Latest Updates
-
ರೆಡ್ ಕಾರ್ಪೆಟ್ನಿಂದ ನಿಮ್ಮ ವಾರ್ಡ್ರೋಬ್ಗೆ: ಕಾನ್ 2026ರ ಈ ಫ್ಯಾಷನ್ ಟ್ರೆಂಡ್ಸ್ ಈಗ ಸಿಕ್ಕಾಪಟ್ಟೆ ವೈರಲ್! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲ ಬೇಗೆಯಲ್ಲಿ ಮದುವೆ ಸಂಭ್ರಮ ಹಾಳಾಗದಿರಲಿ: ಅತಿಥಿಗಳ ಆರೋಗ್ಯ ಕಾಪಾಡಲು ಇಲ್ಲಿವೆ ಸೀಕ್ರೆಟ್ ಟಿಪ್ಸ್! -
ಬಿಸಿಗಾಳಿಯ ಆರ್ಭಟ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ರೆಡ್ ಅಲರ್ಟ್: ಆಯುಷ್ ಸಚಿವಾಲಯದ ಈ ಸಿಂಪಲ್ ಟಿಪ್ಸ್ ಪಾಲಿಸಿದರೆ ಸಾಕು, ದೇಹ ತಂಪಾಗಿರುತ್ತೆ! -
ಬಿಸಿಲಿನ ಬೇಗೆಯಿಂದ ತತ್ತರಿಸಿದ ಕರ್ನಾಟಕ: ಮನೆಯಲ್ಲೇ ತಂಪಾಗಿರಲು ನೀವು ಮಾಡಬೇಕಾದ ಆ 5 ಬದಲಾವಣೆಗಳೇನು? -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
45 ಡಿಗ್ರಿ ಬಿಸಿಲಲ್ಲಿ ಮದುವೆ ಪ್ಲಾನ್ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ ಎಚ್ಚರಿಕೆ ಮರೆಯದಿರಿ! -
ಶಾಖದ ಅಲೆ ಎಚ್ಚರಿಕೆ: ಎಸಿ ಇಲ್ಲದೆ ಮನೆಯನ್ನು ತಂಪಾಗಿಡಲು ಮತ್ತು ನಿಮ್ಮ ಗಿಡಗಳನ್ನು ಬಿಸಿಲಿನಿಂದ ರಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ಪಾನೀಯ ಮತ್ತು ಆಹಾರವೇ ಸಂಜೀವಿನಿ!
ನೀವು ಎಷ್ಟು ಸಂಪತ್ತನ್ನು ಹೊಂದುವಿರಿ ಎನ್ನುವುದನ್ನು ನಿಮ್ಮ ಅಂಗೈ ಹೇಳುತ್ತದೆ
ಹಸ್ತ ಮುದ್ರಿಕೆ ಎನ್ನುವುದು ಜ್ಯೋತಿಷ್ಯ ಶಾಸ್ತ್ರದಲ್ಲಿ ಒಂದು. ಇದು ವ್ಯಕ್ತಿಯ ಭವಿಷ್ಯದ ಬಗ್ಗೆ ತೆರೆದಿಡುತ್ತದೆ. ಅಂಗೈಯಲ್ಲಿ ಕಾಣುವ ವಿವಿಧ ರೇಖೆಗಳು, ಚಿತ್ರಗಳು, ಚಿಹ್ನೆಗಳು ಎಲ್ಲವೂ ಒಂದೊಂದು ವಿಶೇಷ ವಿಷಯಗಳ ಬಗ್ಗೆ ಸೂಚನೆಯನ್ನು ನೀಡುತ್ತವೆ. ಅವುಗಳಲ್ಲಿ ಕೆಲವು ನಮ್ಮ ಪೂರ್ವ ಕರ್ಮಗಳ ಬಗ್ಗೆ ತೆರೆದಿಟ್ಟರೆ ಇನ್ನೂ ಕೆಲವು ರೇಖೆಗಳು ಭವಿಷ್ಯದಲ್ಲಿ ಪಡೆದುಕೊಳ್ಳಲಿರುವ ವಿಚಾರದ ಕುರಿತು ವಿವರಿಸುತ್ತದೆ. ಅಂಗೈ ಅಲ್ಲಿ ತೋರುವ ಕೆಲವು ರೇಖೆಗಳು ದೇವತೆಗಳನ್ನು ಪ್ರತಿನಿಧಿಸುತ್ತವೆ. ಅಲ್ಲದೆ ಕೆಲವು ಪರ್ವಗಳು ಗ್ರಹಗಳ ಸ್ಥಾನವನ್ನು ಸೂಚಿಸುತ್ತವೆ. ಅಂತಹ ಜಾಗದಲ್ಲಿ ಕಾಣಿಸಿಕೊಳ್ಳುವ ರೇಖೆಗಳು ಅಥವಾ ಚಿಹ್ನೆಗಳು ನಮ್ಮ ಜೀವನದ ವೈಭವಗಳನ್ನು ಹೇಳುವುದು.

