Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಈ ಮೂರು ರಾಶಿಚಕ್ರದ ಮಹಿಳೆಯರು ಅತ್ಯುತ್ತಮ ಪತ್ನಿಯಾಗಿರುತ್ತಾರೆ!
ವಿವಾಹ ಎನ್ನುವುದು ವ್ಯಕ್ತಿಯ ಜೀವನದಲ್ಲಿ ಅತ್ಯಂತ ಪ್ರಮುಖವಾದ ಸಂಗತಿಯಾಗಿರುತ್ತದೆ. ವಿವಾಹದ ಬಳಿಕ ಜೀವನದಲ್ಲಿ ಸಾಕಷ್ಟು ಜವಾಬ್ದಾರಿಗಳಿಗೆ ಬದ್ಧರಾಗಿರಬೇಕಾಗುವುದು. ಮನೆ ಮಂದಿಯ ಬೇಕು-ಬೇಡಗಳನ್ನು ಅರಿಯುವುದು, ಅವರಿಗೆ ಅಗತ್ಯ ವಸ್ತುಗಳನ್ನು ಪೂರೈಸುವುದು, ಅವರ ಜೀವನದ ಪ್ರಮುಖ ಗುರಿಗಳಿಗೆ ಸಾಕಾರ ಹಾಗೂ ಬೆಂಬಲವನ್ನು ನೀಡುವುದು ಹೀಗೆ ಅನೇಕ ಸಂಗತಿಗಳ ಬಗ್ಗೆ ಜವಾಬ್ದಾರಿ ವ್ಯಕ್ತಿಗಳಾಗಿ ನಿಲ್ಲ ಬೇಕಾಗುವುದು. ಅಲ್ಲದೆ ಎರಡು ಕುಟುಂಬಗಳ ಗೌರವವನ್ನು ಕಾಪಾಡುವುದು ವಿವಾಹಿತ ನವ ಜೋಡಿಗಳ ಮೇಲೆ ನಿಂತಿರುತ್ತವೆ.

ವಿವಾಹ ಎನ್ನುವ ಸಂಸ್ಕಾರದಲ್ಲಿ ಮಹಿಳೆಯರಿಗೆ ಅತ್ಯಂತ ಹೆಚ್ಚಿನ ಜವಾಬ್ದಾರಿ ಹಾಗೂ ಪ್ರಮುಖ ಸ್ಥಾನವನ್ನು ನೀಡಲಾಗುವುದು. ಅವರು ತಾವು ಬೆಳೆದು ಬಂದ ಮನೆ ಮತ್ತು ವಾತಾವರಣವನ್ನು ಬಿಟ್ಟು, ಸಂಗಾತಿಯೊಂದಿಗೆ ಆಗು-ಹೋಗುಗಳ ಜೊತೆ ಜೊತೆಗೆ ಕೈಹಿಡಿದು ನಿಲ್ಲಬೇಕಾಗುವುದು. ಕಷ್ಟಗಳು ಎದುರಾದಾಗ ಧೈರ್ಯವನ್ನು ನೀಡುತ್ತಾ ಸನ್ನಿವೇಶಗಳನ್ನು ಎದುರಿಸುವ ಶಕ್ತಿಯನ್ನು ಪತಿಗೆ ನೀಡಬೇಕಾಗುವುದು. ಅದೇ ಸಂತೋಷ ಸಿಕ್ಕಾಗ ದುರಭಿಮಾನಕ್ಕೆ ಒಳಗಾಗದೆ ಮನೆ ಮಂದಿಯೊಂದಿಗೆ ಹೊಂದಿಕೊಂಡು ಹೋಗಬೇಕಾಗುವುದು. ಆಗಲೇ ಬದುಕು ಸುಂದರ ಹಾಗೂ ಸುಮದುರವಾಗಿ ಇರುವುದು.
