For Quick Alerts
ALLOW NOTIFICATIONS  
For Daily Alerts

16-2-2019: ಶನಿವಾರದ ದಿನ ಭವಿಷ್ಯ

By ಪಂಡಿತ್ ಮಂಜುನಾಥ್ ದೈವಜ್ಞ ಜ್ಯೋತಿಷ್ಯರು
|

ಶನಿ ಎಂಬ ಶಬ್ದ ಕೇಳುತ್ತಿದ್ದಂತೆ ಅನೇಕರು ಕೆಟ್ಟದ್ದು, ಅಶುಭ, ಕಪ್ಪು ಬಣ್ಣದ್ದು ಎನ್ನುವ ಭಾವವನ್ನು ತಳೆಯುತ್ತಾರೆ. ಶನಿ ಎಂದರೆ ಗ್ರಹಚಾರ. ಶನಿಯಿಂದ ಎಂದಿಗೂ ಕಷ್ಟ ಹಾಗೂ ದುಃಖವೇ ಹೊರತು ಖುಷಿ ಎನ್ನುವುದು ಇರುವುದಿಲ್ಲ ಎನ್ನುತ್ತಾರೆ. ಕೆಲವರು ಶನಿವಾರ ಹುಟ್ಟಿರುವ ವ್ಯಕ್ತಿಗಳು ಬದುಕಿನುದ್ದಕ್ಕೂ ಕಷ್ಟಗಳನ್ನು ಅನುಭವಿಸುತ್ತಿರುತ್ತಾರೆ ಎಂದೂ ಸಹ ಹೇಳುತ್ತಾರೆ. ಶನಿವಾರ ಎಂದರೆ ಅದು ಶುಭ ಕಾರ್ಯಗಳಿಗೆ ಸೂಕ್ತವಲ್ಲದ ದಿನೆಂದು ಪರಿಗಣಿಸುವವರು ಇದ್ದಾರೆ.

ಶನಿ ಎಂದರೆ ಕೇವಲ ಕಷ್ಟ ದುಃಖಗಳಿಗೆ ಮೀಸಲಾಗಿರುವುದು ಎಂದು ಅರ್ಥವಲ್ಲ. ಶನಿ ಎಂದರೆ ಸತ್ಯ ಹಾಗೂ ನಿಷ್ಟೆಯ ಜೀವನವನ್ನು ಹೇಗೆ ನಡೆಸಬೇಕು ಎನ್ನುವುದನ್ನು ತಿಳಿಸಿಕೊಡುವ ಗುರು ಶನಿ. ಕುಂಡಲಿಯಲ್ಲಿ ಶನಿ ಪ್ರವೇಶಿಸುವಾಗ ಕಷ್ಟವನ್ನು ತಂದುಕೊಟ್ಟರೆ ಹೋಗುವಾಗ ಸುಖವನ್ನು ನೀಡಿ ಹೋಗುತ್ತಾನೆ. ಬರುವಾಗ ಸುಖವನ್ನು ನೀಡಿದರೆ ಹೋಗುವಾಗ ಕಷ್ಟವನ್ನು ನೀಡುತ್ತಾನೆ ಎನ್ನಲಾಗುತ್ತದೆ. ಇದರ ಅರ್ಥ ಜೀವನದ ಸುಖ-ದುಃಖಗಳ ಅರಿವನ್ನು ಮೂಡಿಸಿ ಸಾರ್ಥಕ ಬದುಕಿನ ತಿಳಿವಳಿಕೆ ಮೂಡಿಸುವವನೆ ಶನಿ. ಶನಿವಾರ ಎನ್ನುವ ಭಯಕ್ಕೆ ಒಳಗಾಗದೆ ನಿಮ್ಮ ಭವಿಷ್ಯದಲ್ಲಿ ಉಂಟಾಗುವ ಏರು ಪೇರುಗಳನ್ನು ಇಂದಿನ ಭವಿಷ್ಯ ನೋಡಿ ತಿಳಿದುಕೊಳ್ಳಿ. ಹಾಗೊಮ್ಮೆ ದೋಷಗಳು ಹಾಗೂ ಕಷ್ಟಗಳ ಸೂಚನೆಯಿದ್ದರೆ ಪರಿಹಾರಗಳನ್ನು ಕೈಗೊಳ್ಳುವ ಮೂಲಕ ಭವಿಷ್ಯದಲ್ಲಿ ಯಶಸ್ಸನ್ನು ಪಡೆಯಿರಿ. ಪಂಡಿತ್ ಮಂಜುನಾಥ್ ಶಾಸ್ತ್ರೀ

