Latest Updates
-
ಕರಣ್-ತೇಜಸ್ವಿ ಗುಟ್ಟಾಗಿ ಮದುವೆಯಾದ್ರಾ? ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ! -
ಮುಂಬೈನಲ್ಲಿ ನೀರು ಕಡಿತ: ಬಿಎಂಸಿ ಎಚ್ಚರಿಕೆ ಬೆನ್ನಲ್ಲೇ ಮನೆಯಲ್ಲಿ ನೀರು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ಮದ್ದು! -
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್!
ಮಾಂಸ ರುಬ್ಬುವ ಯಂತ್ರದೊಳಗೆ ಸಿಲುಕಿ ಸಾವಿಗೀಡಾದ ಯುವಕ
ಸಾವು ಎನ್ನುವುದು ತುಂಬಾ ಅನಿರೀಕ್ಷಿತವಾಗಿ ಬರುವುದು ಮತ್ತು ಕೆಲವೊಂದು ಸಲ ತುಂಬಾ ನೋವಿನಿಂದ ಕೂಡಿರುವುದು. ಕೆಲವು ಜನರು ನಿದ್ರೆಯಲ್ಲೇ ಸಾವನ್ನಪ್ಪುವರು. ಇನ್ನು ಕೆಲವು ದುರಂತ ಸಾವುಗಳು ನಮ್ಮನ್ನು ಕಾಡುವುದು. ಇಂತಹ ಒಂದು ಘಟನೆಯ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಉದ್ಯೋಗಕ್ಕೆ ಸೇರಿದ ಕೇವಲ ಎರಡೇ ವಾರದಲ್ಲಿ ಆ ಯುವಕ ತುಂಬಾ ನೋವಿನಿಂದ ಕೂಡಿದ ಸಾವಿಗೀಡಾಗಿದ್ದಾನೆ.
ಫಿಲಿಫೈನ್ಸ್ ನಲ್ಲಿ ಇರುವಂತಹ ಸಾಸೇಜ್ ಫ್ಯಾಕ್ಟರಿಯಲ್ಲಿ ಈ ಘಟನೆಯು ನಡೆದಿದೆ. ಹುಡುಗನನ್ನು ಮಾಂಸ ಮಿಶ್ರಣ ಮಾಡುವಂತಹ ಯಂತ್ರವು ಒಳಗೆ ಎಳೆದುಕೊಂಡಿದೆ. 18ರ ಹರೆಯದ ಜೊಮರ್ ಜುನ್ಕೊ ಎಂಬ ಯುವಕ ಇಲೊಯಿಲೊ ನಗರದಲ್ಲಿ ಸಾಸೇಜ್ ಮಾಡುವಂತಹ ಫ್ಯಾಕ್ಟರಿಯಲ್ಲಿ ಎರಡು ವಾರಗಳಿಂದ ಕೆಲಸ ಮಾಡುತ್ತಿದ್ದ. ಆದರೆ ತುಂಬಾ ದುರಾದೃಷ್ಟದ ಘಟನೆಯಲ್ಲಿ ಆತ ಸಾವಿಗೀಡಾಗಿದ್ದಾನೆ.

ಯುವಕನ ಬಲದ ಕೈಯು ಮಾಂಸ ಕತ್ತರಿಸುವಂತಹ ಯಂತ್ರದಲ್ಲಿ ಮೊದಲು ಸಿಲುಕಿಕೊಂಡಿದೆ ಮತ್ತು ಇದು ಆತನನ್ನು ಒಳಗೆ ಎಳೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಯುವಕನಿಗೆ ಈ ಯಂತ್ರದಲ್ಲಿ ಹೇಗೆ ಕೆಲಸ ಮಾಡಬೇಕು ಎಂದು ತಿಳಿಯದೆ ಇದ್ದ ಕಾರಣದಿಂದಾಗಿ ಈ ಘಟನೆಯು ನಡೆದಿದೆ. ಯಾಕೆಂದರೆ ಈ ಯಂತ್ರದಲ್ಲಿ ಕೆಲಸ ಮಾಡುವುದು ಆತನ ಕರ್ತವ್ಯವಾಗಿರಲಿಲ್ಲ. ಹಿರಿಯ ಸಹೋದ್ಯೋಗಿಯು ಈ ಯಂತ್ರದಲ್ಲಿ ಕೆಲಸ ಮಾಡುತ್ತಿದ್ದರು.
