Latest Updates
-
ವೈಫ್ ಅಪ್ರಿಶಿಯೇಷನ್ ಡೇ: ನಿಮ್ಮ ಮಡದಿಗೆ ಈ ವಿಶೇಷ ದಿನದಂದು ನೀಡಬಹುದಾದ ಸರಳ ಮತ್ತು ಸುಂದರ ಸರ್ಪ್ರೈಸ್ಗಳು ಇಲ್ಲಿವೆ! -
ಮಳೆಗಾಲದ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸೋರಿಕೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮರೆವಿನ ಕಾಯಿಲೆಗೆ ವಿದಾಯ: ಮೆದುಳಿನ ಆರೋಗ್ಯಕ್ಕೆ ಭಾರತೀಯ ಶೈಲಿಯ 'ಮೈಂಡ್ ಡಯಟ್' ಹೀಗಿರಲಿ! -
2026ರ ಏಷ್ಯನ್ ಗೇಮ್ಸ್: ಮೊದಲ ದಿನವೇ ಭಾರತಕ್ಕೆ ಪದಕದ ಬೇಟೆ! ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ -
ದೆಹಲಿ-ಎನ್ಸಿಆರ್ನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಬಾಂದ್ರಾ ಫೇರ್ ರಶ್: ಕಪಲ್ಸ್ ಹುಷಾರ್! ಟ್ರಾಫಿಕ್ ಜಾಮ್ನಲ್ಲಿ ಸಿಲುಕದಂತೆ ಡೇಟಿಂಗ್ ಪ್ಲಾನ್ ಮಾಡುವುದು ಹೇಗೆ? -
ಅಪಾರ್ಟ್ಮೆಂಟ್ನಲ್ಲಿ ಗಣೇಶ ವಿಸರ್ಜನೆ: ಪರಿಸರ ಸ್ನೇಹಿಯಾಗಿ ಆಚರಿಸಲು ಇಲ್ಲಿವೆ 5 ಸಿಂಪಲ್ ಟಿಪ್ಸ್ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಮಾರುಕಟ್ಟೆಯಲ್ಲಿ ನಕಲಿ 'ಅನಲಾಗ್ ಪನೀರ್' ಹಾವಳಿ: ಅಸಲಿ ಪನೀರ್ ಗುರುತಿಸುವುದು ಹೇಗೆ? -
iPhone 18 ಪ್ರೀ-ಆರ್ಡರ್ ಆರಂಭ: ನಿಮ್ಮ ಫೋನ್ ಬುಕ್ ಮಾಡುವ ಮುನ್ನ ಈ 5 ವಿಷಯಗಳನ್ನು ಮಿಸ್ ಮಾಡ್ಬೇಡಿ! -
ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದೀರಾ? ಗಾಯಗಳಾಗದಂತೆ ಕೆಲಸ ಮಾಡಲು ಈ ಸುರಕ್ಷತಾ ಟಿಪ್ಸ್ ಮಿಸ್ ಮಾಡಬೇಡಿ!
ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ ಜಿರಳೆಗಳನ್ನು ಮುಖದ ಮೇಲೆ ಹಾಕಿಕೊಳ್ಳುವ ಚಾಲೆಂಜ್!!
ಇಂಟರ್ನೆಟ್ ಎನ್ನುವುದು ಈಗ ಹಲವಾರು ಸವಾಲುಗಳನ್ನು ಸೃಷ್ಟಿ ಮಾಡುತ್ತಲಿದೆ. ಇಂಟರ್ನೆಟ್ ನಿಂದ ಜನರಿಗೆ ಎಷ್ಟರ ಮಟ್ಟಿಗೆ ಲಾಭವಿದೆಯೋ, ಅಷ್ಟೇ ನಷ್ಟವು ಇದೆ ಎಂದು ಹೇಳಬಹುದು. ಯಾಕೆಂದರೆ ಇಂದಿನ ದಿನಗಳಲ್ಲಿ ಯುವಜನರು ಸಂಪೂರ್ಣವಾಗಿ ಇಂಟರ್ನೆಟ್ ನ ಮೊರೆ ಹೋಗಿದ್ದಾರೆ. ಇದರಿಂದಾಗಿ ಅವರು ಪ್ರತಿಯೊಂದಕ್ಕೂ ಇಂಟರ್ನೆಟ್ ನ್ನು ಅವಲಂಬಿಸಿದ್ದಾರೆ. ಇದು ಕಂಪ್ಯೂಟರ್ ಅಥವಾ ಮೊಬೈಲ್ ಆಗಿರಬಹುದು. ಇಂಟರ್ನೆಟ್ ಎನ್ನುವುದು ಅತೀ ಅಗತ್ಯವಾಗಿರುವುದು.

