Latest Updates
-
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಇಥಿಯೋಪಿಯಾದ ಜನರಿಗೆ ಹಸಿ ಮಾಂಸ ಎಂದರೆ ಪಂಚಪ್ರಾಣ! ಪ್ರತಿನಿತ್ಯವು ಹಸಿ ಮಾಂಸ ತಿನ್ನುತ್ತಾರಂತೆ!!
ನಾಗರಿಕತೆ ಬರುವ ಮೊದಲು ನಾವು ಶಿಲಾಯುಗದ ಬಗ್ಗೆ ಇತಿಹಾಸದಲ್ಲಿ ಓದಿದಾಗ ಜನರು ಆ ಸಮಯದಲ್ಲಿ ಬೇಟೆಯಾಡಿದಂತಹ ಪ್ರಾಣಿಗಳ ಹಸಿ ಮಾಂಸವನ್ನು ತಿನ್ನುತ್ತಿದ್ದರು. ಖಾಲಿ ಮಾಂಸ ಮಾತ್ರವಲ್ಲದೆ ಇವರು ಕಾಡಿನಲ್ಲಿ ಸಿಗುವಂತಹ ಗಡ್ಡೆಗಳು, ಹಣ್ಣುಗಳು ಮತ್ತು ಕೆಲವೊಂದು ಎಲೆಗಳನ್ನು ಕೂಡ ಹಸಿಯಾಗಿಯೇ ತಮ್ಮ ಆಹಾರ ಕ್ರಮದಲ್ಲಿ ಬಳಕೆ ಮಾಡಿಕೊಂಡು ಬರುತ್ತಿದ್ದರು ಎಂದು ತಿಳಿದುಬರುವುದು.
ಇದರ ಬಳಿಕ ಮನುಷ್ಯ ನಾಗರಿಕತೆಯತ್ತ ಬಂದಾಗ ಬೆಂಕಿ ಕಂಡುಕೊಂಡು ಮಾಂಸವನ್ನು ಬೇಯಿಸಿ ತಿನ್ನುವಂತಹ ಕ್ರಮವು ಮುಂದುವರಿಯಿತು. ಆದರೆ ಇಂದು ಕೂಡ ಕೆಲವು ರಾಷ್ಟ್ರಗಳಲ್ಲಿ ಹಸಿ ಮಾಂಸ, ಹಸಿ ಮೀನನ್ನು ತಿನ್ನುವಂತಹ ಕ್ರಮವಿದೆ. ಅವರು ಆ ಆಹಾರ ಕ್ರಮಕ್ಕೆ ಹೊಂದಿಕೊಂಡಿದ್ದಾರೆ. ಆದರೆ ಹಸಿ ಮಾಂಸ ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಾ ಎನ್ನುವ ಪ್ರಶ್ನೆಯು ಕಾಡುವುದು.

ಹಸಿ ಮಾಂಸ ತಿನ್ನುವ ಜನರು
ಹಲವಾರು ವರ್ಷಗಳಿಂದಲೂ ಜನರು ಹಸಿ ಮಾಂಸವನ್ನು ತಿನ್ನುವರು. ಆದರೆ ಪ್ರಾಣಿಗಳು ಮಾತ್ರ ಹಸಿ ಮಾಂಸವನ್ನು ತಿನ್ನುತ್ತವೆ. ಮನುಷ್ಯರು ಬೇಯಿಸಿದ, ಕರಿದ ಮಾಂಸ ಸೇವನೆ ಮಾಡುತ್ತಾರೆ ಎಂದು ನಾವು ಹೇಳಬಹುದು. ಈ ರಾಷ್ಟ್ರದ ಜನರಿಗೆ ಮಾತ್ರ ಹಸಿ ಮಾಂಸ ತಿನ್ನುವುದೇ ಅವರಿಗೆ ತುಂಬಾ ಪ್ರೀತಿಯಂತೆ. ಯಾಕೆಂದರೆ ಅವರು ಪ್ರತಿನಿತ್ಯವು ಹಸಿ ಮಾಂಸ ಸೇವನೆ ಮಾಡುವರು. ಇಂತಹ ಜನರು ಇರುವುದು ಇಥಿಯೋಪಿಯಾದ ರಾಜಧಾನಿ ಅಡ್ಡಿಸ್ ಅಬಾಬದಲ್ಲಿ. ಇಲ್ಲಿನ ಜನರು ಹಸಿ ಮಾಂಸ ಸೇವನೆ ಮಾಡುವುದು ಈಗ ದಿನದಿಂದ ದಿನಕ್ಕೆ ಜನಪ್ರಿಯತೆ ಪಡೆಯುತ್ತಿದೆ. ಇಲ್ಲಿನ ಪ್ರತಿಯೊಂದು ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳಲ್ಲಿ ಹಸಿ ಮಾಂಸದ ಖಾದ್ಯವು ಸಿಗುವುದು.

