Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಮನೆಕೆಲಸದಾಕೆ ತನ್ನ ಯಜಮಾನನ ಅಡುಗೆ ಮನೆಯಲ್ಲಿಯೇ ಮಲವಿಸರ್ಜನೆ ಮಾಡಿದಳು! ವಿಡಿಯೋ ವೈರಲ್
ಹೆಚ್ಚಾಗಿ ಮನೆಕೆಲಸದವರನ್ನು ಸರಿಯಾಗಿ ನೋಡಿಕೊಳ್ಳದೆ ಇದ್ದರೆ, ಅವರೊಂದಿಗೆ ಒರಟಾಗಿ ವರ್ತಿಸಿದರೆ ಆಗ ನೇರವಾಗಿ ಕೆಲಸ ಬಿಟ್ಟು ಹೋಗುವರು ಅಥವಾ ಏನಾದರೂ ಕಿತಾಪತಿ ಮಾಡುವರು.
ಇಲ್ಲೊಬ್ಬಳು ಮನೆಕೆಲಸದಾಕೆ ತನ್ನ ಯಜಮಾನನ ವಿರುದ್ಧದ ಸಿಟ್ಟಿನಿಂದಾಗಿ ಅಡುಗೆ ಮನೆಯಲ್ಲೇ ಮಲವಿಸರ್ಜನೆ ಮಾಡಿದ್ದಾರೆ. ಇದನ್ನು ಕೇಳಿ ನಿಮಗೆ ಅಸಹ್ಯವಾಗಬಹುದು ಮತ್ತು ತುಂಬಾ ವಿಚಿತ್ರವೆನಿಸಬಹುದು. ಆದರೆ ಇದು ನಿಜ.

ಕೀನ್ಯಾದಲ್ಲಿ ಈ ಘಟನೆಯು ನಡೆದಿದೆ. ತನ್ನ ಯಜಮಾನನ ಅಡುಗೆ ಮನೆಯಲ್ಲಿ ಮನೆ ಕೆಲಸದಾಕೆ ಮಲವಿಸರ್ಜನೆ ಮಾಡಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಪತ್ತೆಯಾಗಿದೆ. ತುಂಬಾ ವಿಚಿತ್ರ ಹಾಗು ಅಸಹ್ಯ ಮೂಡಿಸುವಂತಹ ಈ ಘಟನೆಯ ಬಗ್ಗೆ ಮುಂದೆ ಓದುತ್ತಾ ಸಾಗಿ...

ಕೀನ್ಯಾದಲ್ಲಿ ಘಟನೆಯು ನಡೆದಿದೆ
ತುಂಬಾ ಅಸಹ್ಯ ಮೂಡಿಸುವಂತಹ ಈ ಘಟನೆಯು ಕೀನ್ಯಾದಲ್ಲಿ ನಡೆದಿದೆ. ಈ ವಿಡಿಯೋ ವೈರಲ್ ಆದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಜನರು ಈ ಮಹಿಳೆಯ ವರ್ತನೆ ಬಗ್ಗೆ ತುಂಬಾ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಸಿಸಿ ಕ್ಯಾಮರಾಗಳಿಗಾಗಿ ಹುಡುಕಾಡಿದ ಮಹಿಳೆ
ಈ ವಿಡಿಯೋದಲ್ಲಿ ಕಾಣಿಸಿಕೊಂಡಿರುವಂತಹ ಮನೆಯ ಕೆಲಸದಾಕೆ ಒಂದು ಪ್ಲಾಸ್ಟಿಕ್ ಬ್ಯಾಗ್ ನ್ನು ತೆಗೆದುಕೊಂಡು ಅದರಲ್ಲಿ ಮಲವಿಸರ್ಜನೆ ಮಾಡುತ್ತಾಳೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಾಣಿಸಿಕೊಂಡಿರುವ ಪ್ರಕಾರ ಆ ಮಹಿಳೆಯರು ಮೊದಲು ಅಡುಗೆ ಮನೆಯಲ್ಲಿ ಯಾವುದೇ ಸಿಸಿ ಟಿವಿ ಕ್ಯಾಮರಾ ಇದೆಯಾ ಎನ್ನುವುದನ್ನು ದೃಢಪಡಿಸಿಕೊಂಡಿದ್ದಾರೆ. ಇದರ ಬಳಿಕ ಅಸಹ್ಯ ಕೃತ್ಯವೆಸಗಿದ್ದಾರೆ.

ಕ್ಯಾಮರಾ ಇಲ್ಲವೆಂದು ದೃಢಪಟ್ಟ ಬಳಿಕ…
ಅಡುಗೆ ಮನೆಯಲ್ಲಿ ಯಾವುದೇ ರೀತಿಯ ಸಿಸಿಟಿವಿ ಕ್ಯಾಮರಾ ಇಲ್ಲವೆಂದು ದೃಢಪಟ್ಟ ಬಳಿಕ ಆಕೆ ಸಿಂಕ್ ನಿಂದ ಒಂದು ಪ್ಲಾಸ್ಟಿಕ್ ಬ್ಯಾಗ್ ನ್ನು ತೆಗೆದುಕೊಂಡು ಇದರ ಬಳಿಕ ಅದರಲ್ಲಿ ಮಲವಿಸರ್ಜನೆ ಮಾಡಿದ್ದಾರೆ. ಇದರ ಬಳಿಕ ಆಕೆ ಅಡುಗೆ ಮನೆಯಲ್ಲಿ ಇರುವಂತಹ ಕಸದ ಡಬ್ಬಿಗೆ ಈ ಪ್ಲಾಸ್ಟಿಕ್ ಬ್ಯಾಗ್‌ನ್ನು ಹಾಕಿದ್ದಾಳೆ.
ನೆಟ್ಟಿಗರು ಇದನ್ನು ನೋಡಿ ಅಸಹ್ಯ ಪಟ್ಟುಕೊಂಡರು!
ಈ ವಿಡಿಯೋದ ಬಗ್ಗೆ ನೆಟ್ಟಿಗರು ತುಂಬಾ ಅಸಹ್ಯ ವ್ಯಕ್ತಪಡಿಸಿದ್ದಾರೆ. ಮಹಿಳೆಯ ವರ್ತನೆ ಬಗ್ಗೆ ಹೆಚ್ಚಿನವರು ಅಸಹ್ಯ ಪಟ್ಟುಕೊಂಡಿದ್ದಾರೆ. ಕೆಲವರ ಪ್ರಕಾರ ಮನೆಯ ಯಜಮಾನ ಕೆಲಸದಾಕೆಗೆ ಶೌಚಾಲಯ ಉಪಯೋಗಿಸಲು ಅನುಮತಿ ನೀಡದೆ ಇರಬಹುದು. ಇದರಿಂದಾಗಿ ಆಕೆ ಹೀಗೆ ಮಾಡಿರಬಹುದು ಎಂದು ಹೇಳಿದ್ದಾರೆ. ಇನ್ನು ಕೆಲವರು ಆಕೆ ಅಡುಗೆ ಮನೆಯಲ್ಲಿ ಇಂತಹ ಕೆಲಸ ಮಾಡುವ ಬದಲು ಹೊರಗಡೆ ಹೋಗಿ ಹೀಗೆ ಮಾಡಬಹುದಿತ್ತು ಎಂದಿದ್ದಾರೆ.



Click it and Unblock the Notifications