ಅದೇ ಇದರಲ್ಲಿ ಕೆಲವೊಂದು ಗೇಮ್ ಗಳು ಹಾಗೂ ಚಾಲೆಂಜ್ ಗಳು ಆಗಾಗ ಬರುತ್ತಲಿರುತ್ತದೆ. ಕೆಲವು ಚಾಲೆಂಜ್ ಗಳು ಜೀವಕ್ಕೆ ಮಾರಕವಾಗಿ ಎಷ್ಟೋ ಮಂದಿ ಪ್ರಾಣ ಕಳೆದಿಕೊಂಡಿರುವ ಬಗ್ಗೆ ಕೂಡ ನಾವು ಕೇಳಿದ್ದೇವೆ. ಈ ಲೇಖನದಲ್ಲಿ ಅಂತಹ ಒಂದು ಚಾಲೆಂಜ್ ಬಗ್ಗೆ ತಿಳಿಸಲಿದ್ದೇವೆ. ಇದು ತುಂಬಾ ರೇಜಿಗೆ ಹುಟ್ಟಿಸಬಹುದು. ಆದರೆ ಇದು ಅಪಾಯಕಾರಿ ಚಾಲೆಂಜ್ ಎನ್ನುವುದನ್ನು ಒಪ್ಪಿಕೊಳ್ಳಬೇಕು. ಈ ಚಾಲೆಂಜ್ ಏನು ಎಂದು ಮುಂದೆ ಓದುತ್ತಾ ತಿಳಿಯಿರಿ. ಇಂಟರ್ನೆಟ್ ನಲ್ಲಿ ಹರಿದಾಡುತ್ತಿರುವ ಹೊಸ ಚಾಲೆಂಜ್ ನಲ್ಲಿ ಜಿರಲೆಗಳನ್ನು ಮುಖದ ಮೇಲೆ ಬಿಟ್ಟುಕೊಂಡು ಫೋಟೊ ತೆಗೆಯಬೇಕು. ಇದರ ಬಗ್ಗೆ ನೀವು ಮುಂದೆ ಓದಿಕೊಳ್ಳಿ.

ಫೇಸ್ ಬುಕ್ ನಲ್ಲಿ ಈ ಟ್ರೆಂಡ್ ಆರಂಭವಾಗಿದೆ
ಫೇಸ್ ಬುಕ್ ಬಳಕೆದಾರರಾಗಿರುವ ಅಲೆಕ್ಸ್ ಔಂಗ್ ಎಂಬವರು ಈ ಹೊಸ ಚಾಲೆಂಜ್ ನ್ನು ಆರಂಭಿಸಿದ್ದಾರೆ ಮತ್ತು ಆಕೆ ಮುಖದ ಮೇಲೆ ಜಿರಳೆ ಬಿಟ್ಟುಕೊಂಡು ಸೆಲ್ಫಿ ತೆಗೆಸಿಕೊಂಡಿದ್ದಾರೆ.

ಅಡಿಬರಹ ಜತೆಗೆ ವಿಡಿಯೋ ಪೋಸ್ಟ್ ಮಾಡಲಾಗಿತ್ತು
ಹೊಸ ಸವಾಲು, ಇದನ್ನು ಮಾಡಲು ತಯಾರಾಗಿದ್ದೀರಾ? ಎನ್ನುವ ಅಡಿಬರಹದ ಜತೆಗೆ ಈ ವಿಡಿಯೋವನ್ನು ಆತ ಪೋಸ್ಟ್ ಮಾಡಿದ್ದ. ಈ ಪೋಸ್ಟ್ ಕೆಲವೇ ಗಂಟೆಗಳಲ್ಲಿ ತುಂಬಾ ವೈರಲ್ ಆಗಿತ್ತು.

ಇದು ವೈರಲ್ ಆಗಬಹುದೆಂದು ಯಾರೂ ಭಾವಿಸಿರಲಿಲ್ಲ
ಅಲೆಕ್ಸ್ ಈ ಪೋಸ್ಟ್ ನ ಫೋಟೊ ಮತ್ತು ಚಾಲೆಂಜ್‌ನ್ನು ಆನ್‌ಲೈನ್‌ಗೆ ಹಾಕಿದ ವೇಳೆ ಯಾರು ಕೂಡ ಇದು ವೈರಲ್ ಆಗಬಹುದು ಎಂದು ಆಲೋಚನೆ ಮಾಡಿರಲಿಲ್ಲ. ಯಾಕೆಂದರೆ ಜಿರಳೆ ನೋಡಿದ ತಕ್ಷಣ ಹೆಚ್ಚಿನ ಜನರಿಗೆ ರೇಜಿಗೆಯಾಗುವುದು. ಆದರೆ ಈ ಚಾಲೆಂಜ್ ಇನ್ನಷ್ಟು ದಿನ ಉಳಿಯಲಿದೆ ಎಂದು ಕಾಣಿಸುತ್ತದೆ.

ಈ ಚಾಲೆಂಜ್ ತುಂಬಾ ಜನಪ್ರಿಯವಾಗಿದೆ
ಅಮೆರಿಕಾದಲ್ಲಿ ಕೀಟಗಳೆಂದು ಪರಿಗಣಿಸಲ್ಪಡುವ ಜಿರಳೆಯಿಂದ ಈ ಚಾಲೆಂಜ್ ಆರಂಭವಾಗಿದೆ. ಕೆಲವೊಂದು ರಾಷ್ಟ್ರಗಳಾಗಿರುವ ಮ್ಯಾನ್ಮಾರ್, ಫಿಲಿಫೈನ್ಸ್ ಮತ್ತು ಇಂಡೋನೇಶಿಯಾದಲ್ಲಿ ಇದು ಜನಪ್ರಿಯವಾಗಿದೆ. ಇಲ್ಲಿನ ಯುವಜನತೆ ಜಿರಳೆ ಜತೆಗೆ ಫೋಟೋ ತೆಗೆದು ಪೋಸ್ಟ್ ಮಾಡುತ್ತಿದ್ದಾರೆ ಮತ್ತು ಬೇರೆಯವರನ್ನು ಕೂಡ ಆಹ್ವಾನಿಸುತ್ತಿರುವರು. ಈ ಚಾಲೆಂಜ್ ಬಗ್ಗೆ ನಿಮ್ಮ ಅನಿಸಿಕೆ ಏನು? ನಿಮ್ಮ ಅನಿಸಿಕೆ ನಮಗೆ ಕಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.



Click it and Unblock the Notifications
