Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ತನ್ನ ಮಗಳ ಅಂದವನ್ನು ಕೆಡಿಸಲು ಆಕೆಯ ಸ್ತನಗಳಿಗೆ ಬಿಸಿಯಾದ ಇಸ್ತ್ರಿ ಪೆಟ್ಟಿಗೆಯನ್ನುಇಟ್ಟ ತಾಯಿ!!
ಇಂದಿನ ದಿನಗಳಲ್ಲಿ ಕಾಮುಕರ ಕೈಯಿಂದ ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡುವುದೇ ಪೋಷಕರಿಗೆ ದೊಡ್ಡ ಸವಾಲಾಗಿದೆ. ಯಾಕೆಂದರೆ ಯಾವ ಕ್ಷಣದಲ್ಲಿ, ಯಾವ ರೀತಿಯಲ್ಲಿ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತದೆ ಎಂದು ಹೇಳಲು ಸಾಧ್ಯವಾಗದು. ಅದರಲ್ಲೂ ಕೆಲವೊಂದು ಮೆಟ್ರೋ ನಗರಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯವು ಹೆಚ್ಚುತ್ತಲೇ ಇದೆ. ಆದರೆ ಇಂತವರಿಂದ ರಕ್ಷಣೆ ಮಾಡಲು ಹಿಂದಿನಿಂದಲೂ ಕೆಲವೊಂದು ಜನಾಂಗಗಳಲ್ಲಿ ಮಹಿಳೆಯರಿಗೆ ಸಂಪ್ರದಾಯಗಳನ್ನು ಅಳವಡಿಸಿಕೊಂಡು ಬರಲಾಗಿದೆ.
ಇದು ಮಹಿಳೆಯರ ತಪ್ಪಲ್ಲದೆ ಇದ್ದರೂ ಆಕೆ ಇಲ್ಲಿ ಬಲಿಪಶು ಆಗುತ್ತಿದ್ದಳು. ಕೆಲವು ದೇಶ ಹಾಗೂ ಜನಾಂಗದಲ್ಲಿ ಈಗಲೂ ಮಹಿಳೆಯರ ಮೇಲೆ ಕಟ್ಟುಪಾಡುಗಳು, ಆಚರಣೆಗಳು ಇದೆ. ಇಲ್ಲಿ ಮಹಿಳೆಯೊಬ್ಬರು ತನ್ನ ಮಗಳು ಸುಂದರವಾಗಿ ಕಾಣಿಸಬಾರದು ಎನ್ನುವ ನಿಟ್ಟಿನಲ್ಲಿ ಆಕೆಯ ಸ್ತನಗಳಿಗೆ ಇಸ್ತ್ರಿ ಪೆಟ್ಟಿಗೆಯನ್ನು ಇಟ್ಟಿರುವಂತಹ ಘಟನೆಯು ನಡೆದಿದೆ. ಇಂತಹ ಒಂದು ಸಂಪ್ರದಾಯವು ಕೆಲವೊಂದು ಜನಾಂಗದಲ್ಲಿ ಈಗಲೂ ಜೀವಂತವಾಗಿದೆ. ಆದರೆ ಇದು ತುಂಬಾ ಕ್ರೂರ ಹಾಗೂ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಎಂದು ಪರಿಗಣಿಸಲಾಗಿದೆ. ಈ ಸಂಪ್ರದಾಯದ ಬಗ್ಗೆ ನೀವು ಮತ್ತಷ್ಟು ತಿಳಿಯಿರಿ.

ಈ ಘಟನೆ
ಬ್ರಿಟನ್ ನ ನಿವಾಸಿ ಆಗಿರುವಂತಹ ಸಿಮೊನೆ ಎನ್ನುವ ಮಹಿಳೆ ಈಕೆ. ಬಿಬಿಸಿ ದಾಖಲಿಸಿಕೊಂಡಿರುವಂತಹ ಸಾಕ್ಷ್ಯ ಚಿತ್ರದಲ್ಲಿ ಆಕೆ ತನ್ನ ತಾಯಿಯು ಸ್ತನಗಳಿಗೆ ಇಸ್ತ್ರಿ ಮಾಡಿರುವ ಬಗ್ಗೆ ಹೇಳಿಕೊಂಡಿದ್ದಾಳೆ. ಆಕೆ ಕೇವಲ 13ರ ಹರೆಯದವಳಾಗಿದ್ದಾಗ ಹೀಗೆ ಮಾಡಲಾಗಿತ್ತು.

