Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕುಡಿದ ಮತ್ತಿನಲ್ಲಿ ಮನೆಯ ಬೀಗದ ಕೈ ನುಂಗಿಬಿಟ್ಟ!
ಮದ್ಯಪಾನ ಮಾಡುವುದು ತುಂಬಾ ಹಾನಿಕಾರಕ ಎಂದು ತಿಳಿದಿದ್ದರೂ ಸಹಿತ ಕೆಲವು ಮಂದಿ ತಪ್ಪದೆ ಇದನ್ನು ಸೇವಿಸುತ್ತಾರೆ. ಇದರಿಂದಾಗಿ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುವುದು. ಮದ್ಯಪಾನವು ಕೆಲವು ಸಂದರ್ಭಗಳಲ್ಲಿ ಇದು ಅನಾಹುತ ಸೃಷ್ಟಿಸುವುದು. ತಾವು ಏನು ಮಾಡುತ್ತಿದ್ದೇವೆ ಎಂದು ಮದ್ಯಪಾನ ಮಾಡಿದವರಿಗೆ ತಿಳಿದಿರುವುದಿಲ್ಲ. ಅವರು ಈ ಲೋಕದಲ್ಲೇ ಇರುವುದಿಲ್ಲ. ತಮ್ಮ ವರ್ತನೆ ಬಗ್ಗೆ ಅವರಿಗೆ ನಿಯಂತ್ರಣವೇ ಇರದು. ಹೀಗೆ ಇಲ್ಲೊಬ್ಬ ವ್ಯಕ್ತಿ ಅತಿಯಾಗಿ ಮದ್ಯಪಾನ ಮಾಡಿದ ಬಳಿಕ ಮನೆಯ ಬೀಗದ ಕೈಯನ್ನೇ ನುಂಗಿರುವಂತಹ ವಿಚಿತ್ರ ಘಟನೆಯು ನಡೆದಿದೆ.
ಈ ವ್ಯಕ್ತಿಯು ಅತಿಯಾಗಿ ಮದ್ಯಪಾನ ಮಾಡಿದ ಬಳಿಕ ತನ್ನ ಮನೆಯ ಬೀಗದ ಕೈ ಕಳೆದುಕೊಂಡಿದ್ದಾನೆ ಎಂದು ಅದನ್ನು ಹುಡುಕಲು ಆರಂಭಿಸಿದ. ತನ್ನ ಹೊಟ್ಟೆಯಲ್ಲಿ ಏನೋ ತೊಂದರೆ ಕಾಣಿಸುತ್ತಿದ್ದ ಕಾರಣದಿಂದಾಗಿ ಆತ ಹೋಗಿ ವೈದ್ಯರಲ್ಲಿಗೆ ಭೇಟಿ ನೀಡಿದ ಮತ್ತು ಈ ವೇಳೆ ಆತನಿಗೆ ತನ್ನ ತಪ್ಪಿನ ಅರಿವಾಗಿದೆ.

ಇದರ ಬಗ್ಗೆ ನೀವು ಇನ್ನಷ್ಟು ಮಾಹಿತಿ ತಿಳಿಯಿರಿ.
ಚೀನಾದ 26ರ ಹರೆಯದ ಚಾಂಗ್ ಎಂಬ ಹೆಸರಿನ ವ್ಯಕ್ತಿಯೊಬ್ಬ ವಾರಾಂತ್ಯವನ್ನು ತನ್ನ ಸ್ನೇಹಿತರೊಂದಿಗೆ ಕಳೆದಯಲು ಹೋಗಿ ಅತಿಯಾಗಿ ಮದ್ಯಪಾನ ಸೇವಿಸಿದ್ದಾನೆ. ಪಾರ್ಟಿ ಮುಗಿಸಿಕೊಂಡು ಮನೆಗೆ ಬಂದ ವೇಳೆ ಆತನಿಗೆ ಮನೆಯ ಬೀಗದ ಕೈ ಕಳೆದುಕೊಂಡಿರುವ ಬಗ್ಗೆ ಅರಿವಾಗಿದೆ. ಆತ ಮನೆಯ ಒಳಗಡೆ ಇರುವ ಜನರಿಗೆ ಕರೆ ಮಾಡಿ ತಾನು ಬೀಗದ ಕೈ ಕಳೆದುಕೊಂಡಿರುವ ಬಗ್ಗೆ ತಿಳಿಸಿದ್ದಾನೆ.
