Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಕನ್ನಡಿಯಲ್ಲಿ ಈ ಬಾಲಕನ ಪ್ರತಿಬಿಂಬ ನೋಡಿದಾಗ ಭಯಾನಕವಾಗಿ ಕಾಣುತ್ತದೆಯಂತೆ!
ಕ್ಷಣ ಕ್ಷಣವು ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ವಿಡಿಯೋಗಳು ಅಪ್ ಲೋಡ್ ಆಗುತ್ತಲೇ ಇರುತ್ತವೆ. ಇದರಲ್ಲಿ ಕೆಲವು ವೈರಲ್ ಆದರೆ, ಇನ್ನು ಕೆಲವು ಹಾಗೆ ಮೂಲೆ ಸೇರಿ ಬಿಡುತ್ತದೆ. ವಿಡಿಯೋಗಳು ಜನರ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರುವುದು. ಹೀಗಾಗಿ ವಿಡಿಯೋಗಳು ಇಂದು ಜನಪ್ರಿಯವಾಗುತ್ತಿದೆ. ಇನ್ನು ಕೆಲವು ವಿಡಿಯೋಗಳನ್ನು ನಾವು ಚಿತ್ರೀಕರಣ ಮಾಡುತ್ತಿರುವ ವೇಳೆ ಅಲ್ಲಿ ಅದರಲ್ಲಿ ಅಗೋಚರ ಶಕ್ತಿಯು ಕಾಣಿಸಿಕೊಂಡಿರುವುದು ಇದೆ. ಇದು ಮನುಷ್ಯರ ಕಣ್ಣಿಗೆ ಕಾಣಸಿಗುವುದಿಲ್ಲ.

ಆದರೆ ಕ್ಯಾಮರಾ ಕಣ್ಣಿನಲ್ಲಿ ಅದರ ಸುಳಿವು ಸಿಗುವುದು. ಹೀಗೆ ಬಾಲಕನೊಬ್ಬ ಕನ್ನಡಿಯ ಮುಂದೆ ನಿಂತು ನೋಡುತ್ತಿರುವ ವೇಳೆ ತುಂಬಾ ವಿಚಿತ್ರವಾದ ದೃಶ್ಯವು ಕ್ಯಾಮರಾ ಕಣ್ಣಿಗೆ ಬಿದ್ದಿದೆ. ಇಲ್ಲಿ ಮಗು ಕನ್ನಡಿ ನೋಡುತ್ತಲಿದ್ದರೆ ಕನ್ನಡಿಯಲ್ಲಿ ಬೇರೆ ಚಿತ್ರ ಕಾಣಿಸಿಕೊಂಡಿದೆ. ಇದರಿಂದ ಇದನ್ನು ನೋಡಿದವರು ದಂಗಾಗಿ ಹೋಗಿದ್ದಾರೆ. ಮಗುವಿನ ತಂದೆಯು ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಇದು ಸ್ವಲ್ಪ ಮಟ್ಟಿಗೆ ಭೀತಿ ಹುಟ್ಟಿಸುತ್ತದೆ. ಈ ಬಗ್ಗೆ ನೀವು ವಿವರ ತಿಳಿಯಿರಿ.ಇದು ಒಂದು ಸಾಮಾನ್ಯ ವಿಡಿಯೋದಂತೆ ಇರಬೇಕಿತ್ತು ಮಗುವಿನ ವಿಡಿಯೋವನ್ನು ದಂಪತಿಯು ಚಿತ್ರೀಕರಿಸುತ್ತಿದ್ದ ವೇಳೆ ಮಗುವಿನ ಪ್ರತಿಬಿಂಬದಲ್ಲಿ ಏನೋ ತೊಂದರೆ ಇದೆ ಎಂದು ಅವರಿಗೆ ಅನಿಸಿದೆ ಮತ್ತು ಅವರು ಈ ವಿಡಿಯೋವನ್ನು ಮರು ಪರಿಶೀಲಿಸಲು ಪ್ರಯತ್ನಿಸಿದರು.

ಈ ವಿಡಿಯೋವನ್ನು ಆನ್ ಲೈನ್ ಗೆ ಹಾಕಲಾಯಿತು
ಈ ವಿಡಿಯೋವನ್ನು ಆನ್ ಲೈನ್ ಗೆ ಹಾಕಲಾಯಿತು ಮತ್ತು ಅದರಲ್ಲಿ ಹೀಗೆ ಬರೆಯಲಾಗಿತ್ತು... ``ನಾನು ಪಬ್ ಜಿ ಆಡುತ್ತಾ ಆನಂದಿಸುತ್ತಿದ್ದೆ. ಆ ವೇಳೆ ನನ್ನ ಪತ್ನಿಯು ಮಗುವನ್ನು ತರಲು ಹೇಳಿದಳು. ಏನು ಇರಲಿಕ್ಕಿಲ್ಲವೆಂದು ನಾನು ಯೋಚಿಸಿದ್ದೆ. ಆದರೆ ವಿಡಿಯೋ ನೋಡಿದಾಗ ತುಂಬಾ ಭೀತಿ ಉಂಟಾಗಿದೆ!"

ವಿಡಿಯೋದಲ್ಲಿ ಇರುವಂತೆ…
ಮಗುವು ತಾಯಿಯ ಕಡೆಗೆ ನೋಡಿದ ಕೂಡಲೇ ಆಗ ಕನ್ನಡಿಯಲ್ಲಿ ಇರುವಂತಹ ಪ್ರತಿಬಿಂಬ ಕೂಡ ಕ್ಯಾಮರಾ ಕಡೆಗೆ ನೋಡುವುದು. ಕಣ್ಣಿನ ಬಣ್ಣವು ಕಪ್ಪು ಬಣ್ಣಕ್ಕೆ ತಿರುಗುವುದು ಮತ್ತು ಇದರ ಬಳಿಕ ಸಾಮಾನ್ಯ ಬಣ್ಣಕ್ಕೆ ಬರುವುದು.

ಭೀತಿ ಪಡುತ್ತಿದ್ದೀರಿ…ಈ ವಿಡಿಯೋ ಎಡಿಟ್ ಮಾಡಲಾಗಿದೆ!
ಈ ವಿಡಿಯೋ ಬಗ್ಗೆ ಜನರು ತುಂಬಾ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ನಾವು ಇದರ ಸತ್ಯವನ್ನು ಹೇಳಲೇಬೇಕಾಗಿದೆ. ಈ ವಿಡಿಯೋವನ್ನು ಮಗುವಿನ ತಂದೆ ಎಡಿಟ್ ಮಾಡಿದ್ದಾರೆ. ಆದರೂ ಇದು ತುಂಬಾ ಭೀತಿ ಉಂಟು ಮಾಡುತ್ತಿದೆ.
ಇದರ ಬಗ್ಗೆ ನಿಮ್ಮ ಅನಿಸಿಕೆ ಏನು? ಕಮೆಂಟ್ ಬಾಕ್ಸ್ ನಲ್ಲಿ ಪ್ರತಿಕ್ರಿಯೆ ನೀಡಲು ಮರೆಯಬೇಡಿ.



Click it and Unblock the Notifications