ದೈವಜ್ಞ ಜ್ಯೋತಿಷ್ಯರು 9845743807

ಮೇಷ (16 ಫೆಬ್ರವರಿ 2019)

ಮೇಷ (16 ಫೆಬ್ರವರಿ 2019)

ನಿಮ್ಮ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಜಾಗ್ರತೆಯಿಂದ ರೂಪಿಸಿ. ಇದರಿಂದ ಗೆಲುವು ದೊರೆಯಲಿದೆ. ನಿಮ್ಮ ಹಿಂಬಾಲಕರು ನಿಮ್ಮ ಕಾರ್ಯ ಯೋಜನೆಗಳಿಗೆ ಬೆಂಬಲ ಸೂಚಿಸುವರು. ಆರ್ಥಿಕ ಪರಿಸ್ಥಿತಿ ಸಾಧಾರಣವಾಗಿರುತ್ತದೆ.ಮನೋ ನಿಯಾಮಕ ರುದ್ರದೇವರ ಸ್ಮರಣೆ ಮತ್ತು ಪ್ರಾರ್ಥನೆಯಿಂದ ಮನಸ್ಸಿನಲ್ಲಿ ಕವಿದಿರುವ ಕಾರ್ಮೋಡಗಳು ದೂರಕ್ಕೆ ಸರಿಯಲಿವೆ. ಮಗನಿಗೆ ಉತ್ತಮ ಸಂಬಂಧ ಕೂಡಿ ಬರುವುದರಿಂದ ಮನೆಯಲ್ಲಿ ಸಂತಸ ಮೂಡುವುದು. 9845743807 ಅದೃಷ್ಟ ಸಂಖ್ಯೆ:2

ವೃಷಭ

ವೃಷಭ

ವ್ಯಾಪಾರ ವಿಷಯದಲ್ಲಿ ಎಲ್ಲಾ ನಿಟ್ಟಿನಿಂದಲೂ ಜಾಗ್ರತೆ ಇರಲಿ. ನಿರ್ಲಕ್ಷ್ಯದಿಂದ ನಷ್ಟ ಆಗುವ ಸಂದರ್ಭವಿದೆ. ಮಕ್ಕಳು ತಮ್ಮ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಕಂಡುಕೊಳ್ಳುವರು. ಕುಟುಂಬದವರೊಂದಿಗೆ ಸ್ನೇಹದಿಂದ ವರ್ತಿಸಿ.ಹತ್ತಿರದ ಊರುಗಳಿಗೆ ಹೋಗುವ ಪ್ರವಾಸಗಳಿಂದಾಗಿ ವ್ಯವಹಾರಿಕ ಗೆಲುವು ಸಾಧ್ಯವಾಗಲಿದೆ. ಮಕ್ಕಳ ಆಟ ಪಾಠಗಳಿಂದ ನಿಮ್ಮ ಮನಸ್ಸು ಪ್ರಫುಲ್ಲವಾಗುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ಜನ್ಮಸ್ಥ ರಾಹು ಮಾನಸಿಕ ಕಿರಿಕಿರಿಯನ್ನುಂಟು ಮಾಡುವನು.9845743807 ಅದೃಷ್ಟ ಸಂಖ್ಯೆ:4