ಸಹೋದ್ಯೋಗಿಗಳು ಅಲ್ಲಿಂದ ತೆರಳಿದ ಕೆಲವೇ ಕ್ಷಣಗಳಲ್ಲಿ ಯುವಕನು ಯಂತ್ರದೊಳಗೆ ಸಿಲುಕಿಕೊಂಡಿದ್ದಾನೆ. ಸಹೋದ್ಯೋಗಿಗಳು ಮರಳಿ ಬಂದ ನೋಡಿದ ವೇಳೆ ಯಂತ್ರದ ಹೊರಗೆ ಯುವಕನ ಕಾಲುಗಳು ಮಾತ್ರ ಕಾಣಿಸುತ್ತಿದ್ದವು. ಈ ಯಂತ್ರವನ್ನು ಸ್ವಿಚ್ ಆಫ್ ಮಾಡಲು ಅವರು ಓಡಿದರೂ ಅದಾಗಲೇ ವಿಳಂಬವಾಗಿತ್ತು ಮತ್ತು ಯಂತ್ರದೊಳಗೆ ಯುವಕ ಸಿಲುಕಿಕೊಂಡಿದ್ದ.
ಪೊಲೀಸರನ್ನು ಕರೆಸಲಾಯಿತು ಮತ್ತು ಅವರು ಬರುವ ತನಕವು ದೇಹವು ಯಂತ್ರದೊಳಗೆ ಇತ್ತು. ಇದರ ಬಳಿಕ ಅದನ್ನು ಹೇಗಾದರೂ ಮಾಡಿ ಹೊರಗೆ ತೆಗೆಯಲಾಯಿತು. ಮರಣೋತ್ತರ ಪರೀಕ್ಷೆ ಮಾಡಿರುವಂತಹ ಆಂಡ್ರೆ ಪೊರ್ರಸ್ ಅವರು ಸ್ಥಳೀಯ ಮಾಧ್ಯಮಗಳಿಗೆ ಹೇಳಿರುವ ಪ್ರಕಾರ, ಜೊಮರ್ ಸಾವು ಉಸಿರುಗಟ್ಟುವಿಕೆಯಿಂದ ಉಂಟಾಗಿದೆ. ಅದೃಷ್ಟದಿಂದ ಆತನ ದೇಹವು ಇಲ್ಲಿ ರುಬ್ಬಿಲ್ಲ ಮತ್ತು ಆತ ಯಂತ್ರದೊಳಗೆ ಸಿಲುಕಿಕೊಂಡಿದ್ದ.
ಜೊಮರ್ ನ ಕೆಲಸ ಕೇವಲ ಉತ್ಪನ್ನಗಳನ್ನು ಪ್ಯಾಕ್ ಮಾಡುವುದು ಮತ್ತು ಆತ ತುಂಬಾ ಹೊಸಬನಾಗಿದ್ದ ಕಾರಣದಿಂದಾಗಿ ಯಾವುದೇ ಯಂತ್ರವನ್ನು ನಿರ್ವಹಿಸುವ ಕೆಲಸವನ್ನು ಆತನಿಗೆ ನೀಡರಲಿಲ್ಲ ಎಂದು ಫ್ಯಾಕ್ಟರಿಯ ಮಾಲಕ ತಿಳಿಸಿದ್ದಾರೆ. ಮಾಂಸ ರುಬ್ಬುವ ಯಂತ್ರವು ಯಾವ ರೀತಿಯಲ್ಲಿ ಕೆಲಸ ಮಾಡುತ್ತದೆ ಎಂದು ಕೆಲವರಿಗೆ ಇನ್ನೂ ಅಚ್ಚರಿಯಾಗುತ್ತಲಿದ್ದರೆ ಆಗ ನೀವು ಈ ವೀಡಿಯೋ ನೋಡಬಹುದು.



Click it and Unblock the Notifications