For Quick Alerts
ALLOW NOTIFICATIONS  
For Daily Alerts

2019ರ ವರ್ಷದಲ್ಲಿ ರಾಶಿ ಚಕ್ರದ ಪ್ರಕಾರ ನಿಮ್ಮ ಭವಿಷ್ಯ ಹೇಗಿದೆ ನೋಡಿ...

|

ಹೊಸ ವರ್ಷ ಎಂದಾಗ ಎಲ್ಲರಿಗೂ ಒಂದು ಬಗೆಯ ಹೊಸ ಆಶಯ ಹಾಗೂ ಭರವಸೆ ಮೂಡುವುದು. ಹೊಸ ಪ್ರಾರಂಭಗಳು ಹೊಸತನವನ್ನು ಹೊತ್ತು ತರಲಿ ಎನ್ನುವ ಬಯಕೆಯಿರುತ್ತದೆ. ಹೊಸ ಹೊಸ ಕನಸುಗಳು ಚಿಗುರುವುದೇ ಎನ್ನುವ ಕುತೂಹಲವು ಸಾಕಷ್ಟು ಗೋಪುರಗಳನ್ನು ಕಟ್ಟುತ್ತವೆ. ಅಂದುಕೊಂಡ ಸಂಗತಿಗಳು ನೆರವೇರಿದರೆ ನಮಗೂ ಒಂದು ಬಗೆಯ ಸಂತೋಷ ಹಾಗೂ ವರ್ಷ ಪೂರ್ತಿ ಒಳ್ಳೆಯದು ಸಂಭವಿಸುವುದು ಎನ್ನುವ ಭರವಸೆ ಇರುತ್ತದೆ. ಅದೇ ವರ್ಷದ ಆರಂಭದಲ್ಲಿಯೇ ನೋವು, ಆಸೆಗಳು ಭಗ್ನವಾಗುವುದು ಉಂಟಾದರೆ ಸಾಕಷ್ಟು ನೋವು ಹಾಗೂ ಭರವಸೆಯು ಕುಸಿಯುವುದು.

ನಮ್ಮ ರಾಶಿಚಕ್ರ ಹಾಗೂ ಕುಂಡಲಿಗೆ ಅನುಗುಣವಾಗಿ ನಮ್ಮ ಭವಿಷ್ಯದಲ್ಲಿ ಬದಲಾವಣೆ ಉಂಟಾಗುವುದು. ಅದನ್ನು ನಿಯಂತ್ರಿಸಲು ಅಥವಾ ಒದಗುವ ಸ್ಥಿತಿಯಿಂದ ಪಾರಾಗಲು ಸಾಧ್ಯವಿಲ್ಲ. ಒಳ್ಳೆಯದೇ ಇರಲಿ ಅಥವಾ ಕೆಟ್ಟದ್ದೇ ಇರಲಿ ಅದನ್ನು ನಿಭಾಯಿಸುವ ಶಕ್ತಿ ಹಾಗೂ ಮಾನಸಿಕ ಸಿದ್ಧತೆಯನ್ನು ಹೊಂದಿರಬೇಕು. ಹೊಸ ಬದಲಾವಣೆ ಅಥವಾ ಹೊಸ ವರ್ಷ ಎಂದಾಗ ಗ್ರಹಗಳು ತಮ್ಮ ನಿರಂತರ ಚಲನೆಯಲ್ಲಿ ತೊಡಗಿರುತ್ತವೆ. ಅವುಗಳ ಸಂಚಾರ ನಮ್ಮ ರಾಶಿ ಚಕ್ರದ ಮೇಲೆ ಯಾವ ಬದಲಾವಣೆಯನ್ನು ನೀಡುತ್ತವೆ? ಅವು ನಮ್ಮ ನಿತ್ಯ ಜೀವನದ ಮೇಲೆ ಹೇಗೆ ಪ್ರಭಾವ ನೀಡುವುದು ಎನ್ನುವುದರ ಮೇಲೆ ವರ್ಷದ ಚಲನೆ ಆರಂಭವಾಗುವುದು...

