್ಟ ಹಣ ನಿಮಗೆ ವಾಪಸ್ಸು ಬರದೇ ಹೋಗುವ ಸಾಧ್ಯತೆ ಇದೆ. ಯಾವುದಕ್ಕೂ ಸಂಗಾತಿಯ ಸಲಹೆಯನ್ನು ಈ ವಿಷಯದಲ್ಲಿ ಕೇಳಿ. ತೀರ ಸನಿಹದಲ್ಲೇ ಇದ್ದ ಯಶಸ್ಸು ದೂರಕ್ಕೆ ಹೋಗುತ್ತಿದೆ ಎಂದು ಅನಿಸುತ್ತದೆ. ಮನೆಯ ಹಿರಿಯರ ಸಲಹೆ ಸೂಚನೆಯಂತೆ ಮುನ್ನಡೆಯಿರಿ. ಇದರಿಂದ ಅನುಕೂಲವಾಗುವುದು. ಆಂಜನೇಯ ಸ್ಮರಣೆ ಮಾಡಿ.9845743807 ಅದೃಷ್ಟ ಸಂಖ್ಯೆ:2

ಕಟಕ
ಕನಸಿನಲ್ಲಿ ಕಂಡ ವಿಚಾರಗಳಿಗೂ ಈ ದಿನ ನಡೆಯುವ ವಿಚಾರಗಳಿಗೂ ತಾಳೆ ಆಗುತ್ತಿರುವುದು ನಿಮಗೆ ಸೋಜಿಗವನ್ನುಂಟು ಮಾಡುವುದು. ಕೆಲವು ಸಂದರ್ಭದಲ್ಲಿ ಮುಂದಾಗುವ ವಿಚಾರಗಳನ್ನು ಭಗವಂತನು ಕನಸಿನ ರೂಪದಲ್ಲಿ ತೋರುವನು. ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆ ಆಗಬೇಕೆಂಬ ದಿಶೆಯಲ್ಲಿ ನೀವು ಹಲವು ಷೇರು ವ್ಯವಹಾರಗಳಲ್ಲಿ ಹಣ ಹೂಡುವಿರಿ. ನಿಮ್ಮ ದೂರದೃಷ್ಟಿಯಂತೆ ಖರೀದಿಸಿದ ಷೇರುಗಳ ಮೌಲ್ಯ ಹೆಚ್ಚಾಗುವ ಸಂಭವವಿದೆ.9845743807 ಅದೃಷ್ಟ ಸಂಖ್ಯೆ:4

ಸಿಂಹ
ನಿಮ್ಮ ಮುಂಗೋಪದಿಂದ ನಿಮ್ಮ ಸಂಗಾತಿ ಜತೆ ಘರ್ಷಣೆ ಉಂಟಾಗುವುದು. ತದನಂತರ ಅದು ಮನಃಸ್ತಾಪಕ್ಕೆ ತಿರುಗುವುದು. ಸಿಟ್ಟು ಮನುಜನ ಮೊದಲ ಶತ್ರು. ಅದರಿಂದ ಅನೇಕ ಅನಾಹುತ ಗಳು ಆಗದಂತೆ ಎಚ್ಚರ ವಹಿಸಿ.ಯಾರು ಹಿತವರು ಈ ಮೂವರೊಳಗೆ ಎಂಬ ಮಾತಿನ ಆಂತರ್ಯ ತಿಳಿಯಲು ಬಹಳ ಪ್ರಯತ್ನ ಪಡುವಿರಿ. ಆದರೆ ಯಾವುದೇ ದೃಢ ನಿರ್ಧಾರ ತಳೆಯುವಲ್ಲಿ ವಿಫಲರಾಗುವಿರಿ. ಮೂವರು ಗಣ್ಯವ್ಯಕ್ತಿಗಳ ಸಂಘರ್ಷ ನಿಮ್ಮನ್ನು ಚಿಂತೆಗೆ ಈಡು ಮಾಡುವುದು. 9845743807 ಅದೃಷ್ಟ ಸಂಖ್ಯೆ:6

ಕನ್ಯಾ
ಇಬ್ಬರ ಜಗಳ ಮೂರನೆಯವರಿಗೆ ಲಾಭ ಎನ್ನುವಂತೆ ನಿಮ್ಮ ಕಚೇರಿಯಲ್ಲಿನ ದಿಗ್ಗಜರ ಭಿನ್ನಾಭಿಪ್ರಾಯ ನಿಮಗೆ ವರವಾಗಿ ಪರಿಣಮಿಸುವುದು. ಇದರಿಂದ ನಿಮ್ಮ ಕಾರ್ಯ ಸುಲಲಿತ ವಾಗುವುದು. ಸಿಟ್ಟಿನ ಭರದಲ್ಲಿ ಮೂಗು ಕೊಯ್ದುಕೊಂಡರೆ ಪುನಃ ಜೋಡಿಸಲು ಆಗುವುದಿಲ್ಲ. ಕೆಲಸ ಕಾರ್ಯಗಳು ನಿಮ್ಮಂತೆ ಆಗುತ್ತಿಲ್ಲ ಎಂದು ದುಡುಕಿ ಪರರನ್ನು ನೋಯಿಸದಿರಿ. ಆದಷ್ಟು ತಾಳ್ಮೆ ಇರಲಿ. ತಾಳಿದವನು ಬಾಳಿಯಾನು ಎಂಬ ಸೂತ್ರಕ್ಕೆ ಶರಣಾಗಿ.9845743807 ಅದೃಷ್ಟ ಸಂಖ್ಯೆ:4