ಮಿಥುನ

ಮಿಥುನ

ದೂರದ ಬಂಧುಗಳ ಆಗಮನದಿಂದಾಗಿ ಹೊಸ ಅವಕಾಶದ ಬಾಗಿಲು ತೆರೆಯಲು ಸಾಧ್ಯವಿದೆ. ಅಸಾಧ್ಯವಾದುದನ್ನು ಸಾಧಿಸಿದ ತೃಪ್ತಿ ನಿಮ್ಮದಾಗುವುದು. ಒಡಹುಟ್ಟಿದವರು ನಿಮ್ಮ ಸಂತೋಷವನ್ನು ಹೆಚ್ಚಿಸುವರು.ಹಣವನ್ನು ಕೊಡುವ, ಕೊಡಿಸುವ ಕೆಲಸ ಮಾತ್ರ ಮಾಡಲೇಬೇಡಿ. ತೊಂದರೆಗೆ ಸಿಲುಕಿಕೊಳ್ಳುವಿರಿ. ಕೆಲವೊಮ್ಮೆ ನೀವೇ ಹಣವನ್ನು ಪಾವತಿಸುವ ಸಂದರ್ಭ ಎದುರಾಗುವುದು. ಇಲ್ಲಸಲ್ಲದ ಸಬೂಬು ಹೇಳಿ ಬಂದವರನ್ನು ನಯವಾಗಿ ಸಾಗ ಹಾಕುವುದು ಉತ್ತಮ.9845743807 ಅದೃಷ್ಟ ಸಂಖ್ಯೆ:9

ಕಟಕ

ಕಟಕ

ಮಾತುಮಾತಿಗೆ ಸಿಟ್ಟು ಮಾಡಿಕೊಳ್ಳುವಂತಹ ಅತಿರೇಕಗಳು ಬೇಡ. ತಾಳ್ಮೆಯಿಂದಲೇ ಹೆಚ್ಚಿನ ಸಿದ್ಧಿ ದೊರೆಯಲಿದೆ. ಆಂಜನೇಯ ಸ್ವಾಮಿ ಸ್ತೋತ್ರವನ್ನು ಪಠಿಸಿ. ಅಗತ್ಯವಿದ್ದಲ್ಲಿ ಮಾತ್ರ ಹೆಚ್ಚಿನ ಹಣ ವ್ಯಯಿಸಿ. ಅನವಶ್ಯಕ ಖರೀದಿಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು.ತುರ್ತಾಗಿ ಮಕ್ಕಳ ಬಗೆಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುವುದು. ಸದಾ ಕೆಲಸ ಕೆಲಸ ಎಂದು ದುಡಿಮೆಯ ಕಡೆಗೆ ಲಕ್ಷ್ಯ ನೀಡುವ ನೀವು ಮಡದಿ ಮಕ್ಕಳ ಆರೋಗ್ಯದ ಕಡೆಗೂ ಗಮನ ಹರಿಸುವುದು ಒಳ್ಳೆಯದು.9845743807 ಅದೃಷ್ಟ ಸಂಖ್ಯೆ:6

ಸಿಂಹ

ಸಿಂಹ

ಗೆಳೆಯರ ಬಗೆಗೆ ನೀವು ಮೃದು ಹೃದಯ ಹೊಂದಿದಲ್ಲಿ ಅದರಿಂದ ಹಾನಿಯನ್ನೇ ಅನುಭವಿಸುವಿರಿ. ಅವರು ನಿಮ್ಮ ನಂಬಿಕೆಗೆ ದ್ರೋಹ ಬಗೆಯುವರು. ಆದಷ್ಟು ದುಷ್ಟ ಸ್ನೇಹಿತರಿಂದ ದೂರ ಇರುವುದು ಒಳ್ಳೆಯದು. ನೀರಿನ ವಿಚಾರದಲ್ಲಿ ಕಾಳಜಿ ಇರಲಿ. ಜಲಾಶಯ, ಸಮುದ್ರದ ಕಡೆ ಸಂಚರಿಸುವಾಗ ಎಚ್ಚರಿಕೆ ಇರಲಿ. ಮನೆಯಿಂದ ಹೊರಡುವಾಗ ಲಕ್ಷ್ಮೀನರಸಿಂಹ ದೇವರನ್ನು ನೆನೆಯಿರಿ ಮತ್ತು ಆರೋಗ್ಯದ ಕಡೆ ಗಮನ ಕೊಡುವುದು ಉತ್ತಮ.9845743807 ಅದೃಷ್ಟ ಸಂಖ್ಯೆ:5

