For Quick Alerts
ALLOW NOTIFICATIONS  
For Daily Alerts

ಶೌಚಾಲಯಕ್ಕೆ ಹೋಗಿ ಬಂದು ನೆನಪಿನ ಶಕ್ತಿ ಕಳಕೊಂಡ ಮಹಿಳೆ!

|

ನೀವು ಒಂದು ಸಲ ಶೌಚಾಲಯಕ್ಕೆ ಹೋಗಿ ಬಂದ ಬಳಿಕ ಕಳೆದ ಕೆಲವು ವರ್ಷಗಳ ನೆನಪೇ ನಿಮಗೆ ಇರದಿದ್ದರೆ ಹೇಗಾಗಬಹುದು ಹೇಳಿ?
ನಿಮಗೆ ಈ ಪ್ರಶ್ನೆ ನಗು ಹಾಗೂ ಅಚ್ಚರಿ ಮೂಡಿಸಬಹುದು. ಆದರೆ ಇದನ್ನು ತಾತ್ಕಾಲಿಕವಾಗಿ ನೆನಪಿನ ಶಕ್ತಿ ಕಳೆದುಕೊಳ್ಳುವುದು ಎನ್ನಲಾಗುತ್ತದೆ. ಹಲವಾರು ಆರೋಗ್ಯ ಸಮಸ್ಯೆಗಳ ಪರಿಣಾಮವಾಗಿ ತಾತ್ಕಾಲಿನ ನೆನಪಿನ ಶಕ್ತಿ ಕಳೆದುಕೊಳ್ಳಬಹುದು. ಕಾರಣಗಳನ್ನು ತಿಳಿದುಕೊಳ್ಳುವುದು ಮತ್ತು ತಾತ್ಕಾಲಿಕ ನೆನಪಿನ ಶಕ್ತಿ ಕಳೆಯುವುದು ತುಂಬಾ ಕಠಿಣ ಕೆಲಸವಾಗಿದೆ. ಈ ಲೇಖನದಲ್ಲಿ ನಾವು ನಿಮಗೆ ಮಹಿಳೆಯೊಬ್ಬರು ಮಲಬದ್ಧತೆಯಿಂದಾಗಿ ಹತ್ತು ವರ್ಷಗಳ ಕಾಲದ ನೆನಪಿನ ಶಕ್ತಿಯನ್ನು ಕಳೆದುಕೊಂಡಿರುವ ಬಗ್ಗೆ ತಿಳಿಸಲಿದ್ದೇವೆ.

ಹಾಂಗ್ ಕಾಂಗ್ ನ ಮಹಿಳೆಯೊಬ್ಬರು ತಾತ್ಕಾಲಿಕ ನೆನಪಿನ ಶಕ್ತಿ ಕಳೆದುಕೊಂಡಿದ್ದಾರೆ. ಇದರಿಂದ ಕಳೆದ ಹತ್ತು ವರ್ಷಗಳಲ್ಲಿ ಏನು ನಡೆದಿದೆ ಎನ್ನುವುದು ಅವರಿಗೆ ತಿಳಿದಿಲ್ಲ. ಮಲಬದ್ಧತೆಯಿಂದಾಗಿ ಶೌಚಾಲಯದಲ್ಲಿ ತುಂಬಾ ಒತ್ತಡ ಹಾಕುತ್ತಿದ್ದ ಪರಿಣಾಮವಾಗಿ ಆಕೆ ತಾತ್ಕಾಲಿಕವಾಗಿ ನೆನಪಿನ ಶಕ್ತಿ ಕಳೆದುಕೊಂಡಿದ್ದಾರೆ.

Most Read: ಹುಡುಗಿಯ ಬೆನ್ನತ್ತಿ ಹೋಗಿ ಮಧುಮೇಹ ತಂದುಕೊಂಡ!

Constipation

ಮಲವನ್ನು ಹೊರಗೆ ಹಾಕಲು ಅತಿಯಾಗಿ ಒತ್ತಡ ಹಾಕುವುದರಿಂದ ಹಲವಾರು ರೀತಿಯ ಅಡ್ಡಪರಿಣಾಮಗಳು ಇದೆ ಎಂದು ಹೇಳಲಾಗುತ್ತದೆ. ಈ ಅಡ್ಡಪರಿಣಾಮಗಳಲ್ಲಿ ನಿಶ್ಯಕ್ತಿ ಮತ್ತು ತಲೆನೋವು ಕೂಡ ಬರಬಹುದು.
ಇನ್ನೊಂದು ಬದಿಯಲ್ಲಿ ಜನರು ಪಾರ್ಶ್ವವಾಯುವಿನಂತಹ ಪ್ರಾಣಕ್ಕೆ ಹಾನಿ ಉಂಟಾಗುವಂತಹ ಸಮಸ್ಯೆಯನ್ನು ಕೂಡ ಎದುರಿಸಬಹುದು.

