Latest Updates
-
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ?
ಸಂಬಂಧದಲ್ಲಿ ಅತೀ ಅಗತ್ಯವಾಗಿರುವ ರಾಶಿಗಳು
ಪ್ರೀತಿಯ ವಿಚಾರಕ್ಕೆ ಬಂದರೆ ಆಗ ಪ್ರತಿಯೊಬ್ಬರು ತಮ್ಮ ಸಂಗಾತಿಗೆ ತುಂಬಾ ಹತ್ತಿರವಾಗಿ ಇರಲು ಬಯಸುವರು ಮತ್ತು ಪ್ರತಿಯೊಂದನ್ನು ಜತೆಗೆ ಮಾಡಲು ಬಯಸುವರು. ಇದು ತುಂಬಾ ಸುಂದರವಾಗಿರುವುದು. ಆದರೆ ಕೆಲವೊಂದು ಸಲ ಇದು ಸಂಗಾತಿಗೆ ದಬ್ಬಾಳಿಕೆ ಎಂದು ಅನಿಸಬಹುದು. ಇದರಿಂದ ಸಂಬಂಧದಲ್ಲಿ ಭಿನ್ನಾಭಿಪ್ರಾಯ ಮೂಡಬಹುದು. ಕೆಲವೊಂದು ರಾಶಿಗಳು ಬೇರೆ ರಾಶಿಗಳಿಗಿಂತ ಪ್ರೀತಿಯಲ್ಲಿ ತುಂಬಾ ಅಗತ್ಯವೆಂದು ಭಾವಿಸುವರು. ಅದರಲ್ಲೂ ಮುಖ್ಯವಾಗಿ ಜಲರಾಶಿಯವರು. ಈ ರಾಶಿಯವರನ್ನು ನೀವು ಪ್ರೀತಿಸುತ್ತಿದ್ದೀರಾ ಎಂದು ತಿಳಿಯಲು ಮುಂದೆ ಓದುತ್ತಾ ಸಾಗಿ ಮೂರು ರಾಶಿ ಚಕ್ರದ ಬಗ್ಗೆ ನಾವು ಇಲ್ಲಿ ನಿಮಗೆ ತಿಳಿಸಲಿದ್ದೇವೆ.
ಆರೋಗ್ಯಕರ, ರೋಮ್ಯಾಂಟಿಕ್ ಸಂಬಂಧಕ್ಕಾಗಿ ಸಂಗಾತಿಗಳಿಬ್ಬರು ತಮ್ಮ ಸಮಯ ಮೀಸಲಿಡುವುದು ಅತೀ ಅಗತ್ಯವಾಗಿರುವುದು. ಇದರಿಂದಾಗಿ ಪರಸ್ಪರ ಆಕರ್ಷಣೆ ಮತ್ತು ಪ್ರೀತಿ ಮೂಡುವುದು. ಇಂದಿನ ದಿನಗಳಲ್ಲಿ ಸಂಗಾತಿಗಳಿಗೆ ಜತೆಯಾಗಿ ಮೌಲ್ಯಯುತ ಸಮಯ ಕಳೆಯಲು ಸಾಧ್ಯವಿಲ್ಲದಂತೆ ಆಗಿದೆ. ಏನು ಆಕರ್ಷಣೆ ತೋರಿಸದೆ ಇರುವುದಕ್ಕಿಂತ ಹೆಚ್ಚು ಆಕರ್ಷಣೆ ತೋರಿಸುವುದು ಒಳ್ಳೆಯದು. ಅತಿಯಾದ ಬೇಡಿಕೆಯು ಕೆಲವೊಂದು ಸಲ ಸಂಬಂಧದ ಮೇಲೆ ಪರಿಣಾಮ ಬೀರುವುದು ಮತ್ತು ಇದು ಕೂಡ ಸಂಬಂಧ ಮುರಿಯಲು ಕಾರಣವಾಗಬಹುದು. ಸಂಬಂಧದಲ್ಲಿ ತುಂಬಾ ಬೇಡಿಕೆಯನ್ನಿಡುವ ರಾಶಿಗಳು ಯಾವುದು? ಇದನ್ನು ನೀವು ತಿಳಿಯಿರಿ.

