Latest Updates
-
March 15 Horoscope: ಹಣಕಾಸು ಕುರಿತಾದ ವಿಚಾರವಾಗಿ ನಿಮ್ಮಲ್ಲಿ ಚಿಂತೆ ಇದೆ -
ಲವ್ನಲ್ಲಿ ಇರುವವರಿಗೆ ಶುಭ ಸುದ್ದಿ ಸಿಗುತ್ತೆ! ದೀರ್ಘಕಾಲದ ಸಮಸ್ಯೆ ಬಗೆಹರಿಯುತ್ತೆ -
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್ನಂತೆ ಕುಡಿಯಬಹುದು! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಗ್ಯಾಸ್ ಹಚ್ಚೋದೆ ಬೇಡ; ಸುಲಭವಾಗಿ ಮಾಡಿ ಈ ಅದ್ಭುತ ರುಚಿಯ ಸ್ವೀಟ್! -
ಕೆಲಸ ಮಾಡಲು ದೇಹಕ್ಕೆ ಬಲಬೇಕಾದರೆ ಈ ಹೆಸರುಕಾಳಿನ ಸೂಪರ್ಫುಡ್ ತಿನ್ನಿ! ವಾರಕ್ಕೊಂದು ಉಂಡೆ ಸಾಕು! -
ಅರ್ಧದಷ್ಟು ಭಾರತೀಯರಲ್ಲಿ 6 ಗಂಟೆಗೂ ಕಡಿಮೆ ನಿದ್ರೆ: ಸಮೀಕ್ಷೆಯಲ್ಲಿದೆ ಆತಂಕಕಾರಿ ವಿಚಾರ! -
ವಿವಾಹ ಯೋಗ ಕೂಡುವ ಸಾಧ್ಯತೆ ಇದೆ! ಸಂಗಾತಿಗೆ ಗಿಫ್ಸ್ ನೀಡಬಹುದು -
ಮಹಿಳೆಯರು ಕಾಲುಂಗುರ ಏಕೆ ಧರಿಸಬೇಕು? ಎಷ್ಟು ಸುತ್ತು ನಿಮ್ಗೆ ಯಶಸ್ಸು ತರುತ್ತೆ? ರಹಸ್ಯ ತಿಳಿಯಿರಿ
17-4-2019- ಬುಧವಾರದ ದಿನ ಭವಿಷ್ಯ
ಪ್ರತಿಯೊಬ್ಬರೂ ತಮ್ಮ ಭವಿಷ್ಯ ಉಜ್ವಲವಾಗಿರಬೇಕು. ಸದಾ ಖುಷಿಯಿಂದ ಕೂಡಿರಲಿ. ಯಾವುದೇ ಕಷ್ಟ ನಷ್ಟಗಳು ಉಂಟಾಗದಿರಲಿ ಎಂದು ಬಯಸುತ್ತಾರೆ. ಆದರೆ ಜಾತಕದಲ್ಲಿರುವ ಗ್ರಹಗತಿಗಳು ನಮ್ಮ ಭವಿಷ್ಯದಲ್ಲಿ ಸುಖ ಸಂತೋಷ ಎನ್ನುವ ಏರಿಳಿತವನ್ನು ನಿರಂತರವಾಗಿ ಮಾಡುತ್ತಲೇ ಇರುತ್ತದೆ. ಕೆಲವು ದೆಸೆ ಹಾಗೂ ಗ್ರಹಚಾರದ ಪ್ರಭಾವದಿಂದ ಕಡಿಮೆ ಪ್ರಮಾಣದ ಕಷ್ಟಗಳು ಹಾಗೂ ದೀರ್ಘ ಸಮಯದ ಸಂತೋಷಗಳು ಲಭಿಸುವವು.
ಭವಿಷ್ಯ ಹೇಗೇ ಇದ್ದರೂ ನಾವು ಮೊದಲು ಭಗವಂತನ ಆರಾಧನೆ ಮಾಡಬೇಕು. ಆತನ ಪ್ರೀತಿಗೆ ಪಾತ್ರರಾಗಬೇಕು. ಆಗಲೇ ನಮ್ಮ ಜೀವನ ಸಾರ್ಥಕ ಹಾಗೂ ಸಂತೋಷದಿಂದ ಕೂಡಿರುತ್ತದೆ. ಬುಧವಾರವಾದ ಇಂದು ನಿಮ್ಮ ಭವಿಷ್ಯ ಹೇಗಿದೆ? ದಿನವಿಡೀ ಯಾವೆಲ್ಲಾ ಸಮಸ್ಯೆಗಳನ್ನು ಅನುಭವಿಸಬೇಕಾಗುವುದು ಎನ್ನುವದನ್ನು ನೀವು ತಿಳಿದುಕೊಳ್ಳಬೇಕು ಎನ್ನುವ ಬಯಕೆಯಲ್ಲಿದ್ದರೆ ಮುಂದಿರುವ ರಾಶಿ ಭವಿಷ್ಯವನ್ನು ಅರಿಯಿರಿ.