2019ರ ವರ್ಷದಲ್ಲಿ ಆಗುವ ಬದಲಾವಣೆಗಳು

2019ರ ವರ್ಷದಲ್ಲಿ ಆಗುವ ಬದಲಾವಣೆಗಳು

ನಮ್ಮ ಜೀವನ ಸುಂದರವಾಗಿರಬೇಕು ಅಥವಾ ವರ್ಷ ಪೂರ್ತಿ ನಾವು ಅಂದುಕೊಂಡಂತೆ ನಡೆಯಬೇಕು ಎಂದರೆ ನಮ್ಮ ಜೀವನದಲ್ಲಿ ಪ್ರಮುಖವಾದ ಸಂಬಂಧ, ಪ್ರೀತಿ, ವೃತ್ತಿ, ಆರೋಗ್ಯ ಮತ್ತು ಹಣಕಾಸಿನ ವಿಷಯದಲ್ಲಿ ಯಶಸ್ಸು ಹಾಗೂ ಸಮಾಧಾನ ಕರವಾದ ಸ್ಥಿತಿಯಿರಬೇಕು. ಆಗ ಜೀವನದಲ್ಲಿ ಒಂದು ಬಗೆಯ ನೆಮ್ಮದಿ ಎನ್ನುವುದು ಲಭಿಸುವುದು. ಆದರೆ ಎಲ್ಲಾ ಸಂಗತಿಗಳಲ್ಲೂ ಸಂತೃಪ್ತಿ ಎನ್ನುವುದು ಒಂದೇ ಸಮಯದಲ್ಲಿ ದೊರೆಯುವುದು ಎಂದರೆ ಅದೊಂದು ಅದೃಷ್ಟ ಎಂದು ಕರೆಯಬಹುದು. ಗ್ರಹಗಳ ಆಳ್ವಿಕೆ ಯಾವ ರೀತಿಯಲ್ಲಿ ಇದೆ ಎನ್ನುವುದರ ಆಧಾರದ ಮೇಲೆ ವ್ಯಕ್ತಿ ಜೀವನದಲ್ಲಿ ಪ್ರತಿಫಲವನ್ನು ಪಡೆದುಕೊಳ್ಳುವನು. 2019ರ ವರ್ಷ ನಿಮ್ಮ ಜೀವನದ ಪ್ರೀತಿ, ಸಂಬಂಧ, ಆರೋಗ್ಯ, ವೃತ್ತಿ ಮತ್ತು ಹಣಕಾಸಿನ ವಿಷಯದಲ್ಲಿ ಯಾವ ಬಗೆಯ ಬದಲಾವಣೆ ಅಥವಾ ಅದೃಷ್ಟವನ್ನು ತರುವುದು ಎನ್ನುವುದನ್ನು ನೀವು ತಿಳಿದು ಕೊಳ್ಳಬೇಕು ಎನ್ನುವ ಕುತೂಹಲ ಅಥವಾ ಆಶಯವನ್ನು ಹೊಂದಿದ್ದೀರಿ ಎಂದಾದರೆ ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿರುವ ವಿವರಣೆಯನ್ನು ಪರಿಶೀಲಿಸಿ. ಆಗ ಜೀವನದ ಮುಂದಿನ ದಿನಗಳ ಬಗ್ಗೆ ಸಾಕಷ್ಟು ಮಾನಸಿಕ ಸಿದ್ಧತೆಯನ್ನು ಹೊಂದಲು ಸಹಾಯವಾಗುವುದು.

ಮೇಷ

ಮೇಷ

ಪ್ರೀತಿಯ ವಿಷಯದಲ್ಲಿ 2019ರ ವರ್ಷ ನಿಮಗೆ ಅನುಕೂಲಕರ ಸ್ಥಿತಿಯನ್ನು ಕಲ್ಪಿಸಿಕೊಡುವುದು. ಆರಂಭದಲ್ಲಿ ನಿಮ್ಮ ಪ್ರೀತಿಯು ಒರಟು ಮತ್ತು ತಪ್ಪು ಗ್ರಹಿಕೆಯಿಂದ ಕೂಡಿರುವಂತೆ ಕಾಣಬಹುದು. ಆದರೆ ನಿಧಾನವಾಗಿ ನಿಮ್ಮ ಪ್ರೀತಿಯ ಬಾಗಿಲು ತೆರೆದು ಕೊಳ್ಳುವುದು. 2019ರ ವರ್ಷವು ನಿಮಗೆ ಪ್ರೇಮ ವಿವಾಹವನ್ನು ಕಲ್ಪಿಸುವುದು. ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ನೀವು ಉತ್ಸಾಹ ಭರಿತರಾಗಿ ಕೆಲಸದಲ್ಲಿ ತೊಡಗಿಕೊಳ್ಳುವಿರಿ. ಯಾವುದೇ ಕಷ್ಟದ ಸವಾಲುಗಳನ್ನು ಎದುರಿಸಲು ನೀವು ಹಿಂಜರಿಕೆಯನ್ನು ತೋರುವುದಿಲ್ಲ. ವರ್ಷದ ಆರಂಭವು ನಿಮಗೆ ಅನುಕೂಲಗಳನ್ನು ಕಲ್ಪಿಸಿಕೊಡುವುದು. ಉದ್ಯೋಗದಲ್ಲಿ ಇರುವವರಿಗೆ ಸಾಕಷ್ಟು ಒತ್ತಡ ಉಂಟಾಗುವುದು. ಅವುಗಳನ್ನು ಸೂಕ್ತ ರೀತಿಯಲ್ಲಿ ಎದುರಿಸುತ್ತಾ ಮುಂದೆ ಸಾಗುವಿರಿ. ಆರ್ಥಿಕವಾಗಿ ವರ್ಷದ ಆರಂಭದಲ್ಲಿ ಸ್ಥಿರತೆಯನ್ನು ಹೊಂದುವಿರಿ. ಅಲ್ಲದೆ ವರ್ಷದಲ್ಲಿ ಫಲಪ್ರದವಾದ ಮತ್ತು ಅರ್ಥ ಪೂರ್ಣವಾಗಿರುವಂತದ್ದನ್ನು ಪಡೆದುಕೊಳ್ಳುವಿರಿ. ಹಣಕಾಸಿಗೆ ಸಂಬಂಧಿಸಿದಂತೆ ಕೆಲವು ಹೂಡಿಕೆಯ ಮಾರ್ಗವನ್ನು ಕಂಡುಕೊಳ್ಳುವಿರಿ. ಆದರೂ ಹೆಚ್ಚಿನ ಲಾಭವನ್ನು ಪಡೆದು ಕೊಳ್ಳುವ ಸಾಮಥ್ರ್ಯವಿದೆ. ಹಣ ಗಳಿಸಲು ಶ್ರಮದಾಯಕವಾದ ಪ್ರಯತ್ನವನ್ನು ನೀವು ಕೈಗೊಳ್ಳಬೇಕಾಗುವುದು. ಆರೋಗ್ಯಕ್ಕೆ ಸಂಬಂಧಿಸಿದಂತೆ ವರ್ಷ ಪೂರ್ತಿ ನಿಮ್ಮ ಶಕ್ತಿಯ ಮಟ್ಟವು ಉತ್ತಮವಾಗಿರುತ್ತದೆ. ಚರ್ಮಕ್ಕೆ ಮತ್ತು ನರಕ್ಕೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅವುಗಳ ಕುರಿತು ಯಾವುದೇ ನಿಷ್ಕಾಳಜಿ ತೋರದಿರಿ.

