Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಬಾಲ್ಯದಲ್ಲೇ ತಂದೆ ತಾಯಿ ಬೇರ್ಪಟ್ಟ ಸೆಲೆಬ್ರಿಟಿಗಳು
ಇಂದಿನ ದಿನಗಳಲ್ಲಿ ವೈವಾಹಿಕ ಜೀವನಕ್ಕೆ ಯಾವುದೇ ಮಹತ್ವವಿಲ್ಲದಂತೆ ಆಗಿದೆ. ಇದೇ ಕಾರಣದಿಂದ ವಿಚ್ಛೇದನಗಳು ಹೆಚ್ಚಾಘುತ್ತಲೇ ಇದೆ. ಆದರೆ ವಿಚ್ಛೇದಿತ ಅಥವಾ ಪೋಷಕರು ದೂರವಾಗಿರುವಂತಹ ಮಕ್ಕಳ ಬಾಲ್ಯವು ತುಂಬಾ ಕಷ್ಟವಾಗಿರುವುದು. ಯಾಕೆಂದರೆ ತಂದೆ ಮತ್ತು ತಾಯಿ ದೂರವಾಗಿರುವುದು ಅವರ ಮೇಲೆ ಪರಿಣಾಮ ಬೀರಲಿದೆ. ಇದರಿಂದ ಅವರು ತುಂಬಾ ಭಾವನಾತ್ಮಕ ಪರಿಸ್ಥಿತಿಯನ್ನು ಎದುರಿಸುವರು. ಕೆಲವು ಮಕ್ಕಳು ಇದೇ ಕಾರಣದಿಂದಾಗಿ ಖಿನ್ನತೆಗೆ ಒಳಗಾಗುವರು. ಆದರೆ ಕೆಲವು ಪೋಷಕರು ದೂರವಾಗಿದ್ದರೂ ತಮ್ಮ ಮಕ್ಕಳಿಗೆ ತುಂಬಾ ಒಳ್ಳೆಯ ಜೀವನ ನೀಡುವರು.
ಇವರಲ್ಲಿ ಕೆಲವು ಮಂದಿ ಸೆಲೆಬ್ರಿಟಿಗಳು ಕೂಡ ಸೇರಿಸಿದ್ದಾರೆ. ಈ ಸೆಲೆಬ್ರಿಟಿಗಳು ತಮ್ಮ ಬಾಲ್ಯದಲ್ಲಿ ತುಂಬಾ ಕಷ್ಟಪಟ್ಟರೂ ತಮ್ಮ ಗುರಿ ಸಾಧಿಸಿದ್ದಾರೆ ಮತ್ತು ತಮ್ಮ ಕ್ಷೇತ್ರದಲ್ಲಿ ಅವರು ತುಂಬಾ ಯಶಸ್ಸು ಪಡೆದುಕೊಂಡಿರುವರು. ಇಂತಹ ಸೆಲೆಬ್ರಿಟಿಗಳು ಯಾರು ಎಂದು ತಿಳಿಯಿರಿ.
ಏಂಜಲೀನಾ ಜೊಲಿ ಹಾಲಿವುಡ್ ನ ತಂಬಾ ಜನಪ್ರಿಯ ನಟಿ ಏಂಜಲೀನಾ ಜೊಲಿ ಅವರು ಜಾನ್ ವಾಯ್ಟ್ ಮತ್ತು ಮಾರ್ಚೆಲಿನ್ ಬರ್ಟ್ರಾಂಡ್ ಅವರ ಮಗಳು. ಜೊಲಿ ಅವರು ತುಂಬಾ ಸಣ್ಣ ಮಗುವಾಗಿದ್ದಾಗಲೇ ಅವರ ತಂದೆ ತಂದೆ ಬೇರ್ಪಟ್ಟಿದ್ದರು. ಇದರ ಬಳಿಕ ಆಕೆ ಮತ್ತು ಆಕೆಯ ಸೋದರ ಜೇಮ್ಸ್ ಹೇವನ್ ಅವರನ್ನು ತಾಯಿ ಮಾರ್ಚೆಲಿನ್ ಬರ್ಟ್ರಾಂಡ್ ಅವರು ಬೆಳೆಸಿದ್ದಾರೆ. ಅದಾಗ್ಯೂ, ಕೆಲವು ವರ್ಷಗಳ ಬಳಿಕ ಅವರ ತಂದೆ ಮತ್ತೆ ಬಂದು ಜತೆಯಾದರು ಮತ್ತು ಅವರು ಈಗ ಏಂಜಲೀನಾ ಅವರ ಜತೆಗಿದ್ದಾರೆ.