ಮೇಷ ( 17 ಏಪ್ರಿಲ್ 2019)
ಎಲ್ಲ ರೀತಿಯಲ್ಲೂ ಎಚ್ಚರಿಕೆ ಇರಲಿ. ಹಣದ ವಿಚಾರದಲ್ಲಿ ವಹಿಸಬೇಕಾದ ಮುತುವರ್ಜಿಯ ಬಗ್ಗೆ ವಿಶೇಷ ಸಲಹೆ ಸೂಚನೆಗಳನ್ನು ಅನ್ಯರಿಂದ ಪಡೆಯಬೇಕಾಗಿಲ್ಲ. ಸ್ವಯಂ ಪೂರ್ಣವಾದ ಪ್ರತಿಭೆ ನಿಮಗೇ ಇರುವುದರಿಂದ ಅದೃಷ್ಟ ನಿಮ್ಮ ಹಿಂದೆ ಇರುತ್ತದೆ.ಸರ್ಕಾರಿ ಕೆಲಸಗಾರರು ತೊಂದರೆದಾಯಕ ವರ್ಗಾವಣೆಗೆ ಸಜ್ಜಾಗಬೇಕಾಗಿದೆ. ನೀವು ಬಯಸಿದ ಕೆಲಸದಲ್ಲಿ ನೌಕರಿ ಮಾಡಬೇಕೆಂದಿದ್ದರೆ ಗುರುವಿನ ಮೊರೆ ಹೋಗುವುದು ಒಳ್ಳೆಯದು. ಶ್ರೀರಾಮರಕ್ಷಾ ಸ್ತೋತ್ರ ಪಠಿಸಿ.9845743807 ಅದೃಷ್ಟ ಸಂಖ್ಯೆ:2

ವೃಷಭ
ವಾಕ್ ಸ್ಥಾನದ ರಾಹು ನಿಮ್ಮ ಮಾತಿನ ವೈಖರಿಯಲ್ಲಿ ಬದಲಾವಣೆ ಯನ್ನುಂಟು ಮಾಡುವನು. ಬಾಯಿ ತಪ್ಪಿ ಆಡಿದ ಮಾತಿಗೆ ಕ್ಷ ಮೆ ಯಾಚಿಸುವುದರಲ್ಲಿ ತಪ್ಪಿಲ್ಲ. ಇಲ್ಲವಾದರೆ ಅನಗತ್ಯ ಟೀಕೆಗಳಿಗೆ ಗುರಿ ಆಗುವಿರಿ.ಬಾಕಿ ಇರುವ ಹಣ ನಿಮಗೆ ಸಂದಾಯ ವಾಗುವುದು. ಮನೆಯಲ್ಲಿ ಬೇಡದ ವಸ್ತುಗಳನ್ನು ಗುಜರಿಗೆ ಹಾಕಿ. ಸ್ವಚ್ಛತಾ ಆಂದೋಲನವನ್ನು ಮನೆಯಿಂದಲೇ ಆರಂಭಿಸಿ. ಸ್ವಚ್ಛತೆಯಲ್ಲಿ ಭಗವಂತ ನೆಲೆಸಿರುತ್ತಾನೆ. 9845743807 ಅದೃಷ್ಟ ಸಂಖ್ಯೆ:8

