Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮಹಿಳೆಯ ಗಂಟಲಿನಲ್ಲಿ ಸ್ಟೀಲ್‌ನ ಚಮಚ ಸಿಲುಕಿಕೊಂಡಿತು! ಮುಂದೆ ಏನಾಯಿತು ಗೊತ್ತೇ?
ಮನುಷ್ಯನ ದೇಹದ ಒಳಗೆ ಕೆಲವೊಮ್ಮೆ ಅನಿರೀಕ್ಷಿತವಾಗಿ ವಸ್ತುಗಳು ಸಿಲುಕಿಕೊಳ್ಳುವುದು ಇದೆ. ಇನ್ನು ಕೆಲವೊಮ್ಮೆ ಶಸ್ತ್ರಚಿಕಿತ್ಸೆ ವೇಳೆ ವೈದ್ಯರು ಹೊಟ್ಟೆಯ ಒಳಗೆ ಕತ್ತರಿ ಇತ್ಯಾದಿ ಏನಾದರೂ ವಸ್ತುಗಳನ್ನು ಬಿಟ್ಟಿರುವಂತಹ ಎಷ್ಟೋ ಘಟನೆಗಳು ನಡೆದಿದೆ. ಆದರೆ ಇನ್ನು ಕೆಲವರು ಬೇಕೆಂದೇ ತಮ್ಮ ದೇಹದ ಒಳಗೆ ಕೆಲವು ವಸ್ತುಗಳನ್ನು ತುರುಕಿಸಿಕೊಳ್ಳುವರು. ಇಂತಹ ಹಲವಾರು ಘಟನೆಗಳನ್ನು ನಾವು ಕೇಳಿದ್ದೇವೆ. ಈ ಲೇಖನದಲ್ಲಿ ನಾವು ನಿಮಗೆ ಮಹಿಳೆಯ ಸಣ್ಣ ಕರುಳು ಮತ್ತು ಹೊಟ್ಟೆಯ ಹಿಂಭಾಗದ ಬಳಿಯಲ್ಲಿ ಚಮಚವೊಂದು ಸಿಲುಕಿರುವಂತಹ ಘಟನೆ ಬಗ್ಗೆ ತಿಳಿಸಲಿದ್ದೇವೆ. ಮಹಿಳೆಗೆ ಯಾವುದೇ ನೋವು ಕಾಣಿಸಿಕೊಳ್ಳದೆ ಇದ್ದ ಕಾರಣದಿಂದಾಗಿ ಆಕೆ ವೈದ್ಯರ ಬಳಿಗೆ ಹೋಗಲೇ ಇಲ್ಲ. ಇದರ ಬಗ್ಗೆ ನೀವು ಇನ್ನಷ್ಟು ತಿಳಿಯಲು ಮುಂದಕ್ಕೆ ಓದಿಕೊಳ್ಳಿ.

ಮೀನಿನ ಮುಳ್ಳು ತೆಗೆಯಲು ಆಕೆ ಚಮಚ ಬಳಸಿದಳು
ಮಹಿಳೆಯು ಊಟ ಮಾಡುವ ವೇಳೆ ಮೀನಿನ ಮುಳ್ಳು ಗಂಟಲಿನಲ್ಲಿ ಸಿಲುಕಿಕೊಂಡಿತು. ಐದು ಇಂಚು ಉದ್ದದ ಸ್ಟೀಲ್ ನ ಚಮಚವನ್ನು ಮಹಿಳೆಯು ತನ್ನ ಗಂಟಲಿನಲ್ಲಿ ಸಿಲುಕಿದ್ದ ಮೀನಿನ ಮುಳ್ಳನ್ನು ತೆಗೆಯಲು ಬಳಸಿದರು.

ನಾಲ್ಕು ದಿನಗಳ ಕಾಲ ಚಮಚವು ಆಕೆಯ ದೇಹದೊಳಗೆ ಇತ್ತು
ನಾಲ್ಕು ದಿನಗಳ ಕಾಲ ಮಹಿಳೆಯ ದೇಹದ ಒಳಗಡೆ ಆ ಚಮಚವು ಹಾಗೆ ಇತ್ತು. ಆದರೆ ಈ ವೇಳೆ ಆಕೆಗೆ ಯಾವುದೇ ನೋವು ಅಥವಾ ಅಸ್ವಸ್ಥತೆ ಕಂಡುಬರಲಿಲ್ಲ.

ಶಸ್ತ್ರಚಿಕಿತ್ಸೆ ನಡೆಸಲಾಯಿತು
ನಾಲ್ಕು ದಿನಗಳ ಬಳಿಕ ಸ್ವಲ್ಪ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆ ಆಸ್ಪತ್ರೆಗೆ ವೈದ್ಯರ ಬಳಿಗೆ ಹೋದರು. ಎಕ್ಸ್ ರೇ ಮತ್ತು ಎಂಡೋಸ್ಕೋಪಿ ತೆಗೆದ ಬಳಿಕ ವೈದ್ಯರು ಆಕೆಗೆ ಶಸ್ತ್ರಚಿಕಿತ್ಸೆ ನಡೆಸಿ, ಬಳಿಕ ಚಮಚ ಹೊರಗೆ ತೆಗೆಯಲು ನಿರ್ಧರಿಸಿದರು. ಹೊಟ್ಟೆಯ ಹಿಂಭಾದಲ್ಲಿದ್ದ ಚಮಚವನ್ನು ತೆಗೆಯಲು ವೈದ್ಯರು ಯಶಸ್ವಿಯಾದರು.

ವೈದ್ಯರು ಹೇಳುವ ಪ್ರಕಾರ
ಚಮಚವು ತುಂಬಾ ಕ್ಲಿಷ್ಟ ಪ್ರದೇಶದಲ್ಲಿ ಸಿಲುಕಿತ್ತು. ವೈದ್ಯರು ಇದನ್ನು ತೆಗೆಯುವ ಮೊದಲು ಅದನ್ನು ಸರಿಯಾಗಿ ಹೊಂದಾಣಿಕೆ ಮಾಡಿಕೊಂಡರು. ಇದಕ್ಕಾಗಿ 10 ನಿಮಿಷ ಬೇಕಾಯಿತು. ವೈದ್ಯರು ಹೇಳುವ ಪ್ರಕಾರ ಈ ಲೋಹವು ನಿಂತಿದ್ದ ಜಾಗದಲ್ಲಿ ಊತವು ಕಾಣಿಸಿಕೊಂಡಿತ್ತು. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು? ಇದನ್ನು ನಮಗೆ ಕಮೆಂಟ್ ಬಾಕ್ಸ್ ನಲ್ಲಿ ಬರೆಯಲು ಮರೆಯಬೇಡಿ.



Click it and Unblock the Notifications