Most Read:2019ರಲ್ಲಿ ಈ 5 ರಾಶಿ ಚಕ್ರದವರು ತಾವು ಬಯಸಿದ ಪ್ರೀತಿಯನ್ನು ಪಡೆದುಕೊಳ್ಳುವರು

ವೃಷಭ

ವೃಷಭ

ಈ ವರ್ಷ ಬದ್ಧತೆಯ ಕಲ್ಪನೆಯೊಂದಿಗೆ ನೀವು ಪ್ರೀತಿಯನ್ನು ಕಾಣುವಿರಿ. ನಿಮ್ಮ ಪ್ರೀತಿಯು ಕಲ್ಪನೆಯ ಮೂಲಕ ಬದಲಾವಣೆಯನ್ನು ಕಾಣುತ್ತದೆ. ಅಲ್ಲದೆ ಪ್ರೀತಿಯಲ್ಲಿ ನೀವು ಅತ್ಯಾಕರ್ಷಣೆಯನ್ನು ಕಂಡುಕೊಳ್ಳುವಿರಿ. ವೈತ್ತಿ ಜೀವನದಲ್ಲಿ ಮಹಾನ್ ಯೋಜನೆಯನ್ನು ಕೈಗೊಳ್ಳುವುದರ ಮೂಲಕ ಮುಂದೆ ಸಾಗುವಿರಿ. ಈ ವರ್ಷವು ನಿಮ್ಮ ಪರವಾಗಿ ನಿಲ್ಲುವುದು ಎಂದು ಹೇಳಲಾಗುವುದು. ನಿಮ್ಮ ಕೆಲಸದ ನೀತಿ ಉತ್ತಮವಾಗಲಿದೆ. ವರ್ಷದ ಅಂತ್ಯದ ವೇಳೆಗೆ ನೀವು ಕೆಲಸದಲ್ಲಿ ಸಾಕಷ್ಟು ಪ್ರತಿಫಲವನ್ನು ಕಂಡುಕೊಳ್ಳುವಿರಿ. ಹಣಕಾಸಿಗೆ ಸಂಬಂಧಿಸಿದಂತೆ ವರ್ಷದ ಆರಂಭದಲ್ಲಿ ಕೆಲವು ಹಣಕಾಸಿನ ಲಾಭವನ್ನು ಪಡೆದುಕೊಳ್ಳುವಿರಿ. ಅದು ಸಣ್ಣ ಪ್ರಮಾಣದಲ್ಲಿ ಇದ್ದರೂ ಸಹ, ಹೂಡಿಕೆ ಮಾಡಲು ನೀವು ಈ ವರ್ಷ ಒಳ್ಳೆಯ ಸಮಯವನ್ನು ಕಾಣುವಿರಿ. ಈ ವರ್ಷದಲ್ಲಿ ನೀವು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಮಾನಸಿಕವಾಗಿ ಅಶಾಂತಿ ಹಾಗೂ ಅನಾರೋಗ್ಯ ಉಂಟಾಗಬಹುದು. ಇದರಿಂದ ನೀವು ನಿತ್ಯವೂ ಸ್ವಲ್ಪ ಧ್ಯಾನ ಮಾಡುವುದನ್ನು ಕಲಿಯಬೇಕು.

ಮಿಥುನ

ಮಿಥುನ

ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ ಇದು ನಿಮಗೆ ಉತ್ತಮವಾದ ವರ್ಷ. ನಿಮ್ಮ ಪ್ರೀತಿಯನ್ನು ಹೇಳುವುದರ ಮೂಲಕ ಹೊಸದಾದ ಪ್ರೀತಿಯ ಜೀವನವನ್ನು ಕಾಣಬಹುದು. ಈಗಾಗಲೇ ನೀವು ಸಂಗಾತಿ ಅಥವಾ ಪ್ರೀತಿಯನ್ನು ಪಡೆದುಕೊಂಡಿದ್ದರೆ ನಿಮ್ಮ ಪ್ರೀತಿಯ ಜೀವನವು ಉತ್ತಮವಾಗಿರುತ್ತದೆ. ವೃತ್ತಿಗೆಸಂಬಂಧಿಸಿದಂತೆ ಕೆಲವು ಪ್ರಮುಖ ನಿರ್ಧಾರವನ್ನು ಕೈಗೊಳ್ಳುವ ಅನಿವಾರ್ಯ ತೆಗಳಿರುತ್ತವೆ. ನೀವು ಯಾವ ರೀತಿಯ ಯೋಜನೆ ಅಥವಾ ಕೆಲಸದಲ್ಲಿ ತೊಡಗಿಕೊಳ್ಳಬೇಕು ಎನ್ನುವುದರ ಬಗ್ಗೆ ಸ್ಪಷ್ಟವಾದ ನಿಲುವನ್ನು ಹೊಂದಿರಬೇಕು. ನಿಮ್ಮ ಮಾರ್ಗದಲ್ಲಿ ಸಿಗುವ ಅವಕಾಶಗಳನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದರ ಬಗ್ಗೆ ಯೋಚಿಸಿ. ಆರ್ಥಿಕವಾಗಿ ಕೆಲವೊಮ್ಮೆ ನಷ್ಟವನ್ನು ಎದುರಿಸ ಬೇಕಾಗುವುದು. ಇಲ್ಲವೇ ನೀವು ನಿರೀಕ್ಷಿಸಿರುವುದಕ್ಕಿಂತ ಕಡಿಮೆ ಆದಾಯವನ್ನು ಪಡೆಯಬಹುದು. ಎಲ್ಲವನ್ನೂ ಸವಾಲಾಗಿ ತೆಗೆದುಕೊಂಡು ಕೆಲಸವನ್ನು ನಿರ್ವಹಿಸಿ. ಆಗ ನೀವು ಅಂದು ಕೊಂಡಂತೆ ಹಣವನ್ನು ಗಳಿಸುವಿರಿ. ಈ ವರ್ಷ ನಿಮಗೆ ಉತ್ತಮವಾದ ಆರೋಗ್ಯ ಭಾಗ್ಯವಿದೆ ಎಂದು ಹೇಳಲಾಗುವುದು. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಸಹ ಕಾಣಿಸಿಕೊಳ್ಳುವುದು ಅಪರೂಪವಾಗಿರಬಹುದು. ಉತ್ತಮ ಆರೋಗ್ಯವೂ ವರ್ಷ ಪೂರ್ತಿ ಮುಂದುವರಿಯುವುದು.