ಮಿಥುನ
ಅರಣ್ಯದೊಳಗೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೊಡೆ ಎಂತಯ್ಯಾ ಎಂಬ ಮಾತಿದೆ. ಸುಮ್ಮನೆ ಬರುವ ಟೀಕೆಗೆ ಹೆದರಬೇಡಿ. ನಿಮ್ಮ ವಿರುದ್ಧ ಮಾಡುತ್ತಿದ್ದ ಟೀಕಾಕಾರರಾನೇಕರು ನಿಮ್ಮ ಸಂಸಾರದ ಆಗುಹೋಗುಗಳ ಜವಾಬ್ದಾರಿ ತೆಗೆದುಕೊಳ್ಳವುದಿಲ್ಲ. ಬಯಸಿದ ಮಾರ್ಗವನ್ನು ಪಡೆಯುವ, ಅದೇ ಮಾರ್ಗದಲ್ಲಿ ಸಂಚರಿಸಿ ಯಶಸ್ಸನ್ನು ಸಂಪಾದಿಸುವ ವಿಶೇಷ ಶಕ್ತಿಯನ್ನು ಸಂಪಾದಿಸುತ್ತೀರಿ. ಎಲ್ಲಾ ರೀತಿಯ ಸರಳ ಪ್ರಯತ್ನಗಳೇ ಯಶಸ್ಸು ತರುತ್ತದೆ. ನಿಮ್ಮ ಉತ್ತಮವಾದ ಪ್ರಯತ್ನಗಳು ನಿರೀಕ್ಷಿತ ಯಶಸ್ಸು ತರುವವು.9845743807 ಅದೃಷ್ಟ ಸಂಖ್ಯೆ:6

ಕಟಕ
ನೀವು ಕೈಗೊಳ್ಳುವ ಕೆಲಸ ವಿಚಾರದಲ್ಲಿ ಪೂರ್ವ ತಯಾರಿಗಳ ಬಗ್ಗೆ ಹೆಚ್ಚಿನ ಎಚ್ಚರ ಇರಲಿ. ಉತ್ತಮ ದಿನಗಳು ಬರುತ್ತವೆ ಅಲ್ಲಿವರೆಗೂ ನಿರಾಳವಾಗಿರೋಣ ಎಂದು ಉದಾಸೀನ ಮಾಡಬೇಡಿ. ನಿಶ್ಚಿತ ವಾದುದರ ಬಗೆಗಿನ ತಯಾರಿಗೆ ವಿಳಂಬ ಬೇಡ.ದಣಿವರಿಯದೆ ಮುನ್ನುಗ್ಗುವ ಇಚ್ಛಾಶಕ್ತಿ ಬೆಳೆಸಿಕೊಳ್ಳಿ. ನಿಮ್ಮ ತಾಕಲಾಟದ ದಾರಿಯು ಅವಿರತ ಯಶಸ್ಸಿಗೆ ಹಿನ್ನಡೆ ತರುವುದು. ಆದರೆ ವಿಘ್ನ ವಿನಾಶಕ ಗಣಪತಿ ನಿಮ್ಮ ದಾರಿಯಲ್ಲಿನ ವಿಘ್ನಗಳನ್ನು ನಿವಾರಿಸಿ ಸುರಳವಾದ ಗುರಿಯನ್ನು ಮುಟ್ಟಿಸುವನು.9845743807 ಅದೃಷ್ಟ ಸಂಖ್ಯೆ:3

ಸಿಂಹ
ನಿಮ್ಮ ಏಳಿಗೆಯನ್ನು ಸಹಿಸಲಾರದ ನಿಮ್ಮ ಹತ್ತಿರದ ಗುಂಪೊಂದು ನಿಮ್ಮನ್ನು ತೀವ್ರವಾಗಿ ಬಾಧಿಸುತ್ತಿದೆ. ಜನ್ಮಶನಿ ಕೆಲಸದಲ್ಲಿ ವಿಳಂಬ ಮಾಡುತ್ತಿರುವರು. ಶನಿ ದೇವಾಲಯದಲ್ಲಿ ಎಳ್ಳುದೀಪ ಹಚ್ಚಿ. ನಿಮ್ಮ ತಾಳ್ಮೆಯನ್ನು ಕೆಡಿಸಿಕೊಳ್ಳದೆಯೇ, ಇರುವ ಕೆಲಸ ಮುಂದುವರಿಸಿ ಕೊಂಡು ಮುನ್ನುಗ್ಗಿ. ನಿಮ್ಮ ಪಾಲಿನ ತೀವ್ರತರವಾದ ಮನದಾಳದ ಸದಿಚ್ಛೆಯು ಪೂರ್ಣಗೊಳ್ಳುವುದು. ಗುರುವಿನ ಅನುಗ್ರಹ ನಿಮ್ಮ ಮೇಲಿರುವುದರಿಂದ ಕಾರ್ಯಗಳು ಸುಲಲಿತವಾಗುವವು. 9845743807 ಅದೃಷ್ಟ ಸಂಖ್ಯೆ:9

