Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಈ ಮಹಿಳೆ ಏನು ಮಾಡಿದಳು ಗೊತ್ತೇ? ನಿದ್ರೆಯಲ್ಲಿ ಮಾತ್ರೆಗಳ ಪ್ಯಾಕೆಟ್‌ನ್ನೇ ನುಂಗಿದಳು!!
ನಿದ್ರೆಯಲ್ಲಿ ಕೆಲವು ಜನರಿಗೆ ನಡೆಯುವ ಅಭ್ಯಾಸವಿರುವುದ್ದರೆ, ಇನ್ನು ಕೆಲವು ಮಂದಿ ಏನೇನು ವಟಗುಟುತ್ತಾ ಇರುವರು. ಆದರೆ ನಮಗೆ ಇದೆಲ್ಲವೂ ತಿಳಿಯದೆ ಮಾಡುವಂತಹ ಕೆಲಸಗಳು. ಆದರೆ ಇಲ್ಲೊಬ್ಬಳು ಮಹಿಳೆ ಅರೆನಿದ್ರೆಯಲ್ಲಿ ಮಾತ್ರೆಗಳ ಪ್ಯಾಕೆಟ್ ನ್ನು ನುಂಗಿದ್ದು, ಅದು ಆಕೆಯ ಗಂಟಲಿನಲ್ಲಿ ಸುಮಾರು 17 ದಿನಗಳ ಕಾಲ ಸಿಲುಕಿಕೊಂಡಿತ್ತು. ಆದರೆ ನಮಗೆ ತಿಳಿಯದೆ ಮಾಡುವಂತಹ ಕೆಲವೊಂದು ತಪ್ಪುಗಳು ನಮ್ಮ ಪ್ರಾಣಕ್ಕೆ ಅಪಾಯವನ್ನು ಉಂಟು ಮಾಡಬಲ್ಲದು. ನೀವು ಈ ಘಟನೆಯ ಬಗ್ಗೆ ಓದುತ್ತಾ ಸಾಗಿ....

ಮಧ್ಯರಾತ್ರಿ ವೇಳೆ ಆಕೆ ಮಾತ್ರೆಯ ಪ್ಯಾಕೆಟ್ ನುಂಗಿದಳು
40ರ ಹರೆಯದ ಮಹಿಳೆಯು ಮಧ್ಯರಾತ್ರಿ ವೇಳೆ ಮಾತ್ರೆಯ ಪ್ಯಾಕೆಟ್ ನ್ನು ನುಂಗಿದಳು ಎಂದು ವರದಿಗಳು ಹೇಳಿವೆ. ಆಕೆ ಪ್ಯಾಕೆಟ್ ನ್ನು ತೆರೆಯದೆ ಸಂಪೂರ್ಣವಾಗಿ ಮಾತ್ರೆಯನ್ನು ಹಾಗೆ ನುಂಗಿದಳು. ಬೆಳಗ್ಗೆ ಆಕೆ ಎದ್ದಾಗ ಗಂಟಲಿನಲ್ಲಿ ಏನೋ ಸಿಲುಕಿರುವಂತಹ ಅನುಭವವು ಆಕೆಗೆ ಆಗುತ್ತಲಿತ್ತು. ಆದರೆ 17 ದಿನಗಳ ಕಾಲ ವೈದ್ಯರಿಗೆ ಕೂಡ ಯಾವುದೇ ರೀತಿಯ ವಸ್ತು ಅಲ್ಲಿ ಪತ್ತೆಯಾಗಲಿಲ್ಲ.

ಆಕೆ ಹಲವಾರು ಸಲ ವೈದ್ಯರಲ್ಲಿಗೆ ಭೇಟಿ ನೀಡಿದಳು
ಆಕೆಗೆ ನೋವು ಹೆಚ್ಚಾಗುತ್ತಾ ಇದ್ದಂತೆ ನೇರವಾಗಿ ಆಸ್ಪತ್ರೆಗೆ ತೆರಳಿದಳು ಮತ್ತು ತನಗೆ ನುಂಗಲು ಕಷ್ಟವಾಗುತ್ತಿದೆ ಎಂದು ವೈದ್ಯರ ಬಳಿ ಹೇಳಿದಳು. ಇಎನ್ ಟಿ ತಜ್ಞರ ಪ್ರಕಾರ ಆಕೆಗೆ ದ್ರವಾಹಾರ ಸೇವನೆ ಮಾಡಲು ಯಾವುದೇ ಸಮಸ್ಯೆಯಾಗುತ್ತಿರಲಿಲ್ಲ ಮತ್ತು ಸರಿಯಾಗಿ ಉಸಿರಾಡುತ್ತಲೂ ಇದ್ದಳು. ಯಾವುದೇ ನೋವಿಲ್ಲದೆ ಆಕೆ ಕುತ್ತಿಗೆ ತಿರುಗಿಸುತ್ತಿದ್ದಳು. ಇದರಿಂದಾಗಿ ವೈದ್ಯರು ಆಕೆಗೆ ನೋವು ನಿವಾರಕ ನೀಡಿದರು. ಇದರಿಂದಾಗಿ ಮಹಿಳೆಗೆ ತಾತ್ಕಾಲಿಕ ಪರಿಹಾರ ಸಿಕ್ಕಿತು.

