Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ರಾತ್ರಿ ಬೆಳಗಾಗುದರೊಳಗಡೆ ಗರ್ಭಧರಿಸಿ, ಮಗುವಿಗೆ ಜನ್ಮ ನೀಡಿದ ಮಹಿಳೆ!!
ಜೀವನದಲ್ಲಿ ಕೆಲವೊಂದು ಅಚ್ಚರಿಗಳು ತುಂಬಾ ಖುಷಿ ನೀಡುವುದು. ಇನ್ನು ಕೆಲವೊಂದು ನೋವು ಕೂಡ. ಆದರೆ ನಾವು ನಿರೀಕ್ಷಿಸದೆ ಇರುವಂತಹ ಅಚ್ಚರಿಗಳು ನಡೆದರೆ ಆಗ ಖಂಡಿತವಾಗಿಯೂ ನಮಗೆ ತುಂಬಾ ಸಂತೋಷವಾಗುವುದು. ಕೆಲವೇ ಗಂಟೆಯಲ್ಲಿ ಗರ್ಭಿಣಿ ಎಂದು ತಿಳಿದು ಮಗುವಿಗೆ ಜನ್ಮ ನೀಡಿದರೆ ಅದಕ್ಕಿಂತ ದೊಡ್ಡ ಅಚ್ಚರಿ ಇನ್ನೇನು ಇದೆ ಎಂದು ಹೇಳಿ. ಆದರೆ ಇಂತಹ ಘಟನೆಯೊಂದು ನಡೆದಿದೆ.

ಮಹಿಳೆಯೊಬ್ಬಳು ರಾತ್ರಿ ವೇಳೆ ಸಾಮಾನ್ಯದಂತೆ ಮಲಗಿದ್ದಾಳೆ. ಆದರೆ ಬೆಳಗ್ಗೆ ಎದ್ದಾಗ ಹೊಟ್ಟೆ ಗರ್ಭಿಣಿಯಂತೆ ದೊಡ್ಡದಾಗಿದೆ. ಈ ಘಟನೆಯ ಕುತೂಹಲವನ್ನು ತಣಿಸಿಕೊಳ್ಳಲು ನೀವು ಈ ಲೇಖನ ಓದುತ್ತಾ ಸಾಗಿ. ತಾನು ಗರ್ಭಿಣಿ ಎಂದು ತಿಳಿದ ಮಹಿಳೆ ಅದಾದ 45 ನಿಮಿಷದಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಆಕೆಗೆ ಯಾವ ರೀತಿಯಲ್ಲಿ ಅಚ್ಚರಿಯಾಗಿರಬಹುದು ಎಂದು ಊಹಿಸಲು ಸಾಧ್ಯವಾಗದು.

ಎಮ್ಮಾಲೌಯಿಸ್ ಲೆಗೇಟ್ ಗೆ ಜೀವನದ ಅತೀ ದೊಡ್ಡ ಅಚ್ಚರಿಯಾಗಿತ್ತು
19ರ ಹರೆಯದ ಎಮ್ಮಾಲೌಯಿಸ್ ಲೆಗೇಟ್ಗೆ ಜೀವನದ ಅತೀ ದೊಡ್ಡ ಅಚ್ಚರಿ ಕಾಡಿತ್ತು. ಆ ದಿನ ಬೆಳಗ್ಗೆ ಎದ್ದಾಗ ಗರ್ಭಿಣೆಯಂತೆ ಹೊಟ್ಟೆ ದೊಡ್ಡದಾಗಿತ್ತು. ಹಿಂದಿನ ರಾತ್ರಿ ಮಲಗುವ ವೇಳೆ ಎಲ್ಲವೂ ಸಾಮಾನ್ಯವಾಗಿತ್ತು.

ಆಘಾತದಿಂದ ಆಕೆ ತಾಯಿಗೆ ಸುದ್ದಿ ತಿಳಿಸಿದಳು
ಎಮ್ಮಾಲೌಯಿಸ್ ಲೆಗೇಟ್ ಒಂದೇ ರಾತ್ರಿ ತನ್ನ ಹೊಟ್ಟೆಯು ಗರ್ಭಿಣಿಯಂತೆ ಆಗಿದೆ ಎಂದು ಮನವರಿಕೆ ಮಾಡಿಕೊಂಡ ಆಕೆ ಆಘಾತದಲ್ಲಿ ತಾಯಿಗೆ ಕರೆ ಮಾಡಿ ಇದನ್ನು ತಿಳಿಸಿದ್ದಾಳೆ. ಆಕೆಯ ತಾಯಿ ಆಘಾತಗೊಂಡು ತನ್ನ ತಾಯಿಯನ್ನು ಸಂಪರ್ಕಿಸಿದ್ದಾರೆ. ಆಕೆಯ ಹೊಟ್ಟೆಯು ಗ್ಯಾಸ್ ನಿಂದ ಹೀಗೆ ಆಗಿದೆಯಾ ಎಂದು ತಿಳಿಯಲು ಪ್ರಯತ್ನಿಸಿದರು. ಆದರೆ ಎಮ್ಮಾಲೌಯಿಸ್ ಲೆಗೇಟ್ ಅಜ್ಜಿ ಲೂಸಿ ಇದನ್ನು ನೋಡಿ, ಇದು ಗರ್ಭಿಣಿ ಹೊಟ್ಟೆ ಎಂದು ದೃಢವಾಗಿ ಹೇಳಿದ್ದಾರೆ.

