Latest Updates
-
ಯುಗಾದಿ ಹಬ್ಬಕ್ಕೆ ಮಾಡಿ ಗಸೆಗಸೆ ಪಾಯಸ: ಬಾಯಲ್ಲಿ ನೀರು ತರಿಸುವ ಸಿಹಿ -
Summer Garden: ಬೇಸಿಗೆಯಲ್ಲಿ ಬಾಡದ ಹೂವುಗಳಿವು! ಈ 5 ಹೂಗಳನ್ನು ನೆಡಿದ್ರೆ ಸಾಕು.. ನಿಮ್ಮ ಗಾರ್ಡನ್ ಕಲರ್ಫುಲ್ -
ಸೂರ್ಯ ಬುಧನಿಂದ ಬುಧಾದಿತ್ಯ ಯೋಗ; ಈ ರಾಶಿಯವರ ಬದುಕಲ್ಲಿ ಬೆಳಕು, ಕಷ್ಟಗಳು ಪರಿಹಾರ -
ಯುಗಾದಿ ಹೊಸತೊಡಕು.. ಮಟನ್ ಖರೀದಿಸುವಾಗ ಮೋಸ ಹೋಗಬೇಡಿ! ಫ್ರೆಶ್ ಇದ್ಯಾ? ಅಥವಾ ನಿನ್ನೆಯದ್ದೇ? ಹೀಗೆ ಗುರುತಿಸಿ -
ಒಂದು ಹನಿ ಎಣ್ಣೆ ಕೆಳಗೆ ಬೀಳದಂತೆ ಬಾಟಲಿಗೆ ಹಾಕೋ ಐಡಿಯಾ ಗೊತ್ತಾ? ಈ ಟ್ರಿಕ್ಸ್ ನೀವೆಂದು ಬಳಸಿರಲ್ಲ! -
ಸ್ಟೌವ್ ಬೇಡ, ಎಣ್ಣೆ ಬೇಡ..! 5 ನಿಮಿಷದಲ್ಲಿ ಸಿದ್ಧವಾಗುತ್ತೆ ಈ ಇಡಿಚ್ಚ ಮೊಸರು ಚಟ್ನಿ! ಒಮ್ಮೆ ಟ್ರೈ ಮಾಡಿ -
ಬಾಯಿ ಚಪ್ಪರಿಸಿ ಸವಿಯುವ ಮಾವಿನಮಿಡಿ ಉಪ್ಪಿನಕಾಯಿ: ಮನೆಯಲ್ಲೇ ಮಾಡುವ ವಿಧಾನ! -
Eid-ul-Fitr 2026: ಮಾ.20 ಅಥವಾ ಮಾ.21? ಭಾರತದಲ್ಲಿ ರಂಜಾನ್ ಯಾವ ದಿನ? ರಜೆ ಯಾವಾಗ? ತಿಳಿಯಿರಿ -
ಗುರು-ಶುಕ್ರನಿಂದ ಗಜಕೇಸರಿ ರಾಜಯೋಗ: ಯುಗಾದಿ ಬಳಿಕ ಈ ರಾಶಿಯವರ ಜೀವನದಲ್ಲಿ ಅದೃಷ್ಟ! -
ಶನಿ ಕೃಪೆ ಶುರು.. ಹಣ, ಯಶಸ್ಸು, ಶುಭ ಸುದ್ದಿ! ಯುಗಾದಿ ಬಳಿಕ ಈ 3 ರಾಶಿಗಳಿಗೆ ಭಾರೀ ಅದೃಷ್ಟ
2019ರಲ್ಲಿ ಈ 5 ರಾಶಿ ಚಕ್ರದವರು ತಾವು ಬಯಸಿದ ಪ್ರೀತಿಯನ್ನು ಪಡೆದುಕೊಳ್ಳುವರು