ಕನ್ಯಾ

ಕನ್ಯಾ

ವಿನಾಕಾರಣ ಒಡಹುಟ್ಟಿದವರೇ ಮನಸ್ಸಿಗೆ ನೋವು ತರುವ ಸಾಧ್ಯತೆ ಇದೆ. ಅವರ ವಿಚಾರಧಾರೆ ಅವರಿಗೆ ಬಿಟ್ಟದ್ದು. ಅವರಿಗೆ ಸಲಹೆ ನೀಡದಿರುವುದು ಒಳ್ಳೆಯದು. ನಿಮಗೇ ಬೇಕಾದಷ್ಟು ಕೆಲಸವಿರುವಾಗ ಪರರ ಉಸಾಬರಿ ಏಕೆ?.ನೀರಾವರಿ ಕೃಷಿಕರಿಗೆ ಹೆಚ್ಚಿನ ಲಾಭವುಂಟಾಗುವುದು. ರೈತಾಪಿ ಜನರಿಗೆ ತಾವು ಬೆಳೆದ ಧಾನ್ಯಗಳಿಗೆ ಉತ್ತಮ ಬೆಂಬಲ ಬೆಲೆ ದೊರೆಯುವುದು. ಕೆಲವರಿಗೆ ಸರಕಾರದಿಂದ ಹಣಕಾಸು ಬರುವುದು.9845743807 ಅದೃಷ್ಟ ಸಂಖ್ಯೆ:4

ತುಲಾ

ತುಲಾ

ನಿಮ್ಮ ಶಕ್ತಿಯ ವಿಚಾರದಲ್ಲಿ ನಂಬಿಕೆ ಕಳೆದುಕೊಳ್ಳಬೇಡಿ. ನಿಮ್ಮ ಸರಳತೆಯ ಜೀವನದಿಂದ ನೀವು ಪರರಿಗೆ ಮಾರ್ಗಸೂಚಕರಾಗುವಿರಿ. ನಿಮ್ಮ ನಾಯಕತ್ವದ ಗುಣಗಳನ್ನು ಕಂಡು ಜನ ನಿಮ್ಮ ಸುತ್ತ ತಿರುಗುವರು. ಮಾತಾ ದುರ್ಗಾದೇವಿಯ ಪ್ರಾರ್ಥನೆಯಿಂದ ಸಕಲ ದುರಿತಗಳು ನಾಶವಾಗುವವು. ಮಕ್ಕಳಿಂದ ಶುಭವಾರ್ತೆ ಕೇಳುವಿರಿ. ಕೆಮ್ಮು ಕಫದಂತಹ ತೊಂದರೆಗಳು ಕಾಡುವ ಸಾಧ್ಯತೆ ಇದೆ. ಇದಕ್ಕೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಿರಿ.9845743807 ಅದೃಷ್ಟ ಸಂಖ್ಯೆ:2

ವೃಶ್ಚಿಕ

ವೃಶ್ಚಿಕ

ಕೊರತೆಯಲ್ಲಿನ ಹಣಕಾಸಿನ ವೃದ್ಧಿಗೆ ಒಂಟಿ ಹೋರಾಟ ಬೇಡ. ಎಲ್ಲಾ ವಿಚಾರದಲ್ಲೂ ಬಾಳಸಂಗಾತಿಯ ಸಹಕಾರ ಪಡೆದು ಮುಂದುವರಿಯಿರಿ. ಕೆಲವು ವಿಷಯಗಳಲ್ಲಿ ಸಂಗಾತಿಯ ತೀರ್ಮಾನವೇ ಅಂತ್ಯವಾಗುವುದು. ನಿಮ್ಮ ಪ್ರತಿಭಾವಂತಿಕೆಯನ್ನು ಸಕಾರಾತ್ಮಕವಾಗಿ ನಿರೂಪಿಸಿ ಯಶ ಗಳಿಸಲು ಸೂಕ್ತ ಸಮಯವಾಗಿದೆ. ಆಕಸ್ಮಿಕವಾಗಿ ಹಣಕಾಸು ಬರುವುದು. ಮಕ್ಕಳು ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಕಾಣುವರು. 9845743807 ಅದೃಷ್ಟ ಸಂಖ್ಯೆ:6