ಆದರೆ ಚೀನಾದ ಸಾಮಾಜಿಕ ಮಾಧ್ಯಗಳಲ್ಲಿ ಬರುತ್ತಿರುವಂತಹ ವರದಿಯೊಂದರ ಪ್ರಕಾರ ಶೌಚಾಲಯದಲ್ಲಿ ಅತಿಯಾಗಿ ಒತ್ತಡ ಹಾಕುತ್ತಿದ್ದ ಪರಿಣಾಮವಾಗಿ ಮಹಿಳೆಯು ತಾತ್ಕಾಲಿಕ ನೆನಪಿನ ಶಕ್ತಿ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಮೆದುಳಿನ ಕೆಲವೊಂದು ಭಾಗಗಳಿಗೆ ಸರಿಯಾಗಿ ಆಮ್ಲಜನಕವು ಪೂರೈಕೆ ಆಗದೆ ಇರುವ ಕಾರಣದಿಂದಲೂ ಇದು ಸಂಭವಿಸಬಹುದು ಎಂದು ತಜ್ಞರು ಹೇಳುತ್ತಾರೆ.

ಮಹಿಳೆಯ ಪರಿಸ್ಥಿತಿ ಬಗ್ಗೆ ತಿಳಿಸಿರುವ ವೈದ್ಯರು, ಮಲ ಹೊರಗೆ ಹಾಕಲು ಮಹಿಳೆಯು ಅತಿಯಾಗಿ ಒತ್ತಡ ಹಾಕುತ್ತಲಿದ್ದರು ಮತ್ತು ಇದರಿಂದಾಗಿ ಕಳೆದ ಹತ್ತು ವರ್ಷಗಳ ನೆನಪಿನ ಶಕ್ತಿಯನ್ನು ಆಕೆ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಆದರೆ ಆಕೆಯ ತಾತ್ಕಾಲಿಕವಾಗಿ ನೆನಪಿನ ಶಕ್ತಿ ಕಳೆದುಕೊಂಡಿರುವುದು ಕೇವಲ ಎಂಟು ಗಂಟೆಗಳ ಕಾಲ ಮಾತ್ರ ಇತ್ತು ಎನ್ನುವುದು ತುಂಬಾ ಸಂತೋಷದ ವಿಷಯವಾಗಿದೆ.

ಮಹಿಳೆಯ ಕುಟುಂಬದವರು ಹೇಳುವ ಪ್ರಕಾರ, ಮಹಿಳೆಯು ತುಂಬಾ ದೀರ್ಘಕಾಳದಿಂದ ಮಲಬದ್ಧತೆ ಸಮಸ್ಯೆ ಎದುರಿಸುತ್ತಿದ್ದರು ಮತ್ತು ಇದರಿಂದಾಗಿ ಆಕೆಗೆ ದೀರ್ಘಕಾಲ ಶೌಚಾಲಯದಲ್ಲಿ ಕಳೆಯಬೇಕಾಗುತ್ತಿತ್ತು. ಆದರೆ ಶೌಚಾಲಯದಿಂದ ಹೊರಗೆ ಬಂದ ಬಳಿಕ ಆಕೆಗೆ ಕಳೆದ ಹತ್ತು ವರ್ಷಗಳಲ್ಲಿ ಏನಾಗಿದೆ ಎಂದು ನೆನಪೇ ಇರಲಿಲ್ಲ.

ಆಕೆಯ ಪರಿಸ್ಥಿತಿಯ ಬಗ್ಗೆ ಚಿಂತೆಗೊಳಗಾದ ಕುಟುಂಬದವರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಹಲವಾರು ರೀತಿಯ ಪರೀಕ್ಷೆಗಳನ್ನು ಮಾಡಿದರು ಮತ್ತು ಮಹಿಳೆಯ ಮೆದುಳು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕಂಡುಕೊಂಡರು ಮತ್ತು ಆಕೆಗೆ ತಾತ್ಕಾಲಿಕ ನೆನಪಿನ ಶಕ್ತಿ ಕಳೆದುಕೊಳ್ಳುವ ಸಮಸ್ಯೆ ಆಗಿರಬಹುದು ಎಂದು ಹೇಳಿದರು. ಈ ಸುದ್ದಿಯು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವೇಳೆ ಇದನ್ನು ಹೆಚ್ಚಿನ ನೆಟ್ಟಿಗರು ಸುಳ್ಳು ಎಂದು ಹೇಳಿದರು. ಆದರೆ ನರಶಾಸ್ತ್ರಜ್ಞರ ಪ್ರಕಾರ ಕರುಳಿನ ಮೇಲೆ ಹೆಚ್ಚಿನ ಒತ್ತಡ ಹಾಕುವ ಪರಿಣಾಮವಾಗಿ ಮೆದುಳಿನ ಆಮ್ಲಜನಕ ಪೂರೈಕೆಯು ಕಡಿಮೆ ಆಗಬಹುದು ಮತ್ತು ಇಂತಹ ವಿಚಿತ್ರ ಘಟನೆಗಳು ನಡೆಯಬಹುದು ಎನ್ನುತ್ತಾರೆ.

Read more about: life facts ಜೀವನ
English summary

She Suffers Amnesia Due To Constipation

According to China media, a woman who had a bad experience of constipation two weeks ago, is believed to have been feeling very uncomfortable. She went to the washroom to get some relief. It is reported that the woman suffered from a short-term memory loss of 10 years. She recovered later.She Suffers Amnesia Due To Constipation
X
Desktop Bottom Promotion