ಮಾನವನ ಹುಟ್ಟು ಪ್ರಕೃತಿಯಲ್ಲಿ ಒಂದು ಕುತೂಹಲಕಾರಿಯಾಗಿದೆ. ಎಲ್ಲಾ ಜೀವ ಸಮೂಹಗಳಿಗಿಂತ ಬುದ್ಧಿವಂತರು. ಪ್ರತಿಯೊಂದು ವಿಚಾರದಲ್ಲೂ ಶ್ರೇಷ್ಠತೆಯನ್ನು ಪಡೆದುಕೊಂಡವನು. ಇತರ ಪ್ರಾಣಿ-ಪಕ್ಷಿಗಳ ಮೇಲೆ ಹಿಡಿತವನ್ನು ಸಾಧಿಸಬಲ್ಲವನು. ಇವನಿಗೆ ತನ್ನದೇ ಆದ ಕುಟುಂಬ, ಪ್ರೀತಿ ಹಾಗೂ ಸಮಾಜವನ್ನು ಕಟ್ಟುವಂತಹ ಸಾಮಥ್ರ್ಯ ಇರುತ್ತದೆ. ಅದರಲ್ಲೂ ಇನ್ನೊಂದು ಜೀವದ ಪ್ರೀತಿಯನ್ನು ಪಡೆದು, ಸಂತೋಷವನ್ನು ಹೊಂದುವ ಸಾಮಥ್ರ್ಯ ಇರುತ್ತದೆ. ಹಾಗಾಗಿ ಮನುಷ್ಯನ ಆದ್ಯತೆಗಳ ಪಟ್ಟಿಯಲ್ಲಿ ಪ್ರೀತಿಯು ಪ್ರಮುಖ ಸ್ಥಾನವನ್ನು ಪಡೆದುಕೊಳ್ಳುವುದು.
ಜೀವಕ್ಕೆ ಒಂದು ಭರವಸೆ ಹಾಗೂ ಆತ್ಮವಿಶ್ವಾಸವನ್ನು ಕಲ್ಪಿಸುವ ಶಕ್ತಿ ಪ್ರೀತಿಗೆ ಇದೆ. ವ್ಯಕ್ತಿ ತಾನು ಬಯಸಿದ ವ್ಯಕ್ತಿ ಹಾಗೂ ಪ್ರೀತಿ ದೊರೆಯಿತು ಎಂದಾದರೆ ಎಲ್ಲಿಲ್ಲದ ಸಂತೋಷ ಹಾಗೂ ಸಡಗರವನ್ನು ಅನುಭವಿಸುತ್ತಾನೆ. ಅವನ ಆ ಸಂತೋಷವೇ ಎಲ್ಲಾ ಕೆಲಸಕಾರ್ಯಗಳಿಗೆ ನ್ಯಾಯವನ್ನು ಒದಗಿಸುವಂತಹ ಉತ್ತೇಜನ ನೀಡುವುದು. ಅಲ್ಲದೆ ಇತರರೊಂದಿಗೂ ಸದ್ಗುಣದಿಂದ ವರ್ತಿಸಲು ಪ್ರೇರೇಪಣೆ ದೊರೆಯುವುದು. ಜೊತೆಗೆ ಅಸಹಾಯಕರಿಗೆ ಸಹಾಯ ಹಾಗೂ ಅನುಕಂಪ ತೋರುವ ಗುಣವು ಕರಗತವಾಗುವುದು. ಇಂತಹ ಒಂದು ಅದ್ಭುತ ಶಕ್ತಿಯನ್ನು ನೀಡುವ ಪ್ರೀತಿಯು 2019ರ ವರ್ಷದಲ್ಲಿ ಕೆಲವರಿಗೆ ಅದೃಷ್ಟದ ಸಂಗತಿಯಾಗಲಿದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಮ್ಮ ಜೀವನದಲ್ಲಿ ಸಿಗುವ ಪ್ರೀತಿ ಹಾಗೂ ಆತ್ಮೀಯ ಭಾವನೆಗಳೆಲ್ಲವೂ ಅವರವರ ರಾಶಿಚಕ್ರ ಹಾಗೂ ಗ್ರಹಗತಿಗಳ ಪ್ರಭಾವದಿಂದ ಕೂಡಿರುತ್ತದೆ. ಈ ವರ್ಷದಲ್ಲಿ ಅಂದರೆ 2019ರಲ್ಲಿ ನಡೆಯುವ ಗ್ರಹಗಳ ಚಲನೆ ಅಥವಾ ಬದಲಾವಣೆಯು ಪ್ರತಿಯೊಂದು ರಾಶಿಚಕ್ರದ ಮೇಲೆ ವಿಶೇಷ ಪ್ರಭಾವವನ್ನು ಬೀರುವುದು. ಅದರಲ್ಲಿ ಐದು ರಾಶಿಚಕ್ರದವರು ಪ್ರೀತಿಯ ವಿಷಯದಲ್ಲಿ ಹೆಚ್ಚು ಅದ್ಭುತವನ್ನು ಹಾಗೂ ಅದೃಷ್ಟವನ್ನು ಹೊಂದುವರು. ತಾವು ಅಂದುಕೊಂಡಂತೆಯೇ ಎಲ್ಲವನ್ನೂ ಪಡೆದುಕೊಳ್ಳುವರು ಎಂದು ಹೇಳಲಾಗುವುದು. ಸಾಕಷ್ಟು ಜನರು ತಾವು ಬಯಸಿದ ಪ್ರೀತಿ ಸಿಗದೆ ಸಾಕಷ್ಟು ನೋವನ್ನು ಅನುಭವಿಸುತ್ತಲಿರುತ್ತಾರೆ. ಅಂತಹ ನೋವು ಇದೀಗ ಕೆಲವು ರಾಶಿಯವರಿಗೆ ನಿವಾರಣೆಯಾಗುವುದು. ಉತ್ತಮ ಪ್ರೀತಿಯಿಂದ ಜೀವನದಲ್ಲಿ ಸಾರ್ಥಕ ಭಾವನೆಯನ್ನು ಪಡೆದುಕೊಳ್ಳಲಿದ್ದಾರೆ. ಅದು ಅವರ ಇತರ ಕೆಲಸ ಕಾರ್ಯಗಳ ಮೇಲು ಧನಾತ್ಮಕ ಪರಿಣಾವನ್ನು ಉಂಟುಮಾಡುವುದು. ನಿಮಗೆ ನಿಮ್ಮ ಪ್ರೀತಿಯ ಜೀವನದ ಬಗ್ಗೆ ತಿಳಿಯಬೇಕು ಅಥವಾ ಪ್ರೀತಿಯ ವಿಷಯದಲ್ಲಿ ಅದೃಷ್ಟವನ್ನು ಪಡೆದಿರುವ ರಾಶಿಚಕ್ರದವರಲ್ಲಿ ನಿಮ್ಮ ರಾಶಿಚಕ್ರವೂ ಇದೆಯೇ? ಆ ರಾಶಿಚಕ್ರದವರು ಯಾವ ಬಗೆಯಲ್ಲಿ ಅದೃಷ್ಟವನ್ನು ಪಡೆಯುವರು ಎನ್ನುವಂತಹ ವಿಚಾರಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕು ಎನ್ನುವ ಕುತೂಹಲವಿದ್ದರೆ ಲೇಖನದ ಮುಂದಿನ ಭಾಗದಲ್ಲಿ ವಿವರಿಸಿರುವ ವಿವರಣೆಯನ್ನು ಪರಿಶೀಲಿಸಿ.

