Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಈ ವ್ಯಕ್ತಿ ಬಿಯರ್ ಕುಡಿದ ಕೆಲವೇ ಸೆಕೆಂಡುಗಳಲ್ಲಿ ಮೃತಪಟ್ಟ!
ಕೆಲವೊಂದು ಸಲ ನಾವು ಏನೋ ಮಾಡಲು ಅದು ದುರಂತದಲ್ಲಿ ಅಂತ್ಯಗೊಂಡಿರುವಂತಹ ಘಟನೆಯು ನಡೆಯುತ್ತದೆ. ಅದರಲ್ಲೂ ಮುಖ್ಯವಾಗಿ ಇಂದಿನ ದಿನಗಳಲ್ಲಿ ಯುವಜನರು ಹೆಚ್ಚಾಗಿ ಹಲವಾರು ಸವಾಲಿನ ಆಟಗಳನ್ನು ಆಡುತ್ತಲಿರುತ್ತಾರೆ. ಇದು ಪ್ರಾಣಕ್ಕೆ ಹಾನಿ ಉಂಟು ಮಾಡುವುದು. ಇಂತಹ ಒಂದು ಘಟನೆಯ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಇಂದಿನ ದಿನಗಳಲ್ಲಿ ವಾರಾಂತ್ಯದಲ್ಲಿ ಪಾರ್ಟಿಗಳು ನಡೆಯುವುದು ಸರ್ವೇ ಸಾಮಾನ್ಯ. ಇಲ್ಲಿ ಕುಡಿಯುವವರಿಗೆ ಏನೂ ಕಡಿಮೆ ಇರುವುದಿಲ್ಲ. ಕುಡಿದ ನಶೆ ಏರಿಸಿಕೊಂಡ ಬಳಿಕ ಏನಾದರೂ ಮೋಜು ಮಾಡಬೇಕೆಂದು ಹಲವಾರು ಆಟಗಳು ಇರುತ್ತದೆ. ಇದರಲ್ಲಿ ಮುಖ್ಯವಾಗಿ ಬಿಯರ್ ಬಾಟಲಿಯನ್ನು ಬಾಯಿಗಿಟ್ಟು ತೆಗೆಯದೆ ಸಂಪೂರ್ಣವಾಗಿ ಖಾಲಿ ಆಡುವುದು.
ಥೈಲ್ಯಾಂಡಿನಲ್ಲಿ ವ್ಯಕ್ತಿಯೊಬ್ಬ ಇಂತಹ ಪಾರ್ಟಿಯಲ್ಲಿ ಬಿಯರ್ ಬಾಟಲಿಯನ್ನು ಬಾಯಿಯಲ್ಲಿ ಹಿಡಿದು ತೆಗೆಯದೆ ಕುಡಿದ ಕೆಲವೇ ಕ್ಷಣಗಳಲ್ಲಿ ಆತನ ಮೃತಪಟ್ಟಿದ್ದಾನೆ. ಕಂಪೆನಿಯು ಆಯೋಜಿಸಿದ್ದ ಕುಡಿಯುವ ಸ್ಪರ್ಧೆಯಲ್ಲಿ ಈ ವ್ಯಕ್ತಿಯು ಬಿಯರ್ ಬಾಟಲಿಯನ್ನು ಬಾಯಿಯಲ್ಲಿ ಹಿಡಿದು ಕುಡಿದ ಕೆಲವೇ ಸೆಕೆಂಡುಗಳಲ್ಲಿ ಆತ ಕುಸಿದು ಬಿದ್ದು ಮೃತಪಟ್ಟಿದ್ದಾನೆ ಎಂದು ವರದಿಗಳು ಹೇಳಿವೆ.

ಸಾಮಾಜಿಕ ಜಾಲತಾಣದಲ್ಲಿ ಈ ವ್ಯಕ್ತಿಯು ಬಿಯರ್ ಕುಡಿಯುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ಈ ವ್ಯಕ್ತಿ ಹೇಗೆ ಸತ್ತ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ.
ಈ ವ್ಯಕ್ತಿಯ ಪರಿಚಯವನ್ನು ಬಹಿರಂಗಪಡಿಸಲಾಗಿಲ್ಲ. ಈತ ಕೇವಲ 30 ಸೆಕೆಂಡುಗಳನ್ನು ಬಿಯರ್ ನ್ನು ಕುಡಿದು ಮುಗಿಸಿದ ಎಂದು ಹೇಳಲಾಗಿದೆ. ವಿಡಿಯೋದಲ್ಲಿರುವಂತೆ ಆತ ಗ್ಲಾಸ್‌ನ್ನು ಹಾಗೆ ಮೇಲಕ್ಕೆತ್ತಿದ್ದಾನೆ ಮತ್ತು ಕೆಲವೇ ಸೆಕೆಂಡುಗಳಲ್ಲಿ ಆತ ನೆಲದ ಮೇಲೆ ಉರುಳಿ ಬಿದ್ದಿದ್ದಾನೆ. ಆಲ್ಕೋಹಾಲ್ ವಿಷವಾಗಿರುವ ಪರಿಣಾಮವಾಗಿ ಹೀಗೆ ಆಗಿದೆ ಎಂದು ಹೆಚ್ಚಿನವರು ನಂಬಿದ್ದಾರೆ. ಆದರೆ ಡಿಸೀಸ್ ಕಂಟ್ರೋಲ್ ಡಿಪಾರ್ಟ್ ಮೆಂಟ್ ಅಧಿಕಾರಿಗಳ ಪ್ರಕಾರ ಆ ವ್ಯಕ್ತಿ ನಿಜವಾಗಿಯೂ ಆಲ್ಕೋಹಾಲ್ ವಿಷದಿಂದ ಸತ್ತಿರುವುದು ಎಂದು ಸಾಬೀತು ಮಾಡುವುದು ತುಂಬಾ ಕಠಿಣ ಎಂದು ಹೇಳಿದ್ದಾರೆ. ಆ ವ್ಯಕ್ತಿಗೆ ಸೆಳೆವು ಉಂಟಾಯಿತು ಮತ್ತು ಮೂಗು ಮತ್ತು ಬಾಯಿಯಿಂದ ಬಿಯರ್ ಹೊರಗೆ ಬರಲು ಆರಂಭವಾಯಿತು. ಆಂಬುಲೆನ್ಸ್ ಸ್ಥಳಕ್ಕೆ ಬರುವ ಮೊದಲೇ ಆತ ಮೃತಪಟ್ಟಿದ್ದ ಎಂದು ಸ್ಥಳದಲ್ಲಿದ್ದ ಮಹಿಳೆಯೊಬ್ಬರು ತನ್ನ ಪೋಸ್ಟ್ ನಲ್ಲಿ ಬರೆದಿದ್ದಾರೆ.



Click it and Unblock the Notifications
