Latest Updates
-
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಡ್ಯಾಂಡ್ರಫ್ ಸಮಸ್ಯೆಯನ್ನು ನಿವಾರಿಸಲು, ಈ ಮಹಿಳೆ ದಿನಾ ಮೂತ್ರದಿಂದ ಕೂದಲು ತೊಳೆಯುತ್ತಾಳಂತೆ!!
ಪ್ರಕೃತಿಯ ಮಡಿಲಿನಲ್ಲಿ ಜೀವನ ಸಾಗಿಸುವುದು ಒಂದು ದೊಡ್ಡ ಮಟ್ಟದ ಸಾಹಸ ಎನ್ನಬಹುದು. ಯಾಕೆಂದರೆ ಇಂದಿನ ಆಧುನಿಕ ಸೌಕರ್ಯಗಳನ್ನು ಬಿಟ್ಟುಬಿಟ್ಟು ಹೋಗಿ ಅರಣ್ಯದಲ್ಲೋ ಅಥವಾ ದೊಡ್ಡ ಬೆಟ್ಟದಲ್ಲೋ ವಾಸ ಮಾಡುವುದು ನಿಜವಾಗಿಯೂ ಅದ್ಭುತ ಅನುಭವ ನೀಡುವುದು. ಇಂತಹ ಸಾಹಸ ಮಾಡಲು ಪ್ರತಿಯೊಬ್ಬರಿಗು ಸಾಧ್ಯವಾಗಲ್ಲ. ಯಾಕೆಂದರೆ ಹೆಚ್ಚಿನವರಿಗೆ ಸೌಕರ್ಯಗಳು ಇಲ್ಲದೆ ಇದ್ದರೆ ಬದುಕಲು ಆಗಲ್ಲ, ಸಾಮಾನ್ಯವಾಗಿ ಸಿಗುವಂತಹ ಕೆಲವೊಂದು ವಸ್ತುಗಳನ್ನು ಬಳಸಿಕೊಂಡು ಅರಣ್ಯದಲ್ಲಿ ಬದುಕಬೇಕಾದರೆ ಗುಂಡಿಗೆಯೂ ಬೇಕು. ಯಾಕೆಂದರೆ ಅಲ್ಲಿ ಪ್ರತಿಯೊಂದು ನಿಮಿಷವೂ ಸವಾಲಿನಿಂದ ಕೂಡಿರುತ್ತದೆ.

ಯಾವಾಗಲೂ ಪ್ರಾಣಿಗಳು, ವಿಷಜಂತುಗಳು ದಾಳಿ ಮಾಡುತ್ತದೆಯಾ ಎಂದು ಹೇಳಲು ಆಗಲ್ಲ. ವೈದ್ಯಕೀಯ ಸೇವೆಯೂ ಅಲ್ಲಿ ಲಭ್ಯವಿರುವುದಿಲ್ಲ. ಇದೆಲ್ಲವನ್ನೂ ಮೀರಿ ಅರಣ್ಯದಲ್ಲಿ ಬದುಕು ಸಾಗಿಸಬೇಕು. ನ್ಯೂಜಿಲೆಂಡ್ ನ ದಂಪತಿಯೊಂದು ಅರಣ್ಯದಲ್ಲಿ ಕಳೆದ ಕೆಲವು ವರ್ಷಗಳಿಂದ ವಾಸವಾಗಿದ್ದು, ನೈಸರ್ಗಿಕವಾಗಿ ಸಿಗುವ ಸಾಮಗ್ರಿಗಳನ್ನೇ ಬಳಸಿಕೊಂಡು ತಮ್ಮ ಜೀವನ ಸಾಗಿಸುತ್ತಿರುವುದಾಗಿ ಈ ದಂಪತಿಯು ಹೇಳಿಕೊಂಡಿದೆ. ಅವರು ತಮ್ಮ ಮೂತ್ರ ಬಳಸಿಕೊಂಡು ಕೂದಲು ತೊಳೆಯುತ್ತಾರಂತೆ! ಮಿರಿಯಮ್ ಲ್ಯಾನ್ಸ್ ವುಡ್ ಮತ್ತು ಆಕೆಯ ಪತಿ ಪೀಟರ್ ಎಂಬವರು ತಮ್ಮ ಜೀವನದ ರಹಸ್ಯವನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೀವು ತಿಳಿಯಲು ಮುಂದಾಗಿ....