ಕರ್ಕ

ಕರ್ಕ

ಪ್ರೀತಿಯ ಜೀವನದಲ್ಲಿ ನೀವು ಬದ್ಧರಾಗಿರುವಿರಿ. ಆದರೂ ಕೆಲವು ಪ್ರಕ್ಷುಬ್ಧತೆಗಳನ್ನು ನೀವು ಎದುರಿಸಬೇಕಾಗುವುದು. ಆದರೂ ಈ ವರ್ಷದ ಕೊನೆಯಲ್ಲಿ ಈ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಿರಿ. ವೃತ್ತಿ ಜೀವನದಲ್ಲಿ ಒಂದಿಷ್ಟು ಒತ್ತಡ ಉಂಟಾಗಬಹುದು. ಆದರೆ ನೀವು ತೋರುವ ಶ್ರಮದಾಯಕ ಕೆಲಸಗಳಿಗೆ ಸಾಕಷ್ಟು ಪ್ರಶಂಸೆ ಹಾಗೂ ಬಹುಮಾನವನ್ನು ಪಡೆದುಕೊಳ್ಳುವಿರಿ. 2019ರ ವರ್ಷವು ನಿಮಗೆ ಸ್ವಂತ ಉದ್ಯೋಗದಲ್ಲಿ ಆಸಕ್ತಿ ಹಾಗೂ ಲಾಭವನ್ನು ಪಡೆದುಕೊಳ್ಳಲು ಅನುವುಮಾಡಿಕೊಡುತ್ತದೆ. ಸಾಕಷ್ಟು ಆರ್ಥಿಕ ಅನುಕೂಲತೆಯನ್ನು ಅನುಭವಿಸುವಿರಿ. ದೈಹಿಕವಾಗಿ ಆರೋಗ್ಯ ಉತ್ತಮವಾಗಿರುತ್ತದೆ. ಆದರೆ ಮಾನಸಿಕ ಆರೋಗ್ಯದ ಬಗ್ಗೆ ಸ್ವಲ್ಪ ಚಿಂತನೆ ಹಾಗೂ ಕಾಳಜಿಯನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಬಹುದು. ಆದಷ್ಟು ಮಾನಸಿಕ ಒತ್ತಡವನ್ನು ಸೃಷ್ಟಿಸುವಂತಹ ಸಂಗತಿಯಿಂದ ದೂರವಿರುವುದು ಒಳಿತು.

ಸಿಂಹ

ಸಿಂಹ

ನೀವು ಈ ವರ್ಷ ಪ್ರೀತಿ ಹಾಗೂ ಸಂಬಂಧಗಳ ವಿಚಾರದಲ್ಲಿ ಹೆಚ್ಚು ಆನಂದ ಹಾಗೂ ಉತ್ಸಾಹವನ್ನು ಪಡೆದುಕೊಳ್ಳುವಿರಿ. ನೀವು ಅಂದುಕೊಂಡ ರೀತಿಯಲ್ಲಿಯೇ ನಿಮ್ಮ ಪ್ರೀತಿಯ ಪಯಣ ಮುಂದುವರಿಯುವುದು. ಬರಹಗಾರರಿಗೆ ಆಶಾದಾಯಕ ವೃತ್ತಿ ಜೀವನ ಲಭ್ಯವಾಗುವುದು. ಅದೃಷ್ಟದ ಗ್ರಹವಾದ ಗುರುವು ನಿಮ್ಮ ಐದನೇ ಮನೆಯಲ್ಲಿ ಆಲ್ವಿಕೆ ನಡೆಸುವುದರಿಂದ ಸಾಕಷ್ಟು ಉತ್ತಮ ಫಲವನ್ನು ವೃತ್ತಿ ಜೀವನದಲ್ಲಿ ಅನುಭವಿಸುವಿರಿ. ಹೊಸ ಕೆಲಸ ಉದ್ಯಮಗಳಲ್ಲಿ ನೀವು ಪಾಲ್ಗೊಳ್ಳಲು ಉತ್ತಮವಾದ ಸಮಯ ವಾಗಿರುತ್ತದೆ. ಕೆಲಸದ ವಿಷಯದಲ್ಲಿ ಸಾಕಷ್ಟು ಶ್ರಮವನ್ನು ಹಾಕುವುದರಿಂದ ಹಣದ ಹರಿವು ಹೆಚ್ಚುವುದು. ಕೆಲವೊಂದು ಉತ್ತಮ ಅವಕಾಶಗಳು ನಿಮಗೆ ಉತ್ತಮ ಅದೃಷ್ಟವನ್ನು ಕಲ್ಪಿಸಿಕೊಡುವುದು. ಹಣದ ಉಳಿತಾಯ ಮತ್ತು ಆಸ್ತಿಯಲ್ಲಿ ಹೂಡಿಕೆಯನ್ನು ಮಾಡಲು ಪ್ರಯತ್ನಿಸಿ. ಆಗ ಹಣದ ಹರಿವು ಹೆಚ್ಚುವುದು. ಆರೋಗ್ಯದಲ್ಲಿ ಸ್ವಲ್ಪ ಸಮಸ್ಯೆಗಳು ಎದುರಾಗ ಬಹುದು. ಜೀರ್ಣಕಾರಿ ಸಮಸ್ಯೆಗಳು ಹಾಗೂ ಶ್ವಾಸನಾಳದ ಸಮಸ್ಯೆಗಳು ಎದುರಾಗಬಹುದು. ಹಾಗಾಗಿ ಆರೋಗ್ಯದ ಬಗ್ಗೆ ಕೊಂಚ ಕಾಳಜಿ ವಹಿಸುವುದು ಸೂಕ್ತ.

