Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ತಾಯಿಗೆ ಸಿಸಿಟಿವಿಯಲ್ಲಿ ಕಾಣಿಸುತ್ತಿದೆಯಂತೆ ಸತ್ತ ಮಗನ ದೆವ್ವದ ಆಕೃತಿಗಳು
ಹುಟ್ಟು ಅನಿಶ್ಚಿತ, ಸಾವು ಖಚಿತ ಎನ್ನುವ ಮಾತಿದೆ. ಭೂಮಿ ಮೇಲಿನ ಪ್ರತಿಯೊಂದು ಜೀವಿಗೂ ಸಾವು ಇದ್ದೇ ಇದೆ. ಜೀವ ಇರುವ ಯಾವುದೇ ಆಗಲಿ ಅದು ಸಾಯಲೇಬೇಕು. ಇದು ಪ್ರಕೃತಿ ನಿಯಮ. ಅದರಲ್ಲೂ ಸಣ್ಣ ವಯಸ್ಸಿನಲ್ಲಿ ಕೆಲವು ಅಪಘಾತ ಅಥವಾ ಇನ್ಯಾವುದೋ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಳ್ಳುವರು. ಇದು ಮನೆಯವರಿಗೆ ಹಾಗೂ ಪೋಷಕರಿಗೆ ತುಂಬಾ ನೋವಿನ ಹಾಗೂ ತಡೆಯಲಾರದ ಆಘಾತ ಉಂಟಾಗುವುದು.
ಇಂತಹ ಸಂದರ್ಭದಲ್ಲಿ ಪೋಷಕರು ತುಂಬಾ ಕುಗ್ಗಿ ಹೋಗುವರು. ಎಳೆ ವಯಸ್ಸಿನಲ್ಲಿ ಮಕ್ಕಳು ಪ್ರಾಣ ಕಳೆದುಕೊಂಡರೆ ಅದಕ್ಕಿಂತ ದುಃಖದ ವಿಚಾರ ಮತ್ತೊಂದಿಲ್ಲ. ಜೀವನಪೂರ್ತಿ ಅವರ ನೆನಪಿನಲ್ಲೇ ಕಾಲ ಕಳೆಯಬೇಕಾಗುತ್ತದೆ. ಕೆಲವೊಂದು ಸಲ ಮಕ್ಕಳು ತಮ್ಮ ಮುಂದೆ ಬಂದು ನಿಂತಂತೆ ಅಥವಾ ನಮ್ಮೊಂದಿಗೆ ಇರುವಂತೆ ಪೋಷಕರಿಗೆ ಭಾವನೆಯಾಗುವುದು. ಇಂತಹ ಹಲವಾರು ಘಟನೆಗಳ ಬಗ್ಗೆ ನಾವು ಕೇಳಿರಬಹುದು ಅಥವಾ ಓದಿರಬಹುದು.
ಇಲ್ಲೊಂದು ಘಟನೆಯಲ್ಲಿ ಅತಿಯಾದ ಡ್ರಗ್ಸ್ ಸೇವನೆಯಿಂದ ಮೃತಪಟ್ಟ ಯುವಕನೊಬ್ಬ ತನ್ನ ಮನೆಯಲ್ಲಿ ಸತ್ತ ಬಳಿಕವೂ ಕಾಣಿಸಿಕೊಳ್ಳುತ್ತಿರುವುದು ಅಚ್ಚರಿ ಮೂಡಿಸಿದೆ. ಈ ಘಟನೆ ಬಗ್ಗೆ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ನೀವು ಓದಿಕೊಳ್ಳಿ. ತಾಯಿ ಮತ್ತು ಮಗಳು ತಮ್ಮ ಮಗ/ಸೋದರ ಕಾಣಿಸಿಕೊಂಡಿದ್ದಾನೆ ಎಂದು ಹೇಳುತ್ತಿದ್ದಾರೆ. ಈ ಘಟನೆಯು ಸಿಸಿಟಿವಿಯಲ್ಲಿ ಕೂಡ ಸೆರೆಯಾಗಿದೆ.