ತುಲಾ
ಕೆಲವರಿಗೆ ವೃತ್ತಿಯಲ್ಲಿ ಬದಲಾವಣೆ ದೊರೆಯುವುದು. ಕೆಲವರಿಗೆ ತಮ್ಮ ಕಚೇರಿಯಲ್ಲಿನ ಉಸಿರುಗಟ್ಟುವ ವಾತಾವರಣದಿಂದ ಕೆಲಸಕ್ಕೆ ರಾಜೀನಾಮೆ ನೀಡುವಂತಹ ಸಂದರ್ಭ ಬರುವುದು. ಯಾವುದಕ್ಕೂ ಎರಡು ಬಾರಿ ಚಿಂತಿಸಿ ಕಾರ್ಯ ಪ್ರವೃತ್ತರಾಗಿ.ನಿಮ್ಮಯೋಜನೆಗಳು ಯಾವಾಗಲೂ ವಿಶೇಷತೆಯಿಂದಲೇ ಕೂಡಿರುತ್ತವೆ. ಹಾಗಾಗಿ ನೀವು ಬೇರೆಯವರಿಗಿಂತ ಬೇಗನೆ ಜಯಶಾಲಿ ಆಗುವಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. 9845743807 ಅದೃಷ್ಟ ಸಂಖ್ಯೆ:6

ವೃಶ್ಚಿಕ
ಗೊತ್ತಿದ್ದು ಗೊತ್ತಿದ್ದೂ ಅಯೋಗ್ಯರ ಸಂಗಡ ನಿಮ್ಮ ಮುಂದಿನ ಕಾರ್ಯ ರೂಪುರೇಷೆಗಳ ವಿಚಾರ ಪ್ರಸ್ತಾಪಿಸದಿರಿ. ಇದರಿಂದ ನಿಮಗೆ ಮುಂದೊಂದು ದಿನ ತೊಂದರೆಯಾಗುವುದು. ಕೆಲಕಾಲ ನಿಮ್ಮ ಮನಸ್ಸಿನ ಆಲೋಚನೆಗಳನ್ನು ಹೊರಗೆಡಹದಿರಿ.ದೂರದ ಸಂಬಂಧಿಗಳಾಗಲಿ, ಹಳೆಯ ಸ್ನೇಹಿತರಾಗಲಿ ನಿಮ್ಮನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಅವರಿಗೆ ಅಗತ್ಯವಾದ ಸಲಹೆ ಸಹಕಾರ ನೀಡಿ ಸಂತೋಷ ಪಡಿಸುವಿರಿ.9845743807 ಅದೃಷ್ಟ ಸಂಖ್ಯೆ:2

ಧನುಸ್ಸು
ಯಾರನ್ನೂ ದಿಢೀರನೆ ನಂಬಬೇಡಿ. ಅಂತೆಯೇ ನಿಮ್ಮ ಕಾರ್ಯ ಯೋಜನೆಗೆ ಸಹಾಯವಾಗುವ ವಿಷಯವನ್ನು ಖಂಡಿತವಾಗಿ ಪರಿಶೀಲಿಸಿ. ಮನೆಯ ಸದಸ್ಯರೊಡನೆ ಮತ್ತು ನೆರೆಹೊರೆ ಜನರೊಂದಿಗೆ ಉತ್ತಮ ಬಾಂಧವ್ಯ ಇರಿಸಿಕೊಳ್ಳುವುದು ಕ್ಷೇಮ.ಕಾರ್ಯಾರಂಭದ ಮುನ್ನವೇ ನಾನು ಸೋಲಬಹುದು ಎಂಬ ಭಯವನ್ನು ನೀವು ಬಿಡುವುದು ಒಳ್ಳೆಯದು. ಭಗವಂತನ ನಾಮಸ್ಮರಣೆಯೊಂದಿಗೆ ಕಾರ್ಯ ಆರಂಭಿಸಿ. ನಿಮ್ಮ ಸದಿಚ್ಛೆಯಂತೆ ಭಗವಂತ ಕರುಣೆ ತೋರುವರು.9845743807 ಅದೃಷ್ಟ ಸಂಖ್ಯೆ:6