ಮರುದಿನ ಬೆಳಗ್ಗೆ ಆಲ್ಕೋಹಾಲ್ ನ ನಶೆಯು ಇಳಿದ ಬಳಿಕ ಆತನಿಗೆ ಎದೆಯಲ್ಲಿ ಒಂದು ರೀತಿಯ ನೋವು ಕಾಣಿಸಿಕೊಂಡಿದೆ. ಈ ವೇಳೆ ಆತ ತಕ್ಷಣವೇ ಸಮೀಪದ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡಿದ್ದಾನೆ.
ವೈದ್ಯರು ಎಕ್ಸ್ ರೇ ಮಾಡಿಸಿದ ಬಳಿಕ ಅವರಿಗೆ ಇದನ್ನು ನೋಡಿ ಒಂದು ಕ್ಷಣ ಆಘಾತವಾಗಿದೆ. ಯಾಕೆಂದರೆ ಚಾಂಗ್ ನ ಅನ್ನನಾಳದಲ್ಲಿ ಬೀಗದ ಕೈ ಸಿಲುಕಿಕೊಂಡಿತ್ತು. ರಾತ್ರಿ ಆತ ತನ್ನ ಮನೆಯ ಬೀಗದ ಕೈ ಕಳೆದುಕೊಂಡಿದ್ದಾಗಿ ಈ ವೇಳೆ ತಿಳಿಸಿದ್ದಾನೆ. ಆದರೆ ಇದು ಆತನ ದೇಹದೊಳಗೆ ಹೇಗೆ ಹೋಯಿತು ಎನ್ನುವ ಬಗ್ಗೆ ಮಾತ್ರ ಆತನಿಗೆ ತಿಳಿದಿರಲಿಲ್ಲ.
ಚಾಂಗ್ ಗೆ ತಾನು ಕೀಯನ್ನು ಹೇಗೆ ನುಂಗಿದ್ದೇನೆ ಎಂದು ತಿಳಿಯದೆ ಇದ್ದ ಕಾರಣದಿಂದಾಗಿ ಇದು ವೈದ್ಯರಿಗೆ ಕೂಡ ದೊಡ್ಡ ರಹಸ್ಯವಾಗಿತ್ತು. ಚಾಂಗ್ ಅತಿಯಾಗಿ ಮದ್ಯಪಾನ ಮಾಡಿದ್ದ ಕಾರಣದಿಂದಾಗಿ ಆತನಿಗೆ ಏನೊಂದು ನೆನಪು ಇರಲಿಲ್ಲ.
ತಕ್ಷಣವೇ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದರು ಮತ್ತು ಕೀಯನ್ನು ನೈಸರ್ಗಿಕ ತಂತ್ರ ಬಳಸಿಕೊಂಡು ತೆಗೆದರೆ ಅದರಿಂದ ಕರುಳಿಗೆ ಹಾನಿಯಾಗುತ್ತಿತ್ತು. ಎಂಡೋಸ್ಕೋಪಿ ಮಾಡಿದರೂ ಅದರಿಂದ ಅನ್ನನಾಳಕ್ಕೆ ಹಾನಿಯಾಗುತ್ತಿತ್ತು. ಇದರಿಂದ ಅವರು ತಕ್ಷಣವೇ ಶಸ್ತ್ರಚಿಕಿತ್ಸೆ ಮಾಡಿ ತೆಗೆಯಲು ಬಯಸಿದರು.
ಸರಿಯಾದ ಸಮಯದಲ್ಲಿ ಕೀಯನ್ನು ಹೊರಗೆ ತೆಗೆದ ಪರಿಣಾಮವಾಗಿ ಚಾಂಗ್ ತುಂಬಾ ಅದೃಷ್ಟವಂತರು ಎಂದು ಪರಿಗಣಿಸಲಾಗಿದೆ. ಆದರೆ ಇದು ದೇಹದ ಒಳಗಡೆ ಹೇಗೆ ಹೋಯಿತು ಎನ್ನುವುದು ಮಾತ್ರ ಈಗಲೂ ದೊಡ್ಡ ರಹಸ್ಯವಾಗಿಯೇ ಇದೆ.



Click it and Unblock the Notifications

