Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ವಿಮಾನ ನಿಲ್ದಾಣದಲ್ಲೇ ಮಗುವನ್ನು ಬಿಟ್ಟು ತೆರಳಿದ ಮಹಿಳೆ! ಕೊನೆಗೆ ಏನಾಯಿತು ಗೊತ್ತೇ?
ವಿಮಾನ ಪ್ರಯಾಣಿಕರು ಮಾಡುವಂತಹ ಕೆಲವೊಂದು ಎಡವಟ್ಟುಗಳ ಬಗ್ಗೆ ನಾವು ಓದಿಕೊಂಡು ನಕ್ಕಿರುವುದು ಇದೆ. ಯಾಕೆಂದರೆ ವಿಮಾನದಲ್ಲಿ ಪ್ರತಿನಿತ್ಯವು ಏನಾದರೊಂದು ಎಡವಟ್ಟು ಮಾಡುವಂತಹ ಪ್ರಯಾಣಿಕರು ಇದ್ದೇ ಇರುತ್ತಾರೆ. ಕೆಲವರು ಬೆದರಿಕೆ ಹಾಕಿದರೆ, ಇನ್ನು ಕೆಲವರು ಕಿರುಕುಳ, ಮತ್ತೆ ಕೆಲವರು ಬಟ್ಟೆ ಬಿಚ್ಚುವುದು ಹೀಗೆ ನಡೆಯುತ್ತಲೇ ಇರುತ್ತದೆ. ಆದರೆ ಇಲ್ಲಿ ನಡೆದಿರುವುದನ್ನು ಓದಿದರೆ ನಿಮಗೂ ಅಚ್ಚರಿಯಾಗಬಹುದು. ಯಾಕೆಂದರೆ ಇಂತಹ ಜನ ಕೂಡ ಇದ್ದಾರೆಯಾ ಎಂದು ನೀವು ಮೂಗಿನ ಮೇಲೆ ಬೆರಳಿಡಬಹುದು.

ಇಲ್ಲೊಬ್ಬರು ಮಹಿಳೆಯ ತನ್ನ ಮಗುವನ್ನು ಬಿಟ್ಟು ವಿಮಾನವೇರಿಕೊಂಡು ಹೋಗಿರುವ ಘಟನೆಯು ನಡೆದಿದೆ. ಯಾರಾದರೂ ಮಗುವನ್ನು ಬಿಟ್ಟು ಹೋಗುತ್ತಾರಾ ಎನ್ನುವ ಪ್ರಶ್ನೆ ಬರಬಹುದು. ಆದರೆ ಇದು ನಿಜವಾಗಿಯು ನಡೆದಿರುವುದು. ಮಹಿಳೆಯು ವಿಮಾನದಲ್ಲಿ ಪ್ರಯಾಣ ಮಾಡಿದ ಬಳಿಕ ಮಗವನ್ನು ವಿಮಾನ ನಿಲ್ದಾಣದಲ್ಲೇ ಬಿಟ್ಟು ಬಂದಿದ್ದೇನೆ ಎನ್ನುವುದು ಮನವರಿಕೆ ಆಗಿದೆ. ಈ ಬಗ್ಗೆ ತಿಳಿದ ವಿಮಾನ ಸಿಬ್ಬಂದಿ ಮತ್ತೆ ವಿಮಾನ ಹಿಂತಿರುಗಿಸಿ ತಾಯಿಮಗುವನ್ನು ಜತೆಯಾಗಿಸಿದ್ದಾರೆ.

ಅರ್ಧ ದಾರಿಯಲ್ಲಿ ಮಗುವನ್ನು ಬಿಟ್ಟು ಬಂದಿರುವುದು ನೆನಪಾಯಿತು!
ಸೌದಿ ಅರೇಬಿಯಾದ ಜೆದ್ದಾದಿಂದ ಮಲೇಷಿಯಾದ ಕೌಲಲಾಂಪುರಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ಈ ವಿಚಿತ್ರ ಘಟನೆಯು ನಡೆದಿದೆ. ಈ ವಿಮಾನವೇರಿದ್ದ ಮಹಿಳೆಯು ತನ್ನ ಮಗುವನ್ನು ವಿಮಾನ ನಿಲ್ದಾಣದಲ್ಲೇ ಬಿಟ್ಟಿದ್ದರು.

ವಿಮಾನ ನಿಯಂತ್ರಕರ ಮಾತಿನ ಆಡಿಯೋದ ವಿಡಿಯೋ ಬಿಡುಗಡೆ
ವಾಯು ನಿಯಂತ್ರಕ ನಿರ್ವಾಹಕರು ಅರೇಬಿಕ್ ಭಾಷೆಯಲ್ಲಿ ಮಾತನಾಡುತ್ತಿರುವಂತಹ ಆಡಿಯೋ ರೆಕಾರ್ಡಿಂಗ್ ನ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ. ಈ ಸಂಭಾಷಣೆಯಲ್ಲಿ ವಾಯು ನಿಯಂತ್ರಕ ನಿರ್ವಾಹಕರು ವಿಮಾನವನ್ನು ಮರಳಿ ತರುವುದು ಯಾಕೆ ಎಂದು ಪೈಲಟ್ ಗೆ ಕಾರಣ ಕೇಳುವರು. ಇಂತಹ ಸನ್ನಿವೇಶಗಳಲ್ಲಿ ವಿಮಾನ ನಿಲ್ದಾಣ ಸಿಬ್ಬಂದಿ ನಿಯಮಾವಳಿ ರೂಪಿಸಲು ಪ್ರಯತ್ನ ಮಾಡುವರು.

ವಾಯು ನಿಯಂತ್ರಕ ಸಿಬ್ಬಂದಿ ಈ ಕಥೆಯನ್ನು ದೃಢಪಡಿಸಿಕೊಳ್ಳಲು ಹೇಳುವರು
ಇದು ನಿಜವೇ ಎನ್ನುವುದನ್ನು ದೃಢಪಡಿಸಿಕೊಳ್ಳಬೇಕು ಎಂದು ವಾಯು ನಿಯಂತ್ರಕ ಸಿಬ್ಬಂದಿಯು ಪೈಲಟ್ ಗೆ ಸೂಚಿಸುವರು. ಈ ವೇಳೆ ಪೈಲಟ್ ಹೀಗೆ ಉತ್ತರಿಸುವರು, ``ನಾವು ನಿಮಗೆ ಹೇಳುತ್ತಿದ್ದೇವೆ, ಪ್ರಯಾಣಿಕರೊಬ್ಬರು ತಮ್ಮ ಮಗುವನ್ನು ನಿಲ್ದಾಣದಲ್ಲೇ ಬಿಟ್ಟಿದ್ದಾರೆ ಮತ್ತು ವಿಮಾನದಲ್ಲಿ ಮುಂದೆ ಸಾಗಲು ನಿರಾಕರಿಸುತ್ತಿದ್ದಾರೆ.''

ವಿಮಾಣವು ಮರಳಿ ಬಂತು!
ಈ ಬಗ್ಗೆ ದೃಢಪಟ್ಟ ಬಳಿಕ ವಿಮಾನವನ್ನು ಮರಳಿ ಕಿಂಗ್ ಅಬ್ದುಲ್ ಅಝೀಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಯಿತು. ಇಲ್ಲಿ ತಾಯಿ ತನ್ನ ಮಗುವನ್ನು ಮತ್ತೆ ಸೇರಿಕೊಂಡರು.



Click it and Unblock the Notifications
