Latest Updates
-
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ -
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು? -
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ! -
ಗಣೇಶ ಹಬ್ಬದ ಸಂಭ್ರಮ: ಮಧುಮೇಹಿಗಳಿಗೂ ಸುರಕ್ಷಿತವಾದ ಆರೋಗ್ಯಕರ 'ಉಕಡಿಚೆ ಮೋದಕ' ತಯಾರಿಸುವುದು ಹೇಗೆ?
ಈತನನ್ನು ಎಲ್ಲರೂ 'ಏಲಿಯನ್' ಎಂದು ಕರೆಯುತ್ತಾರಂತೆ! ಯಾಕೆ ಗೊತ್ತೇ?
ಭೂಮಿ ಮೇಲೆ ಕೆಲವೊಂದು ಸಲ ತುಂಬಾ ವಿಚಿತ್ರವಾದ ಮನುಷ್ಯರು ಜನಿಸುತ್ತಾರೆ. ಇವರು ಬೇರೆ ವ್ಯಕ್ತಿಗಳಿಗಿಂತ ತುಂಬಾ ಭಿನ್ನವಾಗಿರುವರು. ಕೆಲವರು ನಾಲ್ಕು ಕೈಗಳು, ಇನ್ನು ಕೆಲವರಲ್ಲಿ ಎರಡು ತಲೆಗಳು ಇರುವುದು. ಇಂತಹ ವ್ಯಕ್ತಿಗಳು ವೈದ್ಯಕೀಯ ಲೋಕಕ್ಕೆ ಒಂದು ಸವಾಲು ಮಾತ್ರವಲ್ಲದೆ, ಸಾಮಾನ್ಯ ಜನರಲ್ಲೂ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುವರು.

ಇಲ್ಲೊಬ್ಬ ವ್ಯಕ್ತಿಯು ಅನ್ಯಗ್ರಹ ಜೀವಿಯಂತೆ ಕಾಣಿಸುತ್ತಾನೆ. ಈತನಲ್ಲಿ ಇರುವಂತಹ ಕೆಲವೊಂದು ಗುಣಗಳಿಂದ ಆತನನ್ನು ಅನ್ಯಗ್ರಹಜೀವಿ ಯಾನೆ ಏಲಿಯನ್ ಎಂದು ಕರೆಯುತ್ತಿದ್ದಾರೆ. ಅಂಶು ಕುಮಾರ್ ಎನ್ನುವ ವ್ಯಕ್ತಿಯ ಬಗ್ಗೆ ನೀವು ಈ ಲೇಖನದಲ್ಲಿ ತಿಳಿದುಕೊಳ್ಳಿ....

ಆತ ನಮ್ಮದೇ ದೇಶದವನು
ಭಾರತದ ಜಗತ್ಪುರ ಎನ್ನುವ ಪ್ರದೇಶದ 21 ಹರೆಯದ ಅಂಶು ಕುಮಾರ್ ಎಂಬಾತನೇ ಈ ವ್ಯಕ್ತಿ. ಈತ ಹಲವಾರು ರೀತಿಯ ಕಾಯಿಲೆಗಳಿಂದ ಬಳಲುತ್ತಿದ್ದಾನೆ. ಇದನ್ನು ವೈದ್ಯಕೀಯ ಲೋಕವು ಪತ್ತೆ ಹಚ್ಚಲು ವಿಫಲವಾಗಿದೆ. ಇದರಿಂದಾಗಿ ಈತನ ತಲೆಯು ದೊಡ್ಡದಾಗಿದೆ ಮತ್ತು ಕಣ್ಣುಗಳು ವಿಚಿತ್ರವಾಗಿದೆ.