ಕನ್ಯಾ
ನೋವು ತರುವ ಮಾತುಗಳನ್ನಾಡುವ ಜನರನ್ನು ನಯವಾಗಿ ನಿರ್ಲಕ್ಷಿಸಿ. ಪ್ರಾಮಾಣಿಕವಾದ ನಿಮ್ಮ ನಡೆಯ ಶಕ್ತಿಯನ್ನು, ಸುಡುವ ದಾವಾಗ್ನಿಯೂ ಏನೂ ಮಾಡಲಾಗದೆ ಸೋಲುತ್ತದೆ. ಆಂಜನೇಯ ಸ್ವಾಮಿಯನ್ನು ಆರಾಧಿಸಿ. ಇದರಿಂದ ವರ್ಚಸ್ಸಿಗೆ ಬೇಕಾದ ಸಿದ್ಧಿ ದೊರೆಯುವುದು.ನಿಮ್ಮಲ್ಲಿ ಆನೆ ಬಲವಿದೆ. ಆದರೆ ದೂರದಿಂದ ಬೊಗಳುವ ಶ್ವಾನವನ್ನು ನೀವು ನಿಯಂತ್ರಿಸಲಾರಿರಿ. ಸಮತೋಲನ ತಪ್ಪದಂತೆ ಕುಟುಂಬದ ಜೊತೆ ವ್ಯವಹರಿಸಿ. ಆರೋಗ್ಯದ ಕಡೆ ಗಮನ ಹರಿಸಿ. ಮನೆ ವೈದ್ಯರ ಸಲಹೆ ಪಡೆಯಿರಿ. 9845743807 ಅದೃಷ್ಟ ಸಂಖ್ಯೆ:6

ತುಲಾ
ಸಜ್ಜನರಾದ ನಿಮ್ಮನ್ನು ಮೆಚ್ಚದಿರಲು ಸಾಧ್ಯವೇ ಇಲ್ಲ. ಜನರೊಡನೆ ಸಂಕೋಚ ಬಿಟ್ಟು ಮಾತನಾಡಿ. ಅವರು ನಿಮ್ಮನ್ನು ಸದಾಕಾಲ ಬೆಂಬಲಿಸುವರು. ಸಾಧ್ಯವಾದಲ್ಲಿ ಮಾತಾ ದುರ್ಗಾದೇವಿ ಮಂದಿರಕ್ಕೆ ಹೋಗಿ ಅರ್ಚನೆ ಸಲ್ಲಿಸಿ. ಗುರು ರಾಘವೇಂದ್ರ ಸ್ವಾಮಿಯನ್ನು ಭಕ್ತಿಯಿಂದ ಪ್ರಾರ್ಥಿಸಿ. ಅವರು ನಿಮ್ಮ ಅಂತರಂಗದ ಬಯಕೆಗಳನ್ನು ಪೂರೈಸಿ ನಿಮ್ಮನ್ನು ರಕ್ಷಿಸಲಿದ್ದಾರೆ. ವಾಹನ ಖರೀದಿ, ಸ್ಥಿರಾಸ್ತಿ ಖರೀದಿ ಬಗ್ಗೆ ಸದ್ಯಕ್ಕೆ ವಿಚಾರ ಬೇಡ.9845743807 ಅದೃಷ್ಟ ಸಂಖ್ಯೆ:8