ಅಂಗೈಗಳಲ್ಲಿ ಒಂದೊಂದು ಅಂಗೈ ಒಂದೊಂದು ವಿಶೇಷ ಮಾಹಿತಿಯನ್ನು ತೆರೆದಿಡುವುದು. ಮಹಿಳೆಯರಿಗೆ ಎಡಗೈ ಹೆಚ್ಚಿನ ಭವಿಷ್ಯವನ್ನು ತೆರೆದಿಟ್ಟರೆ, ಪುರುಷರ ಭವಿಷ್ಯವು ಹೆಚ್ಚಾಗಿ ಬಲಗೈ ಅಲ್ಲಿ ಅಡಗಿರುತ್ತವೆ ಎಂದು ಹೇಳಲಾಗುವುದು. ಎರಡು ಅಂಗೈಗಳಲ್ಲಿ ರೇಖೆಗಳು ಅಥವಾ ಚಿಹ್ನೆಗಳು ಒಂದೇ ರೀತಿಯಲ್ಲಿ ಇರುವುದಿಲ್ಲ. ಸ್ವಲ್ಪ ಭಿನ್ನತೆಗಳಿರುತ್ತವೆ. ಹಾಗೊಮ್ಮೆ ಎರಡು ಅಂಗೈಗಳಲ್ಲೂ ಒಂದೇ ಬಗೆಯಲ್ಲಿ ರೇಖೆಗಳು ಗೋಚರವಾಗಿದೆ ಎಂದಾದರೆ ಆ ಚಿಹ್ನೆ ಅಥವಾ ರೇಖೆಗಳಿಂದ ಉಂಟಾಗುವ ಬದಲಾವಣೆಯ ಪ್ರಭಾವ ನಿಶ್ಚಿತ ಹಾಗೂ ಹೆಚ್ಚಾಗಿರುತ್ತದೆ ಎಂದು ಹೇಳಲಾಗುವುದು.

ಹಸ್ತ ಮುದ್ರಿಕೆ ಅಥವಾ ಅಂಗೈ ಜ್ಯೋತಿಷ್ಯ
ಹಸ್ತ ಮುದ್ರಿಕೆ ಅಥವಾ ಅಂಗೈ ಜ್ಯೋತಿಷ್ಯ ಎಂದರೆ ಅಂಗೈಯಲ್ಲಿ ಇರುವ ರೇಖೆಗಳ ಮಿತಿಯಷ್ಟೇ ಅಲ್ಲ. ಬದಲಿಗೆ ಬೆರಳುಗಳು, ಅವುಗಳಲ್ಲಿ ಇರುವ ಶಂಖ, ಚಕ್ರಗಳು ಮತ್ತು ಚಿನ್ನೆಗಳು ಸಹ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಒಂಬತ್ತು ಪರ್ವಗಳು, ಅವುಗಳಲ್ಲಿ ಇರುವ ಚಿಹ್ನೆಗಳು, ಆರೋಗ್ಯ, ಭವಿಷ್ಯ, ಆಯುಷ್ಯ, ಶನ ರೇಖೆ, ವಿವಾಹ ರೇಖೆ, ಆಸ್ತಿ, ಹಣ ಸೇರಿದಂತೆ ವಿವಿಧ ಸಂಗತಿಗಳಿಗೆ ಸಂಬಂಧಿಸಿದ ರೇಖೆಗಳು ನಮ್ಮ ಪುಟ್ಟ ಅಂಗೈಯಲ್ಲಿ ಅಡಕವಾಗಿರುತ್ತದೆ ಎನ್ನುವುದು ನಿಜಕ್ಕೂ ಒಂದು ಆಶ್ಚರ್ಯ ಹಾಗೂ ಆಕರ್ಷಣೀಯ ವಿಷಯ. ಕೆಲವು ಸಂದರ್ಭದಲ್ಲಿ ನಮಗೆ ಅಹಿತಕರವಾದ ಅನುಭವವಾದರೆ ಅಂಗೈ ಅಲ್ಲಿ ಭವಿಷ್ಯ ಅಷ್ಟಾಗಿ ಚೆನ್ನಾಗಿಲ್ಲ ಎಂದು ಭಾವಿಸುತ್ತೇವೆ. ಅಂತೆಯೇ ಸಂತೋಷದ ಸಂದರ್ಭ ಅಥವಾ ಅನುಭವ ಎದುರಾದಾಗ ನಮ್ಮ ಅದೃಷ್ಟ ಹಾಗೂ ಅಂಗೈ ಭವಿಷ್ಯದ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸುತ್ತೇವೆ.