ಕರ್ಕಾಟಕ: ಭಾವನಾತ್ಮಕವಾಗಿ ಪ್ರೀತಿ ಮೇಲೆ ಅವಲಂಬಿತ
ಕರ್ಕಾಟಕ ರಾಶಿಯವರು ಯಾವಾಗಲೂ ಸ್ವಾಮ್ಯಸೂಚಕವಾಗಿ ಇರುವರು ಮತ್ತು ಇವರು ತಮ್ಮ ರೋಮ್ಯಾಂಟಿಕ್ ಸಂಬಂಧದಲ್ಲಿ ಹೊಸತನ ಮತ್ತು ಸಿಹಿ ಬಯಸುವರು. ಕರ್ಕಾಟಕ ರಾಶಿಯವರು ತುಂಬಾ ಭಾವನಾತ್ಮಕವಾಗಿ ಅವಲಂಬಿತವಾಗಿರುವ ಮತ್ತು ತಮ್ಮ ಸಂಗಾತಿಯಿಂದ ಪ್ರತಿನಿತ್ಯ ಅವರಿಗೆ ಪ್ರೀತಿಯ ದೃಢಪಡಿಸುವಿಕೆ ಬೇಕು. ಇದರಿಂದಾಗಿ ಕೆಲವೊಂದು ಸಲ ಅವರಿಗೆ ಸಂಬಂಧದಲ್ಲಿ ಅಸುರಕ್ಷತೆಯ ಭಾವನೆ ಮೂಡಬಹುದು. ಇನ್ನು ಈ ರಾಶಿಯವರು ಪ್ರತಿಯೊಂದರಲ್ಲೂ ಮಿಂಚಲು ಬಯಸುತ್ತಾರೆ ಮತ್ತು ಇದರ ಬಗ್ಗೆ ಅವರಿಗೆ ಸರಿಯಾದ ನಿಯಂತ್ರಣವೂ ಇದೆ. ಇದನ್ನು ಮೈಕ್ರೋಮ್ಯಾನೆಜಿಂಗ್ ಎನ್ನಬಹುದು. ಆದರೆ ಅವರು ಇದನ್ನು ಯಶಸ್ಸು ಎನ್ನುತ್ತಾರೆ. ಕಠಿಣ ಪರಿಶ್ರಮ ಅವರ ಹೆಸರಿಗೆ ಅಂಟಿಕೊಂಡಿರುತ್ತದೆ ಮತ್ತು ಅವರು ಪ್ರಯತ್ನಿಸುವ ಪ್ರತಿಯೊಂದರಲ್ಲೂ ಅತ್ಯುತ್ತಮವಾಗಿರುವುದನ್ನು ನೀಡಲು ಬಯಸುತ್ತಾರೆ, ಅಲ್ಲದೆ ಇವರನ್ನು ತುಂಬಾ ಪ್ರೀತಿ ಮತ್ತು ಪ್ರಾಮಾಣಿಕ ಮನುಷ್ಯರೆಂದು ಕರೆಯಲಾಗುತ್ತದೆ. ಅವರಿಗೆ ಮೋಸ, ನಿರಾಶೆ ಮತ್ತು ಬೇಸರವಾದಾಗ ತುಂಬಾ ಕುಸಿಯುತ್ತಾರೆ. ಅವರ ಬಗ್ಗೆ ಬಳಸುವ ಪದಗಳ ಆಯ್ಕೆಯಲ್ಲಿ ತುಂಬಾ ಎಚ್ಚರಿಕೆ ವಹಿಸಬೇಕು. ನಿಮ್ಮ ಪ್ರೀತಿಗೆ ಬದ್ಧತೆ ತೋರಿಸಿದರೆ ಅವರು ಯಾವಾಗಲೂ ಪ್ರಾಮಾಣಿಕರಾಗಿರುತ್ತಾರೆ. ಪ್ರೀತಿಯನ್ನು ವ್ಯಕ್ತಪಡಿಸಲು ಅವರು ಯಾವಾಗಲೂ ನಾಚಿಕೆ ಪಡುವುದಿಲ್ಲ. ಅವರು ತುಂಬಾ ಪ್ರಾಮಾಣಿಕರು.