ವೈದ್ಯಕೀಯ ಲೋಕದ ಪ್ರಕಾರ ಆತನ ಪರಿಸ್ಥಿತಿ
ವೈದ್ಯರ ಪ್ರಕಾರ ಆತನ ಪರಿಸ್ಥಿತಿಯನ್ನು ಜಾಕಬ್ಸೆನ್ ಸಿಂಡ್ರೊಮ್ ಎಂದು ವಿವರಿಸಬಹುದು. ಇದರಿಂದಾಗಿ ಆತ ತುಂಬಾ ಅಸಾಮಾನ್ಯವಾಗಿ ನಡೆದಾಡುವಂತಾಗಿದೆ. ಈ ಪರಿಸ್ಥಿತಿಯಿಂದಾಗಿ ಆತನಿಗೆ ನಡೆದಾಡಲು ಕಷ್ಟವಾಗಿರುವುದು ಮಾತ್ರವಲ್ಲದೆ ನಿಲ್ಲಲು ಸಾಧ್ಯವಾಗುತ್ತಿಲ್ಲ. ಆತನ ತಲೆಯಲ್ಲಿ ಒಂದು ತೆಳುವಾಗಿರುವ ಸ್ವಲ್ಪ ಕೂದಲು ಬಿಟ್ಟರೆ ಬೇರೆ ಕೂದಲುಗಳೇ ಬೆಳೆದಿಲ್ಲ.

ಆತ ಕೂಲಿ ಕಾರ್ಮಿಕನಾಗಿ ದುಡಿಯುತ್ತಾನೆ
ಕಡು ಬಡ ಕುಟುಂಬದಿಂದ ಬಂದಿರುವ ಅಂಶು ಕುಮಾರ್ ತನ್ನ ಜೀವನ ನಿರ್ವಹಣೆ ಮಾಡಲು ಕೂಲಿ ಕೆಲಸ ಮಾಡುತ್ತಾನೆ. ಇದರಿಂದ ಆತ ತಿಂಗಳಿಗೆ ಕೇವಲ 3800 ರೂ. ಮಾತ್ರ ದುಡಿಯುತ್ತಿದ್ದಾನೆ. ತನ್ನ ಆರ್ಥಿಕ ಪರಿಸ್ಥಿತಿ ತುಂಬಾ ಕೆಟ್ಟದಾಗಿರುವ ಕಾರಣದಿಂದಾಗಿ ತಜ್ಞ ವೈದ್ಯರನ್ನು ಭೇಟಿಯಾಗಲು ಆತನಿಗೆ ಸಾಧ್ಯವಾಗುತ್ತಿಲ್ಲ.

ಜನರು ಆತನನ್ನು ನೋಡಿ ತಮಾಷೆ ಮಾಡುವರು
ಆತನ ವಿಚಿತ್ರ ಹಾಗೂ ದೊಡ್ಡ ತಲೆಯಿಂದಾಗಿ ಎಲಿಯನ್ ಎಂದು ಜನರು ತಮಾಷೆ ಮಾಡಿ ಅಡ್ಡ ಹೆಸರಿನಿಂದ ಕರೆಯುತ್ತಾರೆ. ಆತನ ಈ ರೂಪದಿಂದ ಹೆಚ್ಚಿನ ಜನರಿಗೆ ಆತ ಇಷ್ಟವಾಗುತ್ತಿಲ್ಲ. ಹೆಚ್ಚಿನ ಸಮಯ ಆತ ನಕಾರಾತ್ಮಕತೆ ಕಡೆ ಗಮನ ನೀಡುವುದಿಲ್ಲ. ಆದರೆ ಜನರು ಕಟು ಮಾತುಗಳು ಆತನಿಗೆ ನೋವುಂಟು ಮಾಡುತ್ತದೆ ಎಂದು ಹೇಳುತ್ತಾನೆ.

ಅಂಶು ಕುಮಾರ್ ಗೆ ಸಾಮಾನ್ಯ ಜೀವನ ಸಾಗಿಸಬೇಕೆಂಬ ಆಸೆಯಿದೆ
ಸರ್ಕಾರ ಅಥವಾ ಜನರು ತನ್ನ ಚಿಕಿತ್ಸೆಗೆ ನೆರವು ನೀಡಿದರೆ ತಾನು ಕೂಡ ಸಾಮಾನ್ಯ ಜೀವನ ಸಾಗಿಸಬಹುದು ಎಂದು ಆತ ಇಚ್ಛಿಸಿದ್ದಾನೆ. ಭವಿಷ್ಯದಲ್ಲಿ ಮದುವೆಯಾಗಿ ತನ್ನದೇ ಆಗಿರುವ ಕುಟುಂಬ ಹೊಂದಬೇಕು ಎಂದು ಆತ ಬಯಸಿದ್ದಾನೆ. ಆತ ಬೇಗನೆ ಚೇತರಿಸಿಕೊಳ್ಳಲಿ ಎಂದು ನಾವು ಹಾರೈಸುತ್ತೇವೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ.



Click it and Unblock the Notifications