ಹಸ್ತ ಮುದ್ರಿಕೆ ಅಥವಾ ಅಂಗೈ ಜ್ಯೋತಿಷ್ಯ
ನಮ್ಮ ಕಷ್ಟ-ಸುಖಗಳಿಗೆ ನಮ್ಮ ಕರ್ಮ ಫಲಗಳು ಹೆಚ್ಚಿನ ಪಾತ್ರವನ್ನು ವಹಿಸುತ್ತದೆ. ಅದರ ಅನ್ವಯದಂತೆ ನಮ್ಮ ಭವಿಷ್ಯವು ನಿರ್ಧಾರವಾಗಿರುತ್ತದೆ ಎನ್ನಲಾಗುವುದು. ಅದಕ್ಕೆ ತಕ್ಕಂತೆ ನಮ್ಮ ನಮ್ಮ ಅಂಗೈ ರೇಖೆಗಳು ಇರುತ್ತವೆ. ಪ್ರತಿ ಏಳು ವರ್ಷಗಳಿಗೊಮ್ಮೆ ಅಂಗೈ ರೇಖೆಗಳಲ್ಲಿ ಕೊಂಚ ಬದಲಾವಣೆಗಳು ಸಹ ಉಂಟಾಗುವುದು ಎನ್ನಲಾಗುವುದು. ನಮ್ಮ ಭವಿಷ್ಯ ಮತ್ತು ವ್ಯಕ್ತಿತ್ವವನ್ನು ವ್ಯಾಖ್ಯಾನಿಸುವ ಹಲವು ರೇಖೆಗಳು ನಮ್ಮ ಅಂಗೈಯಲ್ಲಿದೆ. ಅವುಗಳಲ್ಲಿ ಕೆಲವು ರೇಖೆಗಳು ಅಥವಾ ರೇಖೆಯ ಸಾಲುಗಳು ನಮ್ಮ ಪ್ರೀತಿ, ಆರ್ಥಿಕ ಸ್ಥಿತಿ ಹಾಗೂ ಅವುಗಳ ಅದೃಷ್ಟದ ಬಗ್ಗೆ ತೆರೆದಿಡುತ್ತವೆ. ಅಂಗೈ ರೇಖೆಗಳು ಮೇಲ್ನೋಟಕ್ಕೆ ಜಟಿಲವಾಗಿರುವಂತೆ ತೋರಬಹುದು. ಆದರೆ ಅದರ ಬಗ್ಗೆ ಸೂಕ್ತ ಮಾಹಿತಿಯನ್ನು ಪಡೆದುಕೊಂಡರೆ ನೀವು ನಿಮ್ಮ ಅಂಗೈಅನ್ನು ನೋಡಿ, ಸುಲಭವಾಗಿ ಭವಿಷ್ಯದ ಬಗ್ಗೆ ಅರಿವನ್ನು ಹೊಂದ ಬಹುದು. ಇಂತಹ ಒಂದು ಸುಲಭ ಅಧ್ಯಯನಗಳ ಬಗ್ಗೆ ಬೋಲ್ಡ್ ಸ್ಕೈ ಲೇಖನದ ಮುಂದಿನ ಭಾಗದಲ್ಲಿ ವಿವರಿಸಿದೆ. ನಿಮಗೆ ನಿಮ್ಮ ಪ್ರೀತಿ ಹಾಗೂ ಸಂಪತ್ತುಗಳ ಬಗ್ಗೆ ಅಥವಾ ಆ ವಿಚಾರಗಳಲ್ಲಿ ನೀವೆಷ್ಟು ಅದೃಷ್ಟವಂತರು ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ಹೊಂದಿದ್ದರೆ ಈ ಮುಂದೆ ವಿವರಿಸಲಾದ ವಿವರಣೆಯ ಪ್ರಕಾರ ನಿಮ್ಮ ಅಂಗೈ ಅಲ್ಲಿ ರೇಖೆಗಳಿವೆ ಎನ್ನುವುದನ್ನು ಪರಿಶೀಲಿಸಿ.

