Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ತಾಯಿ ಹೀಯಾಳಿಸಿದ್ದರಿಂದ 280,000 ಡಾಲರ್ ವ್ಯಯ ಮಾಡಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಳು!!
ತಾಯಿಗೆ ಹೆಗ್ಗಣವಾದರೂ ಮುದ್ದು ಎನ್ನುವ ಗಾದೆಯಿದೆ. ಇದು ನಿಜ ಕೂಡ. ತಾಯಿಯಾದವಳು ಯಾವತ್ತಿಗೂ ತನ್ನ ಮಕ್ಕಳ ಸೌಂದರ್ಯವನ್ನು ನೋಡಿ ಪ್ರೀತಿ ಮಾಡುವುದಿಲ್ಲ. ಮಕ್ಕಳು ಯಾವ ರೀತಿ ಇದ್ದರೂ ಆಕೆ ಅವರನ್ನು ಮುದ್ದು ಮಾಡುವಳು ಅಥವಾ ಪ್ರೀತಿಸುವಳು. ಆದರೆ ಇಲ್ಲೊಬ್ಬ ತಾಯಿಯು ತನ್ನ ಮಗಳು ಸುಂದರವಾಗಿಲ್ಲ ಎಂಬ ಕಾರಣಕ್ಕಾಗಿ ಆಕೆಯನ್ನು ದ್ವೇಷಿಸಲು ಆರಂಭಿಸಿರುವ ಘಟನೆ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ.
ತಾಯಿಯೇ ತನ್ನ ಮಗಳನ್ನು ದ್ವೇಷಿಸಲು ಆರಂಭಿಸಿದರೆ ಆಗ ಖಂಡಿತವಾಗಿಯೂ ಆ ಮಗಳ ಮನಸ್ಸು ನುಚ್ಚುನೂರಾಗಬಹುದು. ಆಕೆಯ ಆತ್ಮವಿಶ್ವಾಸವೇ ಕುಂದಿ ಹೋಗಬಹುದು. ಜಪಾನ್ ನಲ್ಲಿನ ಮಹಿಳೆಯೊಬ್ಬರು ತನ್ನ ಇಂತಹ ಕಥೆಯ ಬಗ್ಗೆ ಚಾನೆಲ್ ಒಂದರಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ನೀವು ಇನ್ನು ಹೆಚ್ಚಿನ ಮಾಹಿತಿ ತಿಳಿಯಿರಿ
ಜಪಾನ್ ನ 39ರ ಹರೆಯದ ಸುಬಾಕಿ ಎಂಬ ರೂಪದರ್ಶಿ ಆಗಿರುವರು. ಆಕೆ ತನ್ನ ಕಥೆಯನ್ನು ರಾಷ್ಟ್ರೀಯ ಚಾನೆಲ್ ನ ಕಾರ್ಯಕ್ರಮ ವೊಂದರಲ್ಲಿ ಹಂಚಿಕೊಂಡಿದ್ದಾರೆ ಮತ್ತು ಕಳೆದ 21 ವರ್ಷಗಳಿಂದ ತನ್ನ ಸೌಂದರ್ಯವನ್ನು ವೃದ್ಧಿಸಲು ಕಾಸ್ಮೆಟಿಕ್ ಸರ್ಜರಿಗಳಿಗಾಗಿ ತಾಣು ಸುಮಾರು 280000 ಡಾಲರ್ ವ್ಯಯ ಮಾಡಿರುವುದಾಗಿ ಅವರು ಹೇಳಿದ್ದಾರೆ.

