Latest Updates
-
ಬಾಂದ್ರಾ ಫೇರ್ ರಶ್: ಕಪಲ್ಸ್ ಹುಷಾರ್! ಟ್ರಾಫಿಕ್ ಜಾಮ್ನಲ್ಲಿ ಸಿಲುಕದಂತೆ ಡೇಟಿಂಗ್ ಪ್ಲಾನ್ ಮಾಡುವುದು ಹೇಗೆ? -
ಅಪಾರ್ಟ್ಮೆಂಟ್ನಲ್ಲಿ ಗಣೇಶ ವಿಸರ್ಜನೆ: ಪರಿಸರ ಸ್ನೇಹಿಯಾಗಿ ಆಚರಿಸಲು ಇಲ್ಲಿವೆ 5 ಸಿಂಪಲ್ ಟಿಪ್ಸ್ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಮಾರುಕಟ್ಟೆಯಲ್ಲಿ ನಕಲಿ 'ಅನಲಾಗ್ ಪನೀರ್' ಹಾವಳಿ: ಅಸಲಿ ಪನೀರ್ ಗುರುತಿಸುವುದು ಹೇಗೆ? -
iPhone 18 ಪ್ರೀ-ಆರ್ಡರ್ ಆರಂಭ: ನಿಮ್ಮ ಫೋನ್ ಬುಕ್ ಮಾಡುವ ಮುನ್ನ ಈ 5 ವಿಷಯಗಳನ್ನು ಮಿಸ್ ಮಾಡ್ಬೇಡಿ! -
ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದೀರಾ? ಗಾಯಗಳಾಗದಂತೆ ಕೆಲಸ ಮಾಡಲು ಈ ಸುರಕ್ಷತಾ ಟಿಪ್ಸ್ ಮಿಸ್ ಮಾಡಬೇಡಿ! -
ಇಂದಿನ ಲವ್ ಜಾತಕ: ನಿಮ್ಮ ಪ್ರೀತಿಯನ್ನು ಗಟ್ಟಿಗೊಳಿಸಲು ಇಂದಿನ ಬೆಸ್ಟ್ ಟಿಪ್ಸ್ ಮತ್ತು ಡೇಟಿಂಗ್ ಐಡಿಯಾಗಳು -
₹1,000 ಕ್ಕಿಂತ ಕಡಿಮೆ ಬಜೆಟ್ನಲ್ಲಿ ಮನೆಗೆ ಹೊಸ ಲುಕ್: ಬಿದಿರಿನ ಅಲಂಕಾರಿಕ ವಸ್ತುಗಳ ಮ್ಯಾಜಿಕ್! -
ನೆಸ್ಲೆ ಶಿಶು ಆಹಾರದ ಮೇಲೆ FSSAI ಕಣ್ಣು: ನಿಮ್ಮ ಮಗುವಿನ ಸುರಕ್ಷತೆಗಾಗಿ ಪೋಷಕರು ತಿಳಿಯಲೇಬೇಕಾದ ವಿಷಯಗಳು -
ವಿಶ್ವಕರ್ಮ ಪೂಜೆ ಸಂಭ್ರಮ: ಗಾಳಿಪಟ ಹಾರಿಸುವಾಗ ಈ ಸುರಕ್ಷತಾ ನಿಯಮಗಳನ್ನು ಮರೆಯದಿರಿ! -
IMD ಮಳೆ ಅಲರ್ಟ್: ಸಿಡಿಲು-ಮಳೆಯಿಂದ ಪಾರಾಗಲು ಈ ನಿಯಮ ಪಾಲಿಸಿ, ಮನೆಯಲ್ಲೇ ಫಿಟ್ ಆಗಿರಿ
ಬೋಳು ತಲೆ ವ್ಯಕ್ತಿಗೆ ಪಾಸ್ ಪೋರ್ಟ್ ಕಚೇರಿಯಲ್ಲಿ ಹೀಗೊಂದು ಸಮಸ್ಯೆ!
ಯಾವುದೇ ರಾಷ್ಟ್ರವಾದರೂ ಸರಿಯೇ ಅಲ್ಲಿ ಒಂದು ಪಾಸ್ ಪೋರ್ಟ್ ಮಾಡಬೇಕಾದರೆ ತುಂಬಾ ಕಠಿಣ ನಿಮಯಗಳು ಇರುವುದು. ಅದರಲ್ಲೂ ಕೆಲವೊಂದು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಾಸ್ ಪೋರ್ಟ್ ಪಡೆಯಲು ತುಂಬಾ ಕಷ್ಟಪಡಬೇಕಾಗುತ್ತದೆ. ಪಾಸ್ ಪೋರ್ಟ್ ಮಾಡಿಕೊಳ್ಳಲು ಹಲವಾರು ರೀತಿಯ ದಾಖಲೆ ಪತ್ರಗಳನ್ನು ನೀಡಬೇಕಾಗುತ್ತದೆ. ಇಷ್ಟು ಮಾತ್ರವಲ್ಲದೆ ಅಲ್ಲಿ ಹೋಗಿ ಸ್ವಯಂ ಪರೀಕ್ಷೆಗೂ ಒಳಗಾಗಬೇಕು.