ಚಿತ್ರದಲ್ಲಿ ತೋರಿಸಿದಂತೆ ರೇಖೆಯು ಲಂಬ ಅಥವಾ ಶೃಂಗೀಯವಾಗಿ ಇದ್ದರೆ:
ನಿಮ್ಮ ಅಂಗೈ ಮಧ್ಯದಲ್ಲಿ ಲಂಬವಾಗಿ ಇರುವ ರೇಖೆಯು ಹಣಕಾಸಿನ ಸ್ಥಿತಿ ಅಥವಾ ಅದಕ್ಕೆ ಸಂಬಂಧಿಸಿದ ಸಂಗತಿಗಳನ್ನು ವಿವರಿಸುತ್ತದೆ. ಮೇಲ್ಮುಖವಾಗಿ ಹೋಗುವ ಲಂಬವಾದ ರೇಖೆಯ ಬುಡದಲ್ಲಿ ಅಥವಾ ಕೆಳಭಾಗದಲ್ಲಿ ಆಳವಾಗಿರುವಂತೆ ಇದ್ದರೆ ಅಂತಹ ವ್ಯಕ್ತಿಗಳು ಬಹಳ ಚಿಕ್ಕ ವಯಸ್ಸಿನಲ್ಲಿಯೇ ಶ್ರೀಮಂತಿಕೆಯನ್ನು ಹೆಚ್ಚು ಹಣವನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು. ಅಂತೆಯೇ ಆ ರೇಖೆಯು ಮೇಲೆ ಹೋದಂತೆ ದಪ್ಪವಾಗಿ ಅಥವಾ ಗಾಢವಾಗಿ ಹೋದಂತೆ ಕಂಡು ಬಂದರೆ ವ್ಯಕ್ತಿ ನಂತರದ ಹಂತದಲ್ಲಿ ಹೆಚ್ಚಿನ ಹಣ ಹಾಗೂ ಶ್ರೀಮಂತಿಕೆಯನ್ನು ಅನುಭವಿಸುತ್ತಾನೆ. ಇಲ್ಲವೇ ಹಣದ ವಿಷಯದಲ್ಲಿ ಸ್ಥಿರತೆಯನ್ನು ಅನುಭವಿಸುವನು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುವುದು. ಅದೇ ಈ ಸಾಲು ನಿಮ್ಮ ವೃತ್ತಿ ಜೀವನ ಹೇಗಿರುತ್ತದೆ ಎನ್ನುವುದನ್ನು ಸಹ ಬಹಿರಂಗ ಪಡಿಸುವುದು.ಹಸ್ತದ ಕೆಳಭಾಗದಿಂದ ಹಿಡಿದು ಅಂಗೈನ ಮಧ್ಯ ಬೆರಳಿನ ವರೆಗೆ ಒಂದು ದಪ್ಪದಾದ ರೇಖೆ ಇದ್ದರೆ ಅದು ನೀವು ನಿಮ್ಮ ಜೀವನದಲ್ಲಿ ಸ್ಥಿರ ಮತ್ತು ಲಾಭದಾಯಕವಾದ ವೃತ್ತಿಯನ್ನು ಹೊಂದಿರುತ್ತೀರಿ ಎನ್ನುವುದನ್ನು ಸೂಚಿಸುತ್ತದೆ.