ಈ ಘಟನೆಯನ್ನು ಓದಿ
ನಾಲ್ಕು ಋತುಗಳನ್ನು ಅರಣ್ಯದಲ್ಲಿ ಕಳೆಯಲು ಈ ಜೋಡಿ ಬಯಸಿದೆ ಮಿರಿಯಮ್ ಮತ್ತು ಪೀಟರ್ ನಾಲ್ಕು ಋತುಗಳನ್ನು ಅರಣ್ಯದಲ್ಲಿ ಕಳೆಯಲು ಬಯಸಿದ್ದಾರೆ. ಅರಣ್ಯ ವಾಸದ ಚಳಿಗಾಲದಲ್ಲಿ ತನಗೆ ಹೆಚ್ಚು ಅಗತ್ಯ ಎಂದು ಕಂಡು ಬಂದಿರುವುದು ಶಾಂಪೂ. ಯಾಕೆಂದರೆ ಈ ಸಮಯದಲ್ಲಿ ತನ್ನ ತಲೆಯಲ್ಲಿ ಅತಿಯಾದ ತಲೆಹೊಟ್ಟು ಇತ್ತು. ಇದರಿಂದ ಶಾಂಪೂ ಇಲ್ಲದೆ ತುಂಬಾ ಸಮಸ್ಯೆ ಕಾಡುತ್ತಲಿತ್ತು.

ಎಸ್ಕಿಮೊ ತಂತ್ರ ಬಳಸುವಂತೆ ಪೀಟರ್ ಹೇಳಿದ
ಎಸ್ಕಿಮೊಗಳು ಬಳಸುತ್ತಿದ್ದ ತಂತ್ರವನ್ನು ಪ್ರಯತ್ನಿಸುವಂತೆ ಪೀಟರ್ ತನ್ನ ಪತ್ನಿಗೆ ಹೇಳಿದ. ಬೆಳಗ್ಗಿನ ಮೂತ್ರ ಬಳಸಿಕೊಂಡು ಎಸ್ಕಿಮೊಗಳು ತಲೆಹೊಟ್ಟಿಗೆ ಪರಿಹಾರ ಕಂಡುಕೊಳ್ಳುತ್ತಲಿದ್ದರು. ಇದರಿಂದ ಮಿರಿಯಮ್ ಕೂಡ ಇದನ್ನು ಪ್ರಯತ್ನಿಸಲು ನಿರ್ಧರಿಸಿದರು.

ಆಕೆ ತನ್ನ ಬೆಳಗ್ಗಿನ ಮೂತ್ರ ಸಂಗ್ರಹಿಸಿಟ್ಟುಕೊಂಡಳು
ಸಣ್ಣ ಡಬ್ಬದಲ್ಲಿ ಮೂತ್ರ ವಿಸರ್ಜನೆ ಮಾಡುವುದು ತುಂಬಾ ಕಠಿಣ ಕೆಲಸ. ಆದರೆ ತಲೆಹೊಟ್ಟು ನಿವಾರಣೆ ಮಾಡಲು ಆಕೆ ತನ್ನ ಮೂತ್ರವನ್ನು ಹೇಗಾದರೂ ಮಾಡಿ ಸಂಗ್ರಹ ಮಾಡಿದರು. ಕೂದಲು ಸರಿಯಾಗಿ ಹೀರಿಕೊಳ್ಳಲು ಆಕೆ ಕೂದಲನ್ನು ಸರಿಯಾಗಿ ಒದ್ದೆ ಮಾಡಿಕೊಂಡರು. ಮೂತ್ರದಲ್ಲಿ ಇದರ ಬಳಿಕ ಕೂದಲು ತೊಳೆದುಕೊಂಡರು.

ಅವರು ಬಳಸುವ ಬೇರೆ ಉತ್ಪನ್ನಗಳು
ಮೂತ್ರದ ತಂತ್ರದೊಂದಿಗೆ ಅವರಿಗೆ ಬೇರೆ ರೀತಿಯ ಕೆಲವೊಂದು ನೈಸರ್ಗಿಕ ಸಾಮಗ್ರಿಗಳನ್ನು ಬಳಸಿಕೊಳ್ಳುವುದಾಗಿ ಹೇಳುತ್ತಿದ್ದಾರೆ. ಅವರು ಇದ್ದಿಲು ಮತ್ತು ಬೂದಿ ಬಳಸಿಕೊಂಡು ಹಲ್ಲುಗಳನ್ನು ಉಜ್ಜುತ್ತಿದ್ದಾರೆ. ಋತುಚಕ್ರದ ವೇಳೆ ಮಿರಿಯಮ್ ಅವರು ಮೂನ್ಕಪ್ ನ್ನು ಬಳಸುತ್ತಿದ್ದಾರಂತೆ. ಇದರಿಂದಾಗಿ ಅವರು ಟ್ಯಾಂಪನ್ಸ್ ಗಳನ್ನು ಜತೆಗೆ ತೆಗೆದುಕೊಂಡು ಹೋಗಬೇಕಾಗಿಲ್ಲ. ಈ ದಂಪತಿ ಬಗ್ಗೆ ನಿಮ್ಮ ಅಭಿಪ್ರಾಯ ಏನು? ನಿಮ್ಮ ಅನಿಸಿಕೆಯನ್ನು ಕಮೆಂಟ್ ಬಾಕ್ಸ್ ನಲ್ಲಿ ಹಾಕಿಬಿಡಿ.



Click it and Unblock the Notifications