ನಾಲ್ಕನೇ ಸಲ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಆಕೆಯ ಪರಿಸ್ಥಿತಿ ಬಗ್ಗೆ ತಿಳಿಯಿತು!
ಆಕೆ ಎದೆಯ ಎದೆಯ ಎಕ್ಸ್ ರೇ ಮಾಡಿಸಿಕೊಂಡಾಗ ಗಂಟಲಿನ ಭಾಗದಲ್ಲಿ ಸವೆತ ಕಂಡುಬಂದಿದೆ. ಆಕೆ ನುಂಗಿರುವ ಮಾತ್ರೆಯ ಪ್ಯಾಕೆಟ್ ನ ಹರಿತವಾಗಿರುವ ಅಂಚಿನಿಂದಾಗಿ ಹೀಗೆ ಆಗಿತ್ತು. ಆದರೆ ಎಕ್ಸ್ ರೇಯಲ್ಲಿ ಯಾವುದೇ ಬಾಹ್ಯ ವಸ್ತುಗಳು ಕಂಡಬರಲಿಲ್ಲ. ಎಲ್ಲವೂ ಸರಿಯಾಗಿದೆ ಮತ್ತು ನೋವಿನಲ್ಲಿ ಯಾವುದೇ ರೀತಿಯ ಸುಧಾರಣೆ ಕಂಡುಬರದೆ ಇದ್ದಲ್ಲಿ ಮತ್ತೆ ಬಂದು ಭೇಟಿಯಾಗುವಂತೆ ವೈದ್ಯರು ಸೂಚಿಸಿದರು. ನಾಲ್ಕನೇ ಭೇಟಿ ವೇಳೆ ಆಕೆಯ ಗಂಟಲಿನ ಹಿಂಭಾಗದ ಸ್ಕ್ಯಾನ್ ಮಾಡಲಾಯಿತು. ಇದರಿಂದ ಗಂಟಲಿನಲ್ಲಿ ವಸ್ತುವೊಂದು ಇರುವುದು ಪತ್ತೆಯಾಗಿದೆ.

ಮಾತ್ರೆ ಪ್ಯಾಕೆಟ್ ಸರಿಯಾಗಿ ಕುಳಿತ್ತಿತ್ತು
ಮಹಿಳೆಯ ಗಂಟಲಿನಲ್ಲಿ ಸಿಲುಕಿಹಾಕಿಕೊಂಡಿರುವ ಮಾತ್ರೆಯ ಪ್ಯಾಕೆಟ್ ನ್ನು ಕಂಡು ವೈದ್ಯರು ನಿಬ್ಬೆರಗಾದರು. ಆದರೆ ವೈದ್ಯರು ಅದನ್ನು ಸುರಕ್ಷಿತವಾಗಿ ಹೊರಗೆ ತೆಗೆಯುವಲ್ಲಿ ಯಶಸ್ವಿಯಾದರು. 17 ದಿನಗಳ ಕಾಲ ಮಾತ್ರೆಯು ಗಂಟಲಿನಲ್ಲೇ ಸಿಲುಕಿ ಹಾಕಿಕೊಂಡಿತ್ತು. ಮಾತ್ರೆಯೊಂದಿಗೆ ಅದರ ಪ್ಯಾಕೆಟ್ ನ್ನು ಕೂಡ ನುಂಗಿರುವ ಬಗ್ಗೆ ಮಹಿಳೆಗೆ ತಿಳಿದೇ ಇರಲಿಲ್ಲ. ಯಾಕೆಂದರೆ ಆಕೆ ಅರ್ಧ ನಿದ್ರೆಯಲ್ಲಿದ್ದರು.



Click it and Unblock the Notifications