ಪಾರದರ್ಶಕ ಅಂಶವು ಕ್ಯಾಮರಾದ ಸೆನ್ಸರ್ ನಲ್ಲಿ ಪತ್ತೆಯಾಯಿತು
ಯುವಕನ ತಾಯಿ ಜೆನಿಫರ್ ಹಾಡ್ಜ್ ಮತ್ತು ಆಕೆಯ ಮಗಳು ಲೌರೆನ್ ಜತೆಗೆ ಹಾಸಿಗೆಯಲ್ಲಿ ಕುಳಿತುಕೊಂಡು ಟಿವಿ ವೀಕ್ಷಿಸುತ್ತಾ ಇದ್ದರು. ಈ ವೇಳೆ ಅವರ ಫೋನ್ ಗೆ ಒಂದು ಸಂದೇಶ ಬರುತ್ತದೆ ಮತ್ತು ಪ್ರವೇಶದ್ವಾರದಲ್ಲಿ ವ್ಯಕ್ತಿಯೊಬ್ಬ ಕಂಡುಬಂದಿದ್ದಾನೆ ಎಂದು ಕ್ಯಾಮರಾದ ಸೆನ್ಸರ್ ಹೇಳುತ್ತದೆ.

ಭಯ ಹುಟ್ಟಿಸಿದ ಅನುಭವ
ಮೊಬೈಲ್ ಫೋನ್ ನಲ್ಲಿ ನೋಟಿಫಿಕೇಶನ್ ನ್ನು ಅವರು ಕೋಣೆಯಲ್ಲಿ ಕುಳಿತುಕೊಂಡು ಟಿವಿ ವೀಕ್ಷಿಸುತ್ತಿದ್ದ ವೇಳೆ ಪಡೆಯುತ್ತಾರೆ. ಸಿಸಿಟಿವಿ ದೃಶ್ಯಗಳನ್ನು ನೋಡಿದಾಗ ಅವರಿಬ್ಬರು ದಂಗಾಗಿ ಹೋಗುತ್ತಾರೆ. ಯಾಕೆಂದರೆ ಅವರ ಅಡುಗೆ ಮನೆಯಲ್ಲಿ ಪ್ರೇತಾತ್ಮವು ತಿರುಗುತ್ತಾ ಇರುವುದು ಕಂಡುಬರುತ್ತದೆ.

ಸಾವನ್ನಪ್ಪಿರುವ ಮಗನ ಚಿತ್ರದಂತಿತ್ತು!
ಈ ಚಿತ್ರವನ್ನು ತಾಯಿ ಮತ್ತು ಮಗಳು ತೆರೆದು ನೋಡಿದಾಗ ಅವರಿಗೆ ಮತ್ತೆ ಆಘಾತ ಉಂಟಾಯಿತು. ಯಾಕೆಂದರೆ ಈ ಚಿತ್ರದಲ್ಲಿ ಗಡ್ಡ ಬಿಟ್ಟ ಪುರುಷನೊಬ್ಬ ಕಾಣಿಸುತ್ತಿದ್ದ ಮತ್ತು ಇದು ಆ ಮಹಿಳೆಯ ಮಗ ಮತ್ತು ಲೌರೆನ್ ನ ಸೋದರ ರಾಬಿ ಆಗಿದ್ದ. ಆತ ಎರಡು ವರ್ಷಗಳ ಮೊದಲು ಅತಿಯಾದ ಡ್ರಗ್ಸ್ ಸೇವನೆಯಿಂದಾಗಿ ಮೃತಪಟ್ಟಿದ್ದ.

ತಾಯಿ ನಂಬಿರುವಂತೆ…
ಕೋಣೆಯಲ್ಲಿದ್ದ ತಾಯಿ ಮತ್ತು ಮಗಳು ಅಡುಗೆ ಕೋಣೆಗೆ ಹೋಗಿ ಅಲ್ಲಿ ಯಾರಾದರೂ ಅಕ್ರಮವಾಗಿ ಪ್ರವೇಶ ಮಾಡಿದ್ದಾರೆಯಾ ಎಂದು ನೋಡಿದರೆ, ಅಲ್ಲಿ ಅಂತಹ ಯಾವುದೇ ಕುರುಹು ಕಾಣಿಸಿಕೊಳ್ಳಲಿಲ್ಲ. ಅಡುಗೆ ಮನೆಯಲ್ಲಿ ಆಕೆಯ ಮಗ ಪೈಜಾಮಾದಲ್ಲಿ ತಿರುಗಾಡುತ್ತಾ ಇರುವುದು ಕಂಡುಬಂದಿದೆ.

ತಾಯಿ ನಂಬಿರುವಂತೆ…
ಇದರಿಂದ ಆ ಮಹಿಳೆ ತನ್ನ ಮಗ ತುಂಬಾ ಶಾಂತಿಯಿಂದ ಮನೆಗೆ ಬಂದಿದ್ದಾಗಿ ನಂಬಿದ್ದಾರೆ. ಈ ಘಟನೆ ಬಗ್ಗೆ ನಿಮ್ಮ ಅನಿಸಿಕೆ ಏನು? ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್ ಗೆ ಹಾಕಿಬಿಡಿ.



Click it and Unblock the Notifications