ಚಿತ್ರದಲ್ಲಿ ತೋರಿಸಿದಂತೆ ಹೆಬ್ಬೆರಳಿನ ಕೆಳಭಾಗದಿಂದ ತೋರುಬೆರಳಿನ ವರೆಗೆ ಬಾಗಿದ ರೇಖೆ
ಅಂಗೈ ಅಲ್ಲಿ ಹೆಬ್ಬರಳಿನ ಕೆಳಗಿನ ಪರ್ವದಿಂದ ತೋರು ಬೆರಳಿನ ಕೆಳಗಿನ ಪರ್ವದ ವರೆಗೆ ಬಾಗಿದಂತಹ ಕೇಖೆ ಇದ್ದರೆ ಅದು ವ್ಯಕ್ತಿ ಹಣದ ಅಗತ್ಯತೆಗಾಗಿ ಸಾಕಷ್ಟು ಶ್ರಮವನ್ನು ವಹಿಸುತ್ತಾನೆ. ಅಂತಹವರಿಗೆ ಹಣವನ್ನು ಸಂಪಾದಿಸುವ ಅಗತ್ಯತೆ ಹೆಚ್ಚಾಗಿರುತ್ತದೆ ಎಂದು ಹೇಳಲಾಗುವುದು. ಈ ರೇಖೆಯು ಯಾವುದೇ ರೀತಿಯಲ್ಲೂ ನೀವು ಬಹಳ ಶ್ರೀಮಂತಿಕೆಯನ್ನು ಹೊಂದುವಿರಿ ಎನ್ನುವ ವಿಷಯವನ್ನು ಹೇಳುವುದಿಲ್ಲ. ಈ ರೀತಿಯ ರೇಖೆ ಹೊಂದಿದ್ದವರು ಬಹಳ ಶ್ರಮದಿಂದ ಹಣವನ್ನು ಸಂಪಾದಿಸುವುದಲ್ಲದೆ ಬಹು ಬೇಗ ಶ್ರೀಮಂತಿಕೆಯನ್ನು ಹೊಂದುವಿರಿ ಎಂದು ತಜ್ಞರು ಹೇಳುತ್ತಾರೆ. ಹಣದ ಅಗತ್ಯತೆ ಹಾಗೂ ಸಂಪಾದಿಸುವುದರ ಬಗ್ಗೆ ನೀವು ಹೆಚ್ಚಿನ ಆಸಕ್ತಿ ಹಾಗೂ ಶ್ರದ್ಧೆಯನ್ನು ಹೊಂದಿರುತ್ತಾರೆ. ಈ ಒಂದು ಉತ್ತಮ ಗುರಿಯಿಂದಲೇ ಹಣವನ್ನು ಗಳಿಸುವ ಸಾಮಥ್ರ್ಯಹೊಂದಿರುತ್ತಾರೆ. ಜೊತೆಗೆ ಅದನ್ನು ಸಾಧಿಸುತ್ತಾರೆ ಎಂದು ತೋರಿಸುವುದು.