ಅವಳು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು
ಆಕೆಯನ್ನು ಆಸ್ಪತ್ರೆಗೆ ಕಾರಿನಲ್ಲಿ ಕರೆದುಕೊಂಡು ಹೋಗುತ್ತಿರುವ ವೇಳೆ ಹಿಂದಿನ ಸೀಟಿನಲ್ಲಿದ್ದ ಎಮ್ಮಾಲೌಯಿಸ್ ಲೆಗೇಟ್ ಮಗುವಿಗೆ ಜನ್ಮ ನೀಡಿದ್ದಾಳೆ.

45 ನಿಮಿಷದಲ್ಲಿ ಎಲ್ಲವೂ ನಡೆಯಿತು
ಹೊಟ್ಟೆ ದೊಡ್ಡದಾಗಿದೆ ಎಂದು ತಿಳಿದ ಕೇವಲ 45 ನಿಮಿಷದಲ್ಲಿ ಎಲ್ಲವೂ ನಡೆಯಿತು.

ಆಕೆಗೆ ಇದು ತಿಳಿಯದೆ ಇರಲು ಕಾರಣವಾದರೂ ಏನು?
ಎಮ್ಮಾಲೌಯಿಸ್ ಲೆಗೇಟ್ ಗೆ ಕೆಲವು ಸಮಯದಿಂದ ಋತುಚಕ್ರ ಆಗುತ್ತಿರಲಿಲ್ಲ ಮತ್ತು ಗರ್ಭನಿರೋಧಕ ಮಾತ್ರೆ ಸೇವನೆ ಮಾಡುವ ಕಾರಣದಿಂದಾಗಿ ಹೀಗೆ ಆಗಿರಬಹುದು ಎಂದು ಆಕೆ ಭಾವಿಸಿದ್ದಳು. ವಿಚಿತ್ರವೆಂದರೆ ಆಕೆಗೆ ಯಾವುದೇ ರೀತಿಯ ಗರ್ಭಧಾರಣೆ ಲಕ್ಷಣಗಳು ಅಥವಾ ಬೆಳಗ್ಗಿನ ಸಮಸ್ಯೆಗಳು ಅಥವಾ ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವಂತಹ ಅತಿಯಾದ ತಿನ್ನುವ ಬಯಕೆಯು ಕಂಡುಬರಲೇ ಇಲ್ಲ. ಇದರಿಂದಾಗಿ ಆಕೆ ಗರ್ಭಧಾರಣೆ ಪರೀಕ್ಷೆ ಮಾಡಿಕೊಳ್ಳಲು ಕೂಡ ಹೋಗಲಿಲ್ಲ.

ವೈದ್ಯರು ಹೇಳುವ ಪ್ರಕಾರ
ಮಗು ಬೆನ್ನಿನ ಕೆಳಗಿನ ಭಾಗದಲ್ಲಿ ಕುಳಿತುಕೊಂಡಿರಬಹುದು. ಇದು ಸಾಮಾನ್ಯ ಎಂದು ಭಾವಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.ಎಮ್ಮಾಲೌಯಿಸ್ ಲೆಗೇಟ್ ಈಗ ಗರ್ಭನಿರೋಧಕ ಮಾತ್ರೆಗಳ ಬದಲಿಗೆ ಬೇರೆ ವಿಧಾನ ಬಳಸಿಕೊಳ್ಳುತ್ತಿದ್ದಾರೆ ಮತ್ತು ನಿಯಮಿತವಾಗಿ ಗರ್ಭಧಾರಣೆ ಪರೀಕ್ಷೆ ಮಾಡಿಸಿ ಕೊಳ್ಳುತ್ತಿದ್ದಾರೆ. ಮತ್ತೊಮ್ಮೆ ಇಂತಹ ಅಚ್ಚರಿಯ ಗರ್ಭ ಧರಿಸದೆ ಇರಲಿ ಎನ್ನುವುದನ್ನು ದೃಢಪಡಿಸಲು ಆಕೆ ನಿರ್ಧರಿಸಿದ್ದಾರೆ. ಇಂತಹ ಘಟನೆಗಳು ನಡೆಯುವುದು ತುಂಬಾ ಅಪರೂಪ. ಆದರೆ ಖಂಡಿತವಾಗಿಯೂ ಇದು ಅಚ್ಚರಿ ಉಂಟು ಮಾಡುವುದು. ಈ ಘಟನೆ ಬಗ್ಗೆ ನಿಮ್ಮ ಅನಿಸಿಕೆ ಏನು? ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್ ನಲ್ಲಿ ಬರೆಯಲು ಮರೆಯಬೇಡಿ.



Click it and Unblock the Notifications
