Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಈಕೆ ಮಾಡೆಲ್ ರೀತಿ ಕಾಣಿಸಲು 30 ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಳು!
ಜನರು ತಮಗೆ ಇಷ್ಟವಾಗಿರುವುದನ್ನು ಪಡೆಯಲು ಏನು ಬೇಕಿದ್ದರೂ ಮಾಡಲು ತಯಾರಾಗಿ ಇರುತ್ತಾರೆ. ಇಂತಹ ಘಟನೆಯೊಂದು ಹಾಂಕಾಂಗ್ ನಲ್ಲಿ ನಡೆದಿದ್ದು, ಯುವತಿಯೊಬ್ಬಳು ತಾನು ವಯಸ್ಕ ಸಿನಿಮಾದ ಸ್ಟಾರ್ ನಟಿಯಂತೆ ಕಾಣಿಸಿಕೊಳ್ಳಬೇಕೆಂದು ಬಯಸಿ ಸುಮಾರು 30ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದಾಳೆ. ಈ ಯುವ ಯೂಟೂಬರ್ ತನ್ನ ನೆಚ್ಚಿನ ವಯಸ್ಕ ಸಿನಿಮಾ ನಟಿಯಂತೆ ಕಾಣಬೇಕು ಎಂದು ಹೀಗೆ ಮಾಡಿಕೊಂಡಿದ್ದಾಳೆ.

ಆದರೆ ಈಕೆಯ ನಿರ್ಧಾರದಿಂದ ಮಾಜಿ ಪ್ರೇಮಿ ಮಾತ್ರ ತುಂಬಾ ಕುಪಿತಗೊಂಡಿದ್ದಾನೆ ಮತ್ತು ಆಕೆ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿರುವನು. ಈ ಬಗ್ಗೆ ನೀವು ಇನ್ನಷ್ಟು ವಿವರವಾಗಿ ತಿಳಿಯಿರಿ.

ಈ ಘಟನೆಯು ನಡೆದಿರುವುದ ಹಾಂಕಾಂಗ್ ನಲ್ಲಿ
ಹಾಂಕಾಂಗ್ ನಿವಾಸಿಯಾಗಿರುವ ಬೆರ್ರಿ ಎನ್ಜಿ ಎನ್ನುವ 23 ಹರೆಯದ ಯುವತಿಯು ಈ ಶಸ್ತ್ರಚಿಕಿತ್ಸೆಗೆ ಒಳಗಾಗಿರುವವಳು. ತನ್ನ ಯೂ ಟೂಬ್ ಚಾನೆಲ್ ನಿಂದಾಗಿ ಆಕೆ ತುಂಬಾ ಜನಪ್ರಿಯಳಾಗಿರುವಳು. ಕಳೆದ ಆರು ವರ್ಷಗಳಲ್ಲಿ ಆಕೆ ಸಮಾರು 30ಕ್ಕೂ ಹೆಚ್ಚು ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗಿರುವಳು.

ಆರು ವರ್ಷಗಳಲ್ಲಿ ಇದು ಆಕೆಗೆ ಮನವರಿಕೆ ಆಯಿತು
16ನೇ ಹರೆಯದಲ್ಲಿ ಇದ್ದ ವೇಳೆ ಬೆರ್ರಿ ಮೊದಲ ಸಲ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗೆ ಒಳಗಾದಳು ಮತ್ತು ಇದ ಬಳಿಕ ಆಕೆ 30 ಶಸ್ತ್ರಚಿಕಿತ್ಸಗೆ ಸುಮಾರು 3000 ಅಮೆರಿಕನ್ ಡಾಲರ್ ವ್ಯಯ ಮಾಡಿರುವಳು.

ತನ್ನ ಸೌಂದರ್ಯಕ್ಕೆ ಟೀಕೆಗಳು ಬರುತ್ತಿದ್ದವು
ತನ್ನ ದೈಹಿಕ ಸೌಂದರ್ಯದ ಬಗ್ಗೆ ಬಾಯ್ ಫ್ರೆಂಡ್ ಯಾವಾಗಲೂ ಟೀಕೆ ಮಾಡುತ್ತಿದ್ದ ಮತ್ತು ಸೂಪರ್ ಮಾಡೆಲ್ ಗಳಿಗೆ ಆಕೆಯನ್ನು ಹೋಲಿಕೆ ಮಾಡಿ ಆತ್ಮವಿಶ್ವಾಸ ಕುಂದಿಸುತ್ತಿದ್ದ ಎಂದು ಆಕೆ ಹೇಳಿಕೊಂಡಿರುವಳು.

ಶಸ್ತ್ರಚಿಕಿತ್ಸೆಗೆ ಒಳಗಾಗುವುದರಿಂದ ಆತ ತಡೆಯಲಿಲ್ಲ
ಶಸ್ತ್ರಚಿಕಿತ್ಸೆಗೆ ಒಳಗಾಗುವುದರಿಂದ ತನ್ನ ಮಾಜಿ ಪ್ರೇಮಿಯು ಯಾವತ್ತೂ ತಡೆಯಲಿಲ್ಲ. ಆಕೆಯನ್ನು ಒಂದು ಸಲ ನಿಲ್ಲಿಸುತ್ತಿದ್ದರೆ ಇಷ್ಟು ಶಸ್ತ್ರಚಿಕಿತ್ಸೆಗೆ ಒಳಪಡುತ್ತಿರಲಿಲ್ಲ ಎಂದು ಆಕೆ ಹೇಳಿದ್ದಾಳೆ. ಆಕೆಯ ಕಣ್ಣುಗಳು, ಹಣೆ, ಗಲ್ಲ, ಮೂಗು ಮತ್ತು ಸ್ತನಗಳ ಮೇಲೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಆತ ಯಾವತ್ತಿಗೂ ಆಕೆಯಿಂದ ಆಕರ್ಷಿತನಾಗಲಿಲ್ಲ
ಶಸ್ತ್ರಚಿಕಿತ್ಸೆ ಬಳಿಕ ಬೆರ್ರಿಯನ್ನು ನೋಡಿದ ಆಕೆಯ ತಾಯಿ ತುಂಬಾ ನೊಂದು ಕೊಂಡರು ಮತ್ತು ಆಕೆಯ ಪ್ರೇಮಿಯನ್ನು ನೋಡಿದ ವೇಳೆ ಆಕೆಗೆ ತಾನು ದೊಡ್ಡ ಮಟ್ಟದ ತಪ್ಪು ಮಾಡಿರುವುದು ತಿಳಿದುಬಂತು. ಇಷ್ಟು ಶಸ್ತ್ರಚಿಕಿತ್ಸೆ ಬಳಿಕ ಕೂಡ ಆತನಿಗೆ ತಾನು ತುಂಬಾ ಆಕರ್ಷಕವಾಗಿ ಕಾಣದೆ ಇದ್ದ ಪರಿಣಾಮವಾಗಿ ಆತನನ್ನು ಆಕೆ ಬಿಟ್ಟುಬಿಟ್ಟಳು.



Click it and Unblock the Notifications