ಧನುಸ್ಸು

ಧನುಸ್ಸು

ಆಪ್ತ ಗೆಳೆಯನ ಭೇಟಿ ಸಾಧ್ಯತೆ ಇದೆ. ಆತನ ಕರುಣಾಜನಕ ಕಥೆ ಕೇಳಿ ಮನಸ್ಸು ಮರುಗುವುದು. ಆತನಿಗೆ ನಿಮ್ಮಿಂದ ಸಹಾಯ ಬೇಕಾಗಿರುತ್ತದೆ. ನಿಸ್ವಾರ್ಥದಿಂದ ಆತನಿಗೆ ಸಹಾಯ ಹಸ್ತ ನೀಡಿ. ಮುಂದೆ ಆತನಿಂದ ಅನುಕೂಲವಾಗುವುದು.ವ್ಯಾಜ್ಯದ ವಿಚಾರದಲ್ಲಿ ಸೋತು ಗೆಲ್ಲುವ ಯೋಚನೆ ಇರಲಿ. ಮುಂದಿನ ದಾರಿ ಯಶಸ್ಸಿಗೆ ಮುಖ ಮಾಡಲಿದೆ. ಮುಷ್ಠಿಕಾಳು ಚೆಲ್ಲಿ ಮೂಟೆ ಕಾಳು ಬಾಚುವಂತೆ ಕೆಲವು ವಿಚಾರಗಳಲ್ಲಿ ಯಶಸ್ಸನ್ನು ಹೊಂದಲು ಹಣವನ್ನು ಚೆಲ್ಲುವುದು ಅನಿವಾರ್ಯವಾಗಲಿದೆ.9845743807 ಅದೃಷ್ಟ ಸಂಖ್ಯೆ:8

ಮಕರ

ಮಕರ

ವ್ಯಾಪಾರ ವ್ಯವಹಾರದಲ್ಲಿ ಮುಂದಾಲೋಚನೆಯಿಲ್ಲದೆ ಹಣ ಹೂಡಿದ ಪರಿಣಾಮ ನಷ್ಟ ಎದುರಿಸುವಿರಿ. ನಷ್ಟ ಸರಿದೂಗಿಸಲು ಸಾಲ ಮಾಡಬೇಕಾದ ಪ್ರಸಂಗ ಬರುವುದು. ಆದರೆ ಈಗಾಗಲೇ ಮಾಡಿರುವ ಸಾಲವೇ ಬಹಳಷ್ಟು ಇರುವಾಗ ನಿಮಗೆ ಬೇರೆಯವರು ಸಾಲ ನೀಡಲಾರರು. ಮಳೆ ನಿಂತರೂ ಮಳೆ ಹನಿ ನಿಲ್ಲುವುದಿಲ್ಲ ಎನ್ನುವಂತೆ ಜನ್ಮಶನಿಯಿಂದ ಬಿಡುಗಡೆ ಆಗಿದ್ದರೂ ಸಾಡೇಸಾತ್‌ ಶನಿಯ ಕಾಟ ಇದ್ದೇ ಇರುತ್ತದೆ. ಹಾಗಾಗಿ ಮಹತ್ತರ ಕಾರ್ಯಗಳನ್ನು ಸದ್ಯಕ್ಕೆ ಮುಂದೂಡುವುದು ಒಳಿತು. ಹಣ ಉಳಿತಾಯ ಮಾಡಲಾಗುವುದಿಲ್ಲ.9845743807 ಅದೃಷ್ಟ ಸಂಖ್ಯೆ:6