ಹಸಿ ಮಾಂಸವು ಇಲ್ಲಿನ ಜನಪ್ರಿಯ ಖಾದ್ಯವಾಗಿದೆ
ವರದಿಗಳು ಹೇಳುವ ಪ್ರಕಾರ ಇಥಿಯೋಪಿಯಾದ ಜನರು ಹಸಿ ಮಾಂಸವನ್ನು ತುಂಬಾ ರುಚಿಕರ ಎಂದು ಪರಿಗಣಿಸಿದ್ದಾರೆ. ಸ್ಥಳೀಯರು ಇಲ್ಲಿ ಹೊಟೇಲ್ ಹಾಗೂ ರೆಸ್ಟೋರೆಂಟ್ ಗಳಿಗೆ ಹೋಗಿ ಅಲ್ಲಿನ ಹಸಿ ಮಾಂಸದ ಖಾದ್ಯಗಳನ್ನು ತಿನ್ನುವುದನ್ನು ನೋಡಬಹುದಾಗಿದೆ. ಅದರಲ್ಲೂ ಮುಖ್ಯವಾಗಿ ಇವರು ಭೀಫ್ ಮತ್ತು ಆಡಿನ ಮಾಂಸವನ್ನು ಇಷ್ಟಪಡುವರು.

ಪ್ರತಿನಿತ್ಯವು ಇವರು ಹಸಿ ಮಾಂಸ ಸೇವಿಸುವರು
ಇಲ್ಲಿನ ಜನರು ಪ್ರತಿನಿತ್ಯವು ಹಸಿ ಮಾಂಸ ಸೇವನೆ ಮಾಡುವರು ಎಂದು ನಂಬಲಾಗಿದೆ. ಆದರೆ ವೈದ್ಯರು ಹೇಳುವ ಪ್ರಕಾರ ಅತಿಯಾಗಿ ಹಸಿ ಮಾಂಸ ಸೇವನೆ ಮಾಡುವ ಕಾರಣದಿಂದಾಗಿ ಹಸಿ ಮಾಂಸದಿಂದ ಸಿಗುವಂತಹ ಪೌಷ್ಠಿಕಾಂಶಗಳು ಹೆಚ್ಚಾಗುವಂತಹ ಸಾಧ್ಯತೆಯು ಇರುವುದು. ಆದರೆ ಈ ಆಹಾರ ಕ್ರಮದಿಂದ ಆಗುವಂತಹ ಕೆಲವೊಂದು ಸಮಸ್ಯೆಗಳನ್ನು ಅವರು ಕಡೆಗಣಿಸುತ್ತಾರೆ ಮತ್ತು ಅವರಿಗೆ ಇದರಿಂದ ಬರುವ ಅಪಾಯವು ತಿಳಿದಿಲ್ಲ ಎಂದು ವೈದ್ಯರು ವಿವರಿಸುವರು.

ಈ ಹವ್ಯಾಸವು ತುಂಬಾ ಹಾನಿಕರ
ಹಸಿ ಮಾಂಸ ಸೇವನೆಯಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಸಿಗುತ್ತದೆ ಎಂದು ಹೇಳಲು ನಿರಾಕರಿಸಿರುವಂತಹ ವೈದ್ಯರು ಹಸಿ ಮಾಂಸದ ಸೇವನೆಯಿಂದಾಗಿ ಕೆಲವೊಂದು ಟ್ಯಾಪ್ ವಾರ್ಮ್ ಸೋಂಕು, ಸಾಲ್ಮೊನೆಲ್ಲಾ ಮತ್ತು ಇ ಕೊಲಿಯಂತಹ ಬ್ಯಾಕ್ಟೀರಿಯಾದ ಸೋಂಕಿನ ಅಪಾಯವು ಹೆಚ್ಚಾಗಿರುವುದು. ಇದು ಪ್ರಾಣ ಹಾನಿ ಉಂಟು ಮಾಡುವ ಸಾಧ್ಯತೆಯು ಇದೆ.

ಹಸಿ ಮಾಂಸದ ಸೇವನೆ ಮಾಡುವುದು ಹೇಗೆ
ಇಲ್ಲಿ ಹಸಿ ಮಾಂಸ ಖಾದ್ಯವು ತುಂಬಾ ಜನಪ್ರಿಯವಾಗಿದೆ. ಜನರು ಕೂಡ ಇಲ್ಲಿ ಮುಗಿಬಿದ್ದು ಹಸಿ ಮಾಂಸ ಸೇವನೆ ಮಾಡುವರು. ಮಾಂಸದ ತುಂಡನ್ನು ತುಂಬಾ ತೆಳುವಾಗಿ ಕತ್ತರಿಸಿಕೊಂಡು ಅದನ್ನು ಯಾವುದಾದರೂ ಒಂದು ರೀತಿಯ ಸಾಸ್ ನಲ್ಲಿ ಹಾಕಿಕೊಂಡು ಸೇವನೆ ಮಾಡುವುದು. ಇಂತಹ ವಿಚಿತ್ರ ಆಹಾರ ಕ್ರಮದ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಅನಿಸಿಕೆ ಬರೆಯಲು ಮರೆಯಬೇಡಿ.



Click it and Unblock the Notifications