ಮಕರ
ಎಲ್ಲಾ ಕಾರ್ಯ ಕಲಾಪಗಳಲ್ಲಿ ಸೋಲು ಕಾಣುತ್ತಿರುವ ಈ ಸಂದರ್ಭದಲ್ಲಿ ಸಕಲ ನಿರ್ವಿಘ್ನದಾಯಕನಾದ ಚೇತೋಹಾರಿ ಮಹಾಗಣಪನನ್ನು ಆರಾಧಿಸಿ. ಆತನ ಕೃಪೆಯಿಂದ ನಿಮ್ಮ ಕಾರ್ಯಗಳು ಕೈಗೂಡುವವು.ಭಗವಂತನ ಆಟ ಬಲ್ಲವರಾರು. ಒಮ್ಮೆ ಸಂತೋಷ ಕೊಡುವನು ಮತ್ತೊಮ್ಮೆ ದುಃಖವನ್ನುಂಟು ಮಾಡುವನು. ಅಂತೆಯೇ ನಿಮ್ಮನ್ನು ಗೌರವಿಸುವ ಅಭಿಮಾನಿಗಳ ಪ್ರಶಂಸೆಯು ನಿಮ್ಮನ್ನು ಹುರಿದುಂಬಿಸುವುದು. ಮುಂದಿನ ಕಾರ್ಯಗಳಿಗೆ ನಾಂದಿ ಆಗುವುದು.9845743807 ಅದೃಷ್ಟ ಸಂಖ್ಯೆ:4

ಕುಂಭ
ನಿಮ್ಮನ್ನು ಎದುರಿಗೆ ಹಾಡಿ ಹೊಗಳುವವರೇ ನಿಮ್ಮನ್ನು ಮಟ್ಟಹಾಕಲು ಒಳಸಂಚು ರೂಪಿಸುವರು. ದುಷ್ಮನ್ ಕಹಾ ಹೇ ಅಂತ ನೋಡಿದರೆ ಬಗಲ್ ಮೆ ಹೇ ಎನ್ನುವಂತಹ ಸ್ಥಿತಿ ನಿರ್ಮಾಣವಾಗುವುದು. ಯಾವುದಕ್ಕೂ ಸನ್ನದ್ಧರಾಗಿ. ಬಹುದಿನಗಳ ಕನಸು ಭಾವನಾತ್ಮಕ ಸಂಬಂಧದಿಂದ ನನಸಾಗುವುದು. ಅನಿರೀಕ್ಷಿತವಾಗಿ ಹೊಸ ಆಲೋಚನೆ ನಿಮ್ಮನ್ನು ಹೊಸ ಕಾರ್ಯಕ್ಕೆ ಪ್ರೇರೇಪಿಸುವುದು. ಹಣಕಾಸು ಕೂಡಾ ಸೂಕ್ತ ಸಮಯದಲ್ಲಿ ದೊರೆಯುವುದು.9845743807 ಅದೃಷ್ಟ ಸಂಖ್ಯೆ:2

ಮೀನ
ಗಾಳಿಗೆ ಗುದ್ದಿ ಮೈ ನೋಯಿಸಿಕೊಂಡ ಹಾಗೆ ಇಂದಿನ ಪರಿಸ್ಥಿತಿ. ನಿಮ್ಮ ಅನುಭವದ ಹಿನ್ನೆಲೆಯಲ್ಲಿ ನೀವು ಪರರಿಗೆ ಉಪಕಾರ ಆಗಲಿ ಎಂದು ಬುದ್ಧಿಮಾತು ಹೇಳಿದರೆ ಅದು ವ್ಯರ್ಥವಾಗುವುದು. ವ್ಯರ್ಥವಾಗುವ ಇಂತಹ ಕಾರ್ಯಗಳಿಗೆ ಕೈ ಹಾಕಬೇಡಿ. ಅನಿರೀಕ್ಷಿತ ಬೆಳವಣಿಗೆಯೊಂದು ನಿಮ್ಮ ದಿನದ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸುವ ಸಾಧ್ಯತೆ ಇದೆ. ಸಾಧ್ಯವಾದರೆ ವಿಷ್ಣುವಿನ ಸ್ತೋತ್ರ ಪಠಿಸಿ. ತಾಳ್ಮೆಯಿಂದ ಪರಿಸ್ಥಿತಿ ಎದುರಿಸಿ.9845743807 ಅದೃಷ್ಟ ಸಂಖ್ಯೆ:1

ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು
ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು 9845743807 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು.ಮದುವೆ,ಸಂತಾನಕೊರತೆ,ಶತ್ರುಕಾಟ,ಕುಜದೋಷಪರಿಣಾಮ,ಮಕ್ಕಳು ತೊಂದರೆ, ಸ್ತ್ರೀಪುರುಷ ಪ್ರೇಮವಿಚಾರ, ವಿದೇಶಿಯೋಗ, ಅನಾರೋಗ್ಯ, ಮನೆಕಟ್ಟುವ ಯೋಗ, ರಾಜಕೀಯದ ಭವಿಷ್ಯ, ಸ್ಥಾನಮಾನತೊಂದರೆ, ಕುಟುಂಬದಲ್ಲಿದ್ದಸಮಸ್ಯೆ,ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp



Click it and Unblock the Notifications