ಏಂಜಲೀನಾ ಜೊಲಿ
ಏಂಜಲೀನಾ ಜೊಲಿ ಹಾಲಿವುಡ್ ನ ತಂಬಾ ಜನಪ್ರಿಯ ನಟಿ ಏಂಜಲೀನಾ ಜೊಲಿ ಅವರು ಜಾನ್ ವಾಯ್ಟ್ ಮತ್ತು ಮಾರ್ಚೆಲಿನ್ ಬರ್ಟ್ರಾಂಡ್ ಅವರ ಮಗಳು. ಜೊಲಿ ಅವರು ತುಂಬಾ ಸಣ್ಣ ಮಗುವಾಗಿದ್ದಾಗಲೇ ಅವರ ತಂದೆ ತಂದೆ ಬೇರ್ಪಟ್ಟಿದ್ದರು. ಇದರ ಬಳಿಕ ಆಕೆ ಮತ್ತು ಆಕೆಯ ಸೋದರ ಜೇಮ್ಸ್ ಹೇವನ್ ಅವರನ್ನು ತಾಯಿ ಮಾರ್ಚೆಲಿನ್ ಬರ್ಟ್ರಾಂಡ್ ಅವರು ಬೆಳೆಸಿದ್ದಾರೆ. ಅದಾಗ್ಯೂ, ಕೆಲವು ವರ್ಷಗಳ ಬಳಿಕ ಅವರ ತಂದೆ ಮತ್ತೆ ಬಂದು ಜತೆಯಾದರು ಮತ್ತು ಅವರು ಈಗ ಏಂಜಲೀನಾ ಅವರ ಜತೆಗಿದ್ದಾರೆ.

ಕಾನ್ಯೆ ವೆಸ್ಟ್
ತನ್ನ ಜೀವನದಲ್ಲಿ ತಾಯಿಯ ಮಹತ್ವವು ಎಷ್ಟಿದೆ ಎಂದು ಕಾನ್ಯೆ ವೆಸ್ಟ್ ಪ್ರತಿಯೊಂದು ಸಂದರ್ಭದಲ್ಲೂ ಹೇಳುತ್ತಾ ಬರುತ್ತಿದ್ದಾರೆ. ಕಾನ್ಯೆ ಕೇವಲ ಮೂರು ವರ್ಷದವರಿದ್ದಾಗ ಅವರ ತಂದೆ ತಾಯಿ ವಿಚ್ಛೇದನ ಪಡೆದುಕೊಂಡಿದ್ದರು ಎಂದು ವರದಿಗಳು ಹೇಳಿವೆ. ಇದರ ಬಳಿಕ ಚಿಕಾಗೊದಲ್ಲಿ ಕಾನ್ಯೆ ಅವರು ಬೆಳೆದಿದ್ದಾರೆ.

ಬರಾಕ್ ಒಬಾಮಾ
ಬರಾಕ್ ಒಬಾಮಾ ಅವರನ್ನು ತಾಯಿ ಸ್ಟ್ಯಾನ್ಲೆ ಆನ್ ಡನ್ಹ್ಯಾಮ್ ಬಾಲ್ಯದಿಂದ ಬೆಳೆಸಿದರು. ಒಬಾಮಾ ಹುಟ್ಟಿದ ದಿನದಿಂದಲೇ ಅವರ ತಾಯಿಯೇ ನೋಡಿಕೊಂಡಿದ್ದರು. ಇದರ ಬಳಿಕ ಅವರು ಒಬಾಮಾ ಅವರ ಮಲತಂದೆ ಲೊಲೊ ಸೊಯೆಟೊರೊ ಅವರನ್ನು ಮದುವೆಯಾದರು. ಅವರ ತಾಯಿಯೇ ಒಬಾಮಾ ಅವರನ್ನು ಬೆಳೆಸಿದ್ದಾರೆ.