ಆದರೆ ಇಲ್ಲೊಂದು ಪಾಸ್ ಪೋರ್ಟ್ ಕಚೇರಿಯಲ್ಲಿ ತುಂಬಾ ಅನಿರೀಕ್ಷಿತವಾದ ಘಟನೆಯೊಂದು ನಡೆಯಿತು. ಆದರೆ ಇಲ್ಲಿ ಅಧಿಕಾರಿಗಳು ಮಾತ್ರ ಇದನ್ನು ತುಂಬಾ ಒಳ್ಳೆಯ ರೀತಿಯಲ್ಲಿ ನಿಭಾಯಿಸಿದರು. ಪಾಸ್ ಪೋರ್ಟ್ ಕಚೇರಿಯಲ್ಲಿ ಫೋಟೋ ತೆಗೆದುಕೊಳ್ಳುವ ವೇಳೆ ವ್ಯಕ್ತಿಯೊಬ್ಬನ ಬೋಳು ತಲೆಯು ತುಂಬಾ ಸಮಸ್ಯೆಯಾಗುತ್ತಲಿತ್ತು.

ಈ ಘಟನೆಯ ಸಂಪೂರ್ಣ ವಿಡಿಯೋವನ್ನು ನೆಟ್ಟಿಗರಾಗಿರುವ ನಝಿರುಲ್ ನಝರಿನ್ ಎಂಬವರು ಹಂಚಿಕೊಂಡಿದ್ದಾರೆ. ಮಲೇಶಿಯಾದ ವಲಸೆ ಕಚೇರಿಯಲ್ಲಿ ವ್ಯಕ್ತಿಯೊಬ್ಬರು ಪಾಸ್ ಪೋರ್ಟ್ ಮಾಡಲು ಬಂದ ವೇಳೆ ಈ ಸಮಸ್ಯೆಯು ಕಾಣಿಸಿಕೊಂಡಿದೆ. ವ್ಯಕ್ತಿಯ ಬೋಳು ತಲೆಯಿಂದಾಗಿ ಇಲ್ಲಿನ ಅಧಿಕಾರಿಗಳಿಗೆ ಆ ವ್ಯಕ್ತಿ ಫೋಟೊ ಸರಿಯಾಗಿ ತೆಗೆಯಲು ಸಾಧ್ಯವಾಗಿರಲಿಲ್ಲ.
ಬೋಳು ತಲೆಯು ಎಷ್ಟರ ಮಟ್ಟಿಗೆ ನುಣುಪಾಗಿ ಇತ್ತೆಂದರೆ ಅದರ ಮೇಲೆ ಫ್ಲ್ಯಾಶ್ ಲೈಟ್ ಬಿದ್ದ ಕೂಡಲೇ ಅದು ಪ್ರತಿಫಲಿಸುತ್ತಿತ್ತು. ಇದರಿಂದಾಗಿ ಪಾಸ್ ಪೋರ್ಟ್ ನ ಅಗತ್ಯತೆಗೆ ಬೇಕಾಗಿರುವಂತೆ ಫೋಟೊ ತೆಗೆಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ವಲಸೆ ಕೇಂದ್ರದ ಅಧಿಕಾರಿಗಳಿಗೆ ಇಂತಹ ಪರಿಸ್ಥಿತಿ ಎದುರಾಗಿರುವುದು ಇದು ಮೊದಲ ಬಾರಿಯಲ್ಲ ಎಂದು ಅನಿಸುತ್ತದೆ. ಯಾಕೆಂದರೆ ಅವರು ತುಂಬಾ ತಾಳ್ಮೆಯಿಂದ ಇದ್ದರು ಮತ್ತು ಪರಿಸ್ಥಿತಿಯನ್ನು ತುಂಬಾ ವೃತ್ತಿಪರವಾಗಿ ನಿಭಾಯಿಸಿದರು.
ಇಂತಹ ಪರಿಸ್ಥಿತಿಯನ್ನು ಅವರು ಮೊದಲೇ ನಿಭಾಯಿಸಿರುವ ಕಾರಣದಿಂದಾಗಿ ಅವರು ಕೆಲವೇ ನಿಮಿಷಗಳಲ್ಲಿ ಇದಕ್ಕೊಂದು ಪರಿಹಾರ ಕಂಡುಕೊಂಡರು. ವಲಸೆ ಅಧಿಕಾರಿಗಳಿಬ್ಬರು ವ್ಯಕ್ತಿಯ ತಲೆಯ ಮೇಲೆ ಕಪ್ಪು ಬಣ್ಣದ ಪ್ಯಾನಲ್ ಗಳನ್ನು ಹಿಡಿದಿರುವುದು ಕಾಣಿಸುತ್ತಿದೆ. ಇದರಿಂದ ಅಲ್ಲಿ ಬೆಳಕಿನ ಪ್ರತಿಫಲನವು ತುಂಬಾ ಕಡಿಮೆ ಇರಲಿದೆ. ಇದು ನುಣುಪಾಗಿರುವಂತಹ ತಲೆಯ ಮೇಲೆ ಬೆಳಕು ಬೀಳುವುದನ್ನು ಕೂಡ ತಡೆಯಲಿದೆ.
ಆ ವ್ಯಕ್ತಿಯು ಹೊಸ ಪಾಸ್ ಪೋರ್ಟ್ ನೊಂದಿಗೆ ಮನೆಗೆ ಹೋಗಿದ್ದಾನೆ
ಈ ಒಂದು ಘಟನೆಯು ಕ್ಯಾಮರಾದಲ್ಲಿ ಸೆರೆಯಾಗಿ ಇಂಟರ್ನೆಟ್ ನಲ್ಲಿ ಹರಿದಾಡುತ್ತಲಿದೆ. ವಲಸೆ ಅಧಿಕಾರಿಗಳು ಇಂತಹ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಿರಬಹುದು. ಇಂತಹ ಪರಿಸ್ಥಿತಿಯಿಂದ ಮೇಲೆ ಬರಲು ಅವರು ತುಂಬಾ ಯಶಸ್ವಿಯಾಗಿದ್ದಾರೆ ಎಂದು ನಿಮಗನಿಸುವುದಿಲ್ಲವೇ?



Click it and Unblock the Notifications