ಚಿತ್ರದಲ್ಲಿ ತೋರಿಸಿದಂತೆ ಒಂದು ರೇಖೆಯು ಹೆಬ್ಬೆರಳಿನ ಬುಡದಿಂದ ಕಿರು ಬೆರಳಿನ ಬುಡದವರೆಗೆ ವಿಸ್ತರಿಸಿದ್ದರೆ
ಹೆಬ್ಬೆರಳಿನ ಬುಡದಿಂದ ಕಿರು ಬೆರಳಿನ ಬುಡದ ವರೆಗೆ ಒಂದು ರೇಖೆಯು ನೇರವಾಗಿ ವಿಸ್ತರಿಸಿದ್ದರೆ ಕುಟುಂಬದಿಂದ ದೊಡ್ಡ ಪ್ರಮಾಣದ ಹಣವನ್ನು ಪಡೆದುಕೊಳ್ಳುವಿರಿ ಎಂದು ಸೂಚಿಸುತ್ತದೆ. ಆ ರೇಖೆಯ ಉದ್ದವು ವಿಸ್ತಾರವಾಗಿದ್ದರೆ ಹಾಗೂ ಗಾಢವಾಗಿದ್ದರೆ ಆನುವಂಶಿಕವಾಗಿ ಪಡೆಯುವ ಹಣವು ವ್ಯಕ್ತಿಯ ಜೀವನದುದ್ದಕ್ಕೂ ಸಾಕಷ್ಟು ಉತ್ತಮವಾಗಿರುತ್ತದೆ ಎಂದು ಸೂಚಿಸುತ್ತದೆ. ಹೆಬ್ಬೆರಳಿನ ಬುಡದಿಂದ ಕಿರು ಬೆರಳಿನ ಬುಡದ ವರೆಗೆ ಒಂದು ರೇಖೆಯು ದಪ್ಪವಾಗಿ ಮೊಂಡಾಗಿದ್ದರೆ ಆನುವಂಶಿಕವಾಗಿ ಸಾಕಷ್ಟು ಹಣ ಅಥವಾ ಆಸ್ತಿಯನ್ನು ಪಡೆದುಕೊಳ್ಳುವಿರಿ. ಆದರೆ ಅದು ಅಲ್ಪಕಾಲದ ಮಿತಿಯಲ್ಲಿ ಇರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಮಾಹಿತಿ ನೀಡುವುದು.

ಚಿತ್ರದಲ್ಲಿ ತೋರಿಸಿದಂತೆ ಒಂದು ರೇಖೆಯು ಹೆಬ್ಬೆರಳಿನ ಬುಡದಿಂದ ಮಧ್ಯ ಬೆರಳಿನ ಬುಡದ ವರೆಗೆ ಇದ್ದರೆ:
ಅಂಗೈಯಲ್ಲಿ ಚಿತ್ರದಲ್ಲಿ ತೋರಿಸಿದಂತೆ ಒಂದು ರೇಖೆಯು ಹೆಬ್ಬೆರಳಿನ ಬುಡದಿಂದ ಮಧ್ಯ ಬೆರಳಿನ ಬುಡದ ವರೆಗೆ ವಿಸ್ತರಿಸಿದ್ದರೆ ವ್ಯಾಪಾರ ವಹಿವಾಟುಗಳ ಬಗ್ಗೆ ತಿಳಿಸುತ್ತದೆ. ಈ ರೇಖೆಯು ದಪ್ಪವಾಗಿ ಅಥವಾ ಗಾಢವಾಗಿ ಕಂಡು ಬಂದರೆ ವ್ಯಾಪಾರ ವಹಿವಾಟುಗಳಲ್ಲಿ ಯಶಸ್ಸನ್ನು ಪಡೆದುಕೊಳ್ಳುವಿರಿ. ಅಲ್ಲದೆ ಯಶಸ್ವಿ ವ್ಯಾಪಾರಿಯಾಗಿ ಹೊರಹೊಮ್ಮುವಿರಿ. ಇದರೊಟ್ಟಿಗೆ ಸಾಕಷ್ಟು ಹಣವನ್ನು ಗಳಿಸುವಿರಿ.ಈ ರೇಖೆಯು ಕೇವಲ ಸಂಪತ್ತಷ್ಟೇ ಅಲ್ಲ ವ್ಯಾಪಾರಕ್ಕೆ ಅಗತ್ಯವಾದ ಸಂವಹನ ಕೌಶಲ್ಯವನ್ನು ಹೊಂದಿದ್ದೀರಿ ಎಂದು ಹೇಳಬಹುದು. ಅತ್ಯುತ್ತಮ ಮಾರುಕಟ್ಟೆಯ ಕೌಶಲ್ಯದಿಂದ ಸಾಕಷ್ಟು ಹಣವನ್ನು ಗಳಿಸುವಿರಿ. ವ್ಯಾಪಾರವನ್ನು ಅದ್ಭುತ ರೀತಿಯಲ್ಲಿ ನಡೆಸಿಕೊಂಡು ಹೋಗುವಿರಿ ಎಂದು ಹೇಳಲಾಗುವುದು.