Most Read:ರಾಶಿಚಕ್ರದ ಪ್ರಕಾರ 2019ರ ನಿಮ್ಮ ಪ್ರೀತಿ-ಜೀವನ ಹೇಗಿರಲಿದೆ? ಇಲ್ಲಿದೆ ಫುಲ್ ಡಿಟೇಲ್ಸ್

ಕನ್ಯಾ

ಕನ್ಯಾ

ನಿಮ್ಮ ಪ್ರೀತಿಯ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ಕಾಣುವಿರಿ. ವರ್ಷದ ಆರಂಭದಲ್ಲಿ ಕಾಣಿಸಿಕೊಳ್ಳುವ ಗ್ರಹಣದ ನಂತರ ಸಂಬಂಧ ಹಾಗೂ ಪ್ರೀತಿಯ ಜೀವನದಲ್ಲಿ ಚೇತರಿಕೆಯನ್ನು ಕಂಡುಕೊಳ್ಳುವಿರಿ. ಬೇರೆಯವರ ತಪ್ಪು ಗುರುತಿಸುವುದನ್ನು ಬಿಟ್ಟು, ನಿಮ್ಮ ತನ ಹಾಗೂ ನಿಮ್ಮನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸಿ. ಆಡಳಿತಾತ್ಮಕ ಗ್ರಹಗಳ ಕೆಲವು ಅನುಕೂಲಕರ ಬದಲಾವಣೆಯು ನಿಮ್ಮ ಮೇಲೆ ಪ್ರಭಾವ ಬೀರುತ್ತವೆ. ಇದರಿಂದಾಗಿ ನೀವು ನಿಮ್ಮ ಸಹೋದ್ಯೋಗಿಗಳಿಂದ ಅಥವಾ ಸ್ನೇಹಿತರಿಂದ ಹೊಸ ಅವಕಾಶಗಳನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಅವು ಉತ್ತಮ ಸ್ಥಿತಿಯನ್ನು ಕಲ್ಪಿಸಿಕೊಡುವುದು. ಈ ವರ್ಷ ನೀವು ಕೈಗೊಂಡ ಪಾಲುದಾರಿಕೆಯ ವ್ಯವಹಾರಗಳಲ್ಲಿ ಲಾಭವನ್ನು ಪಡೆಯುವಿರಿ. ವ್ಯವಹಾರದಲ್ಲಿ ಬದ್ಧತೆ ಹಾಗೂ ಶ್ರಮ ವಹಿಸುವುದರಿಂದ ಎಲ್ಲವೂ ಉತ್ತಮವಾಗಿ ಸಾಗುವುದು. ಗುರು ಗ್ರಹದ ಕೃಪೆ ನಿಮ್ಮ ಮೇಲೆ ಇರುವುದರಿಂದ ಆರೋಗ್ಯವು ಉತ್ತಮವಾಗಿರುತ್ತದೆ. ನೀವು ಬಯಸುವ ಆರೋಗ್ಯಕರ ಆಹಾರವನ್ನು ಚಿಂತೆಯಿಲ್ಲದೆ ಸೇವಿಸಬಹುದು. ತೂಕದಲ್ಲಿ ಹೆಚ್ಚಳ ಉಂಟಾಗುವ ಸಾಧ್ಯತೆಗಳಿವೆ ಎಂದು ತೋರುವುದು.

ತುಲಾ

ತುಲಾ

ಯುರೇನಸ್ ಗ್ರಹದ ಪ್ರಭಾವದಿಂದ ನೀವು ನಿಮ್ಮ ಪ್ರೀತಿ ಹಾಗೂ ಲೈಂಗಿಕ ವಿಷಯದಲ್ಲಿ ಸ್ಥಿರತೆಯುಂಟಾಗುವುದು. ಪ್ರೀತಿಯ ವಿಷಯದಲ್ಲಿ ಉತ್ತಮ ಫಲವನ್ನು ಅಥವಾ ಬದಲಾವಣೆಯನ್ನು ಕಾಣುವಿರಿ. ಇದಕ್ಕೆ ನಿಮ್ಮನ್ನು ಆಳುವ ಗ್ರಹಗಳೇ ಪ್ರಮುಖ ಕಾರಣವಾಗಿರುತ್ತವೆ. ಆರ್ಥಿಕ ವಿಷಯಗಳಿಗೆ ಸಂಬಂಧಿಸಿದಂತೆ ನೀವು ನಿಮ್ಮ ಗುರಿಯನ್ನು ಸಾಧಿಸಲು ಸಾಕಷ್ಟು ಗಮನವನ್ನು ನೀಡುವಿರಿ. ಹಣಕಾಸಿನ ಸ್ಥಿತಿಯು ಸ್ಥಿರತೆಯಿಂದ ಕೂಡಿರುತ್ತದೆ. ಹಣವನ್ನು ಖರ್ಚುಮಾಡುವ ವಿಷಯದಲ್ಲಿ ಬದ್ಧರಾಗಿರುವಿರಿ. ಬುದ್ಧಿವಂತಿಕೆಯ ಹೂಡಿಕೆಗೆ ಮುಂದಾಗುವಿರಿ. ಶ್ರಮ ಹಾಗೂ ಯೋಜನೆಗಳಿಗೆ ಅನುಗುಣವಾಗಿ ಉತ್ತಮ ಹಣಕಾಸನ್ನು ಪಡೆಯುವಿರಿ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿಯು ಉತ್ತಮವಾಗಿರುತ್ತವೆ. ಹೊಸ ಉದ್ಯೋಗವನ್ನು ಹುಡುಕುವವರಿಗೆ ಅನುಕೂಲ ಹಾಗೂ ಕೆಲಸ ದೊರೆಯುವುದು. ಮೇ ಮತ್ತು ಆಗಸ್ಟ್ ತಿಂಗಳ ಸಮಯದಲ್ಲಿ ಆರೋಗ್ಯದಲ್ಲಿ ಸಮತೋಲನವನ್ನು ಕಂಡುಕೊಳ್ಳುವಿರಿ. ಸ್ವಲ್ಪ ಯೋಗದ ಕಡೆಗೆ ಗಮನವನ್ನು ನೀಡುವುದರಿಂದ ನಿಮ್ಮ ಆರೋಗ್ಯದಲ್ಲಿ ಸಾಕಷ್ಟು ಉತ್ತಮ ಬದಲಾವಣೆ ಉಂಟಾಗುವುದು.