ವೃಶ್ಚಿಕ
ಬೇರೆಯವರನ್ನು ಅವಲಂಬಿಸುವ ವಿಚಾರವನ್ನು ದೂರ ಇಡಿ. ನಿಮ್ಮ ಮೇಲೆ ನಿಮಗೆ ವಿಶ್ವಾಸವಿರಲಿ. ನಾನು ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸವಿಲ್ಲದಿದ್ದರೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಹೇಗೆ ಸಾಧ್ಯ? ನಿಮ್ಮ ಮೇಲೆ ಗುರು ಹಿರಿಯರ ಆಶೀರ್ವಾದ ಇದೆ.ಪದೇ ಪದೆ ನಿಮ್ಮ ವಿರುದ್ಧದ ಮಾತುಗಳು ಕೇಳಿಸಬಹುದು. ಅದನ್ನು ಕೇಳಿ ನಕ್ಕುಬಿಡಿ. ಏಕೆಂದರೆ ಇತರರು ಮಾಡುವ ಆರೋಪದಲ್ಲಿ ಹುರುಳಿಲ್ಲ ಎನ್ನುವ ಸತ್ಯ ನಿಮಗೆ ಗೊತ್ತಿರುವಂತೆ ಎದುರಾಳಿ ಗಳಿಗೂ ಗೊತ್ತಿರುತ್ತದೆ. ಆದರೆ ನಿಮ್ಮ ಮೇಲೆ ಗೂಬೆ ಕೂರಿಸಬೇಕೆಂಬ ಕಾರಣದಿಂದ ಅಪವಾದ ಹೊರಸುವರು. 9845743807 ಅದೃಷ್ಟ ಸಂಖ್ಯೆ:5

ಧನುಸ್ಸು
ಶ್ರೀಹರಿಯ ಕರುಣೆ ಅಪಾರವಾದುದು. ನಿಮ್ಮ ಮನದ ಮೂಲೆಯಲ್ಲಿದ್ದ ಆತಂಕವನ್ನು ದೂರ ಮಾಡಿ ಮನದಲ್ಲಿ ಮತ್ತು ಮನೆಯಲ್ಲಿ ಸಂತಸದ ವಾತಾವರಣ ಮೂಡಿಸಿರುವನು. ಆತನ ಕಾರುಣ್ಯವನ್ನು ಮೌನದಿಂದ ಕೊಂಡಾಡಿ ಅಂತರಂಗವನ್ನು ಹಗುರ ಮಾಡಿಕೊಳ್ಳಿ. ಸರ್ರನೆ ನಡೆಯುತ್ತಿರುವ ವಹಿವಾಟಿನಲ್ಲಿ ಹೆಚ್ಚು ಬದಲಾವಣೆ ಆಗಲಿದೆ. ಭಗವಂತ ಕಣ್ಣು ತೆರೆದರೆ ನಿಮ್ಮ ಬಾಳಿನಲ್ಲಿ ಹರ್ಷದ ಹೊನಲೇ ಹರಿಯುವುದು. ಆತನ ಅನುಗ್ರಹಕ್ಕೆ ನಿತ್ಯ ಪ್ರಾರ್ಥಿಸುವುದನ್ನು ಮರೆಯದಿರಿ.9845743807 ಅದೃಷ್ಟ ಸಂಖ್ಯೆ:3

ಮಕರ
ಪರಿಸರದಲ್ಲಿನ ಇಷ್ಟಕಷ್ಟಗಳನ್ನು ನೀವು ಜಾಣತನದಿಂದ ಅರ್ಥ ಮಾಡಿಕೊಳ್ಳಬಲ್ಲಿರಿ. ಇದರಿಂದ ನಿಮ್ಮ ವೈಯಕ್ತಿಕ ಸಮಸ್ಯೆಗಳು ದೂರವಾಗುವವು. ಕೆಲವೊಂದು ವಿಚಾರಗಳಲ್ಲಿ ಸಂಗಾತಿಯನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಅನಿವಾರ್ಯವಾಗಲಿದೆ.ಅಧಿಕ ಖರ್ಚು ವೆಚ್ಚ ಎಂಬ ಕಾರಣಕ್ಕೆ ಸಿಡಿಮಿಡಿ ಬೇಡ. ಏಕೆಂದರೆ ಮುಷ್ಠಿ ಕಾಳು ಚೆಲ್ಲಿದಾಗ ಮಾತ್ರ ಮೂಟೆ ಕಾಳನ್ನು ಪಡೆಯಲು ಸಾಧ್ಯ ವಾಗುವುದು. ಹಾಗಾಗಿ ಮಾಡಿದ ಖರ್ಚನ್ನು ಠೇವಣಿ ಎಂದು ಭಾವಿಸಿಕೊಂಡಲ್ಲಿ ತೊಂದರೆ ಆಗಲಾರದು.9845743807ಅದೃಷ್ಟ ಸಂಖ್ಯೆ:9