ವೃಷಭ
2019ರ ಪ್ರೀತಿಯ ಅದೃಷ್ಟದಲ್ಲಿ ವೃಷಭ ರಾಶಿಯವರು ಒಬ್ಬರು ಎಂದು ಹೇಳಲಾಗುವುದು. ಹಾಗಾಗಿ ವೃಷಭ ರಾಶಿಯವರಿಗೆ ಈ ಸಂಗತಿಯಲ್ಲಿ ಅದೃಷ್ಟವನ್ನು ಪಡೆದುಕೊಂಡಿರುವುದಕ್ಕೆ ಮೊದಲು ಅಭಿನಂದನೆ ಹೇಳಬೇಕು. ಇವರು ಈ ವರ್ಷ ತಮ್ಮ ಪ್ರೀತಿಯಲ್ಲಿ ಭಾವೋದ್ರಿಕ್ತ ಮತ್ತು ಶುದ್ಧವಾದ ಉತ್ಸಾಹವನ್ನು ಪಡೆದುಕೊಳ್ಳುವರು. ಅವರ ಸುತ್ತಲಿನ ಜನರಿಂದ ಸಾಕಷ್ಟು ಖ್ಯಾತಿ ಅಥವಾ ಪ್ರಸಿದ್ಧತೆಯನ್ನು ಪಡೆದುಕೊಳ್ಳುವರು.

ವೃಷಭ
ಸಾಕಷ್ಟು ಗೌರವ ಹಾಗೂ ಪ್ರೀತಿಯನ್ನು ಪಡೆದುಕೊಳ್ಳುವುದರ ಮೂಲಕ ವೈಯಕ್ತಿಕವಾಗಿ ಮತ್ತು ಮಾನಸಿಕವಾಗಿ ಹೆಚ್ಚಿನ ತೃಪ್ತಿಯನ್ನು ಪಡೆದುಕೊಳ್ಳುವರು. ಒಟ್ಟಿನಲ್ಲಿ ಈ ವರ್ಷವು ಇವರ ಪ್ರೀತಿ ಜೀವನಕ್ಕೆ ಅದ್ಭುತ ಅನುಭವದ ಮೂಲಕ ಪ್ರೀತಿಯನ್ನು ಎರೆಯುವುದು. ಇವರ ಆದ್ಯತೆ ಹಾಗೂ ಗುರಿಗಳು ಇವರ ಆಶಯದಂತೆ ಸಾಗುವುದು. ಸ್ಥಿರತೆಯನ್ನು ಬಯಸುವ ಇವರಿಗೆ ಸಂಗಾತಿಯಿಂದ ಅಥವಾ ಪ್ರೀತಿಯಿಂದ ಸಾಕಷ್ಟು ನೆಮ್ಮದಿ ಹಾಗೂ ಉತ್ಸಾಹವು ದೊರೆಯುವುದು.

ಮಿಥುನ
ದ್ವಿಮುಖ ವ್ಯಕ್ತಿತ್ವದ ಚಿಹ್ನೆಯನ್ನು ಹೊಂದಿರುವ ಈ ರಾಶಿಯ ವ್ಯಕ್ತಿಗಳು ಈ ವರ್ಷ ಅಧಿಕ ಸ್ನೇಹಿತರು ಹಾಗೂ ಪ್ರೀತಿಪಾತ್ರರನ್ನು ಪಡೆದುಕೊಳ್ಳುವರು. ಬುದ್ಧಿವಂತರು ಹಾಗೂ ಚತುರರು ಆದ ಇವರು ಪ್ರೀತಿಯ ವಿಷಯದಲ್ಲಿ ರೋಮಾಂಚಕಾರಿ ಹಾಗೂ ಪ್ರಣಯ ಪೂರ್ಣವಾದ ಜೀವನವನ್ನು ಪಡೆದುಕೊಳ್ಳುವರು. ಈ ವರ್ಷ ಇವರು ಅನುಭವಿಸಿದ ಅದ್ಭುತ ಅನುಭವಗಳನ್ನು ಅಥವಾ ಪ್ರೀತಿಯ ಸಂಭ್ರಮವನ್ನು ಲೆಕ್ಕಹಾಕಬಹುದು.