ಆಕೆಯ ತಾಯಿ ಹೀಗೆ ಮಾಡಿರುವುದು ಇದಕ್ಕೆ…
ತಾನು ಸಲಿಂಗಿ ಎಂದು ತಿಳಿದ ಬಳಿಕ ತನ್ನ ತಾಯಿಯು ಹೀಗೆ ಮಾಡಿದ್ದಾಳೆ ಎಂದು ಆಕೆ ಹೇಳಿಕೊಂಡಿದ್ದಾರೆ. ಸುಂದರವಾಗಿದ್ದ ಸ್ತನಗಳಿಂದಾಗಿ ತಾನು ತುಂಬಾ ಆಕರ್ಷಿಸುತ್ತಿದ್ದೆ ಎಂದು ತನ್ನ ತಾಯಿ ನಂಬಿದ್ದಳು ಎಂದು ಆಕೆ ಹೇಳಿರುವಳು. ಇದಕ್ಕೆ ಇಸ್ತ್ರಿ ಮಾಡಿ ಅದನ್ನು ಚಪ್ಪಟೆ ಮಾಡಿ ಬಿಟ್ಟರೆ, ಆಗ ತನ್ನನ್ನು ಯಾರು ನೋಡುವುದಿಲ್ಲ ಎಂದು ತಾಯಿ ಭಾವಿಸಿದ್ದಳು.

ಬಿಗಿಯಾಗಿರುವ ಪಟ್ಟಿ ಧರಿಸಲು ಸೂಚಿಸಲಾಗಿತ್ತು
ತನ್ನ ಸ್ತನಗಳು ಇನ್ನಷ್ಟು ಬೆಳವಣಿಗೆ ಆಗುವುದನ್ನು ತಡೆಯಲು ಅದಕ್ಕೆ ಬಿಗಿಯಾದ ಪಟ್ಟಿ ಹಾಕಿಕೊಳ್ಳುವಂತೆ ಕೂಡ ಸೂಚಿಸಲಾಗಿತ್ತು ಎಂದು ಸಿಮೊನೆ ಹೇಳಿಕೊಂಡಿರುವಳು.

ಈ ಸಂಪ್ರದಾಯದಿಂದಾಗಿ ಆಕೆಯ ಮೇಲೆ ದೀರ್ಘಕಾಲದ ಪರಿಣಾಮ ಬೀರಿದೆ
ತುಂಬಾ ಎಳೆಯ ಪ್ರಾಯದಲ್ಲಿ ಸ್ತನಗಳಿಗೆ ಇಸ್ತ್ರಿ ಮಾಡುವಂತಹ ಪದ್ಧತಿಗೆ ಒಳಗಾದ ಕಾರಣದಿಂದಾಗಿ ಅದರ ಪರಿಣಾಮವು ದೀರ್ಘಕಾಲ ತನಕ ಉಳಿದಿದೆ. ಸ್ತನಗಳ ಜಾಗದಲ್ಲಿ ಏನೋ ಗಂಟು ಇರುವಂತೆ ಭಾವನೆಯಾಗುತ್ತಿದೆ ಮತ್ತು ತನ್ನ ಮಗುವಿಗೆ ಎದೆಹಾಲುಣಿಸುವಾಗ ತುಂಬಾ ನೋವಾಗುತ್ತಿದೆ. ತನ್ನ ದೇಹದಿಂದಾಗಿ ತಾನು ಮನೆಯವರು ನಿಶ್ಚಯ ಮಾಡಿದ ಹುಡುಗನನ್ನೇ ಮದುವೆಯಾಗಬೇಕಾಯಿತು ಎಂದು ಆಕೆಯು ಈ ಸಾಕ್ಷ್ಯ ಚಿತ್ರದಲ್ಲಿ ತನ್ನ ನೋವಿನ ಜೀವನ ಕಥೆ ಬಿಡಿಸಿಟ್ಟಿದ್ದಾಳೆ.



Click it and Unblock the Notifications
