Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಪಾಪ 90ರ ಹರೆಯದ ಈ ಅಜ್ಜ ಮೊಸರು ಎಂದು ಭಾವಿಸಿ ಪೈಂಟ್‌ನ್ನೇ ತಿಂದು ಬಿಟ್ಟರಂತೆ!
ಮನೆಯಲ್ಲಿ ಸಣ್ಣ ಮಕ್ಕಳು ಮತ್ತು ವಯಸ್ಸಾದ ಹಿರಿಯರು ಇದ್ದರೆ ಆಗ ತುಂಬಾ ಎಚ್ಚರಿಕೆ ವಹಿಸಬೇಕಾಗುತ್ತದೆ. ವಯಸ್ಸಾದ ಹಿರಿಯರಿಗೆ ಕೆಲವೊಂದು ಸಲ ತಾವು ಏನು ಮಾಡುತ್ತಿದ್ದೇವೆ ಎನ್ನುವಂತಹ ಅರಿವು ಇಲ್ಲದೆ ಇರುವ ಕಾರಣದಿಂದಾಗಿ ಮನೆಯಲ್ಲಿರುವವರು ಪ್ರತೀ ಕ್ಷಣವು ಅವರ ಬಗ್ಗೆ ನಿಗಾ ಇಡಬೇಕಾಗುತ್ತದೆ. ಇಂತಹ ಸಮಯದಲ್ಲಿ ಕೆಲವೊಂದು ಎಡವಟ್ಟು ಆಗಿಯೇ ಆಗುವುದು.

ಇಲ್ಲೊಬ್ಬರು ಹಿರಿಯ ವ್ಯಕ್ತಿ ಮೊಸರು ಎಂದು ಭಾವಿಸಿಕೊಂಡು ಸುಮಾರು ಕಾಲು ಭಾಗದಷ್ಟು ಪೈಂಟ್ ನ ಡಬ್ಬವನ್ನು ಖಾಲಿ ಮಾಡಿದ್ದಾರೆ! 90ರ ಹರೆಯದ ಈ ಹಿರಿಯರು ತಮ್ಮ ಇಷ್ಟದ ಮೊಸರು ಎಂದು ಭಾವಿಸಿಕೊಂಡು ಪೈಂಟ್ ನ್ನು ಸೇವನೆ ಮಾಡಿದ್ದಾರೆ. ಈ ಬಗ್ಗೆ ಆಕೆಯ ಮೊಮ್ಮಗಳು ಸಾಮಾಜಿಕ ಜಾಲತಾಣಗಳನ್ನು ಹಂಚಿಕೊಂಡಿದ್ದಾರೆ. ಇದು ವೈರಲ್ ಕೂಡ ಆಗಿದೆ. ಪೈಂಟ್ ತಿಂದ ಹಿರಿಯರಿಗೆ ಏನಾಯಿತು? ಅವರ ಆರೋಗ್ಯ ಹೇಗಿದೆ ಎನ್ನುವುದರ ಬಗ್ಗೆ ತಿಳಿಯಲು ನೀವು ಈ ಲೇಖನವನ್ನು ಕೊನೇ ತನಕ ಓದಲೇಬೇಕು.

ಟ್ವಿಟ್ಟರ್ ನಲ್ಲಿ ಮೊಮ್ಮಗಳು ತನ್ನ ಅಜ್ಜನ ಫೋಟೊ ಹಂಚಿಕೊಂಡಳು
ಬಾಬಿ ಎಂಬ ಹೆಸರಿನ ಹಿರಿಯ ಮೊಮ್ಮಗಳು ಅಲೆಕ್ಸ್ ಸ್ಟೈನ್ ಎಂಬಾಕೆ ಈ ಘಟನೆಯ ವಿವರ ಹಾಗೂ ಫೋಟೊವನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಅಜ್ಜನ ತುಟಿಗಳಲ್ಲಿ ಪೈಂಟ್ ಅಂಟಿಕೊಂಡಿತ್ತು!
ಪುದೀನಾ ಎಲೆಗಳ ಬಣ್ಣದ ಪೈಂಟ್ ಆ ಹಿರಿಯರ ತುಟಿಗಳಿಗೆ ಅಂಟಿಕೊಂಡಿತ್ತು. ಆಕೆ ಈ ಫೋಟೊವನ್ನು ಹಾಕಿ, ನನ್ನ ಅಜ್ಜ ಕಾಲು ಭಾಗದಷ್ಟು ಪೈಂಟ್ ಡಬ್ಬವನ್ನು ಮೊಸರು ಎಂದು ಭಾವಿಸಿ ತಿಂದಿದ್ದಾರೆ ಎಂದು ಬರೆದಿದ್ದಾರೆ.

ಅಜ್ಜನಿಗೆ ಮೊಸರು ಇಷ್ಟ ಮತ್ತು ಅವರು ಇದಕ್ಕಾಗಿ ಬದುಕುತ್ತಾರೆ
ಈ ಟ್ವೀಟ್ ಗೆ ಸುಮಾರು 501,344 ಲೈಕ್ ಗಳು ಮತ್ತು 177,132 ಸಲ ಇದನ್ನು ರೀ ಟ್ವೀಟ್ ಮಾಡಲಾಗಿದೆ. ಅದು ಕೂಡ ಇದನ್ನು ಹಾಕಿದ ಕೇವಲ ಎರಡು ದಿನಗಳಲ್ಲಿ. ಈ ಟ್ವೀಟ್ ಹಾಕಿದ ಕೆಲವೇ ಕ್ಷಣಗಳಲ್ಲಿ ನಿಟಿಜನ್ ಗಳು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಅವರು ಆರೋಗ್ಯವಾಗಿದ್ದಾರೆ!
ಪೈಂಟ್ ಸೇವನೆ ಮಾಡಿದ ಬಳಿಕ ಅಜ್ಜನ ಆರೋಗ್ಯ ಹೇಗಿರಬಹುದು ಎನ್ನುವ ಕುತೂಹಲವು ಖಂಡಿವಾಗಿಯೂ ನಮಗೂ ಇದ್ದೇ ಇರುತ್ತದೆ. ಆದರೆ ಅಜ್ಜ ತುಂಬಾ ತಮಾಷೆಯಾಗಿರು ವಿಡಿಯೋವನ್ನು ಕೂಡ ಹಾಕಲಾಗಿದೆ. ಅಜ್ಜನ ಹೊಟ್ಟೆಯು ಸರಿಯಾಗಿದೆ ಮತ್ತು ಅವರು ಚೆನ್ನಾಗಿದ್ದಾರೆ ಎಂದು ಮೊಮ್ಮಗಳು ಟ್ವೀಟ್ ಮಾಡಿದ್ದಾರೆ.



Click it and Unblock the Notifications