ಒಂದು ಕುಟುಂಬ ಸಂತೋಷದಿಂದ ಹಾಗೂ ಸುಂದರವಾದ ವಾತಾವರಣದಿಂದ ಕೂಡಿರಬೇಕು ಎಂದರೆ ಮನೆಯ ಯಜಮಾನಿಯ ಮನಸ್ಸು ಹಾಗೂ ಕುಟುಂಬದ ಬಗ್ಗೆ ಅವಳಿಗಿರುವ ಕಾಳಜಿಗಳು ಸಕಾರಾತ್ಮಕವಾಗಿ ಇರಬೇಕು. ಇಲ್ಲವಾದರೆ ಮನೆಯ ಪರಿಸ್ಥಿತಿ ಶೋಚನೀಯ ಅಥವಾ ದುಃಖಕರ ರೀತಿಯಲ್ಲಿ ಕೂಡಿರುತ್ತದೆ. ಅವರ ಮನಸ್ಸು ಹಾಗೂ ಚಿಂತನೆಗಳಿಂದ ಇತರರ ಮನಸ್ಸು ಹಾಗೂ ಪರಿಸ್ಥಿತಿಗಳನ್ನು ಸಹ ಬೇಸರದಿಂದ ಕೂಡಿರುವಂತೆ ಮಾಡುತ್ತಾರೆ. ಹಾಗಾಗಿ ವಧು-ವರರು ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಸಾಕಷ್ಟು ಚಿಂತನೆ ಹಾಗೂ ಸಂವಹನಗಳನ್ನು ನಡೆಸುವುದರ ಮೂಲಕ ಆಯ್ಕೆ ಮಾಡಿಕೊಳ್ಳುವುದು ಉತ್ತಮ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದ ಮಹಿಳೆಯರು ಕೌಟುಂಬಿಕ ಜೀವನದಲ್ಲಿ ಅತ್ಯುತ್ತಮ ಪಾತ್ರವನ್ನು ನಿರ್ವಹಿಸುತ್ತಾರೆ. ಅವರ ಜವಾಬ್ದಾರಿಗಳು ಏನು? ತಮ್ಮ ಪ್ರೀತಿ-ಪ್ರೇಮವನ್ನು ಹೇಗೆ ತೋರಿಸಬೇಕು ಎನ್ನುವುದರ ಬಗ್ಗೆ ಸಾಕಷ್ಟು ಜ್ಞಾನವನ್ನು ಹೊಂದಿರುತ್ತಾರೆ. ಈ ರಾಶಿಯವರನ್ನು ವಿವಾಹವಾದರೆ ಅವರು ಪರಿಪೂರ್ಣವಾದ ವಿವಾಹ ಜೀವನದ ಸಾರವನ್ನು ನೀಡುವರು ಎಂದು ಹೇಳಲಾಗುವುದು. ಹಾಗಾದರೆ ಆ ರಾಶಿಚಕ್ರದವರು ಯಾರು? ಅವರು ಹೇಗೆ ಸಂಗಾತಿಗೆ ಸಹಕಾರ ನೀಡುವುದರ ಮೂಲಕ ಸಂತೋಷವನ್ನು ನೀಡುವರು? ಎನ್ನುವುದನ್ನು ತಿಳಿಯಲು ಮುಂದೆ ಓದಿ.
ಕರ್ಕ
ಕರ್ಕ ರಾಶಿಯ ಮಹಿಳೆ ಸಾಂಪ್ರದಾಯಿಕ ಗುಣವನ್ನು ಉತ್ತಮವಾಗಿ ಹೊಂದಿರುತ್ತಾಳೆ. ಇವರ ದೃಷ್ಟಿಯಲ್ಲಿ ಕುಟುಂಬ ಹಾಗೂ ಸಂಗಾತಿಯೇ ಅತ್ಯಂತ ಪ್ರಮುಖವಾದ ಸಂಗತಿಯಾಗಿರುತ್ತದೆ. ಇವರು ಪತ್ನಿಯಾಗಿ ಅಥವಾ ಮಡದಿಯಾಗಿ ಪರಿಪೂರ್ಣವಾದ ಪಾತ್ರವನ್ನು ನಿರ್ವಹಿಸುತ್ತಾರೆ. ಇವರು ಅತ್ಯಂತ ಸೂಕ್ಷ್ಮ ಹಾಗೂ ನಂಬಲರ್ಹ ವ್ಯಕ್ತಿಗಳಾಗಿರುತ್ತಾರೆ. ಪೋಷಣೆ, ಆರಾಧನೆ, ಗೌರವ ಹಾಗೂ ಅತ್ಯುತ್ತಮ ವಾತ್ಸಲ್ಯವನ್ನು ತೋರುವುದರ ಮೂಲಕ ಸಂಗಾತಿಗೆ ಹಾಗೂ ಕುಟುಂಬದವರಿಗೆ ಸಂತೋಷವನ್ನು ನೀಡುತ್ತಾರೆ. ತಮ್ಮ ಸಂಬಂಧಗಳನ್ನು ಕೊನೆಯ ಉಸಿರಿನ ವರೆಗೂ ಕಾಪಾಡುತ್ತಾರೆ. ಕಷ್ಟ-ಸುಖಗಳಲ್ಲಿ ಸಮನಾದ ಪಾತ್ರ ಹಾಗೂ ಪ್ರೀತಿಯನ್ನು ತೋರುವುದರ ಮೂಲಕ ನೆಚ್ಚಿನ ಪತ್ನಿಯಾಗಿ ಉಳಿಯುತ್ತಾರೆ.