ವೃಶ್ಚಿಕ

ವೃಶ್ಚಿಕ

ಪ್ರೀತಿ ಅಥವಾ ಸಂಬಂಧಗಳ ವಿಷಯದಲ್ಲಿ ಈ ವರ್ಷ ನಿಮಗೆ ಹೊಸ ಬಗೆಯ ಕ್ರಿಯಾತ್ಮಕ ಆರಂಭವಿದೆ ಎನ್ನಲಾಗುವುದು. ಸಂಬಂಧಗಳಲ್ಲಿ ಆಳವನ್ನು ತಲುಲುತ್ತಿದ್ದಂತೆ ನೀವು ದೊಡ್ಡ ಬದಲಾವಣೆಯನ್ನು ಕಂಡುಕೊಳ್ಳುವಿರಿ. ಉತ್ತಮ ಸೃಜನಶೀಲತೆ, ಹಾಗೂ ದೃಢವಾದ ನಿಶ್ಚಯದಿಂದಾಗಿ ಪ್ರೀತಿಯಲ್ಲಿ ಹೊಸ ವರ್ಷವನ್ನು ನೀವು ಕಂಡುಕೊಳ್ಳುವಿರಿ. ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ವೃಶ್ಚಿಕ ರಾಶಿಯವರಿಗೆ 2019ರ ವರ್ಷ ಅತ್ಯುತ್ತಮವಾದ ವರ್ಷವಾಗಲಿದೆ. ವರ್ಷದ ಆರಂಭದಿಂದಲೇ ಧನಾತ್ಮಕ ಫಲಿತಾಂಶವನ್ನು ಕಂಡುಕೊಳ್ಳುವಿರಿ. ಗುರುವಿನ ಪ್ರಭಾವ ಉತ್ತಮವಾಗಿರುವುದರಿಂದ ನಿಮ್ಮ ಪ್ರತಿಭೆಗೆ ಸಾಕಷ್ಟು ಅವಕಾಶ ಹಾಗೂ ಯಶಸ್ಸು ದೊರೆಯುವುದು. ಇದರಿಂದ ಸಾಕಷ್ಟು ಹಣಕಾಸಿನ ಸಮಸ್ಯೆಗಳು ಪರಿಹಾರವಾಗುವುದು. ಅಪಾಯಕಾರಿ ಹಣಕಾಸಿನ ಉದ್ಯಮದ ಬಗ್ಗೆ ಸಾಕಷ್ಟು ಕಾಳಜಿಯನ್ನು ವಹಿಸಬೇಕು. ಆರೋಗ್ಯದಲ್ಲಿ ಸಾಕಷ್ಟು ಏರುಪೇರು ಉಂಟಾಗಬಹುದು. ಹಾಗಾಗಿ ವ್ಯಾಯಾಮ ಮತ್ತು ಆಹಾರ ಪದ್ಧತಿಯ ಬಗ್ಗೆ ಸಾಕಷ್ಟು ಎಚ್ಚರವನ್ನು ವಹಿಸಬೇಕು.

ಧನು

ಧನು

ನಿಮ್ಮ ಪ್ರೀತಿಯ ಜೀವನವನ್ನು ಈ ವರ್ಷ ಗಮನಾರ್ಹ ಸುಧಾರಣೆಯನ್ನು ಕಾಣುವುದು. ಉತ್ತಮ ಪ್ರವೃತ್ತಿಯಿಂದ ಜೀವನವು ಉತ್ಸುಕತೆಯಲ್ಲಿ ಮುಂದುವರಿಯುವುದು. ಗುರು ಗ್ರಹದ ಪ್ರಭಾವದಿಂದ ನೀವು ಆಧ್ಯಾತ್ಮಿಕ ವಿಷಯಗಳ ಕಡೆಗೆ ಆಸಕ್ತಿ ತೋರುವಿರಿ. ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡಬಹುದು. ಸಮಸ್ಯೆಗಳನ್ನು ಎದುರಿಸುವುದು ಹಾಗೂ ವಿಷಯಗಳಿಗೆ ಸ್ಪಂದಿಸುವುದರಿಂದ ಎಲ್ಲವೂ ಉತ್ತಮವಾಗಿ ಸಾಗುವುದು. ನಿಮ್ಮ ವೃತ್ತಿ ಜೀವನವು ಉತ್ತಮವಾಗಿರುತ್ತದೆ. ಆಕ್ರಮಣಕಾರಿ ಅವಕಾಶಗಳು ಎದುರಾಗಬಹುದು. ಉತ್ತಮ ಕೆಲಸಗಳನ್ನು ಕೈಗೊಳ್ಳುವುದರ ಮೂಲಕ ಪ್ರಚಾರ ಹಾಗೂ ಪ್ರಶಂಸೆಯನ್ನು ಪಡೆದುಕೊಳ್ಳುವಿರಿ. 2019ರ ವರ್ಷವು ಧನು ರಾಶಿಯವರಿಗೆ ಪ್ರಯೋಜನಕಾರಿ ವರ್ಷವಾಗಲಿದೆ. ನೀವು ಹಣಕಾಸಿಗೆ ಸಂಬಂಧಿಸಿದಂತೆ ಸ್ಥಿರತೆಯನ್ನು ಸಾಧಿಸುತ್ತೀರಿ. ಅದೃಷ್ಟವು ಈ ವರ್ಷ ನಿಮ್ಮ ಪರವಾಗಿದೆ. ಸುಲಭವಾದ ಅವಕಾಶ ಹಾಗೂ ಪ್ರಯತ್ನಗಳಿಂದ ನೀವು ಮುಂದೆ ಸಾಗುವಿರಿ. ಮಾನಸಿಕ ಮತ್ತು ದೈಹಿಕ ಯೋಗಕ್ಷೇಮಕ್ಕೆ ಬಹಳ ಮುಖ್ಯವಾದ ವರ್ಷವಾಗಲಿದೆ. ಆರೋಗ್ಯದ ಕಡೆಗೆ ನಿಮ್ಮದೇ ಆದ ಕಾಳಜಿಯನ್ನು ನೀವು ಹೊಂದಿರಬೇಕಾಗುವುದು.

