Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಬಿಯರ್‌ನಿಂದಾಗಿ ಸಂಧಿವಾತ ತಂದುಕೊಂಡ ಯುವಕ
ಅತಿಯಾಗಿರುವುದು ಯಾವುದು ಒಳ್ಳೆಯದಲ್ಲ ಎಂದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಅದರಲ್ಲೂ ಆಲ್ಕೋಹಾಲ್ ಅತಿಯಾದರೆ ಅದರಿಂದ ಇನ್ನಿಲ್ಲದಂತಹ ಆರೋಗ್ಯ ಸಮಸ್ಯೆಗಳು ಕಾಡುವುದು. ಈ ಲೇಖನದಲ್ಲಿ ನಾವು ನಿಮಗೆ ವ್ಯಕ್ತಿಯೊಬ್ಬ ಅತಿಯಾಗಿ ಬಿಯರ್ ಕುಡಿದ ಪರಿಣಾಮ ಸಂಧಿವಾತದಿಂದ ಬಳಲುತ್ತಿರುವ ಘಟನೆಯು ನಡೆದಿದೆ. ಈ ಘಟನೆಯ ಬಗ್ಗೆ ನೀವು ಸಂಪೂರ್ಣವಾಗಿ ತಿಳಿಯಿರಿ ಮತ್ತು ಅತಿಯಾಗಿ ಬಿಯರ್ ಕುಡಿದರೆ ಆಗುವಂತಹ ಸಮಸ್ಯೆಗಳ ಬಗ್ಗೆ ತಿಳಿಯಿರಿ.
ಚೀನಾದ ಗುಂಗ್ಡಾಂಗ್ ಎಂಬಲ್ಲಿನ 29ರ ಹರೆಯದ ವ್ಯಕ್ತಿಯೊಬ್ಬ ಅತಿಯಾಗಿ ಬಿಯರ್ ಕುಡಿದ ಪರಿಣಾಮವಾಗಿ ಆತನಿಗೆ ಮೊಣಕಾಲಿನಲ್ಲಿ ಅತಿಯಾದ ನೋವು ಕಾಣಿಸಿಕೊಂಡಿದೆ. ನೋವು ಎಷ್ಟು ತೀವ್ರವಾಗಿತ್ತೆಂದರೆ ಆಗ ಸರಿಯಾಗಿ ನಡೆದಾಡಲು ಸಾಧ್ಯವಾಗುತ್ತಿರಲಿಲ್ಲ. ನಿದ್ರೆಯಲ್ಲಿ ಕೂಡ ಆತನಿಗೆ ತೀವ್ರವಾದ ನೋವು ಕಾಡುತ್ತಲಿತ್ತು.

ಎರಡು ವಾರಗಳ ಕಾಲ ಈ ಅತೀವ ನೋವನ್ನು ಅನುಭವಿಸಿದ ಬಳಿಕ ಆತ ಚಿಕಿತ್ಸೆ ಪಡೆಯಲು ವೈದ್ಯರ ಬಳಿಗೆ ಹೋದಲು ನಿರ್ಧಾರ ಮಾಡಿದ. ಅತೀವ ನೋವಿನಿಂದ ಬಳಲುತ್ತಿದ್ದ ಆ ವ್ಯಕ್ತಿಯನ್ನು ಸ್ನೇಹಿತರು ಕರೆದುಕೊಂಡು ಬಂದು ಆಸ್ಪತ್ರೆಗೆ ಸೇರಿಸಿದರು. ವೈದ್ಯರು ಆ ವ್ಯಕ್ತಿಯನ್ನು ಪರೀಕ್ಷೆ ಮಾಡಿದ ವೇಳೆ ಊತವು ಅತಿಯಾಗಿತ್ತು ಮತ್ತು ಅಸಾಮಾನ್ಯವಾಗಿತ್ತು. ಇದರಿಂದಾಗಿ ಅವರು ಗಂಟಿನ ಪರೀಕ್ಷೆ ಮಾಡಲು ನಿರ್ಧರಿಸಿದರು.