ಚಿತ್ರದಲ್ಲಿ ತೋರಿಸಿದಂತೆ ಹೆಬ್ಬೆರಳ ಬುಡದಲ್ಲಿ ಸಣ್ಣ ಸಣ್ಣ ರೇಖೆಗಳಿದ್ದರೆ:
ಹೆಬ್ಬೆರಳಿನ ಬುಡದ ಭಾಗದಲ್ಲಿ ಅಥವಾ ಆರಂಭದ ಭಾಗದಲ್ಲಿ ಸಣ್ಣ ಸಣ್ಣ ರೇಖೆಗಳು ಅಡ್ಡ ಅಡ್ಡವಾಗಿ ಇದ್ದರೆ ಜೀವನದಲ್ಲಿ ಆರ್ಥಿಕ ಹರಿವು ಉತ್ತಮವಾಗಿರುತ್ತದೆ ಎಂದು ಹೇಳಲಾಗುವುದು. ಈ ರೇಖೆಯು ಹೆಬ್ಬೆರಳಿನಲ್ಲಿ ಹೆಚ್ಚೆಚ್ಚು ಇದ್ದ ಹಾಗೆ ಹೆಚ್ಚಿನ ಹಣವನ್ನು ಹೊಂದುವಿರಿ ಅಥವಾ ಗಳಿಸುವಿರಿ ಎಂದು ಸೂಚಿಸುತ್ತದೆ.

ಚಿತ್ರದಲ್ಲಿ ತೋರಿಸಿದಂತೆ ನಾಲ್ಕು ಬೆರಳುಗಳ ಕೆಳಗಿನ ಪರ್ವ ಸಪಾಟವಾಗಿದ್ದರೆ:
ಚಿತ್ರದಲ್ಲಿ ತೋರಿಸಿದಂತೆ ನಾಲ್ಕು ಬೆರಳುಗಳ ಕೆಳಗಿನ ಪರ್ವ ಸಪಾಟವಾಗಿರುವ ಸ್ಥಿತಿಯು ಹಣಕಾಸಿನ ಬಗ್ಗೆ ಸಾಕಷ್ಟು ವಿಷಯವನ್ನು ತೆರೆದಿಡುತ್ತದೆ. ಅಂಗೈನ ಮೇಲ್ಭಾಗದ ಈ ಪರ್ವಗಳು ಸಪಾಟವಾಗಿದ್ದರೆ ವ್ಯಕ್ತಿಯು ತುಂಬಾ ಕಳಪೆ ಮಟ್ಟದ ಆರ್ಥಿಕ ಸ್ಥಿತಿಯನ್ನು ಹೊಂದಿದ್ದಾನೆ ಎಂದು ಸೂಚಿಸುತ್ತದೆ. ಅದೇ ಪರ್ವಗಳು ಬಾಗಿದಂತೆ ಇದ್ದರೆ ನೀವು ಸಾಕಷ್ಟು ಖಿನ್ನತೆಯನ್ನು ಹೊಂದುವಿರಿ. ಆದರೆ ಹೆಚ್ಚು ಶ್ರೀಮಂತರಾಗಿರುತ್ತೀರಿ ಎಂದು ಸೂಚಿಸುವುದು. ಯಾರ ಅಂಗೈ ತೀರ್ಥ ತೆಗೆದುಕೊಳ್ಳುವ ರೀತಿಯಲ್ಲಿ ಮಡಚಿದಾಗ ಸಾಕಷ್ಟು ಹೊಂಡ ಅಥವಾ ಕುಳಿಯಿಂದ ಕೂಡಿರುತ್ತದೆ, ನೀರು ಕೆಳಗೆ ಚೆಲ್ಲದಂತೆ ಹೆಚ್ಚು ಗುಂಡಿಯಾಗಿ ಇರುವುದು ಅಂತಹವರು ಹೆಚ್ಚು ಶ್ರೀಮಂತಿಕೆಯ ಜೀವನವನ್ನು ಅನುಭವಿಸುವರು. ಕೆಲವೊಮ್ಮೆ ಖಿನ್ನತೆಗೆ ಒಳಗಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎಂದು ಹೇಳಲಾಗುವುದು.



Click it and Unblock the Notifications