ಕುಂಭ

ಕುಂಭ

ನಿಮ್ಮನ್ನು ಪರರಿಗೆ ಹೋಲಿಸಿಕೊಂಡು ಖಿನ್ನರಾಗದಿರಿ. ಭಗವಂತ ಪ್ರತಿಯೊಬ್ಬರಿಗೂ ತನ್ನದೇ ಆದ ಒಂದು ವ್ಯಕ್ತಿತ್ವ ನೀಡಿರುವನು. ಆ ಪ್ರತ್ಯೇಕತೆಯ ವ್ಯಕ್ತಿತ್ವದಿಂದ ಸಮಾಜದಲ್ಲಿ ಗುರುತಿಸಲ್ಪಡುವಿರಿ. ಹಣಕಾಸಿನ ಸ್ಥಿತಿ ಸಾಧಾರಣವಾಗಿರುತ್ತದೆ. ಶಕ್ತಿದೇವಿಯ ಆರಾಧನೆಗೆ ಒಳ್ಳೆಯ ದಿನ. ಹಾಗಾಗಿ ಶಕ್ತಿದೇವಿಯನ್ನು ಅನನ್ಯವಾಗಿ ಭಜಿಸಿ. ನಿಮ್ಮ ಇಷ್ಟಾರ್ಥವನ್ನು ನೆರವೇರಿಸಿಕೊಳ್ಳಿ. ಅಗತ್ಯಕ್ಕೆ ತಕ್ಕಷ್ಟು ಖರ್ಚು ಮಾಡಿ.9845743807 ಅದೃಷ್ಟ ಸಂಖ್ಯೆ:2

ಮೀನ

ಮೀನ

ಹಣಕಾಸಿನ ಮುಗ್ಗಟ್ಟು ಅನುಭವಿಸುವಿರಿ. ಆದರೆ ಸಕಾಲದಲ್ಲಿ ನೆಂಟರ ಅಥವಾ ಸ್ನೇಹಿತರಿಂದ ಸಹಕಾರ ದೊರೆಯುವುದು. ಹಾಗಾಗಿ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ವಿಷ್ಣುಸಹಸ್ರನಾಮ ಪಠಿಸಿ. ನಿಮ್ಮ ಜೀವನದ ಶಿಲ್ಪಿ ನೀವೇ. ನಿಮ್ಮನ್ನು ಇತರರು ಉದ್ಧರಿಸುತ್ತಾರೆ ಎಂದು ತಿಳಿದು ಕಾರ್ಯದಿಂದ ಹಿಂದೆ ಸರಿಯಬೇಡಿ. ಮುನ್ನುಗ್ಗಿ ಪ್ರವೃತ್ತರಾದಲ್ಲಿ ದೈವಕೃಪೆಯಿಂದ ಇಚ್ಛಿತ ಗುರಿ ತಲುಪುವಿರಿ.9845743807 ಅದೃಷ್ಟ ಸಂಖ್ಯೆ:1

ಪಂಡಿತ್ ಮಂಜುನಾಥ್ ಶಾಸ್ತ್ರೀ

ದೈವಜ್ಞ ಜ್ಯೋತಿಷ್ಯರು 9845743807

ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು.ಮದುವೆ,ಸಂತಾನಕೊರತೆ ,ಶತ್ರುಕಾಟ, ಕುಜ ದೋಷ ಪರಿಣಾಮ, ಮಕ್ಕಳು ತೊಂದರೆ, ಸ್ತ್ರೀಪುರುಷ ಪ್ರೇಮವಿಚಾರ,ವಿದೇಶಿಯೋಗ,ಅನಾರೋಗ್ಯ,ಮನೆಕಟ್ಟುವಯೋಗ,ರಾಜಕೀಯದ ಭವಿಷ್ಯ, ಸ್ಥಾನಮಾನತೊಂದರೆ, ಕುಟುಂಬದಲ್ಲಿದ್ದಸಮಸ್ಯೆ,ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಬಲಿಷ್ಟ ಪೂಜಾ ಶಕ್ತಿಯಿಂದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ 9845743807 call/ whatsapp

English summary

your daily horoscope 16 february 2019

Know what astrology and the planets have in store for you today. Choose your zodiac sign and read the details..
Story first published: Saturday, February 16, 2019, 4:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more