ಮೇಷ
ಮೇಷ ರಾಶಿಯ ಮಹಿಳೆ ತನ್ನ ಸಂಗಾತಿಯ ಆಕಾಂಕ್ಷೆಗಳನ್ನು ವಿಶ್ವಾಸಾರ್ಹವಾಗಿ ನೆರವೇರಿಸುತ್ತಾಳೆ. ಇವರು ತಮ್ಮ ಸಂಗಾತಿ ಹಾಗೂ ಸಂಗಾತಿಯ ಕುಟುಂಬದವರು ಉತ್ತಮ ಸ್ಥಾನದಲ್ಲಿ ಇರಬೇಕು ಎಂದು ಬಯಸುವರು. ಇವರು ತಮ್ಮ ಶಕ್ತಿಯ ಮಟ್ಟವನ್ನು ಮೀರಿ ಸಂಸಾರ ಹಾಗೂ ಸಂಗಾತಿಯ ಏಳಿಗೆಗಾಗಿ ಶ್ರಮಿಸುತ್ತಾರೆ. ಇವರು ತನ್ನ ಗಂಡ, ಮಕ್ಕಳು, ಸಂಸಾರ, ಮನೆಯ ಜವಾಬ್ದಾರಿ ಹಾಗೂ ಕರ್ತವ್ಯಗಳನ್ನು ಎಂದಿಗೂ ನಿರ್ಲಕ್ಷಿಸುವುದಿಲ್ಲ. ಇವರು ತಮ್ಮ ವಿವಾಹ ಜೀವನಕ್ಕೆ ಸಂಬಂಧಪಟ್ಟಂತೆ ಉತ್ಸಾಹ ಭರಿತ ಹಾಗೂ ಶಕ್ತಿಯುತ ವ್ಯಕ್ತಿಯಾಗಿ ಇರುತ್ತಾರೆ. ತನ್ನ ಜೀವನ ಹಾಗೂ ಸಂಗಾತಿಯ ಬದುಕಿನ ಬಗ್ಗೆ ಸಾಕಷ್ಟು ಕಲ್ಪನೆ ಹಾಗೂ ಯೋಜನೆ ಭರಿತವಾಗಿ ಕೆಲಸ ನಿರ್ವಹಿಸುತ್ತಾರೆ. ಒಳ್ಳೆಯ ಮತ್ತು ಕೆಟ್ಟ ಸಂಗತಿಗಳನ್ನು ಸರಿಯಾಗಿ ಪರಿಗಣಿಸುವುದರಿಂದ ಜೀವನ ಉತ್ತಮವಾಗಿರುವಂತೆ ಮಾಡುವರು.
ಸಿಂಹ
ಸಿಂಹ ರಾಶಿಯ ಮಹಿಳೆಯರು, ಸಂಯೋಜಿತ, ವಿಶ್ವಾಸಾರ್ಹ ಹಾಗೂ ಉತ್ಸಾಹ ಭರಿತ ಮಹಿಳೆಯರಾಗಿ ಇರುತ್ತಾರೆ. ಇವರು ಉತ್ಸಾಹ ಭರಿತ ಪುರುಷರಿಗೆ ಪರಿಪೂರ್ಣ ಸಂಗಾತಿಯಾಗಿರುತ್ತಾರೆ. ಇವರು ತಮ್ಮ ಪತಿಯನ್ನು ಅತ್ಯಂತ ಪ್ರೀತಿ ಹಾಗೂ ಗೌರವದಿಂದ ಆರಾಧಿಸುತ್ತಾಳೆ. ಇವರಲ್ಲಿ ಅತ್ಯುತ್ತಮ ಚೈತನ್ಯ ಹಾಗೂ ವಿಷಯದಲ್ಲಿ ಸ್ಪಷ್ಟತೆ ಹೊಂದಿರುವುದರಿಂದ ಪರಿಣಾಮಕಾರಿಯಾಗಿ ಗುರಿ ನಿರ್ವಹಿಸಲು ಮುಂದಾಗುತ್ತಾರೆ. ಇವರು ಅತ್ಯಂತ ಶಕ್ತಿಯುತವಾದ ಹಾಗೂ ಬುದ್ಧಿವಂತ ಮಹಿಳೆ ಎಂದು ಪರಿಗಣಿಸಲಾಗುವುದು. ಎಲ್ಲಾ ಸಂದರ್ಭದಲ್ಲೂ ಸಂಗಾತಿಯ ಏಳಿಗೆ ಹಾಗೂ ಕುಟುಂಬದ ಹಿತಕ್ಕಾಗಿ ಹೆಚ್ಚಿನ ಶ್ರಮವನ್ನು ವಹಿಸುವರು. ಉತ್ತಮ ಚಿಂತನೆ ಹಾಗೂ ಸ್ಪಷ್ಟತೆಯನ್ನು ಹೊಂದಿರುವುದರಿಂದ ನಿರ್ಧಾರವನ್ನು ಉತ್ತಮವಾಗಿ ಕೈಗೊಳ್ಳುವರು. ತಾವು ಸಂತೋಷವಾಗಿರುವುದರ ಜೊತೆಗೆ ತನ್ನವರನ್ನೂ ಸಹ ಅಷ್ಟೇ ಖುಷಿಯಿಂದ ಇಡಲು ಪ್ರಯತ್ನಿಸುವರು.



Click it and Unblock the Notifications