ಮಕರ

ಮಕರ

ನೀವು ಹೊಸ ಸಂಬಂಧವನ್ನು ಬಯಸುತ್ತಿದ್ದರೆ ಅಥವಾ ಪ್ರೀತಿಯ ಜೀವನವನ್ನು ಹಂಬಲಿಸುತ್ತಿದ್ದರೆ ನಿಮಗೆ 2019ರ ವರ್ಷ ಉತ್ತಮವಾದ ವರ್ಷವಾಗಲಿದೆ. ಅನುಕೂಲಕರ ಗ್ರಹಗತಿ ಇರುವುದರಿಂದ ನೀವು ಪ್ರೀತಿ ಹಾಗೂ ವಿವಾಹದ ವಿಷಯದಲ್ಲಿ ಉತ್ತಮ ಫಲವನ್ನು ಪಡೆದುಕೊಳ್ಳುವಿರಿ. ನಿಮಗೆ ಸರಿಯಾದ ವ್ಯಕ್ತಿ ಸಂಗಾತಿಯಾಗಿ ಸಿಗುವರು. ವೃತ್ತಿ ಜೀವನದಲ್ಲಿ ಬದಲಾವಣೆ ಕಂಡುಕೊಳ್ಳಲು ಸಹ ಗ್ರಹಗಳು ಅನುಕೂಲಕರವಾದ ಅವಕಾಶ ಹಾಗೂ ಸಂದರ್ಭಗಳನ್ನು ಒದಗಿಸಿಕೊಡುತ್ತವೆ. ವರ್ಷದ ಎರಡನೇ ಹಂತದಲ್ಲಿ ನೀವು ವಿಶೇಷ ಹಣದ ಲಾಭವನ್ನು ಕಾಣುವಿರಿ. ಅನಿರೀಕ್ಷಿತ ಮೂಲಗಳಿಂದ ಹಣದ ಹರಿವು ಕಾಣುವಿರಿ. ಹೂಡಿಕೆ ಮಾಡುವುದರ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸುವುದು ಸೂಕ್ತ. ಈ ವರ್ಷ ಬಹುತೇಕವಾಗಿ ಉತ್ತಮ ಆರೋಗ್ಯ ಸ್ಥಿತಿಯನ್ನೇ ಅನುಭವಿಸುವಿರಿ. ನರಗಳಿಗೆ ಸಂಬಂಧಿಸಿದ ಕೆಲವು ಆರೋಗ್ಯ ಸಮಸ್ಯೆಗಳು ನಿಮಗೆ ಕಾಣಿಸಿಕೊಳ್ಳಬಹುದು. ಆರೋಗ್ಯದ ಬಗ್ಗೆ ಕಾಳಜಿ ತೋರುವುದು ಅಗತ್ಯ.

Most Read:2019ರಲ್ಲಿ ಕೇತುವಿನ ಚಲನೆ: ರಾಶಿಚಕ್ರಗಳ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ನೋಡಿ