ಮಿಥುನ
ಇವರು ಈ ವರ್ಷದ ಬೇಸಿಗೆಯ ಸಂದರ್ಭದಲ್ಲಿ ಅದ್ಭುತವಾದ ಅದೃಷ್ಟವನ್ನು ಪ್ರೀತಿಯ ಜೀವನದಲ್ಲಿ ಅನುಭವಿಸಲಿದ್ದಾರೆ. ಅವಿವಾಹಿತರು ತಮ್ಮ ಪ್ರೀತಿಯ ಸಂಗಾತಿಯನ್ನು ಪಡೆದುಕೊಳ್ಳುವ ಅವಕಾಶವನ್ನು ಹೆಚ್ಚು ಪಡೆದುಕೊಂಡಿದ್ದಾರೆ ಎನ್ನಲಾಗುವುದು. ಇದು ಅವರ ಜೀವನದಲ್ಲಿ ಇನ್ನಷ್ಟು ಭರವಸೆ ಹಾಗೂ ಗುರಿ ಸಾಧನೆಯ ಛಲವನ್ನು ತಂದುಕೊಡುವುದು ಎಂದು ಜ್ಯೋತಿಷ್ಯ ಶಾಸ್ತ್ರ ವಿವರಿಸುತ್ತದೆ.

ಕನ್ಯಾ
ಈ ವರ್ಷದಲ್ಲಿ ಸಂಗಾತಿಯಿಂದ ಅಥವಾ ಪ್ರೀತಿಪಾತ್ರರಿಂದ ಎಲ್ಲವೂ ಉತ್ತಮವಾಗಿ ಧ್ವನಿಸುತ್ತದೆ. ಕೆಲವು ಸಂದರ್ಭದಲ್ಲಿ ಹಿರಿಯವರಿಂದ ಅಥವಾ ಆತ್ಮೀಯರಿಂದ ಕೆಲವು ಸಲಹೆಯನ್ನು ಪಡೆದು ಮುಂದೆ ಸಾಗುವುದು ಉತ್ತಮ ಪ್ರತಿಫಲವನ್ನು ನೀಡುವುದು. ಹೆಚ್ಚು ವಿಶ್ಲೇಷಣಾತ್ಮಕ ಪ್ರವೃತ್ತಿಯನ್ನು ನೀವು ಹೊಂದಿರುತ್ತೀರಿ. ಅದನ್ನು ನಿಮ್ಮ ಪ್ರೀತಿಯ ವಿಷಯದಲ್ಲಿ ಪ್ರಯೋಗ ಮಾಡದೆ ಇರುವುದು ಸೂಕ್ತ ಎಂದು ಸಲಹೆ ನೀಡಲಾಗುವುದು.

ವೃಶ್ಚಿಕ
2019ರ ವರ್ಷವು ವೃಶ್ಚಿಕ ರಾಶಿಯವರಿಗೆ ಉತ್ತಮ ಪ್ರೀತಿಯ ಜೀವನವನ್ನು ಕಲ್ಪಿಸಿಕೊಡುವುದು. ಉತ್ತಮ ಸ್ನೇಹಿತರು ಹಾಗೂ ಪ್ರೀತಿ ಪಾತ್ರರು ನಿಮ್ಮ ಸುತ್ತಲಲ್ಲಿ ಇರುತ್ತಾರೆ ಎನ್ನಲಾಗುವುದು. ಈ ವರ್ಷದ ಬೇಸಿಗೆ ಸಮಯದಲ್ಲಿ ನೀವು ಹೆಚ್ಚಿನ ರೋಮಾಂಚಕಾರಿ ಪ್ರಣಯದ ಜೀವನವನ್ನು ಅನುಭವಿಸಲಿದ್ದೀರಿ. ಮುಗ್ಧವಾದ ಈ ಪ್ರೀತಿಯ ಪರಿಕಲ್ಪನೆಯು ನಿಮ್ಮ ಜೀವನಕ್ಕೆ ಹೆಚ್ಚಿನ ಸಂತೋಷ ಹಾಗೂ ಭರವಸೆಯನ್ನು ತಂದುಕೊಡುವುದು. ಜೀವನದಲ್ಲಿ ನೀವು ಆತ್ಮೀಯ ಸಂಗಾತಿಯನ್ನು ಹೊಂದುವುದರ ಮೂಲಕ ಸುಂದರ ಸಂಬಂಧವನ್ನು ಪಡೆದುಕೊಳ್ಳುವಿರಿ.

