Latest Updates
-
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ!
ಮಸಾಜ್ ಮಾಡುತ್ತಿದ್ದ ಮಹಿಳೆಯ ವಿಡಿಯೋ ಚಿತ್ರೀಕರಣ! ಕೊನೆಗೆ ಏನಾಯಿತು ಗೊತ್ತೇ?
ತಂತ್ರಜ್ಞಾನದಿಂದಾಗಿ ಒಳ್ಳೆಯದು ಹಾಗೂ ಕೆಟ್ಟದು ಎರಡೂ ಆಗುವುದು. ತಂತ್ರಜ್ಞಾನವನ್ನು ಬಳಸಿಕೊಂಡು ಹಲವಾರು ಕುಕೃತ್ಯಗಳನ್ನು ಮಾಡುವ ಜನರನ್ನು ನಾವು ನೋಡಿದ್ದೇವೆ. ಅದೇ ರೀತಿಯಾಗಿ ತಂತ್ರಜ್ಞಾನ ಬಳಸಿ ಒಳ್ಳೆಯ ಸಾಧನೆಗಳನ್ನು ಮಾಡುವವರು ಇದ್ದಾರೆ. ತಂತ್ರಜ್ಞಾನ ನಿಜವಾಗಿಯೂ ಲಾಭಕಾರಿ ಆಗಿದ್ದರೂ ಇದನ್ನು ಯಾವ ರೀತಿ ಬಳಸುತ್ತೇವೆ ಎನ್ನುವುದು ತುಂಬಾ ಮುಖ್ಯವಾಗಿರುವುದು. ಕೆಲವೊಂದು ಮಾಲ್ ಗಳಲ್ಲಿ ಹಾಗೂ ಬಟ್ಟೆ ಅಂಗಡಿಗಳಲ್ಲಿ ಬಟ್ಟೆ ಬದಲಾಯಿಸುವಂತಹ ಚೇಜಿಂಗ್ ರೂಮ್ ನಲ್ಲಿ ರಹಸ್ಯ ಕ್ಯಾಮರಾಗಳು ಪತ್ತೆಯಾಗಿರುವುದು ಇದೆ. ಅದೇ ರೀತಿಯಾಗಿ ಮಹಿಳೆಯರೇ ಉಳಿದುಕೊಳ್ಳುವ ಪಿಜಿ ಹಾಗೂ ಹಾಸ್ಟೆಲ್ ಗಳಲ್ಲೂ ಇದು ಪತ್ತೆಯಾಗಿರುವುದು. ಇಂತಹ ಘಟನೆಗಳು ನಡೆಯುತ್ತಲೇ ಇರುತ್ತದೆ. ಇಲ್ಲಿ

ಮಹಿಳೆಯೊಬ್ಬರು ಮಸಾಜ್ ಮಾಡಿಕೊಳ್ಳಲು ಸಲೂನಿಗೆ ಹೋಗಿದ್ದಾಳೆ. ಆದರೆ ಅರೆನಗ್ನವಾಗಿದ್ದ ತನ್ನನ್ನು ಇನ್ನೊಂದು ಬದಿಯಿಂದ ವ್ಯಕ್ತಿಯೊಬ್ಬ ವೀಕ್ಷಿಸುತ್ತಿದ್ದಾನೆ ಎಂದು ಆಕೆಗೆ ತಿಳಿಯಿತು. ಈ ಬಗ್ಗೆ ನೀವು ಮುಂದೆ ಓದುತ್ತಾ ಸಾಗಿ... ಸಂಪೂರ್ಣ ಮಸಾಜ್ ಮಾಡುವುದನ್ನು ನೇರಪ್ರಸಾರ ಮಾಡಲಾಗಿತ್ತು! ತನ್ನ ಗುರುತನ್ನು ಹೇಳಲು ಬಯಸದ ಮಹಿಳೆಯೊಬ್ಬರು ಮಸಾಜ್ ವೇಳೆ ನೇರವಾಗಿ ಅದನ್ನು ಕ್ಯಾಮರಾ ಮೂಲಕ ನೋಡಲಾಗುತ್ತಿತ್ತು ಎಂದು ಮಾಧ್ಯಮದವರಿಗೆ ತಿಳಿಸಿರುವರು.

ರೆಕಾರ್ಡ್ ಮಾಡುತ್ತಿರುವುದು ಆಕೆಗೆ ತಿಳಿದಿರಲೇ ಇಲ್ಲ
ಆಕೆಗೆ ಹಠಾತ್ ಆಗಿ ಐಫೋನ್ ಎಕ್ಸ್ ಫೋನ್ ನ ಕ್ಯಾಮರಾವು ತನ್ನತ್ತ ಇರುವುದು ಗೊತ್ತಾಗುವುದು. ಫೋನ್ ನ ಮತ್ತೊಂದು ಬದಿಯಿಂದ ಶಬ್ಧ ಬಂದ ವೇಳೆ ಇದು ಮಹಿಳೆಯ ಗಮನಕ್ಕೆ ಬಂದಿದೆ.

ಸಿಬ್ಬಂದಿ ಹೇಳುವ ಪ್ರಕಾರ…
ಕುಪಿತಗೊಂಡ ಮಹಿಳೆಯು ಈ ಬಗ್ಗೆ ಸಿಬ್ಬಂದಿಯಲ್ಲಿ ಕೇಳಿದಾಗ, ಆ ಮೊಬೈಲ್ ನಲ್ಲಿ ವಿಡಿಯೋ ಕಾಲ್ ಸಂಪರ್ಕದಲ್ಲಿತ್ತು ಎಂದು ಉತ್ತರ ನೀಡಿದ್ದಾರೆ. ಇದನ್ನು ಮತ್ತಷ್ಟು ಪರಿಶೀಲನೆ ನಡೆಸಿದ ವೇಳೆ ವ್ಯಕ್ತಿಯೊಬ್ಬ ತನ್ನ ಸೊಂಟದ ಮೇಲೆ ನಗ್ನವಾಗಿ ಇರುವುದು ಕಂಡುಬಂದಿದೆ.

ಮಾಲಕರು ಇದನ್ನು ಅಲ್ಲೇ ಮುಗಿಸಿಬಿಡಲು ಬಯಸಿದರು
ಮಹಿಳೆಯು ಈ ಘಟನೆ ಬಗ್ಗೆ ಆನ್ ಲೈನ್ ನಲ್ಲಿ ಹಾಕಿದ್ದಾರೆ ಮತ್ತು ಈ ಸಲೂನ್ ನ ಮಾಲಕರು ತನಗೆ 2256 ಪೌಂಡ್ ನೀಡಿ ಅಲ್ಲೇ ಬಗೆಹರಿಸಲು ಬಯಸಿದ್ದರು. ಆದರೆ ಮಹಿಳೆ ಮಾತ್ರ ಇನ್ನು ಹೆಚ್ಚಿನ ಮೊತ್ತವನ್ನು ಪರಿಹಾರವಾಗಿ ಹೇಳಿದರು.



Click it and Unblock the Notifications