ಕುಂಭ

ಕುಂಭ

ಕುಂಭ ರಾಶಿಯವರಿಗೆ 2019ರ ವರ್ಷವು ಪ್ರೀತಿಯ ವಿಷಯದಲ್ಲಿ ಸಾಕಷ್ಟು ಫಲಗಳನ್ನು ಪಡೆದುಕೊಳ್ಳುವರು. ಈಗಾಗಲೇ ಮೊದಲ ಪ್ರೀತಿಯಿಂದ ದೂರವಾಗಿದ್ದರೆ ಅವರೊಂದಿಗೆ ದೀರ್ಘಕಾಲದ ಸಂಪರ್ಕವನ್ನು ಪಡೆದುಕೊಳ್ಳಲು ಆಕ್ತಿಯನ್ನು ಪಡೆದುಕೊಳ್ಳುವಿರಿ. ಇದು ನಿಮಗೆ ದೊಡ್ಡ ಸಂಗತಿಯಾಗುವುದು. ಜೊತೆಗೆ ಸಮಾಜದಲ್ಲಿ ಒಂದಿಷ್ಟು ಮಾನ್ಯತೆಯನ್ನು ತಂದುಕೊಡುವುದು. ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ವಿಷಯಗಳು ಅತ್ಯುತ್ತಮವಾಗಿರುತ್ತವೆ. ಯಾವ ಬಗೆಯ ನಿರ್ಧಾರ ಹಾಗೂ ಕೆಲಸವನ್ನು ಕೈಗೊಳ್ಳಬೇಕು ಎನ್ನುವುದನ್ನು ನೀವು ತಿಳಿದಿರುತ್ತೀರಿ. ನಿಮ್ಮ ಹಿರಿಯರು ಅಥವಾ ಮೇಲಾಧಿಕಾರಿಗಳು ನಿಮ್ಮ ಕೆಲಸ ಹಾಗೂ ಸೃಜನಾತ್ಮಕ ಕಲ್ಪನೆಗಳನ್ನು ಮೆಚ್ಚುತ್ತಾರೆ. ಮೆಚ್ಚುಗೆಯನ್ನು ತಲೆಗೆ ತೆಗೆದುಕೊಮಡು ದಾರಿ ತಪ್ಪಬಾರದು. ನಿಮ್ಮ ಶ್ರದ್ಧೆ ಹಾಗೂ ಪರಿಶ್ರಮದ ಕೆಲಸವು ನಿಮಗೆ ಒಳಿತನ್ನು ಸೃಷ್ಟಿಸಿಕೊಡುವುದು. ಹಣಕಾಸಿಗೆ ಸಂಬಂಧಿಸಿದಂತೆ ಈ ವರ್ಷ ನೀವು ನಿಮ್ಮ ಖರ್ಚು ಮತ್ತು ವೆಚ್ಚಗಳ ಮೇಲೆ ಸಾಕಷ್ಟು ಹಿಡಿತವನ್ನು ಹೊಂದಿರಬೇಕು. ಅಗತ್ಯ ಹಾಗೂ ಅನಗತ್ಯ ವ್ಯಯಗಳು ಯಾವವು ಎನ್ನುವುದನ್ನು ಮೊದಲು ಪರಿಶೀಲಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಲಾಗುವುದು. ಆಗ ಮಾತ್ರ ವರ್ಷದ ಅಂತ್ಯದ ವೇಳೆಗೆ ಆದಾಯದ ಮೂಲವನ್ನು ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತೀರಿ. ವರ್ಷ ಪೂರ್ತಿಯು ನಿಮ್ಮ ಆರೋಗ್ಯವು ಉತ್ತಮ ಸ್ಥಿತಿಯಲ್ಲಿ ಇರುತ್ತದೆ. ಶೀತ, ಕೆಮ್ಮು ಮತ್ತು ಸಾಂದರ್ಭಿಕ ಜ್ವರ ಮುಂತಾದ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕಾಡಬಹುದು. ಅದಕ್ಕಾಗಿ ಅಧಿಕ ಚಿಂತನೆ ನಡೆಸುವ ಅಗತ್ಯವಿರುವುದಿಲ್ಲ. ಪ್ರಯಾಣ ಕೈಗೊಳ್ಳುವಾಗ ಅಲ್ಲಿ ಸಿಗುವ ಆಹಾರದ ಬಗ್ಗೆ ಸ್ವಲ್ಪ ಜಾಗರೂಕರಾಗಿರಬೇಕು ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ.

Most Read:ಜನವರಿ 2019: ಈ ತಿಂಗಳ ಹುಣ್ಣಿಮೆಯಿಂದ 5 ರಾಶಿಚಕ್ರಗಳ ಮೇಲೆ ಆಗುವ ಪರಿಣಾಮಗಳು

ಮೀನ

ಮೀನ

2019ರ ವರ್ಷವು ನಿಮಗೆ ಪ್ರೀತಿಯ ವಿಷಯದಲ್ಲಿ ಸಾಕಷ್ಟು ಭರವಸೆಗಳನ್ನು ನೀಡುತ್ತದೆ. ವರ್ಷದ ಮಧ್ಯಮದ ಅವಧಿಯಲ್ಲಿ ಕೆಲವು ಹಳೆಯ ಸಂಬಂಧಗಳು ನಿಮ್ಮಿಂದ ದೂರ ಸರಿಯಬಹುದು. ನೀವು ನಿಮ್ಮ ಪ್ರೀತಿ ಪಾತ್ರರು ನಿಮ್ಮನ್ನು ಹೆಚ್ಚು ಇಷ್ಟಪಡುವಂತೆ ಮಾಡಬೇಕು. ನಿಮ್ಮ ಪ್ರೀತಿಯ ಪರಿಯನ್ನು ನೀವು ಅವರಿಗೆ ತೋರಿಸಬೇಕು. ನಿಮ್ಮ ಭಾವನೆಗಳನ್ನು ನಿಮ್ಮಲ್ಲಿಯೇ ಅಡಗಿಸಿಟ್ಟುಕೊಂಡರೆ ಯಾವುದೇ ಪ್ರತಿಫಲ ದೊರೆಯದು ಎಂದು ಸಲಹೆ ನೀಡಲಾಗುವುದು. ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಾಹಸ ಮತ್ತು ಯೋಜನೆಯನ್ನು ಪ್ರಾಯೋಗಿಕವಾಗಿ ಕೈಗೊಳ್ಳಬೇಕಾಗುವುದು. ನಿಮ್ಮ ಕೆಲಸದಲ್ಲಿ ವಿಸ್ತರಣೆ ಹಾಗೂ ಬೆಳವಣಿಗೆಯನ್ನು ಕಾಣಲಿದ್ದೀರಿ. ನಿಮ್ಮ ಮಾರ್ಗದ ಒಂದು ತೆರನಾದ ಸ್ಪಷ್ಟತೆ ಸಾಧಿಸಬಹುದು. ಅನಗತ್ಯವಾದ ಹಿಂಜರಿಕೆ ಯನ್ನು ತೊಡೆದುಹಾಕಿ. ನಿಮ್ಮ ಜೀವನ ಶೈಲಿಯಲ್ಲಿ ಮುಂದುವರಿಯಿರಿ.

English summary

What 2019 Has In Store For You According To Your Zodiac Sign

2019 is here and everyone's hopeful for the new year. The new beginnings give us new hopes and new dreams. Predicting what the new year has in store for you, we've compiled a list of how the year's going to treat you in terms of relationship, love, career, health and finances. Read on to
X
Desktop Bottom Promotion