ವೃಶ್ಚಿಕ
2019ರಲ್ಲಿ ನಿಮ್ಮ ಎಲ್ಲಾ ಕ್ಷೇತ್ರದಲ್ಲಿ ಹೆಚ್ಚಿನ ಪ್ರಯತ್ನ ಹಾಗೂ ಯಶಸ್ಸನ್ನು ಹೊಂದುವುದನ್ನು ಕಾಣಬಹುದು. ವೃತ್ತಿಗೆ ಹಾಗೂ ನಿಮ್ಮ ಗುರಿ ಸಾಧನೆಗೆ ಹೆಚ್ಚು ಸಮಯವನ್ನು ವಿನಿಯೋಗಿಸಿದಂತೆ ನಿಮ್ಮ ಪ್ರೀತಿ ಅಥವಾ ಸಂಗಾತಿಯೊಂದಿಗೆ ಸಮಯವನ್ನು ಕಳೆಯಲು ಹೆಚ್ಚಿನ ಪ್ರಾಶಸ್ತ್ಯ ನೀಡಿದಷ್ಟು ನಿಮಗೆ ಹೆಚ್ಚು ಸಂತೋಷ ಮತ್ತು ತೃಪ್ತಿ ದೊರೆಯುವುದು ಎಂದು ಹೇಳಲಾಗುವುದು.

ಮಕರ
ಈ ವರ್ಷದಲ್ಲಿ ಮಕರ ರಾಶಿಯವರಿಗೆ ಇವರ ಸುತ್ತಲಿನಲ್ಲಿ ಇರುವ ಎಲ್ಲಾ ಗಾಳಿಯು ಪ್ರೀತಿಯಿಂದಲೇ ತಂಪಾದ ಅನುಭವ ನೀಡುವುದು ಎನ್ನಲಾಗುವುದು. ಯಾವುದೇ ಕೆಲಸ ಕಾರ್ಯಗಳಲ್ಲೂ ಅಡೆತಡೆ ಇಲ್ಲದೆ ಮುಂದೆ ಸಾಗುವಿರಿ. ಉತ್ತಮವಾದ ಪ್ರೀತಿಯ ಜೀವನ ಹಾಗೂ ಸಂಗಾತಿ ದೊರೆಯುವುದರಿಂದ ಸಣ್ಣ-ಪುಟ್ಟ ಸಮಸ್ಯೆಗಳು ಸಮಸ್ಯೆ ಎಂದೇ ಕಾಣುವುದಿಲ್ಲ. ಎಲ್ಲವೂ ಸರಳ ಹಾಗೂ ಸುಲಭವಾಗಿರುವಂತೆ ತೋರುವುದು.

ಮಕರ
ಕುಟುಂಬ ಹಾಗೂ ಸಂಗಾತಿಯಿಂದ ಸುಂದರ ಅನುಭವ ಹಾಗೂ ಶಾಂತಿಯ ಜೀವನವನ್ನು ಕಾಣುವಿರಿ. ಅದ್ಭುತ ಬದಲಾವಣೆಯು ನಿಮಗೆ ಸಾಕಷ್ಟು ನೆಮ್ಮದಿ ಹಾಗೂ ಸಂತೃಪ್ತಿಯ ಭಾವನೆಯನ್ನು ನೀಡುವುದು. ವೃತ್ತಿ ಕ್ಷೇತ್ರದಲ್ಲೂ ನಿಮಗೆ ಯಾವುದೇ ಕೆಲಸವು ಅಥವಾ ಸಂಗತಿಗಳು ಕಠಿಣ ಎನ್ನುವ ಭಾವನೆಯನ್ನು ನೀಡದು. ಮುಂದೆ ಸಾಗುವ ಗುಣವನ್ನು ನಿಮ್ಮ ಪ್ರೀತಿಯ ಜೀವನವು ಪ್ರೇರೇಪಿಸುವುದು.



Click it and Unblock the Notifications