ವೈದ್ಯರು ಈ ಊತವನ್ನು ಒತ್ತಿದಾಗ ಅವರಿಗೆ ತುಂಬಾ ಅಚ್ಚರಿ ಮೂಡಿಸುವಂತಹ ಬಿಳಿ ದ್ರವವು ಅದರಿಂದ ಹೊರಗೆ ಬರುತ್ತಿರುವುದು ಕಂಡುಬಂದಿದೆ ಮತ್ತು ಇದು ತುಂಬಾ ಅಸಾಮಾನ್ಯವಾಗಿತ್ತು. ಊತಕ್ಕೆ ಕಾರಣವಾಗಿದ್ದ ದ್ರವವನ್ನು ಹೊರಗೆ ತೆಗೆಯಲಾಗಿದೆ ಎಂದು ಪರೀಕ್ಷೆ ಮಾಡಿರುವ ವೈದ್ಯರು ತಿಳಿಸಿದ್ದಾರೆ. ಸಾಮಾನ್ಯವಾಗಿ ಇದು 3ರಿಂದ 5 ಮಿ.ಲೀ.ನಷ್ಟು ತೆಳು ಹಳದಿ ದ್ರವವಾಗಿತ್ತು ಮತ್ತು ಇದು ತುಂಬಾ ಜಿಗುಟಿನಿಂದ ಕೂಡಿರುತ್ತದೆ. ಆದರೆ ವೂ ಗಂಟಿನಿಂದ ತೆಗೆದಿರುವಂತಹ ದ್ರವವು ತುಂಬಾ ಮೋಡದ ಬಣ್ಣ, ದಪ್ಪ ಮತ್ತು ಹಾಲಿನ ಬಿಳಿ ಬಣ್ಣ ಹೊಂದಿದೆ.
ಈ ವ್ಯಕ್ತಿಗೆ ಬಿಯರ ಎಷ್ಟರ ಮಟ್ಟಿಗೆ ಇಷ್ಟವಿತ್ತೆಂದರೆ ಆಗ ಯುವಕನಾಗಿದ್ದ ದಿನದಿಂದಲೂ ಇದನ್ನು ಪ್ರತಿನಿತ್ಯವೂ ಕುಡಿಯುತ್ತಲೇ ಇದ್ದ. ಆತನಿಗೆ ಬಿಯರ್ ಎಷ್ಟು ಇಷ್ಟವಿತ್ತೆಂದರೆ ಪ್ರತಿ ನಿತ್ಯವೂ ಆತ ಸುಮಾರು 10 ಕ್ಯಾನ್ ನಷ್ಟು ಬಿಯರ್ ಕುಡಿಯುತ್ತಲಿದ್ದ! ಸಂಧಿವಾತ ಅತ್ಯಂತ ಕ್ಲಿಷ್ಟ ಪರಿಸ್ಥಿತಿಯಿಂದ ಆತ ಬಳಲುತ್ತಿದ್ದಾನೆ ಮತ್ತು ಬಿಯರ್ ಪ್ರೇಮವು ಆತನ ಪರಿಸ್ಥಿತಿಯನ್ನು ಮತ್ತಷ್ಟು ಕೆಡಿಸಿದೆ ಎಂದು ವೈದ್ಯರು ಹೇಳದಿದ್ದಾರೆ. ಗಂಟಿನಲ್ಲಿ ಯುರಿಕ್ ಆಮ್ಲವು ಜಮೆಯಾಗುವ ಪರಿಣಾಮವಾಗಿ ಈ ರೀತಿ ಉಂಟಾಗುವುದು. ಇದು ತುಂಬಾ ಉರಿಯೂತ ಮತ್ತು ನೋವು ಉಂಟು ಮಾಡುವುದು. ವೂ ಗೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಇದರಿಂದ ಅವರು ಅದೃಷ್ಟವಂತರು ಎಂದು ಪರಿಗಣಿಸಬಹುದು. ಯಾಕೆಂದರೆ ಇದಕ್ಕೆ ಚಿಕಿತ್ಸೆ ಸಿಗದೆ ಇದ್ದರೆ ಆಗ ಅದು ಮತ್ತಷ್ಟು ಕೆಟ್ಟ ಪರಿಸ್ಥಿತಿಗೆ ತಲುಪುತ್ತಿತ್ತು.



Click it and Unblock the Notifications