ಮೀನ: ಬದ್ಧ ಪ್ರೀತಿ
ಸಂಬಂಧದಲ್ಲಿ ಮೀನ ರಾಶಿಯವರು ತಮ್ಮ ಸಂಗಾತಿ ಜತೆಗೆ ಒಂದಾಗಿ ಇರಲು ಪ್ರಯತ್ನಿಸುವರು. ಇದು ಅವರಿಗೆ ತುಂಬಾ ಸುಲಭವಾಗಿರುವುದು. ಅವರು ಪ್ರತಿಯೊಂದನ್ನು ಜತೆಯಾಗಿ ಮಾಡಲು ಬಯಸುವರು. ಅವರ ಭಾವನೆಗಳು ಬಲವಾಗಿರುವುದು ಮತ್ತು ಪ್ರೀತಿಯಲ್ಲಿ ಅವರು ಸಂಪೂರ್ಣವಾಗಿ ಅಂಧರಾಗಿ ಇರುವರು. ಇನ್ನು ರಾಶಿ ಚಕ್ರದಲ್ಲಿ ಕೊನೆಯ ರಾಶಿ ಆಗಿರುವ ಮೀನ ರಾಶಿಯವರಿಗೆ 2019ನೇ ವರ್ಷವು ತುಂಬಾ ಲಾಭಕಾರಿ ಆಗಿರಲಿದೆ. ಆದರೆ ಇದು ಈಗಾಗಲೇ ಮದುವೆ ಆಗಿರುವವರಿಗೆ. ಸಂಗಾತಿ ಜತೆಗಿನ ಅನುಭವದ ಸಮಯವನ್ನು ನೀವು ಹೆಚ್ಚು ಆನಂದಿಸಬಹುದು. ನೀವು ಸೂಕ್ತ ಸಂಗಾತಿಯ ಹುಡುಕಾಟದಲ್ಲಿ ಇದ್ದರೆ ಆಗ ನಿಮಗೆ ಮಾರ್ಚ್ ಮತ್ತು ಜೂನ್ ನಡುವಿನ ಸಮಯವು ತುಂಬಾ ಅದೃಷ್ಟ ತರಲಿದೆ.

ತುಲಾ: ಎಲ್ಲಾ ಪ್ರೀತಿ
ಇವರಿಗೆ ಏನು ಬೇಕು ಎಂದು ಕಂಡುಕೊಳ್ಳಲು ತುಂಬಾ ಕಷ್ಟವಾಗಿರುವುದು. ಆದರೆ ಇವರು ಒಂದು ಸಲ ಏನು ಬೇಕು ಎಂದು ತಿಳಿದರೆ ಆಗ ಆಳವಾಗಿ ಇದರಲ್ಲಿ ಮುಳುಗುವರು. ತುಲಾದ ವ್ಯಕ್ತಿತ್ವ, ಅದರಲ್ಲೂ ಪುರುಷರು ಸಂಬಂಧದಲ್ಲಿ ತುಂಬಾ ವೇಗವಾಗಿ ಇರುವರು ಮತ್ತು ತಮ್ಮ ಪ್ರೀತಿಯ ಬಗ್ಗೆ ಸಂಗಾತಿಗೆ ಬೇಗನೆ ತಿಳಿಸಿ ಬಿಡುವರು. ತುಲಾ ರಾಶಿಯವರು ತಾವು ಪ್ರೀತಿಯನ್ನು ಪಡೆದುಕೊಂಡಿದ್ದೇವೆ ಎಂದು ತಿಳಿದ ಬಳಿಕ ಅದನ್ನು ಉಳಿಸಿಕೊಳ್ಳಲು ಬದ್ಧತೆ ಪ್ರದರ್ಶಿಸುವರು. ಈ ಮೂರು ರಾಶಿಯವರು ತಮ್ಮ ಸಂಗಾತಿ ಜತೆಗೆ ತುಂಬಾ ರೋಮ್ಯಾಂಟಿಕ್ ಆಗಿ ಇರುವರು. ಅವರಿಗೆ ಬೇಕಿರುವ ಮತ್ತು ಅರ್ಹವಾಗಿರುವಂತಹ ಪ್ರೀತಿಯನ್ನು