ಕೀನು ರೀವ್ಸ್
ಮ್ಯಾಟ್ರಿಕ್ಸ್ ನಟ ಕೀನು ರೀವ್ಸ್ ಕೇವಲ ಮೂರು ವರ್ಷದವರಾಗಿದ್ದ ವೇಳೆ ಅವರ ತಂದೆ ಸ್ಯಾಮುಯೆಲ್ ನೊವವಲಿನ್ ರೀವ್ಸ್ ಜೂನಿಯರ್ ಅವರು ಕುಟುಂಬವನ್ನು ಬಿಟ್ಟು ಹೋಗಿದ್ದರು. ಡ್ರಗ್ಸ್ ಹೊಂದಿದ್ದ ಆರೋಪದ ಮೇಲೆ ಹುವಾಯಿಯಲ್ಲಿ ಅವರಿಗೆ ಜೈಲು ಶಿಕ್ಷೆಯಾಗಿತ್ತು.

ಮರ್ಲಿನ್ ಮನ್ರೋ
ಮರ್ಲಿನ್ ಮನ್ರೋ ಅವರನ್ನು ಅವರ ತಾಯಿ ಗ್ಲಾಡ್ಯಸ್ ಪರ್ಲ್ ಬೇಕರ್ ಅವರು ಬೆಳೆಸಿದರು. ಆರಂಭದಲ್ಲಿ ಅವರನ್ನು ದತ್ತು ಪೋಷಕರಾದ ಅಲ್ಬರ್ಟ್ ಮತ್ತು ಇಡಾ ಬೊಲೆಂಡರ್ ಅವರು ಬೆಳೆಸಿದ್ದರು. ಅವರ ತಾಯಿ ಆರ್ಥಿಕವಾಗಿ ಒಂದು ಸ್ಥಿತಿಗೆ ಬಂದ ವೇಳೆ ದತ್ತು ಪೋಷಕರಿಂದ ಅವರನ್ನು ಹಿಂದೆ ಪಡೆದರು. ಮರ್ಲಿನ್ ಅವರ ತಂದೆ ಮಾರ್ಟಿನ್ ಎಡ್ವರ್ಡ್ ಮೊರ್ಟೆನ್ಸೆನ್ ಎಂದು ಹೇಳಲಾಗುತ್ತದೆ. ಆದರೆ ಮರ್ಲಿನ್ ಅವರು ತನ್ನ ತಂದೆ ಚಾರ್ಲ್ಸ್ ಸ್ಟ್ಯಾನ್ಲಿ ಗಿಫ್ಫೋರ್ಡ್ ಎಂದು ಹೇಳುತ್ತಾರೆ.

ಕ್ರಿಸ್ಟಿನಾ ಅಗುಲೆರಾ
ಕ್ರಿಸ್ಟಿನಾ ಅಗುಲೆರಾ ಅವರು ಕೇವಲ ಆರು ವರ್ಷದವರಿದ್ದಾಗ ಅವರ ತಂದೆ ತಾಯಿ ಬೇರ್ಪಟ್ಟಿದ್ದರು. ಜೀವನದಲ್ಲಿನ ತನ್ನ ನೋವು ಹಾಗೂ ಖಿನ್ನತೆಯಿಂದ ದೂರವಾಗಲು ಅವರು ಯಾವಾಗಲೂ ಸಂಗೀತದ ಮೊರೆ ಹೋಗುತ್ತಲಿದ್ದರು. ಖಿನ್ನತೆಯಿಂದ ಮೇಲೆದ್ದು ಬಂದ ಆಕೆ ತನ್ನ ಪ್ರತಿಭೆಯನ್ನು ವಿಶ್ವಕ್ಕೆ ಪರಿಚಯಿಸಿದ್ದಾಋಎ. ಹಲವಾರು ವರ್ಷಗಳ ಕಾಲ ತನ್ನ ತಂದೆಯೊಂದಿಗೆ ಮಾತನಾಡದೆ ಇದ್ದರೆ ಅವರು ಇತ್ತೀಚೆಗೆ ತಂದೆಯ ಜತೆ ಸೇರಲು ಬಯಸಿರುವುದಾಗಿ ಹೇಳಿದ್ದರು.



Click it and Unblock the Notifications