ತನ್ನ ಬಾಲ್ಯವು ತುಂಬಾ ಸಂಕಷ್ಟದಿಂದ ಕೂಡಿತ್ತು ಮತ್ತು ತಾಯಿಯೇ ತನ್ನ ಸೌಂದರ್ಯದಿಂದ ತೃಪ್ತಿ ಹೊಂದಿಲ್ಲವೆಂದು ಹೇಳುತ್ತಿದ್ದಳು ಎಂದು ಆಕೆ ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದ್ದಾರೆ. ತನ್ನ ಉಳಿತಾಯದಿಂದ ಮೊದಲ ಕಾಸ್ಮೆಟಿಕ್ ಸರ್ಜರಿಗೆ ಹಣ ಖರ್ಚು ಮಾಡಿರುವುದಾಗಿಯೂ ಅವರು ಹೇಳಿಕೊಂಡಿರುವರು. ಹೊಕ್ಕೈಡೊದಲ್ಲಿ ಜನಪ್ರಿಯ ಮಾಲಕಿಯಾಗಿದ್ದ ಕಾರಣದಿಂದಾಗಿ ಹೆಚ್ಚಿನ ಹಣ ಸಂಪಾದನೆ ಮಾಡಿಕೊಂಡು ಮತ್ತಷ್ಟು ಕಾಸ್ಮೆಟಿಕ್ ಸರ್ಜರಿ ಮಾಡಿರುವುದಾಗಿ ಆಕೆ ಹೇಳಿದ್ದಾರೆ.
ದೇಹದ ವಿವಿಧ ಭಾಗಗಳಲ್ಲಿ ಆಕೆಗೆ ಹಲವಾರು ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿದೆ. ದವಡೆ, ಬಾಯಿ ಮತ್ತು ಮೂಗಿಗೂ ಕಾಸ್ಮೆಟಿಕ್ ಸರ್ಜರಿ ಮಾಡಲಾಗಿದೆ. ಕಳೆದ 21 ವರ್ಷಗಳಲ್ಲಿ ಆಕೆ ಹಲವಾರು ರೀತಿಯ ಕಾಸ್ಮೆಟಿಕ್ ಸರ್ಜರಿ ಮತ್ತು ಅದರ ಚಿಕಿತ್ಸೆಗೆ ಒಳಪಟ್ಟಿದ್ದಾರೆ. ಕೊನೆಯ ಬಾರಿಗೆ ಆಕೆ ಇಂಟಿಮಾ ಲೇಸರ್ ಎಂಬ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗೆ ಒಳಪಟ್ಟಿರುವರು. ಇದಕ್ಕಾಗಿ ಅವರು ಸುಮಾರು 1500 ಡಾಲರ್ ವ್ಯಯ ಮಾಡಿದ್ದಾರೆ.
ಹಿಂದೆ ಜಪಾನ್‌ನಲ್ಲಿ ಪ್ಲಾಸ್ಟಿಕ್ ಸರ್ಜರಿಯು ನಿಷೇಧಿಸಲ್ಪಟ್ಟಿತ್ತು. ಶಸ್ತ್ರಚಿಕಿತ್ಸೆ ಬಳಿಕ ತನ್ನ ಸೌಂದರ್ಯವನ್ನು ನೋಡಿ ಕೆಲವು ಜನರು ತುಂಬಾ ವಿಚಿತ್ರವಾಗಿ ನೋಡುತ್ತಿದ್ದರು. ಆದರೆ ತನ್ನ ಬದಲಾಗಿರುವ ಸೌಂದರ್ಯದ ಬಗ್ಗೆ ಜನರು ಏನು ಆಲೋಚನೆ ಮಾಡುತ್ತಾರೆ ಎಂದು ನನಗೆ ಯಾವುದೇ ಚಿಂತಿಯಿಲ್ಲ ಎನ್ನುತ್ತಾರೆ. ಹಲವಾರು ಶಸ್ತ್ರಚಿಕಿತ್ಸೆ ನಡೆಸಿಕೊಂಡಿರುವ ಆಕೆಗೆ ರೂಪದರ್ಶಿಯಾಗಿ ಕೆಲಸ ಮಾಡಲು ತುಂಬಾ ಖುಷಿಯಾಗುತ್ತಿದೆಯಂತೆ. ಆಕೆ ಬೇರೆಯವರಿಗೂ ಪ್ರೇರಣೆ ನೀಡುತ್ತಿದ್ದಾರೆ.



Click it and Unblock the Notifications