ಅವರಿಗೆ ನೀಡಬೇಕು. ಪ್ರೀತಿಯ ಆಳವನ್ನು ಅವರಿಗೆ ತಿಳಿಸುವುದು ನಿಮ್ಮ ಕೆಲಸ ಮತ್ತು ಇದರ ಬಳಿಕ ಪ್ರತಿಯೊಂದು ಕೆಲಸ ಮಾಡುವುದು. ಇನ್ನು ನಿಮ್ಮ ಖುಷಿಪಡಿಸುವ ಸಲುವಾಗಿ ಹಾಗೂ ನಿಮ್ಮ ಸಂತೋಷವೇ ತುಂಬಾ ಮುಖ್ಯವೆಂದು ಅವರು ಪರಿಗಣಿಸಿರುವ ಕಾರಣದಿಂದಾಗಿ ತುಲಾ ರಾಶಿಯವರನ್ನು ಮರೆಯುವುದು ತುಂಬಾ ಕಠಿಣ. ಇವರೊಂದಿಗೆ ಹೊಂದಿ ಕೊಳ್ಳುವುದು ತುಂಬಾ ಸುಲಭ ಮತ್ತು ಇವರು ನಿಮ್ಮ ಕಷ್ಟದ ಸಮಯದಲ್ಲಿ ಒಂದು ಕ್ಷಣವೂ ಮರುಯೋಚಿಸದೆ ನೆರವಿಗೆ ಧಾವಿಸುವರು. ಇವರು ಏಕ ವ್ಯಕ್ತಿಯಾಗಿಯೇ ನೆರವು ಮಾಡುವರು. ಇವರ ರೋಮ್ಯಾಂಟಿಕ್ ಮತ್ತು ಕಾಳಜಿಯ ನಡವಳಿಕೆ ನಿಮಗೆ ತುಂಬಾ ವಿಶೇಷವೆನಿಸುವಂತೆ ಮಾಡುವುದು.

ತುಲಾ: ಎಲ್ಲಾ ಪ್ರೀತಿ
ಈ ರಾಶಿಯವರು ಬೇರೆ ವ್ಯಕ್ತಿಗಳನ್ನು ಪ್ರಶಂಸೆ ಮಾಡುವುದರಿಂದ ಅವರೊಂದಿಗೆ ಮಾತನಾಡುತ್ತಲೇ ಇರಬೇಕು ಎಂದು ಅನಿಸುವುದು. ನೀವು ತುಂಬಾ ಮಹತ್ವದ ವ್ಯಕ್ತಿ ಎಂದು ಭಾವಿಸುವಂತೆ ತುಲಾ ರಾಶಿಯವರು ಮಾಡುವರು. ಇವರು ಸ್ವಾಭಾವಿಕವಾಗಿ ತುಂಬಾ ಆಕರ್ಷಣೀಯ ಮತ್ತು ಆನಂದ ಉಂಟು ಮಾಡುವ ಕಾರಣ ದಿಂದಾಗಿ ಜನರು ಇವರೊಂದಿಗೆ ಸಮಯ ಕಳೆಯಲು ಹೆಚ್ಚು ಇಷ್ಟಪಡುವರು. ಇವರು ಎಲ್ಲಾ ವಿಭಾಗದಲ್ಲೂ ಹೆಚ್ಚಿನ ಜ್ಞಾನ ಹೊಂದಿರುವ ಕಾರಣದಿಂದ ಇವರೊಂದಿಗೆ ಚರ್ಚೆ ಮಾಡಲು ಎಲ್ಲಾ ವಿಷಯಗಳು ಸಿಗುವುದು. ಇದರಲ್ಲಿ ಎಲ್ಲಾ ಸಮಯದಲ್ಲೂ ಒಂದು ಆಯ್ಕೆ ಎನ್ನುವುದು ಇರುವುದು. ಇವರು ಯಾವಾಗಲೂ ನಗುತ್ತಲೇ ತುಂಬಾ ಸಿಹಿಯಾಗಿ ಮಾತನಾಡುವರು.



Click it and Unblock the Notifications