ಕುಂಭ
ಕೋಪ ಅನರ್ಥಕ್ಕೆ ಕಾರಣ ಎಂದು ಗೊತ್ತಿದ್ದರೂ ಕೆಲವೊಮ್ಮೆ ಕೋಪ ದಿಢೀರನೆ ಬಂದು ಅಂದುಕೊಂಡ ಕಾರ್ಯಗಳನ್ನು ಅಸ್ತವ್ಯಸ್ತ ಮಾಡುವ ಸಾಧ್ಯತೆ ಇದೆ. ಹಾಗಾಗಿ ಆದಷ್ಟು ನಿಮ್ಮ ಕೋಪ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಒಳ್ಳೆಯದು. ಗುರು ಒಲಿದರೆ ಕೊರಡು ಕೊನರುವುದಯ್ಯಾ ಎನ್ನುವಂತೆ ಗುರುವಿನ ಅಪಾರ ಕರುಣೆಯಿಂದ ಜನರು ನಿಮ್ಮನ್ನು ಆದರಿಸುವರು. ಹೊಗಳಿ ಕೊಂಡಾಡುವರು. ನಿಮ್ಮಲ್ಲಿನ ನಾಯಕತ್ವದ ಗುಣ ಹೊರಜಗತ್ತಿಗೆ ಪ್ರಕಟವಾಗುವುದು. 9845743807 ಅದೃಷ್ಟ ಸಂಖ್ಯೆ:2

ಮೀನ
ನಿಮ್ಮ ಅನೇಕ ರೀತಿಯ ತಾಂತ್ರಿಕ ಪರಿಜ್ಞಾನದ ಒಟ್ಟು ಲಾಭಕ್ಕೆ ಸಿದ್ದಿ ಪಡೆಯುವ ಬೆಳವಣಿಗೆ ಸಂಭವಿಸಲಿದೆ. ಇದರಿಂದ ನಿಮ್ಮ ಬಾಳಿನಲ್ಲಿ ಹೊಸ ಬೆಳಕು ಮೂಡುವುದು.ವಿವಾಹದ ಮಾತುಕತೆ ಫಲಿಸುವುದು.ವಿವಿಧ ಮೂಲಗಳಿಂದ ಹಣ ಬರುವ ಸಾಧ್ಯತೆ ಇದೆ. ಕಾರ್ಮಿಕ ವರ್ಗದವರ ಶ್ರಮಕ್ಕೆ ವಿಶೇಷ ಪ್ರತಿಫಲ ದೊರೆಯುವುದು. ಪಿತೃವರ್ಗದವರಿಂದ ಹೆಚ್ಚಿನ ಅನುಕೂಲವಾಗುವುದು. ಆರ್ಥಿಕ ಸ್ಥಿತಿ ಸದೃಢವಾಗಿರುತ್ತದೆ.9845743807 ಅದೃಷ್ಟ ಸಂಖ್ಯೆ:1

ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು
ಪಂಡಿತ್ ಮಂಜುನಾಥ್ ಶಾಸ್ತ್ರೀ ದೈವಜ್ಞ ಜ್ಯೋತಿಷ್ಯರು 9845743807 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು.ಮದುವೆ, ಸಂತಾನ ಕೊರತೆ ,ಶತ್ರುಕಾಟ, ಕುಜದೋಷಪರಿಣಾಮ,ಮಕ್ಕಳು ತೊಂದರೆ,ಸ್ತ್ರೀಪುರುಷ ಪ್ರೇಮ ವಿಚಾರ,ವಿದೇಶಿಯೋಗ, ಅನಾರೋಗ್ಯ, ಮನೆಕಟ್ಟುವ ಯೋಗ,ರಾಜಕೀಯದ ಭವಿಷ್ಯ,ಸ್ಥಾನಮಾನತೊಂದರೆ, ಕುಟುಂಬದಲ್ಲಿದ್ದಸಮಸ್ಯೆ,ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/whatsapp



Click it and Unblock the Notifications











